ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ ಡೌನ್‌ಲೋಡ್ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಹಬ್ಬ ಹರಿದಿನಗಳ ವಿಶೇಷ ಶುಭಾಶಯಗಳನ್ನು ಕೋರುವುದಕ್ಕೆ ಹೆಚ್ಚಿನ ಜನರು ಮೆಸೇಜಿಂಗ್‌ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ತಮ್ಮ ಭಾವನೆಗಳನ್ನ ತಮ್ಮ ಸ್ನೇಹಿತರ ಜೊತೆ ಕುಟುಂಬದ ಸದಸ್ಯರ ಜೊತೆಗೆ ಹಂಚಿಕೊಳ್ಳುವುದಕ್ಕೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳು ಸಹಾಯಕವಾಗಿದೆ. ಅದರಲ್ಲೂ ಹಬ್ಬದ ಶುಭಾಶಯಗಳನ್ನು ಸಂದೇಶದ ಮೂಲಕ ತಿಳಿಸುವುದಕ್ಕೆ ಸ್ಟಿಕ್ಕರ್‌ಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಾಟ್ಸಾಪ್‌ ಕೂಡ ಹಬ್ಬ ಹರಿದಿನಗಳಲ್ಲಿ ವಿಶೇಷ ಸ್ಟಿಕ್ಕರ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ.

ವಾಟ್ಸಾಪ್‌

ಹೌದು, ವಿಶ್ವದಲ್ಲಿಯೇ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್‌ ವಾಟ್ಸಾಪ್‌. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇನ್ನು ಹಬ್ಬದ ಸಂದರ್ಭದಲ್ಲಿ, ವಿಶೇಷ ಸಂದರ್ಭಗಳಲ್ಲಿ ಸ್ಟಿಕ್ಕರ್‌ ಸಂದೇಶಗಳನ್ನು ಕಳುಹಿಸಲು ಅನುಮತಿಸಲಿದೆ. ಹಾಗಾದ್ರೆ ವಾಟ್ಸಾಪ್‌ ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ? ಇತರರರಿಗೆ ಸೆಂಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1 ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು ಹೋಳಿ ವಾಟ್ಸಾಪ್ ಸ್ಟಿಕ್ಕರ್‌ಗಳಿಗಾಗಿ ಸರ್ಚ್‌ ಮಾಡಿ.

ಹಂತ:2 ನೀವು ಇಷ್ಟಪಡುವ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ತೆರೆಯಿರಿ

ಹಂತ:3 ಆಡ್ ಟು ವಾಟ್ಸಾಪ್ ಬಟನ್ ಅಥವಾ ಸ್ಟಿಕರ್ಸ್ ಪ್ಯಾಕ್ ಮುಂದೆ ಇರಿಸಲಾಗಿರುವ ‘+' ಐಕಾನ್ ಟ್ಯಾಪ್ ಮಾಡಿ

ಹಂತ:4 ನಂತರ, ವಾಟ್ಸಾಪ್‌ಗೆ ಹೋಗಿ ಮತ್ತು ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡಿರಿ.

ಅಪ್ಲಿಕೇಶನ್‌

ಇನ್ನು ವಾಟ್ಸಾಪ್‌ನ ಹೊಸ ಸೇವಾನಿಯಮದ ವಿವಾದದ ನಂತರ ಸಿಗ್ನಲ್‌ ಅಪ್ಲಿಕೇಶನ್‌ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ತನ್ನ ಗೌಪ್ಯತೆ ಫೀಚರ್ಸ್‌ಗಳಿಂದ ಬಳಕೆದಾರರನ್ನು ಆಕರ್ಷಿಸುತ್ತಿದೆ. ಇನ್ನು ಸಿಗ್ನಲ್‌ ಅಪ್ಲಿಕೇಶನ್‌ ಕೂಡ ವಾಟ್ಸಾಪ್‌ ಮಾದರಿಯಲ್ಲಿಯೇ ಅನೇಕ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಸ್ಟಿಕ್ಕರ್‌ ಸೆಂಡ್‌ ಮಾಡುವುದು ಕೂಡ ಸೇರಿದೆ. ಹೋಳಿ ಹಬ್ಬದ ಸಂಭ್ರಮದ ಸ್ಟಿಕ್ಕರ್‌ಗಳನ್ನು ನೀವು ಸಿಗ್ನಲ್‌ ಅಪ್ಲಿಕೇಶನ್‌ನಲ್ಲಿಯೂ ಸೆಂಡ್‌ ಮಾಡಬಹುದಾಗಿದೆ. ಹಾಗಾದ್ರೆ ಸಿಗ್ನಲ್‌ ಅಪ್ಲಿಕೇಶನ್‌ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ ಡೌನ್‌ಲೋಡ್‌ ಮಡಲು ಕೆಳಗಿನ ಹಂತಗಳನ್ನು ಅನುಸರಿಸಿ.

ಸಿಗ್ನಲ್‌ ಅಪ್ಲಿಕೇಶನ್‌ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಸಿಗ್ನಲ್‌ ಅಪ್ಲಿಕೇಶನ್‌ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1 ಯಾವುದೇ ಚಾಟ್ ವಿಂಡೋಗೆ ಹೋಗಿ ಮತ್ತು ಟೆಕ್ಸ್ಟ್‌ ಬಾಕ್ಸ್‌ ಬಲಭಾಗದಲ್ಲಿರುವ ‘+' ಐಕಾನ್ ಟ್ಯಾಪ್ ಮಾಡಿ
ಹಂತ:2 ಜಿಐಎಫ್ ಆಯ್ಕೆಮಾಡಿ ನಂತರ ಸ್ಟಿಕ್ಕರ್‌ಗಳನ್ನು ಆರಿಸಿ
ಹಂತ:3 ಈಗ, ಸರ್ಚ್ ಬಾರ್ ಮೇಲೆ ಕ್ಲಿಕ್ ಮಾಡಿ ಮತ್ತು ಹೋಳಿ ಸ್ಟಿಕ್ಕರ್‌ಗಳಿಗಾಗಿ ಹುಡುಕಿ
ಹಂತ:4 ನಂತರ ನೀವು ಇತರರಿಗೆ ಸ್ಟಿಕ್ಕರ್‌ ಸೆಂಡ್‌ ಮಾಡಲು ಯಾವುದೇ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿ

Most Read Articles
Best Mobiles in India

English summary
How to download and sent holi stickers on whatsapp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X