Home
ಟೆಕ್ ನೌಕರಿ

ಆಂಡ್ರಾಯ್ಡ್‌ನಲ್ಲಿ ಸಜೇಸ್ಟಡ್‌ ಆರ್ಟಿಕಲ್‌ಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ..?

By Gizbot Bureau

ಗೂಗಲ್ ಕ್ರೋಮ್‌ ವಿಶ್ವದ ಜನಪ್ರಿಯ ವೆಬ್ ಬ್ರೌಸರ್ ಆಗಿದ್ದು, ಹೆಚ್ಚು ಜನರು ಬಳಸುತ್ತಿದ್ದಾರೆ. ಗೂಗಲ್‌ ಕ್ರೋಮ್‌ ಆಂಡ್ರಾಯ್ಡ್, ಐಒಎಸ್, ವಿಂಡೋಸ್, ಲಿನಕ್ಸ್ ಸೇರಿ ಪ್ರತಿಯೊಂದು ಪ್ಲಾಟ್‌ಫಾರ್ಮ್‌ನಲ್ಲಿಯೂ ಲಭ್ಯವಿದೆ. ಡೆಸ್ಕ್‌ಟಾಪ್‌ನಲ್ಲಿ ಮಾತ್ರವಲ್ಲದೇ ಮೊಬೈಲ್‌ನಲ್ಲಿಯೂ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದೆ. ಆಂಡ್ರಾಯ್ಡ್‌ನಲ್ಲಿ ಗೂಗಲ್‌ ಕ್ರೋಮ್‌ ಬಳಸುತ್ತಿದ್ದರೆ ನಿಮಗೆ 'ಸೂಚಿಸಿದ ಲೇಖನಗಳ’ ಬಗ್ಗೆ ಗೊತ್ತಿರುತ್ತದೆ. ಈ ಫೀಚರ್‌ ನಿಮಗೆ ಪ್ರಪಂಚದ ಇತ್ತೀಚಿನ ಮತ್ತು ಟ್ರೆಂಡಿಂಗ್ ಸುದ್ದಿಗಳನ್ನು ನೀಡುತ್ತದೆ.

ಆದರೆ, ‘ಸೂಚಿಸಿದ ಲೇಖನಗಳು’ ಫೀಚರ್‌ ವಿಚಲಿತತೆಗೂ ಕಾರಣವಾಗಬಹುದು.

ಆದರೆ, ‘ಸೂಚಿಸಿದ ಲೇಖನಗಳು’ ಫೀಚರ್‌ ವಿಚಲಿತತೆಗೂ ಕಾರಣವಾಗಬಹುದು.

ಸೂಚಿಸಿದ ಲೇಖನಗಳು ಸಾಮಾನ್ಯ ಬಳಕೆದಾರರ ಮನಸ್ಸನ್ನು ಬೇರೆಡೆಗೆ ತಿರುಗಿಸುವುದರಿಂದ ಅದು ವಿಚಲಿತಕ್ಕೆ ದಾರಿ ಮಾಡಿಕೊಡುತ್ತದೆ. ಇನ್ನೊಂದು ವಿಷಯವೆಂದರೆ, ಹಲವಾರು ಸೂಚಿಸಲಾದ ಲೇಖನಗಳು ಸಂಪೂರ್ಣ ಕ್ರೋಮ್‌ನ ಇಂಟರ್‌ಫೇಸ್‌ನ್ನು ಅಸ್ತವ್ಯಸ್ತಗೊಳಿಸುತ್ತವೆ. ಆದ್ದರಿಂದ, ನೀವು ಕ್ಲೀನ್ ಟ್ಯಾಬ್‌ನೊಂದಿಗೆ ಕ್ರೋಮ್‌ ಬಳಸಲು ಬಯಸುತ್ತಿದ್ದರೆ ನಿಮಗೆ ಇಲ್ಲಿ ಪರಿಹಾರ ದೊರೆಯಯಲಿದೆ. ಆಂಡ್ರಾಯ್ಡ್‌ ಸಾಧನದಲ್ಲಿ ಸಜೇಸ್ಟಡ್‌ ಆರ್ಟಿಕಲ್ಸ್‌ ಫೀಚರ್‌ನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಎಂಬುದನ್ನು ಮುಂದೆ ನೋಡಿ.

ಫ್ಲ್ಯಾಗ್‌ಗಳನ್ನು ಬದಲಾಯಿಸಿ

ಫ್ಲ್ಯಾಗ್‌ಗಳನ್ನು ಬದಲಾಯಿಸಿ

ಆಂಡ್ರಾಯ್ಡ್‌ನಲ್ಲಿ ಸೂಚಿಸಲಾದ ಲೇಖನಗಳನ್ನು ಮರೆಮಾಡಲು, ಬಳಕೆದಾರರು ಕ್ರೋಮ್‌ನ ಫ್ಲ್ಯಾಗ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಂಡ್ರಾಯ್ಡ್‌ನಲ್ಲಿ ಕ್ರೋಮ್‌ ಫ್ಲ್ಯಾಗ್‌ಗಳನ್ನು ಬಳಸಿಕೊಂಡು ಲೇಖನದ ಸಲಹೆಗಳನ್ನು ಆಫ್ ಮಾಡಲು ಮುಂದಿನ ಹಂತಗಳನ್ನು ಅನುಸರಿಸಿ.

ಹಂತ 1:

ಹಂತ 1:

ಮೊದಲನೆಯದಾಗಿ, ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಕ್ರೋಮ್‌ ವೆಬ್ ಬ್ರೌಸರ್ ಒಪನ್‌ ಮಾಡಿರಿ.

ಹಂತ 2:

ನಂತರ, URL ಬಾರ್‌ನಲ್ಲಿ, ನೀವು "Chrome://flags" ಎಂದು ಟೈಪ್ ಮಾಡಬೇಕಾಗಿದೆ

ಹಂತ 3:

ನಂತರ ಸರ್ಚಿಂಗ್‌ ಬಾರ್‌ನ ಕೆಳಗಡೆ '#enable-ntp-remote-suggestions' ಎಂದು ಟೈಪ್ ಮಾಡಿ ನಂತರ Enter ಬಟನ್ ಪ್ರೆಸ್‌ ಮಾಡಿ.

ಹಂತ 4:

ಈಗ ಡ್ರಾಪ್-ಡೌನ್ ಮೆನುವಿನಿಂದ, ‘ಡಿಸೇಬಲ್‌' ಆಯ್ಕೆಯನ್ನು ಆಯ್ದುಕೊಳ್ಳಿ.

ಹಂತ 5:

ಅಂತಿಮವಾಗಿ, ಬದಲಾವಣೆಗಳನ್ನು ಮಾಡಲು ‘ರಿಲಾಂಚ್‌ ನೌ' ಬಟನ್ ಟ್ಯಾಪ್ ಮಾಡಿ. ಈ ಪ್ರಕ್ರಿಯೆಯ ನಂತರ ಹೊಸ ಟ್ಯಾಬ್ ಪುಟವನ್ನು ತೆರೆಯಿರಿ. ಮತ್ತು ಈಗ ನೀವು ಸೂಚಿಸಿದ ಲೇಖನಗಳು ನಿಮಗೆ ಕಾಣಲ್ಲ.

Best Mobiles in India

English summary
How To Disable Articles On Google Chrome
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+