ಆಪಲ್‌ನಲ್ಲಿನ ನಿಮ್ಮ ಮಾಹಿತಿ ಪಡೆದುಕೊಳ್ಳುವುದು ಹೇಗೆ..?
ಆಪಲ್ ಫೋನ್ ಬಳಸುತ್ತಿರುವವರಿಗೆ, ತಾವು ಬಳಸುವ ಕಂಪೆನಿಯು ತಮ್ಮ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ ಎಂಬ ವಿಚಾರ ತಿಳಿದೇ ಇದೆ. ಆದರೆ ಯಾವೆಲ್ಲ ಮಾಹಿತಿಗಳನ್ನು ಆಪಲ್ ಸಂಗ್ರಹಿಸಿ ಇಟ್ಟಿರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಜಗತ್ತಿನ ದೊಡ್ಡ ಟೆಕ್ ಕಂಪೆನಿ ಆಪಲ್, ತನ್ನ ಬಳಕೆದಾರರ ಹಲವಾರು ಡಾಟಾವನ್ನು ತನ್ನೊಡಲಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ಫೇಸ್ ಬುಕ್ ಮತ್ತು ಗೂಗಲ್ ಗಳು ನಿಮ್ಮ ಡಾಟಾ ಮೂಲಕ ನಿಮಗೆ ಜಾಹಿರಾತುಗಳನ್ನು ನೀಡುತ್ತದೆ. ಆದರೆ ಆಪಲ್ ನಿಮ್ಮ ಡಾಟಾವನ್ನು ಭದ್ರವಾಗಿ ತನ್ನಲ್ಲೇ ರಕ್ಷಿಸಿ ಇಟ್ಟುಕೊಂಡಿರುತ್ತದೆ. ಅದನ್ನು ನಿಮ್ಮ ಅನುಮತಿ ಇಲ್ಲದೆ ಯಾವ ಕಾರಣಕ್ಕೂ ಮಾರ್ಕೆಟಿಂಗ್ ಗೆ ಬಳಕೆ ಮಾಡುವುದಿಲ್ಲ.

ನಿಮ್ಮ ಬಿಲ್ಲಿಂಗ್ ವಿಳಾಸ, ಫೇಸ್ ಟೈಮ್ ಕಾಲ್ ಮೆಟಾ ಡಾಟಾ ಹೀಗೆ ಹತ್ತು ಹಲವು ನಿಮ್ಮ ಬಗೆಗಿನ ಮಾಹಿತಿಯೂ ಆಪಲ್ ನಲ್ಲಿ ಭದ್ರವಾಗಿರುತ್ತದೆ. ಹಾಗಾದರೆ ಆಪಲ್ ನಿಮ್ಮ ಬಗ್ಗೆ ಸಂಗ್ರಹಿಸುವ ಮಾಹಿತಿಗಳು ಯಾವುದು? ಅದನ್ನು ತಿಳಿದುಕೊಳ್ಳಲು ಸಾಧ್ಯವೇ? ಒಂದು ವೇಳೆ ಸಾಧ್ಯವೇ ಆದರೆ ಹೇಗೆ ಆ ಡಾಟಾವನ್ನು ಪಡೆದುಕೊಳ್ಳುವುದು ಎಂಬ ಹಲವಾರು ಪ್ರಶ್ನೆಗಳು ಉಧ್ಬವವಾಗುತ್ತದೆ.
ಹೌದು, ಆಪಲ್ ನಿಮ್ಮ ಬಗ್ಗೆ ಸಂಗ್ರಹಿಸಿದ ಮಾಹಿತಿಗಳನ್ನು ನೀವು ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು ಏನು ಮಾಡಬೇಕು ಎಂಬುದನ್ನು ಈ ಲೇಖನವು ನಿಮಗೆ ವಿವರಿಸಲಿದೆ.

ಆಪಲ್ ನಲ್ಲಿ ಸಂಗ್ರಹವಾಗಿರುವ ನಿಮ್ಮ ಬಗೆಗಿನ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುವುದು ಹೇಗೆ?
1. ಆಪಲ್ ಪ್ರೈವಸಿ ಪೇಜ್ ಗೆ ತೆರಳಿ
2. ಆಪಲ್ ಐಡಿ ಮೂಲಕ ಸೈನ್ ಇನ್ ಆಗಿ
3. ಒಂದು ವೇಳೆ ನೀವು ಯುರೋಪಿಯನ್ ಯೂನಿಯನ್ ನಲ್ಲಿ ಇದ್ದರೆ, ಈ ಪೇಜ್ ನಿಮಗೆ ಎಲ್ಲಾ ಡಾಟಾವನ್ನು ಡೌನ್ ಲೋಡ್ ಮಾಡಲು ಆಪಲ್ ಅವಕಾಶ ನೀಡುತ್ತದೆ. ಆದರೆ ಒಂದು ವೇಳೆ ನೀವು ಯುರೋಪಿಯನ್ ಯೂನಿಯನ್ ನಿಂದ ಹೊರಭಾಗದಲ್ಲಿ ಇದ್ದರೆ, ಈ ಪೇಜ್ ಗೆ ತೆರಳಿ.
4. ಹಂತ ಮೂರರಲ್ಲಿರುವ ಪೇಜ್ ನಲ್ಲಿ ಎಲ್ಲಾ ಮಾಹಿತಿಗಳನ್ನು ತುಂಬಿಸಿ ಮತ್ತು ವಿಷಯವನ್ನು ಸೇರಿಸಿ ಮತ್ತು ಕಾಂಟ್ಯಾಕ್ಟ್ ಫಾರ್ಮ್ ನಲ್ಲಿ ನೀವು ಆಪಲ್ ಸರ್ವರ್ ನಲ್ಲಿ ಸಂಗ್ರಹವಾಗಿರುವ ಎಲ್ಲಾ ಡಾಟಾವನ್ನು ನೋಡಲು ಇಚ್ಛಿಸುವ ಬಗ್ಗೆ ಬರೆಯಿರಿ.
5. ನೀವು ಹೀಗೆ ಮಾಡಿದ 24 ಘಂಟೆಯ ಒಳಗೆ, ಆಪಲ್ ನ ಪ್ರತಿನಿಧಿಯೊಬ್ಬರು ನಿಮ್ಮ ಬಳಿ ನಿಮ್ಮ ಪೂರ್ಣ ಹೆಸರು, ವಿಳಾಸ, ಆಪಲ್ ಈಮೇಲ್ ಐಡಿ, ಇತ್ಯಾದಿ ಮಾಹಿತಿಗಳನ್ನು ಕೇಳುತ್ತಾರೆ. ಅವರು ಈ-ಮೇಲ್ ಮೂಲಕ ಕೇಳುವ ಮಾಹಿತಿಗೆ ನೀವು ಪ್ರತ್ಯುತ್ತರ ನೀಡಬೇಕು.
6. ಈಗ ಆಟ ಆರಂಭವಾಗುವ ಸಮಯಕ್ಕಾಗಿ ಕಾಯಬೇಕು . ಅಂದರೆ ಒಂದು ವಾರ ಅಥವಾ 10 ದಿನಗಳ ವರೆಗೆ ನೀವು ಆಪಲ್ ನಿಂದ ಬರುವ ಈ-ಮೇಲ್ ಗಾಗಿ ಕಾಯಬೇಕಾಗುತ್ತದೆ. ಆಪಲ್ ನಿಮಗೆ ತನ್ನ ಕಂಪೆನಿಯಲ್ಲಿ ನಿಮ್ಮ ಬಗ್ಗೆ ಸಂಗ್ರಹಿಸಿಟ್ಟಿರುವ ಎಲ್ಲಾ ಮಾಹಿತಿಗಳನ್ನು ಈ-ಮೇಲ್ ಮೂಲಕ ಕಳುಹಿಸಿಕೊಡಲಿದೆ. ಇದು ಪಾಸ್ ವರ್ಡ್ ನಿಂದ ರಕ್ಷಿಸಲಾಗಿರುವ ಒಂದು ಝಿಪ್ ಫೈಲ್ ಆಗಿರುತ್ತದೆ. ಝಿಪ್ ಫೈಲ್ ನ್ನು ತೆರೆಯಲು ಆಪಲ್ ನಿಮಗೆ ಮತ್ತೊಂದು ಇ-ಮೇಲ್ ಕಳುಹಿಸಿಕೊಡಲಿದೆ.
7. ಒಮ್ಮೆ ನೀವು ಇದನ್ನು ತೆರೆದ ನಂತರ, ಸಾಕಷ್ಟು ಸ್ಪ್ರೆಡ್ ಶೀಡ್ ಗಳನ್ನುನಾವು ಗಮನಿಸಬಹುದು ಮತ್ತು ಅದರಲ್ಲಿ ನಮ್ಮ ಬಗ್ಗೆ ಆಪಲ್ ಸಂಗ್ರಹಿಸಿಟ್ಟಿರುವ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ.
ನಾವು ಇದನ್ನು ಪರೀಕ್ಷಿಸಿದಾಗ ಸುಮಾರು 17 ಸ್ಪ್ರೆಡ್ ಶೀಡ್ ಗಳು ಲಭ್ಯವಾದವು ಮತ್ತು ಅವುಗಳಲ್ಲಿ ನಮ್ಮ ಬಗ್ಗೆ ಆಪಲ್ ಕಲೆಹಾಕಿರುವ ಮಾಹಿತಿಗಳು ಒಳಗೊಂಡಿದ್ದವು.ಎಲ್ಲಿಯವರೆಗೆ ಎಂದರೆ ನಾವು ಯಾವೆಲ್ಲ ಆಪ್ ಗಳನ್ನು ಡೌನ್ ಲೋಡ್ ಮಾಡಿದ್ದೆವು, ಫೇಸ್ ಟೈಮ್ ಮೂಲಕ ಯಾವೆಲ್ಲ ಈಮೇಲ್ ಗೆ ಕರೆ ಮಾಡಿದ್ದೆವು ಇತ್ಯಾದಿ ಎಲ್ಲಾ ಮಾಹಿತಿಯೂ ಒಳಗೊಂಡಿತ್ತು.

ಹೀಗೆ ಆಪಲ್ ನಿಂದ ಸಿಗುವ ಫಾರ್ಮ್ ಬಗ್ಗೆ ನೀವು ಅರ್ಧ ಮಾಡಿಕೊಳ್ಳಬೇಕಾಗಿರುವ ಕೆಲವು ವಿಚಾರಗಳ ಪಟ್ಟಿ ಇಲ್ಲಿದೆ ನೋಡಿ.
• ನಮ್ಮ ಫೋನ್ ನಂಬರ್, ಈ-ಮೇಲ್ ಅಡ್ರೆಸ್, ಬೀದಿಯ ವಿಳಾಸ, ಆಪಲ್ ಐಡಿ ಕ್ರಿಯೇಟ್ ಮಾಡಿದ ಸಮಯ
• ಕಸ್ಟಮರ್ ಸಪೋರ್ಟ್ ಗೆ ನಾವು ಕಾಂಟ್ಯಾಕ್ಟ್ ಮಾಡಿದ ಎಲ್ಲಾ ಸಮಯದ ಮಾಹಿತಿ ಮತ್ತು ಅದರ ಜೊತೆಗೆ ಸ್ಟಾಂಪ್ಸ್.
• ಆಪಲ್ ನ ಆಪ್ ಸ್ಟೋರ್ ಮತ್ತು ಮ್ಯಾಕ್ ಆಪ್ ಸ್ಟೋರ್ ನಿಂದ ನಾವು ಡೌನ್ ಲೋಡ್ ಮಾಡಿರುವ ಎಲ್ಲಾ ಆಪ್ ಗಳ ವಿವರ .
• ಐಕ್ಲೌಡ್ ಲಾಗ್ಸ್ (ಜೊತೆಗೆ ಸಮಯದ ವಿವರವೂ ಒಳಗೊಂಡಿರುತ್ತದೆ) ಕಾಂಟ್ಯಾಕ್ಟ್, ಬುಕ್ ಮಾರ್ಕ್, ಫೋಟೋ ಲೈಬ್ರಕಿ, ಬ್ರೌಸಿಂಗ್ ಹಿಸ್ಟರಿ ಇತ್ಯಾದಿಗಳ ಮಾಹಿತಿ. ಜೊತೆಗೆ ಯಾವ ಐಪಿ ಅಡ್ರೆಸ್ ನಲ್ಲಿ ಆಕ್ಸಿಸ್ ಮಾಡಲಾಗಿದೆ ಎಂಬ ವಿವರ. ಸಫಾರಿ ಬ್ರೌಸಿಂಗ್ ಹಿಸ್ಟರಿಯ ಲಾಗ್ ನಲ್ಲಿ ಡಿವೈಸ್ ಟೈಪ್ ಮತ್ತು ಹೆಸರು ಜೊತೆಗೆ ಯಾವ ಆಪರೇಟಿಂಗ್ ಸಿಸ್ಟಮ್ ನಲ್ಲಿ ಆಕ್ಸಿಸ್ ಮಾಡಲಾಗಿದೆ ಎಂಬುದನ್ನೂ ತಿಳಿಸಿರುತ್ತದೆ.
• ಆಪಲ್ ಪ್ರೊಡಕ್ಟ್ ನ ಸೀರಿಯಲ್ ನಂಬರ್ ಮತ್ತು ವಾರೆಂಟಿ ಅವಧಿ ಮುಗಿಯುವ ದಿನಾಂಕ .
• ಐಟ್ಯೂನ್ಸ್ ಗೆ ಸೈನ್ ಆದ ಪ್ರತಿಯೊಂದು ಸಮಯದ ವಿವರ.
• ಗೇಮ್ ಸೆಂಟರ್ ನಿಂದ ಆಟವಾಡಿದ ಸಮಯದ ವಿವರ ಜೊತೆಗೆ ಐಪಿ ಅಡ್ರೆಸ್ ಮತ್ತು ಪ್ರತಿ ಬಾರಿ ಆಟ ಆರಂಭಿಸಿದ ಸೆಷನ್ ನ ಟೈಮ್ ಸ್ಟಾಂಪ್ .
• ಮಾರ್ಕೆಟಿಂಗ್ ಕಾರಣಗಳಿಂದ ಆಪಲ್ ಬಳಸುವ ನಿಮ್ಮ ಕಾಂಟ್ಯಾಕ್ಟ್ ವಿವರಗಳು.
• ನೀವು ಡೌನ್ ಲೋಡ್ ಮತ್ತು ಅಪ್ ಲೋಡ್ ಮಾಡಿರುವ ಐಟ್ಯೂನ್ ಮ್ಯಾಚ್ ಮತ್ತು ಐಟ್ಯೂನ್ಸ್ ನ ಹಾಡುಗಳ ವಿವರ
ಭವಿಷ್ಯದಲ್ಲಿ ಆಪಲ್ ನಿಮಗೆ ಈ-ಮೇಲ್ ಕಳುಹಿಸದೇ ಈ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವ ಸಾಧ್ಯತೆಗಳಿದೆ. ಆದರೆ, ಅದುವರೆಗೆ ಇದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಆದರೆ ಇದರಲ್ಲಿರುವ ಡಾಟಾ ದೊಡ್ಡದಾಗಿದೆ ಎಂದು ನಿಮಗೆ ಅನ್ನಿಸಬಹುದು.ಆದರೆ ಇದು ನೀವು ಖರೀದಿಸಿದ ಆಪ್, ಡಿವೈಸ್ ಅಥವಾ ಮ್ಯೂಸಿಕ್ ಪ್ರತಿಯೊಂದರ ಟ್ರ್ಯಾಕ್ ಇಟ್ಟುಕೊಳ್ಳುವುದಕ್ಕೆ ನಿಮಗೆ ನೆರವಾಗುತ್ತದೆ.
ಐಮೆಸೆಜ್ ಮತ್ತು ಫೇಸ್ ಟೈಮ್ ಮುಖಾಂತರ ಯಾರ ಜೊತೆಗೆ ಸಂಪರ್ಕ ಹೊಂದುತ್ತೇವೆ ಎಂಬ ಮಾಹಿತಿಯನ್ನು ಆಪಲ್ ಕಲೆಹಾಕುವುದನ್ನು ನಿಲ್ಲಿಸುವುದು ಒಳ್ಳೆಯದು. ಆದರೆ ಇದರಿಂದ ಕೆಟ್ಟದ್ದೇನೂ ಇಲ್ಲ, ಯಾಕೆಂದರೆ ಆಪಲ್ ನಮ್ಮ ಕಾಲ್ ಮತ್ತು ಮೆಸೇಜ್ ನ್ನು ರೆಕಾರ್ಡ್ ಮಾಡುವುದಿಲ್ಲ. ಕೇವಲ ಯಾರ ಜೊತೆಗೆ ಅನ್ನುವುದಷ್ಟೇ ಸಂಗ್ರಹಿಸಿರುತ್ತದೆ.
ಒಟ್ಟಾರೆ ಆಪಲ್ ಬಳಿ ನಿಮ್ಮೆಲ್ಲ ಮಾಹಿತಿಗಳು ಭದ್ರವಾಗಿರುತ್ತದೆ. ಮತ್ತು ಅದನ್ನು ನೀವು ಯಾವಾಗ ಬೇಕಾದರೂ ಪಡೆಯಬಹುದು ಎಂಬುದು ಮಾತ್ರ ದಿಟ.


Click it and Unblock the Notifications




