Home
ಟೆಕ್ ನೌಕರಿ

Gmail ನಲ್ಲಿ Google ಮೀಟ್ ಟ್ಯಾಬ್ ಅನ್ನು ತೆಗೆದುಹಾಕುವುದು ಹೇಗೆ?

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ತನ್ನ ವಿವಿಧ ಸೇವೆಗಳನ್ನು ಒಂದೇ ಅಪ್ಲಿಕೇಶನ್‌ ಅಡಿಯಲ್ಲಿ ಒಟ್ಟುಗೂಡಿಸುವ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಈ ಎಲ್ಲಾ G-ಸೂಟ್ ಅಪ್ಲಿಕೇಶನ್‌ಗಳನ್ನು ಒಟ್ಟಿಗೆ ಸೇರಿಸುವ ಒಂದೇ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗ್ತಿದೆ. ಸದ್ಯ ಗೂಗಲ್‌ ಬಳಕೆದಾರರಿಗೆ ಪರಿಚಯಿಸಿರುವ ಅಪ್ಲಿಕೇಶನ್‌ಗಳಲ್ಲಿ ಗೂಗಲ್‌ ಮೀಟ್‌ ಕೂಡ ಒಂದಾಗಿದೆ. ಅದರಲ್ಲಿಯೂ Gmail ಅಪ್ಲಿಕೇಶನ್‌ನಲ್ಲಿ Google ಮೀಟ್ ಟ್ಯಾಬ್ ಅನ್ನು ಫೈಡಿಂಗ್‌ ಮಾಡುವ ಅವಕಾಶವನ್ನು ಸಹ ಪರಿಚಯಿಸಲಾಗಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಗೂಗಲ್ ಮೀಟ್ ಎನ್ನುವ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ ಪರಿಚಯಿಸಿದ್ದು, ಇದು ಇತ್ತೀಚಿನ ಆವೃತ್ತಿಯಾಗಿದ್ದು. ಸದ್ಯ ಇದು ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಅಲ್ಲದೆ ಹೊಸ Gmail UI ನ ನಿಮ್ಮ ಇನ್‌ಬಾಕ್ಸ್‌ಗಾಗಿ ಪ್ರತ್ಯೇಕ ಟ್ಯಾಬ್ ಮತ್ತು ಕೆಳಭಾಗದಲ್ಲಿ Google ಮೀಟ್‌ ಅನ್ನು ಸಹ ನೀಡಲಾಗಿದೆ. ನಿಮಗೆ ಓಕೆ ಎನಿಸಿದರೆ ಇದು ನಿಮ್ಮ ಜಿ-ಮೇಲ್‌ನಲ್ಲಿ ಉಳಿಯಲಿದೆ, ಇಲ್ಲದೆ ಹೋದರೆ ಅದನ್ನು ನೀವು ರಿಮೋವ್ ಡಿಸೆಬಲ್‌ ಮಾಡಬಹುದಾಗಿದೆ. ಹಾಗಾದ್ರೆ ನಿಮ್ಮ ಜಿ-ಮೇಲ್‌ನಲ್ಲಿ ಇರುವ ಗೂಗಲ್‌ ಮೀಟ್‌ ಟ್ಯಾಬ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

Gmail ನಲ್ಲಿ Google ಮೀಟ್ ಟ್ಯಾಬ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ

Gmail ನಲ್ಲಿ Google ಮೀಟ್ ಟ್ಯಾಬ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ

ಹಂತ:1 Gmail ಸೆಟ್ಟಿಂಗ್‌ಗಳಿಗೆ ಹೋಗಿ, Gmail ತೆರೆಯಿರಿ ಮತ್ತು ಅಪ್ಲಿಕೇಶನ್‌ನಲ್ಲಿರುವ ಹ್ಯಾಂಬರ್ಗರ್ ಮೆನುಗೆ ಹೋಗಿ. ನೀವು ಇದರ ಮೇಲಿನ ಮೇಲಿನ ಬಲಭಾಗದಲ್ಲಿ, ಮೂರು ಸಾಲುಗಳನ್ನ ಕಾಣಬಹುದು. ಇಲ್ಲಿ ನಿಮ್ಮ ಇನ್‌ಬಾಕ್ಸ್ ಫೋಲ್ಡರ್‌ಗಳ ಪ್ರೈಮರಿ , ಸಾಮಾಜಿಕ, ಪ್ರಚಾರಗಳು ಸೇರಿದಂತೆ ಹಲವು ಅಂಶಗಳನ್ನು ಕಾಣಬಹುದು. ಅಲ್ಲಿಂದ ‘ಸೆಟ್ಟಿಂಗ್ಸ್‌' ಹುಡುಕಲು ಪಟ್ಟಿಯ ಕೆಳಭಾಗಕ್ಕೆ ಹೋಗಿ.

ಹಂತ:2

ಹಂತ:2 ನಿಮ್ಮ ಖಾತೆಯ ಸೆಟ್ಟಿಂಗ್‌ಗಳನ್ನು ನಮೂದಿಸಿ, ನಂತರ ಸಾಮಾನ್ಯ ಸೆಟ್ಟಿಂಗ್‌ಗಳ ಆಯ್ಕೆಯನ್ನು ಇಲ್ಲಿ ನೋಡಬಹುದು. ಅದರ ಕೆಳಗೆ, ನಿಮ್ಮ Gmail ID ಗಾಗಿ ಪ್ರತ್ಯೇಕ ಸೆಟ್ಟಿಂಗ್‌ಗಳ ವಿಭಾಗವಾಗಿರುತ್ತದೆ. ಈ ವಿಭಾಗವನ್ನು ನಮೂದಿಸಿ. ನೀವು ಅನೇಕ Gmail ಇನ್‌ಬಾಕ್ಸ್‌ಗಳನ್ನು ಹೊಂದಿದ್ದರೆ, ಪ್ರತಿ ಖಾತೆಗೆ ಪ್ರತ್ಯೇಕ ವಿಭಾಗವನ್ನು ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಪ್ರತಿಯೊಂದು ಖಾತೆಗಳಿಗೆ ನೀವು ಇದನ್ನು ಸೆಟ್‌ ಮಾಡಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.

ಹಂತ:3

ಹಂತ:3 Turn off the ‘Show Meet tab' tick, ಗೆ ಹೋಗಬೇಕು. ಇಲ್ಲಿ ಸಾಕಷ್ಟು ಆಯ್ಕೆಗಳು ಲಭ್ಯವಿವೆ, ಆದರೆ ನೀವು ‘ಮೀಟ್' ಸಬ್‌ ಡಿವಿಷನ್‌ ಅನ್ನು ನೋಡಬೇಕು. ಇಲ್ಲಿ, ‘‘Show the Meet tab for Video Calling'' ಇರುತ್ತದೆ. ಅದನ್ನು ಆಫ್ ಮಾಡಿ ಮತ್ತು ಈ ಖಾತೆಗಾಗಿ ನೀವು Google ಮೀಟ್ ಟ್ಯಾಬ್ ಅನ್ನು ನೋಡಬಾರದು. ಅಪ್ಲಿಕೇಶನ್‌ನಲ್ಲಿ ನೀವು ಹೆಚ್ಚಿನ Gmail ಖಾತೆಗಳನ್ನು ಹೊಂದಿದ್ದರೆ, ಅವುಗಳಲ್ಲಿ ಪ್ರತಿಯೊಂದಕ್ಕೂ ಹಂತ 2 ಮತ್ತು 3 ಅನ್ನು ಪುನರಾವರ್ತಿಸಬೇಕಾಗುತ್ತದೆ.

Best Mobiles in India

English summary
Google recently added a Google Meet tab in the new Gmail UI and while some people may like it, here is a quick guide to disabling the tab in case you're not a fan.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+