ವಾಟ್ಸಾಪ್‌ನಲ್ಲಿ ಕ್ರಿಸ್ಮಸ್‌ ಡೇ ಸ್ಟಿಕ್ಕರ್ ಡೌನ್‌ಲೋಡ್‌ ಮಾಡುವುದು ಹೇಗೆ?

|

ಡಿಸೆಂಬರ್‌ ತಿಂಗಳ 25 ಬಂತೆದರೆ ಸಾಕು ಎಲ್ಲಾ ಮಾದರಿಯ ಮೆಸೆಜಿಂಗ್‌ ಆಪ್‌ಗಳಲ್ಲಿ ಕ್ರಿಸ್ಮಸ್‌ ಹಬ್ಬದ ಕುರಿತ ಸಂದೇಶಗಳು ಹರಿದಾಡುತ್ತವೆ. ಸದ್ಯ ಇದು ಸ್ಮಾರ್ಟ್‌ಫೋನ್‌ ಜಮಾನ ಆಗಿರೋದ್ರಿಂದ ಬಹುತೇಕ ಸ್ನೇಹಿತರೆಲ್ಲರೂ ತಮ್ಮ ಗೆಳೆಯರಿಗೆ ವಾಟ್ಸಾಪ್‌, ಫೇಸ್‌ಬುಕ್‌, ಹೈಕ್‌, ಟೆಲಿಗ್ರಾಮ್ ನಂತಹ ಮೆಸೇಜಿಂಗ್‌ ಆಪ್‌ಗಳಲ್ಲಿ ಸಂದೇಶಗಳನ್ನ ರವಾನಿಸುತ್ತಾರೆ. ಆದ್ರೆ ಇದೀಗ ಟ್ರೆಡ್‌ ಬದಲಾಗಿ ಹೋಗಿದೆ. ಪಠ್ಯ ಸಂದೇಶಗಳ ಬದಲಿಗೆ ಸ್ಟಿಕ್ಕರ್‌ಗಳ ಸಂದೇಶ ಬಂದು ನಿಂತಿದೆ.

ಕ್ರಿಸ್ಮಸ್‌

ಹೌದು, ಡಿಸೆಂಬರ್‌ 25 ಕ್ಕೆ ಕ್ರಿಸ್ಮಸ್‌ ಹಬ್ಬವನ್ನ ಆಚರಣೆ ಮಾಡಲಾಗುತ್ತೆ. ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಸ್ನೇಹಿತರಿಗೆ, ಬಂದು ಭಾಂಧವರಿಗೆ, ಶುಭ ಸಂದೇಶ ಕಳುಹಿಸುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ಭಾವನೆಗಳಿಗೆ ಅನುಗುಣವಾಗಿ ಸ್ಟಿಕ್ಕರ್‌ಗಳನ್ನ ಕಳುಹಿಸುವ ಶೈಲಿ ರೂಡಿ ಆಗಿದೆ. ಬಹುತೇಕ ಎಲ್ಲಾ ಮೆಸೇಜಿಂಗ್‌ ಆಪ್‌ಗಳಲ್ಲಿಯೂ ಸ್ಟಿಕ್ಕರ್‌ಗಳನ್ನ ಕಳುಹಿಸುವುದಕ್ಕೆ ಅವಕಾಶವನ್ನ ನಿಡಲಾಗಿದೆ. ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನ ಸೂಚಿಸುವ ಸ್ಟಿಕ್ಕರ್‌ಗಳನ್ನ ನಿವು ಕಳುಹಿಸಬಹುದಾಗಿದೆ. ಹಾಗಾದ್ರೆ ಕ್ರಿಸ್ಮಸ್‌ ಹಬ್ಬದಂದು ಕ್ರಿಸ್ಮಸ್‌ ಸ್ಟಿಕ್ಕರ್‌ಗಳನ್ನ ವಾಟ್ಸಾಪ್‌ನಲ್ಲಿ ಕಳುಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಟಿಕ್ಕರ್‌ಗಳ

ಮೆಸೇಜಿಂಗ್‌ ಆಪ್‌ಗಳಲ್ಲಿ ಸ್ಟಿಕ್ಕರ್‌ಗಳ ಬಳಕೆಯು ಪ್ರಾರಂಭವಾದ ದಿನದಿಂದಲೂ ಸ್ಟಿಕ್ಕರ್‌ಗಳ ಬಳಕೆ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಸಹ ಪರಿಚಯಿಸಿದೆ. ಅಷ್ಟೇ ಅಲ್ಲ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇತರ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಸಹ ಸ್ಟಿಕ್ಕರ್‌ ಸಂದೇಶಗಳನ್ನ ಕಾಣಬಹುದಾಗಿದೆ. ಹಬ್ಬ ಅಥವಾ ಯಾವುದೇ ವಿಶೇಷ ದಿನದ ಆಚರಣೆ ದಿನವಿದ್ದಾಗ ಸ್ಟಿಕ್ಕರ್‌ಗಳ ಬಳಕೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಸದ್ಯ ಕೊರೊನಾ ವೈರಸ್‌ ಕಾರಣದಿಂದ ನಾವೆಲ್ಲಾ ಸಾಮಾಜಕ ಅಂತರ ಅನುಸರಿಸಬೇಕಾಗಿದೆ. ಈ ಸಂದರ್ಭದಲ್ಲಿ ಕ್ರಿಸ್ಮಸ್‌ ಹಬ್ಬಕ್ಕೆ ವಾಟ್ಸಾಪ್‌ ಸ್ಟಿಕ್ಕರ್‌ಗಳ ಮೂಲಕವೇ ಶುಭಾಶಯ ಕೋರುವುದು ಒಳಿತು ಎನಿಸಲಿದೆ.

ವಾಟ್ಸಾಪ್‌ನಲ್ಲಿ ಕ್ರಿಸ್‌ಮಸ್ 2020 ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?

ವಾಟ್ಸಾಪ್ ಸ್ಟಿಕ್ಕರ್‌ಗಳು ಸಾಕಷ್ಟು ಜನಪ್ರಿಯವಾಗಿವೆ ಏಕೆಂದರೆ ಅವುಗಳು ಸಂಪೂರ್ಣ ಹೊಸ ಅಭಿವ್ಯಕ್ತಿ ವಿಧಾನವನ್ನು ನೀಡುತ್ತವೆ. ಇನ್ನು ವಾಟ್ಸಾಪ್‌ ಅಪ್ಲಿಕೇಶನ್ ತನ್ನದೇ ಆದ ಕ್ರಿಸ್‌ಮಸ್ ಸ್ಟಿಕ್ಕರ್‌ಗಳನ್ನು ನೀಡುವುದಿಲ್ಲ, ಬದಲಿಗೆ ವಾಟ್ಸಾಪ್‌ನಲ್ಲಿ ಸ್ಟಿಕ್ಕರ್‌ಗಳು ಲಭ್ಯವಾಗಲು ಬಳಕೆದಾರರು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ವಾಟ್ಸಾಪ್‌ನಲ್ಲಿ ಕ್ರಿಸ್‌ಮಸ್ 2020 ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಕ್ರಿಸ್‌ಮಸ್ 2020 ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?

ಹಂತ:1 ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ.
ಹಂತ:2 'ವಾಟ್ಸಾಪ್‌ ಕ್ರಿಸ್‌ಮಸ್ ಸ್ಟಿಕ್ಕರ್‌ ಅಪ್ಲಿಕೇಶನ್‌ಗಳಿಗಾಗಿ ಹುಡುಕಿ.
ಹಂತ:3 ನಿಮ್ಮ ಆಯ್ಕೆಯ ಅಪ್ಲಿಕೇಶನ್ ಆಯ್ಕೆಮಾಡಿ ಮತ್ತು ನೀವು ಇಷ್ಟಪಡುವದನ್ನು ಡೌನ್‌ಲೋಡ್ ಮಾಡಿ.
ಹಂತ:4 ಡೌನ್‌ಲೋಡ್ ಮಾಡಿದ ನಂತರ, ಅಪ್ಲಿಕೇಶನ್ ತೆರೆಯಿರಿ ಮತ್ತು ಡೌನ್‌ಲೋಡ್ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ನೀವು ಇಷ್ಟಪಡುವ ಕ್ರಿಸ್ಮಸ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿ.
ಹಂತ:5 ಈಗ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ.
ಹಂತ:6 ಸ್ನೇಹಿತರ ಚಾಟ್ ವಿಂಡೋವನ್ನು ತೆರೆಯಿರಿ.
ಹಂತ:7 ಎಮೋಜಿಸ್ ಆಯ್ಕೆಯನ್ನು ಟ್ಯಾಪ್ ಮಾಡಿ ನಂತರ ಸ್ಟಿಕ್ಕರ್ಸ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:8 ಇದರಲ್ಲಿ ಹೊಸ ಕ್ರಿಸ್‌ಮಸ್ ಜೊತೆಗೆ ಅಸ್ತಿತ್ವದಲ್ಲಿರುವ ಎಲ್ಲಾ ಸ್ಟಿಕ್ಕರ್‌ಗಳನ್ನು ಹೊಂದಿರುತ್ತದೆ.
ಅವುಗಳನ್ನು ಡೌನ್‌ಲೋಡ್ ಮಾಡಿ ಮತ್ತು ನೀವು ಬಯಸುವ ಜನರಿಗೆ ಕಳುಹಿಸಿರಿ.

Best Mobiles in India

Read more about:
English summary
Christmas 2020 is just around the corner and here's how you can share Christmas stickers on WhatsApp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X