Home
ಟೆಕ್ ನೌಕರಿ

ಒನ್ ಪ್ಲಸ್ 6ನಲ್ಲಿ ನಾಚ್ ನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಗೊತ್ತಾ?

By Gizbot Bureau

ಒನ್ ಪ್ಲಸ್ 6 ಸದ್ಯ ಮಾರ್ಕೆಟ್ ನಲ್ಲಿರುವ ಅಧ್ಬುತ ಸ್ಮಾರ್ಟ್ ಫೋನ್ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ನೀವೂ ಕೂಡ ಈ ಫೋನಿನ ಒಡೆಯರಾ ಅಥವಾ ಈ ಫೋನ್ ಖರೀದಿಸಬೇಕು ಎಂದುಕೊಂಡಿದ್ದೀರಾ.. ಹಾಗಿದ್ದರೆ ಈ ಲೇಖನವನ್ನು ನೀವು ಓದಲೇಬೇಕು.

ಒನ್ ಪ್ಲಸ್ 6ನಲ್ಲಿ ನಾಚ್ ನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಗೊತ್ತಾ?


ಈ ಫೋನಿನ ಬಗ್ಗೆ ಹೇಳುವುದಾದರೆ, ಇದರ ಮಹತ್ವದ ಡಿಸೈನ್ ಅಂದರೆ ಅದು ಡಿಸ್ಪ್ಲೇಯ ಮೇಲ್ಬಾಗದಲ್ಲಿರುವ ನಾಚ್. ನಾಚ್ ನ ನಿಜವಾದ ಉದ್ದೇಶ ಏನು ಅಂದರೆ ಸ್ಕ್ರೀನ್ ನ ಗಾತ್ರವನ್ನು 6.28 ಗೆ ಹೆಚ್ಚಿಸುವುದು.. ಇದು ಕೂಡ ಒನ್ ಪ್ಲಸ್ 5ಟಿಯಂತೆ 6 ಇಂಚಿನ ಡಿಸ್ಪ್ಲೇ ಹೊಂದಿದೆ.

ಹಾಗಂತ ಡಿಸ್ಪ್ಲೇಯಲ್ಲಿ ನಾಚ್ ಇರುವಂತೆ ಫೋನನ್ನು ಡಿಸೈನ್ ಮಾಡಿರುವ ಫೋನ್ ಗಳಲ್ಲಿ ಒನ್ ಪ್ಲಸ್ ಮೊದಲನೆಯದೇನಲ್ಲ. ಈಗಾಗಲೇ ಓಪೋ, ವಿವೋ, ಹುವಾಯಿ ಗಳು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಡಿಸ್ಲ್ಪೇ ನಾಚ್ ನೊಂದಿಗೆ ಬಿಡುಗಡೆಗೊಳಿಸಿವೆ. ಸ್ರ್ಕೀನ್ ಸ್ಪೇಸ್ ನೊಂದಿಗೆ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳದೇ ಸ್ಮಾರ್ಟ್ ಫೋನಿನ ಎತ್ತರವನ್ನು ಅಡ್ಜೆಸ್ಟ್ ಮಾಡಲು ಇದು ನೆರವಾಗಿದೆ. ಆದರೆ ಇದು ಒನ್ ಪ್ಲಸ್ ಫೋನಿನ ಹೆಚ್ಚಿನ ಅಭಿಮಾನಿಗಳಿಗೆ ಅಷ್ಟೇನು ಖುಷಿಕೊಟ್ಟಿಲ್ಲ.

ಆದರೆ, ಕಂಪೆನಿಯು ಇದು ಸಾಮಾನ್ಯವಾದ ಆಂಡ್ರಾಯ್ಡ್ ಅಲ್ಲ ಮತ್ತು ಐಫೋನ್ ಎಕ್ಸ್ ನ ಕಾಪಿಯೂ ಅಲ್ಲ. ಒನ್ ಪ್ಲಸ್ 6 ನಲ್ಲಿ ನಿಮಗೆ ಬೇಡವೆನ್ನಿಸಿದರೆ ನಾಚ್ ನ್ನು ನಿಷ್ಕ್ರಿಯಗೊಳಿಸಬಹುದು. ಹೀಗೆ ಮಾಡುವುದರಿಂದಾಗಿ ಡಿಸ್ಪ್ಲೇಯಲ್ಲಿ ಒಂದು ಕಪ್ಪು ಬಾರ್ ಬರಲಿದ್ದು. ಇದು ನಿಮ್ಮ ಸ್ಟೇಟಸ್ ಐಕಾನ್ ಗೆ ಯಾವುದೇ ತೊಂದರೆ ನೀಡದಂತೆ ಗೋಚರಿಸುತ್ತೆ.

ಹಾಗಾದ್ರೆ ಒನ್ ಪ್ಲಸ್ 6 ನಲ್ಲಿ ನಾಚ್ ನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

Oneplus 6 First Impressions - Gizbot Kannada

ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ..

• ಸೆಟ್ಟಿಂಗ್ಸ್ ಮೆನುವನ್ನು ತೆರೆಯಿರಿ

• ಡಿವೈಸ್ ಸಬ್ ಮೆನುವನ್ನು ಸ್ಕ್ರಾಲ್ ಮಾಡಿ

• ಡಿಸ್ಪ್ಲೇಯನ್ನು ಟ್ಯಾಪ್ ಮಾಡಿ.

• ನಾಚ್ ಡಿಸ್ಪ್ಲೇಯನ್ನು ಆಯ್ಕೆ ಮಾಡಿ

• ಹೈಡ್ ದಿ ನಾಚ್ ಏರಿಯಾ ಆಯ್ಕೆಯನ್ನು ಟ್ಯಾಪ್ ಮಾಡಿ

ಇಷ್ಟು ಮಾಡಿದರಾಯ್ತು. ನೀವು ಕಪ್ಪು ಬಾರ್ ಲೈನ್ ನ್ನು ನಾಚ್ ನ ಎರಡು ಬದಿಯಲ್ಲಿ ಕಾಣಬಹುದು.ನಿಜ ಹೇಳಬೇಕು ಎಂದರೆ ಇದು ಹೈಡ್ ಮಾಡುವುದಲ್ಲ ಬದಲಾಗಿ ಕ್ಯಾಮೋಫ್ಲ್ಯಾಗಿಂಗ್ ಮಾಡುವುದು. ಅಂದರೆ ಸೂರ್ಯನ ಕಿರಣಗಳ ಬೆಳಕಿನಲ್ಲಿ ನಾಚ್ ನ್ನು ನೀವು ಕಾಣಬಹುದಾಗಿರುತ್ತೆ.

ಒನ್ ಪ್ಲಸ್ 6 ಅಪ್ ಡೇಟ್

ಒಂದೇ ವಾರದಲ್ಲಿ ಸ್ಮಾರ್ಟ್ ಫೋನ್ ತನ್ನ ಫಸ್ಟ್ ಅಪ್ ಡೇಟ್ ಕೇಳುತ್ತಿದೆ. ಈ ಸಾಫ್ಟ್ ವೇರ್ ಅಪ್ ಡೇಟ್ ಕೆಲವು ಹೊಸ ವೈಶಿಷ್ಟ್ಯ ಮತ್ತು ಬೆಳವಣಿಗೆಗಳನ್ನು ಹೊಂದಿದೆಯಂತೆ. ಇದರಲ್ಲಿ ಪ್ರಮುಖವಾದದ್ದು, ನಾಚ್ ನ್ನು ಸ್ಕ್ರೀನಿನ ಮೇಲ್ಬಾಗದಿಂದ ಹೈಡ್ ಮಾಡುವ ಸೌಕರ್ಯ. ಸ್ಲೋ ಮೋಷನ್ ವೀಡಿಯೋ ರೆಕಾರ್ಡಿಂಗ್ ಕೆಪಾಸಿಟಿಯನ್ನೂ ಇದು ಹೊಂದಿದೆ.

ಒನ್ ಪ್ಲಸ್ 6 ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

Best Mobiles in India

English summary
Here’s how to disable the notch at the top of the OnePlus 6 display. Doing so, the phone will display a black bar on either side of the notch without hiding the status bar icons.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+