ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಟೆಲಿಗ್ರಾಮ್ ಆಪ್‌ ಡೌನ್‌ಲೋಡ್ ಮಾಡುವುದು ಹೇಗೆ?

|

ಟೆಲಿಗ್ರಾಮ್ ಜನಪ್ರಿಯ ಕ್ಲೌಡ್-ಆಧಾರಿತ ಇನ್ಸಟಂಟ್‌ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಇನ್ನು ಈ ಟೆಲಿಗ್ರಾಮ್‌ ಸೇವೆಗಳನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಪಿಸಿಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಪಡೆಯಬಹುದು. ಪ್ರಯಾಣದಲ್ಲಿರುವಾಗ ನಿಮ್ಮ ಗೆಳೆಯರೊಂದಿಗೆ ಸಂಪರ್ಕದಲ್ಲಿರಲು ತ್ವರಿತ ಸಂದೇಶ ರವಾನೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ. ಇನ್ನು ಟೆಲಿಗ್ರಾಮ್‌ ಕಂಪನಿಯು ತನ್ನ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಸಹ ಹಲವಾರು ಉಪಯುಕ್ತ ಫೀಚರ್ಸ್‌ಗಳನ್ನು ಹೊಂದಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಡೌನ್ಲೋಡ್ ಮಾಡಲು ಎಲ್ಲರಿಗೂ ತಿಳಿದಿದೆ. ಆದರೆ ಡೆಸ್ಕ್ಟಾಪ್ ಆವೃತ್ತಿಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.ಮೊಬೈಲ್‌ ಆವೃತ್ತಿಯಲ್ಲಿ ಬಳಸಿದಂತೆ ಪಿಸಿ ಮತ್ತು ಲ್ಯಾಪ್‌ಟಾಪ್‌ನಲ್ಲಿ ವೆಬ್‌ ಆವೃತ್ತಿಯ ಟೆಲಿಗ್ರಾಮ್ ಡೌನ್‌ಲೋಡ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ಆಪ್‌ ಅನ್ನು ಲ್ಯಾಪ್‌ಟಾಪ್‌ಗಳು ಮತ್ತು ಪಿಸಿಗಳಲ್ಲಿ ಟೆಲಿಗ್ರಾಮ್ ತ್ವರಿತ ಸಂದೇಶ ಸೇವೆಯನ್ನು ಡೌನ್‌ಲೋಡ್ ಮಾಡುವುದು ಸಾಕಷ್ಟು ಸುಲಭವಾಗಿದೆ. ವಿಂಡೋಸ್ ಮತ್ತು ಮ್ಯಾಕ್ ಓಎಸ್ ಎರಡಕ್ಕೂ ಹಂತಗಳು ಒಂದೇ ಆಗಿರುತ್ತವೆ . ಅಷ್ಟಕ್ಕೂ ಟೆಲಿಗ್ರಾಮ್‌ ವೆಬ್‌ ಆವೃತ್ತಿಯನ್ನು ಬಳಸುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಸಿರಿ.

ಟೆಲಿಗ್ರಾಮ್

ಹಂತ 1: ಅಧಿಕೃತ ಟೆಲಿಗ್ರಾಮ್ ವೆಬ್‌ಸೈಟ್‌ಗೆ ಭೇಟಿ ನೀಡಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಬಹುದು ಅಥವಾ www.telegram.org ಎಂದು ಟೈಪ್ ಮಾಡಿರಿ.

ಹಂತ 2: ನೀವು ಕೆಳಗೆ ಸ್ಕ್ರಾಲ್ ಮಾಡಿದಾಗ ನೀವು 'ಟೆಲಿಗ್ರಾಮ್ ಫಾರ್ ಪಿಸಿ / ಮ್ಯಾಕ್ / ಲಿನಕ್ಸ್' ಅನ್ನು ಕಾಣಬಹುದಾಗಿದೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 3: ಒಮ್ಮೆ ನೀವು ಮೇಲೆ ತಿಳಿಸಿದ ಟ್ಯಾಬ್ ಅನ್ನು ಕ್ಲಿಕ್ ಮಾಡಿದರೆ, ನಿಮ್ಮನ್ನು ಮತ್ತೊಂದು ಪುಟಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ನಿಮ್ಮ ಲ್ಯಾಪ್‌ಟಾಪ್ ಚಾಲನೆಯಲ್ಲಿರುವ ಓಎಸ್ ಆವೃತ್ತಿಯನ್ನು ನೀವು ಆಯ್ಕೆ ಮಾಡಬಹುದು.

ಲ್ಯಾಪ್‌ಟಾಪ್

ಹಂತ 4: ಸೆಟಪ್ ಡೌನ್‌ಲೋಡ್ ಮಾಡಿದ ನಂತರ ಆನ್-ಸ್ಕ್ರೀನ್ ಇನ್‌ಸ್ಟಾಲ್‌ ಪ್ರಕ್ರಿಯೆಯನ್ನು ಅನುಸರಿಸಿ.

ಹಂತ 5: ಈಗ, ನಿಮ್ಮ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಯನ್ನು ನೀವು ಸೇರಿಸಬೇಕಾಗಿರುವುದು ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಒಟಿಪಿ ಕೋಡ್ ಅನ್ನು ಪಡೆಯುತ್ತೀರಿ.

ಹಂತ 6: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಸ್ವೀಕರಿಸಿದ ಕೋಡ್ ಅನ್ನು ಪಿಸಿ / ಲ್ಯಾಪ್‌ಟಾಪ್ ಅಪ್ಲಿಕೇಶನ್‌ಗೆ ನಮೂದಿಸಿದರೆ ನಿಮ್ಮ ವೆಬ್‌ ಆವೃತ್ತಿಯನ್ನ ಬಳಸಬಹುದಾಗಿದೆ.

Best Mobiles in India

Read more about:
English summary
Telegram is one of the most popular cloud-based instant messaging platforms. You can avail its services on smartphones as well as PCs and laptops.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X