ಗೂಗಲ್ ಖಾತೆ ಮರೆತರೂ ಅಲ್ಲಿ ನಿಮ್ಮ ಡೇಟಾ ಉಳಿಯದಂತೆ ಮಾಡುವುದು ಹೇಗೆ?!
ನಾವು ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಗೂಗಲ್ ಖಾತೆಯೊಂದಿಗೆ ಲಿಂಕ್ ಹೊಂದಿರುತ್ತದೆ. ಇಲ್ಲಿ ನಮ್ಮ ಇಮೇಲ್ ಮಾತ್ರ ಅಲ್ಲದೇ ಮ್ಯಾಪ್, ಕ್ಯಾಲೆಂಡರ್, ಫೋಟೊ, ಡ್ರೈವ್, ಯುಟ್ಯೂಬ್ ಹೀಗೆ ಎಲ್ಲ ಆಪ್‌ಗಳೂ ಲಿಂಕ್ ಆಗಿರುತ್ತವೆ. ಒಂದು ವೇಳೆ ನೀವು ಆ ಖಾತೆಯನ್ನು ಮುಂದುವರೆಸುವುದನ್ನು ಬಿಟ್ಟರೆ ಅಥವಾ ಮರೆತರೆ, ಹಾಗೆಯೇ ನೀವು ಮರಣ ಹೊಂದಿದರೂ ಸಹ ನಿಮ್ಮೆಲ್ಲಾ ಡೇಟಾ ಮಾತ್ರ ಅಲ್ಲಿ ಉಳಿಯುತ್ತದೆ. ಈ ಇಂಟರ್ನೆಟ್ ಯುಗದಲ್ಲಿ ಡೇಟಾ ಎಂಬುದು ತುಂಬಾ ಅಮೂಲ್ಯವಾಗಿರುವುದರಿಂದ ಈ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ಒಳಿತು.

ಹಾಗಾಗಿ, ಇಂದಿನ ಲೇಖನದಲ್ಲ ನೀವು ಬಳಸುವ ಸ್ಮಾರ್ಟ್‌ಫೋನ್ ಮೂಲಕ ನಿಮ್ಮೆ ಡೇಟಾವನ್ನು ಅಡಗಿಸಿಕೊಳ್ಳುವ ಗೂಗಲ್ ಖಾತೆಯಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ನಾನು ತಿಳಿಸಿಕೊಡುತ್ತೇನೆ. ನಮ್ಮ ಜೀವನದಲ್ಲಿ ನಾಳೆ ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ನಾಳೆ ನಡೆಯುವುದನ್ನು ನಮ್ಮಿಂದ ನಿಯಂತ್ರಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಡಿಜಿಟಲ್ ಲೈಫ್? ಅದನ್ನು ನಿಯಂತ್ರಿಸುವುದು ನಮ್ಮಿಂದ ಸಾಧ್ಯ.ಹಾಗಾದರೆ, ನಮ್ಮ ಗೂಗಲ್ ಖಾತೆಯನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.
ನಿಮ್ಮ ಗೂಗಲ್ ಖಾತೆಗೆ ಲಾಗಿನ್ ಆಗಿ myaccount.google.com ಓಪನ್ ಮಾಡಿ. ನಂತರ ಅಲ್ಲಿ data and personalization ಕ್ಲಿಕ್ ಮಾಡಿ. ಅದರ ಕೆಳಗಡೆ ಸ್ಕ್ರಾಲ್ ಮಾಡಿದಾಗ Make a plan for your account ಎಂಬ ಆಪ್ಶನ್ ಕಾಣಿಸುತ್ತದೆ. ಕ್ಲಿಕ್ ಮಾಡಿ Start ಬಟನ್ ಒತ್ತಿ. ಇಲ್ಲಿ ನಿಮ್ಮ ಖಾತೆ ಎಷ್ಟು ತಿಂಗಳು ನಿಷ್ಕ್ರಿಯವಾದರೆ ಡೇಟಾ ಡಿಲೀಟ್ ಮಾಡಬಹುದು ಎಂಬ ಅನುಮತಿಯನ್ನು ಗೂಗಲ್ ಖಾತೆಗೆ ನೀಡುವುದಕ್ಕಾಗಿ ನೀವು ಅಲ್ಲಿ ಕೆಲವೊಂದು ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಇದಾದ ನಂತರ ಮೊದಲಿಗೆ ಎಷ್ಟು ತಿಂಗಳು ನಿಷ್ಕ್ರಿಯವಾದರೆ ಎಂಬ ಆಪ್ಶನ್‌ನಲ್ಲಿ ಎಷ್ಟು ತಿಂಗಳು ಎಂಬುದನ್ನು ಸೆಲೆಕ್ಟ್ ಮಾಡಿ.ಈ ರೀತಿ ಮಾಹಿತಿ ಡಿಲೀಟ್ ಮಾಡುವ ಮುನ್ನ ಗೂಗಲ್ ಒಂದಕ್ಕಿಂತ ಹೆಚ್ಚು ಬಾರಿ ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ನಿಮಗೆ ತಿಳಿಸುತ್ತದೆ. ಅದಕ್ಕಾಗಿ ಫೋನ್ ಸಂಖ್ಯೆ, ನಿಮ್ಮ ಇಮೇಲ್ ಮತ್ತು ರಿಕವರಿ ಇಮೇಲ್ ನಮೂದಿಸಿ. ನೆಕ್ಸ್ಟ್ ಕ್ಲಿಕ್ ಮಾಡಿ.ನೀವು 3 ಅಥವಾ 6 ತಿಂಗಳು ಗೂಗಲ್ ಖಾತೆ ಬಳಸದೇ ಇದ್ದರೆ ನಿಮ್ಮ ಖಾತೆ ನಿಷ್ಕ್ರಿಯ ಎಂದು ಪರಿಗಣಿಸಲಾಗುವುದು ಎಂದು ಸಾಲನ್ನು ನೀವು ಇಲ್ಲಿ ಕಾಣಬಹುದು.
ಹೀಗೆ ನಿಮ್ಮ ಖಾತೆಯನ್ನು ನಿರ್ದಿಷ್ಟ ಸಮಯಕ್ಕೆ ನಿಷ್ಕ್ರಿಯಗೊಳಿಸಬಹುದು. ನಿಮ್ಮ ಖಾತೆ ನಿಷ್ಕ್ರಿಯವಾದ ವಿಷಯವನ್ನು 10 ಮಂದಿಗೆ ತಿಳಿಸಬಹುದು ಮತ್ತು ಕೆಲವರಿಗೆ ನಿಮ್ಮ ಮಾಹಿತಿಯನ್ನು ಪಡೆಯುವ ಅನುಮತಿಯನ್ನೂ ನೀಡಬಹುದು. ಅದಕ್ಕಾಗಿ ನಿಮ್ಮ ವಿಶ್ವಾಸರ್ಹ ಮಿತ್ರರ ಅಥವಾ ಕುಟುಂಬದವರ ಇಮೇಲ್ ಐಡಿ ನಮೂದಿಸಿ.ನಿಮ್ಮ ಗೂಗಲ್ ಖಾತೆ ನಿಷ್ಕ್ರಿಯ ಆದ ಮೇಲೆ ಅಲ್ಲಿರುವ ಡೇಟಾಗಳನ್ನು ಡಿಲೀಟ್ ಮಾಡಲು ಗೂಗಲ್‌ಗೆ ನೀವು ಅನುಮತಿ ನೀಡುವುದಾದರೆ Yes, Delete my inactive Google Account ಎಂಬ ಆಪ್ಶನ್ ಎನೇಬಲ್ ಮಾಡಿ.


Click it and Unblock the Notifications








