COVID-19 Vaccine ಸರ್ಟಿಫಿಕೆಟ್‌ ಡೌನ್‌ಲೋಡ್‌ ಮಾಡಲು ಈ ಕ್ರಮಗಳನ್ನು ಅನಸರಿಸಿ!

By Gizbot Bureau
|

ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆಯ ಅಬ್ಬರ ಮುಂದುವರೆದಿದ್ದು, ದಿನದಿಂದ ದಿನಕ್ಕೆ ದಾಖಲೆಯ ಪಾಸಿಟಿವ್‌ ಕೇಸ್‌ಗಳು ಹಾಗೂ ಸಾವುಗಳು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿವೆ. ಭಾರೀ ವೇಗದಲ್ಲಿ ಸೋಂಕು ಹಬ್ಬುತ್ತಿರುವುದರಿಂದ ಕೇಂದ್ರ ಸರ್ಕಾರ ಲಸಿಕಾ ಅಭಿಯಾನವನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿದೆ. ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲಿನವರಿಗೆ ಲಸಿಕೆ ನೀಡಲು ಕೇಂದ್ರ ಅನುಮತಿ ನೀಡಿದ್ದು, ಜನ ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ.

COVID-19 Vaccine ಸರ್ಟಿಫಿಕೆಟ್‌ ಡೌನ್‌ಲೋಡ್‌ ಮಾಡಲು ಈ ಕ್ರಮಗಳನ್ನು ಅನಸರಿಸಿ!

ಕೋವಿಡ್‌ - 19 ಲಸಿಕೆಯ ಮೊದಲ ಡೋಸ್‌ ಅಥವಾ ಎರಡು ಡೋಸ್‌ಗಳನ್ನು ನೀವು ತೆಗೆದುಕೊಂಡಿದ್ದರೆ ಕೊರೊನಾ ವೈರಸ್‌ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಲಸಿಕೆ ಪಡೆದ ನಂತರ ಲಸಿಕಾ ಕೇಂದ್ರ ನಿಮಗೆ ಕೋವಿಡ್-‌19 ಲಸಿಕೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣ ಪತ್ರವು ಕ್ಯೂಆರ್ ಕೋಡ್‌ ಹೊಂದಿದ್ದು, ಅದರ ಇ-ಸರ್ಟಿಫಿಕೇಟ್‌ ಪಡೆಯಲು ಸ್ಕ್ಯಾನ್ ಮಾಡಬೇಕಾಗುತ್ತದೆ. ಇದಲ್ಲದೆ, ನೀವು ಕೋವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಆಪ್‌ ಮೂಲಕವೂ ಕೋವಿಡ್‌-19 ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಬಹುದು.

ಕೋವಿಡ್‌-19 ಲಸಿಕೆ ಪ್ರಮಾಣ ಪತ್ರವನ್ನು ಯಾಕೆ ಡೌನ್‌ಲೋಡ್‌ ಮಾಡಬೇಕೆಂದರೆ, ನೀವು ಲಸಿಕೆ ತೆಗೆದುಕೊಂಡಿದ್ಧೀರಿ ಎಂಬುದಕ್ಕೆ ಈ ಪ್ರಮಾಣ ಪತ್ರ ಪುರಾವೆಯಾಗಿರುತ್ತದೆ. ಅಲ್ಲದೆ, ನೀವು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ತುಂಬಾ ಕಡಿಮೆ. ಮುಂದಿನ ದಿನಗಳಲ್ಲಿ ನೀವು ಬೇರೆ ರಾಜ್ಯ ಅಥವಾ ದೇಶಕ್ಕೆ ಪ್ರಯಾಣಿಸುವಾಗ ಕೋವಿಡ್‌-19 ಲಸಿಕೆ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುವ ಸಾಧ್ಯತೆ ಹೆಚ್ಚಿದೆ.

ಹಾಗಾದ್ರೆ ಕೋವಿಡ್‌-19 ಲಸಿಕೆ ಪ್ರಮಾಣ ಪತ್ರ ಡೌನ್‌ಲೋಡ್‌ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಹಂತಗಳ ಮೂಲಕ ತಿಳಿದುಕೊಳ್ಳಿ.

ಕೋವಿನ್‌ ಪೋರ್ಟಲ್‌ ಮೂಲಕ ಕೋವಿಡ್‌-19 ಲಸಿಕೆ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: ಮೊದಲು https://selfregistration.cowin.gov.in/ ಕೋವಿನ್‌ ಪೋರ್ಟ್‌ಗೆ ಭೇಟಿ ನೀಡಿ.

ಹಂತ 2: ನಿಮ್ಮ ರೆಫರೆನ್ಸ್‌ ಐಡಿಯನ್ನು ನಮೂದಿಸಿ.

ಹಂತ 3: ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಸರ್ಚ್‌ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

ಇಷ್ಟೇ.. ಈಗ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೋವಿಡ್‌-19 ಲಸಿಕೆ ಪ್ರಮಾಣ ಪತ್ರ ಕಾಣಿಸುತ್ತದೆ.

ಇನ್ನು, ಆರೋಗ್ಯ ಸೇತು ಆಪ್‌ ಮೂಲಕ್‌ ಕೋವಿಡ್‌-19 ಲಸಿಕೆ ಪ್ರಮಾಣ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ..?

ಆರೋಗ್ಯ ಸೇತು ಆಪ್‌ ಮೂಲಕ ಲಸಿಕೆ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡಲು, ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: ಆಪ್ ಸ್ಟೋರ್‌ನಿಂದ ಆರೋಗ್ಯ ಸೇತು ಆಪ್‌ ಡೌನ್‌ಲೋಡ್‌ ಮಾಡಿ, ನೀವು ಈಗಾಗಲೇ ಅಪ್ಲಿಕೇಶನ್‌ ಅನ್ನು ಬಳಸುತ್ತಿದ್ದರೆ, ಲಸಿಕೆ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಲು ಆಪ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಿ.

ಹಂತ 2: ಆರೋಗ್ಯ ಸೇತು ಆಪ್‌ ತೆರೆಯಿರಿ ಮತ್ತು ಹೋಮ್‌ ಸ್ಕ್ರೀನ್‌ನಲ್ಲಿರುವ ಕೋವಿನ್ ಟ್ಯಾಬ್ ಕ್ಲಿಕ್‌ ಮಾಡಿ.

ಹಂತ 3: 'ವ್ಯಾಕ್ಸಿನೇಷನ್ ಸರ್ಟಿಫಿಕೇಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: 'ಪ್ರಮಾಣಪತ್ರ ಪಡೆಯಿರಿ' ಬಟನ್ ಕ್ಲಿಕ್ ಮಾಡಿ. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ COVID-19 ಲಸಿಕೆ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

Best Mobiles in India

Read more about:
English summary
How To Download COVID-19 Vaccine Certificate

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X