ಆಪಲ್‌ ಉತ್ಪನ್ನಗಳ ನೈಜತೆ ಪರಿಶೀಲಿಸುವುದು ಹೇಗೆ..? ಇಲ್ಲಿವೆ ಸುಲಭ ಟಿಪ್ಸ್..!

By Gizbot Bureau
|

ಆಪಲ್ ಉತ್ಪನ್ನಗಳನ್ನು ಖರೀದಿಸುವುದು ಜಾಣ್ಮೆಯ ನಡೆ ಆಗಿರುತ್ತದೆ. ವಿಶೇಷವಾಗಿ ಆನ್‌ಲೈನ್‌ನಲ್ಲಿ ಹೆಚ್ಚಿನ ಬೆಲೆಯ ಟ್ಯಾಗ್‌ಗಳನ್ನು ಪರಿಗಣಿಸಿದರೆ, ಖರೀದಿಸಿದ ಉತ್ಪನ್ನವು ನಕಲಿಯಲ್ಲ ಎಂದು ಕಂಡುಹಿಡಿಯುವುದು ಬಹಳ ಮುಖ್ಯ. ನೀವು ಮೂಲ ಆಪಲ್ ಉತ್ಪನ್ನಗಳನ್ನು ಖರೀದಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ನಿಮಗಾಗಿ ಸುಲಭ ಸಲಹೆಗಳು ಇಲ್ಲಿವೆ.

ಎಂಎಫ್‌ಐ ಪರಿಶೀಲಿಸಿ

ಎಂಎಫ್‌ಐ ಪರಿಶೀಲಿಸಿ

ನೀವು ಖರೀದಿಸುವ ಆಪಲ್‌ನ ಉತ್ಪನ್ನಗಳ ಬಾಕ್ಸ್ ಪ್ಯಾಕೇಜಿಂಗ್‌ನಲ್ಲಿ MFI (ಮೇಡ್ ಫಾರ್ ಐಫೋನ್ / ಐಪ್ಯಾಡ್ / ಐಪ್ಯಾಡ್) ಲೋಗೋ ನೋಡಿ ಪರಿಶೀಲಿಸಿ. ಎಲ್ಲಾ ಅಧಿಕೃತ ಆಪಲ್ ಉತ್ಪನ್ನದ ಕೇಬಲ್‌ಗಳ ಮೇಲೆ ‘ಡಿಸೈನಡ್‌ ಬೈ ಆಪಲ್ ಇನ್‌ ಕ್ಯಾಲಿಫೋರ್ನಿಯಾ' ಎಂಬ ವಾಕ್ಯವನ್ನು ಹೊಂದಿರುತ್ತವೆ.

ಮೆಟಾಲಿಕ್‌ ಫೇಸ್‌ಪ್ಲೇಟ್‌

ಮೆಟಾಲಿಕ್‌ ಫೇಸ್‌ಪ್ಲೇಟ್‌

ಮೂಲ ಆಪಲ್ ಕನೆಕ್ಟರ್ ಯಾವಾಗಲೂ ಗ್ರೇ ಅಥವಾ ಮೆಟಾಲಿಕ್ ಫೇಸ್‌ಪ್ಲೇಟ್ ಇನ್‌ಸರ್ಟ್‌ನೊಂದಿಗೆ ಬರುತ್ತದೆ, ಬಿಳಿ ಅಥವಾ ಕಪ್ಪು ಫೇಸ್‌ಪ್ಲೇಟ್ ಇನ್‌ಸರ್ಟ್‌ ಇದ್ದರೆ ಆ ಉತ್ಪನ್ನ ನಕಲಿ ಎಂದರ್ಥ.

ಕನೆಕ್ಟರ್‌ನ ಗಾತ್ರ

ಕನೆಕ್ಟರ್‌ನ ಗಾತ್ರ

ಕನೆಕ್ಟರ್‌ನ ಅಗಲ ಮತ್ತು ಉದ್ದವನ್ನು ಮೊದಲು ಪರಿಶೀಲಿಸಿ. ಇದು ಸಮ್ಮತವಾಗಿದ್ದು, 7.7 ಮಿಮೀ x 12 ಮಿಮೀ ಗಾತ್ರ ಹೊಂದಿರುತ್ತದೆ. ಅಗಲ, ಉದ್ದ ಅಥವಾ ದಪ್ಪ ಬದಲಾಗಿದ್ದರೆ ಅದು ನಕಲಿ ಉತ್ಪನ್ನವೆಂದು ಸುಲಭವಾಗಿ ಗುರುತಿಸಬಹುದು.

ಯುಎಸ್‌ಬಿ ಟೈಫ್‌-ಎ

ಯುಎಸ್‌ಬಿ ಟೈಫ್‌-ಎ

ಯುಎಸ್‌ಬಿ-ಕನೆಕ್ಟರ್ ತುದಿಯಲ್ಲಿರುವ ಯುಎಸ್‌ಬಿ ಟೈಪ್-ಎ ಇಂಟರ್‌ಲಾಕ್‌ಗಳು ಟ್ರೆಪೆಜಾಯಿಡಲ್ ಮತ್ತು ಕೇಬಲ್‌ನ ಅಂಚಿನಿಂದ ಸಮಾನ ಅಂತರದಲ್ಲಿರುತ್ತವೆ.

ಚಿನ್ನ ಲೇಪಿತ ಬಿಂದುಗಳು

ಚಿನ್ನ ಲೇಪಿತ ಬಿಂದುಗಳು

ನೈಜ ಕೇಬಲ್‌ಗಳ ಸಂಪರ್ಕ ಬಿಂದುಗಳು ಯಾವಾಗಲೂ ಚಿನ್ನದಿಂದ ಲೇಪಿತವಾಗಿರುತ್ತವೆ.

ಏಕರೂಪ ಯುಎಸ್‌ಬಿ ಇನ್‌ಸಲ್ಟರ್‌

ಏಕರೂಪ ಯುಎಸ್‌ಬಿ ಇನ್‌ಸಲ್ಟರ್‌

ಯುಎಸ್‌ಬಿ ಸಂಪರ್ಕಕ್ಕಾಗಿರುವ ಅವಾಹಕದ ಮೇಲ್ಮೈ ಏಕರೂಪ ಮತ್ತು ಸಮತಟ್ಟಾಗಿದೆ.

ಡಿಸೈನಡ್‌ ಬೈ ಆಪಲ್‌

ಡಿಸೈನಡ್‌ ಬೈ ಆಪಲ್‌

ಆಪಲ್‌ನ ಅಪ್ಪಟ ಚಾರ್ಜರ್‌ಗಳ ಮೇಲೆ ಡಿಸೈನಡ್‌ ಬೈ ಆಪಲ್‌ ಮತ್ತು ಅಸೆಂಬಲಡ್‌ ಇನ್‌ ಚೀನಾ ಎಂಬ ಮುದ್ರಣವಿರುತ್ತದೆ.

ಮುದ್ರಣ ದೋಷ

ಮುದ್ರಣ ದೋಷ

ಚಾರ್ಜಿಂಗ್ ಅಡಾಪ್ಟರ್‌ನಲ್ಲಿರುವ ಕಾಗುಣಿತಗಳಲ್ಲಿ ಯಾವುದೇ ಮುದ್ರಣದೋಷಗಳನ್ನು ಪರಿಶೀಲಿಸಿ. ಏನಾದರೂ ಮುದ್ರಣದೋಷಗಳಿದ್ದರೆ ಅದು ಮೂಲ ಆಪಲ್‌ ಉತ್ಪನ್ನವಾಗಿರುವುದಿಲ್ಲ.

ಲೇಸರ್‌ ಯುಎಸ್‌ಬಿ ಲೋಗೋ

ಎಲ್ಲಾ ಆಪಲ್ ಪರಿಕರಗಳಾದ ಕೇಬಲ್‌ಗಳು, ಮೈಕ್ರೋ-ಯುಎಸ್‌ಬಿ ಅಡಾಪ್ಟರ್‌ಗಳು ಮತ್ತು 30 ಪಿನ್ ಅಡಾಪ್ಟರ್‌ಗಳ ಮೇಲೆ ಲೇಸರ್‌ನಿಂದ ಕೆತ್ತಿದ ಯುಎಸ್‌ಬಿ ಚಿಹ್ನೆಯನ್ನು ಹೊಂದಿರುತ್ತವೆ.

ವಕ್ರತೆಯಿಲ್ಲದ ಚಾರ್ಜರ್‌

ಆಪಲ್ ವಾಚ್ ಚಾರ್ಜಿಂಗ್ ಡಾಕ್ ತನ್ನ ವೈರ್‌ಲೆಸ್ ಚಾರ್ಜಿಂಗ್ ಪ್ಲೇಟ್‌ನಲ್ಲಿ ಯಾವುದೇ ನಿಖರವಾದ ವಕ್ರತೆ ಹೊಂದಿರುವುದಿಲ್ಲ.

Best Mobiles in India

Read more about:
English summary
How To Detect If An Apple Accessory Is Fake Or Genuine?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X