ಸಿಟಿ ಲೆನ್ಸ್‌ ಆಪ್‌ ಡೌನ್ಲೊಡ್‌ ಮಾಡಿ ಬಳಸೊದು ಹೇಗೆ?

Posted By: Staff
ಸಿಟಿ ಲೆನ್ಸ್‌ ಆಪ್‌ ಡೌನ್ಲೊಡ್‌ ಮಾಡಿ ಬಳಸೊದು ಹೇಗೆ?

ನೋಕಿಯಾ ಸಿಟಿ ಲೆನ್ಸ, ಇದೊಂದು ವರ್ಧಿತ ರಿಯಾಲಿಟಿ ಅಪ್ಲಿಕೇಷನ್‌ ಆಗಿದ್ದು ಇದರ ನೆರವಿನಿಂದ ಹತ್ತಿರದಲ್ಲಿನ ಶಾಪ್‌, ಮ್ಯೂಸಿಯಂ, ರೆಸ್ಟೋರೆಂಟ್‌ ಹಾಗೂ ನಿಮ್ಮ ಆಸಕ್ತಿಯ ಸ್ಥಳಗಳನ್ನು ಕಂಡುಕೊಳ್ಳ ಬಹುದಾಗಿದೆ. ಇದಲ್ಲದೆ ಈ ಆಪ್‌ ನಿಮ್ಮ ಮೊಬೈಲ್‌ನ ಕ್ಯಾಮೆರಾ ಮೂಲಕ ಸ್ಥಳದ ಸಂಪೂರ್ಣ ವಿವರ ನೀಡುತ್ತದೆ.

ನೋಕಿಯಾ ಸಂಸ್ಥೆಯು ತನ್ನಯ ನೂತನ ವಿಂಡೋಸ್‌ ಮಾದರಿಗಳಾದಂತಹ ಲೂಮಿಯಾ 920 ಹಾಗೂ ಲೂಮಿಯಾ 820 ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಪ್‌ನ ಬಳಕೆಯನ್ನು ತಂದಿದೆ. ಅಂದಹಾಗೆ ಇತ್ತೀಚಿನ ವರದಿಗಳ ಪ್ರಕಾರ ನೋಕಿಯಾದ ಲೂಮಿಯಾ ಸರಣಿಯ ಇತರೆ ಮಾದರಿಗಳಾದ ಲೂಮಿಯಾ 710, 800 ಹಾಗೂ 900 ಫೋನ್‌ಗಳಲ್ಲಿನ ಹಳೆಯ ಆಪರೇಟಿಂಗ್ ಕೂಡ ಈ ಆಪ್‌ ಡೌನ್ಲೋಡ್‌ ಮಾಡಿಕೊಂಡು ಬಳಸ ಬಹುದಾಗಿದೆ ಎಂದು ತಿಳಿಸಿವೆ.

ಇದೇವೇಳೆ ವಿಂಡೋಸ್‌ ಫೋನ್‌ 8 ಬಳಕೆದಾರರು ನೋಕಿಯಾ ಲೂಮಿಯಾ 920 ಹಾಗೂ 820 ಸ್ಮಾರ್ಟ್‌ಫೋನ್‌ ಜೊತೆಗೆ ಹೆಚ್ಚಯವರಿ ಪೀಚರ್ಸ್‌ಗಳಾದ 3ಧ ಇಕಾನ್‌ ಲೇಯೌಟ್‌ ಗಳನ್ನು ಕೂಡ ಪಡೆಯಲಿದ್ದಾರೆ. ಅಲ್ಲದೆ ಬಳಕೆದಾರರು ತಮ್ಮ ಇಷ್ಟದಂತೆ ನೋಕಿಯಾ ಸಿಟಿ ಲೆನ್ಸ್‌ ಮೆನ್ಯುವನ್ನು ಕಸ್ಟಮೈಸ್‌ ಮಾಡಿಕೊಳ್ಳಬಹುದು.

ನೋಕಿಯಾ ಸಿಟಿ ಲೆನ್ಸ್‌ ಆಪ್‌ ಅನ್ನು ಲೂಮಿಯಾ ಫೋನ್‌ಗಳ ಮೂಲಕ ಡೌನ್ಲೋಡ್‌ ಮಾಡಿಕೊಳ್ಳ ಬಹುದಾಗಿದೆ. ನಿಮಗೂ ಕೂಡ ಈ ಆಪ್‌ ಬಳಸುವ ಇಚ್ಚೆಯಿದ್ದಲ್ಲಿ ಈ ಕೆಳಗಿನ ಮಾರ್ಗಾನುಸಾರ ಡೌನ್ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಡೌನ್ಲೋಡ್‌ಗಾಗಿ ಈ ಸ್ಟೆಪ್ಸ್‌ ಗಮನಿಸಿ:

ಸ್ಟೆಪ್ 1: ನಿಮ್ಮ ನೋಕಿಯಾ ಲೂಮಿಯಾದಲ್ಲಿನ ಸರ್ಚ್‌ ಬಟನ್‌ ಪ್ರೆಸ್‌ ಮಾಡಿ ನಂತರ ವಿಶನ್‌ ಟ್ಯಾಪ್‌ ಮಾಡಿ.

ಸ್ಟೆಪ್ 2: QR ಕೋಡ್‌ ಸ್ಕ್ಯಾನ್‌ ಮಾಡಿ.

ಸ್ಟೆಪ್ 3: ಪರದೆಯ ಮೇಲೆ ಲಿಂಕ್‌ ಬಂದಕೂಡಲೆ ಟ್ಯಾಪ್‌ ಮಾಡಿ.

ಸ್ಟೆಪ್ 4: ವಿಂಡೋಸ್‌ ಫೋನ್‌ ಮಾರ್ಕೆಟ್‌ ಪ್ಲೇಸ್‌ ಮೂಲಕ ಅಪ್ಲಿಕೇಷನ್‌ ಇನ್ಸ್ಟಾಲ್‌ ಮಾಡಿಕೊಳ್ಳಿ.

ಅಂದಹಾಗೆ ಆಪ್‌ ಡೌನ್ಲೋಡ್‌ ಮಾಡಿದ ಬಳಿಕ ಅದನ್ನು ಬಳಸೋದು ಹೇಗೆ ಎಂಬುದನ್ನು ತಿಳಿಯಲು ಈ ವಿಡಿಯೋ ನಿಮಗೆ ನೆರವಾಗುತ್ತದೆ.


Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot