ನಿಮ್ಮ ವೋಟರ್‌ ಐಡಿ ಕಾರ್ಡ್‌ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರ ಡಿಜಿಟಲೀಕರಣಕ್ಕೆ ಸಾಕಷ್ಟು ಒತ್ತು ನೀಡುತ್ತಿದೆ. ಈಗಾಗಲೇ ಭಾರತ ಸರ್ಕಾರ ಆಧಾರ್‌ ಅನ್ನು ಡಿಜಿಟಲೀಕರಣಗೊಳಿಸಿದೆ. ಇದೀಗ ಮತದಾರರ ಗುರುತಿನ ಚೀಟಿಯನ್ನು ಸಹ ಡಿಜಿಟಲೀಕರಣಗೊಳಿಸಿದೆ. ಜನವರಿ 25 ರಂದು ಮತದಾರರ ದಿನಾಚರಣೆಯ ಪ್ರಯುಕ್ತ ಈ ಸೇವೆಯನ್ನು ಪ್ರಾರಂಭಿಸಿದೆ. ಸದ್ಯ ಮತದಾರರು ಆನ್‌ಲೈನ್‌ನಲ್ಲಿ ಉಚಿತವಾಗಿ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್‌ನಂತೆಯೇ, ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಸಹ ಮತ ಚಲಾಯಿಸಲು ಬಳಸಬಹುದಾಗಿದೆ.

ಹೌದು, ಭಾರತದಲ್ಲಿ ಜನವರಿ 25 ರಿಂದ ಡಿಜಿಟಲ್ ಮತದಾರರ ಗುರುತಿನ ಚೀಟಿ ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ನಿಮ್ಮ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯನ್ನು ಡೌನ್‌ಲೋಡ್ ಮಾಡುವುದನ್ನು ಉಚಿತವಾಗಿ ಮಾಡಬಹುದು. ಹಾಗಾದ್ರೆ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಧಾರ್‌

ಈಗಾಗಲೇ ಆಧಾರ್‌ ಕಾರ್ಡ್‌ ಅನ್ನು ಡಿಜಿಟಲೀಕರಣಗೊಳಿಸಲಾಗಿದೆ. ಡಿಜಿಟಲ್‌ ಆಧಾರ್‌ ಕಾರ್ಡ್‌ ಅನ್ನು ಸಹ ನಿಮ್ಮ ಅಗತ್ಯ ಸೇವೆಗಳಿಗೆ ಬಳಸುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ. ಇದೀಗ ವೋಟರ್‌ ಐಡಿ ಕಾರ್ಡ್‌ ಅನ್ನು ಸಹ ಡಿಜಿಟಲೀಕರಣಗೊಳಿಸಲಾಗಿದೆ. ಆನ್‌ಲೈನ್‌ನಲ್ಲಿ ವೋಟರ್‌ ಐಡಿಯನ್ನು ಡೌನ್‌ಲೊಡ್‌ ಮಾಡಬಹುದಾಗಿದ್ದು, ಅಗತ್ಯ ಸೇವೆಗಳಿಗೆ ಬಳಸಬಹುದಾಗಿದೆ. ಇನ್ನು ನೀವು ನಿಮ್ಮ ಡಿಜಿಟಲ್ ವೋಟರ್‌ ಐಡಿಯನ್ನು ಡೌನ್‌ಲೋಡ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ವೋಟರ್‌

ರಾಷ್ಟ್ರೀಯ ಮತದಾರರ ದಿನಾಚರಣೆಯ ನೆನಪಿಗಾಗಿ ಜನವರಿ 25ರಿಂದ ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಅನ್ನು ಪರಿಚಯಿಸಲಾಗಿದೆ. ಹೊಸದಾಗಿ ನೋಂದಾಯಿತ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯನ್ನು E-EPIC ಅಥವಾ ಎಲೆಕ್ಟ್ರಾನಿಕ್ ಎಲೆಕ್ಟರಲ್ ಫೋಟೋ ಗುರುತಿನ ಚೀಟಿ ಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಆದರೆ ಮೊದಲ ಹಂತದಲ್ಲಿ, ಈ ಸೇವೆ ಹೊಸದಾಗಿ ನೋಂದಾಯಿತ ಮತದಾರರಿಗೆ ಮಾತ್ರ ಲಭ್ಯವಿರುತ್ತದೆ. ಹೊಸದಾಗಿ ನೋಂದಾಯಿತ ಮತದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ದೃಡೀಕರಿಸುವ ಮೂಲಕ ತಮ್ಮ E-EPIC ಕಾರ್ಡ್ ಅಥವಾ ಡಿಜಿಟಲ್ ಮತದಾರರ ಗುರುತಿನ ಚೀಟಿ ಪಡೆಯಬಹುದು.

ಪಿಡಿಎಫ್

E-EPIC ಮತದಾರರ ಗುರುತಿನ ಚೀಟಿ ಪಿಡಿಎಫ್ ಸ್ವರೂಪದಲ್ಲಿರುತ್ತದೆ, ಮತ್ತು ಆ ಫೈಲ್ ಅನ್ನು ಸುಲಭವಾಗಿ ಹಾಳುಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಡಿಜಿಟಲ್ ಮತದಾರರ ಗುರುತಿನ ಚೀಟಿಯು ಕ್ಯೂಆರ್ ಕೋಡ್, ಮತದಾರರ ಛಾಯಾಚಿತ್ರ ಮತ್ತು ಸರಣಿ ಸಂಖ್ಯೆಯಂತಹ ಕೆಲವು ಭದ್ರತಾ ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ. ಇನ್ನು ಉಳಿದ ಮತದಾರರು ಫೆಬ್ರವರಿ 1 ರಿಂದ ತಮ್ಮ E-EPIC ಮತದಾರರ ಗುರುತಿನ ಚೀಟಿಗಳನ್ನು ಪಡೆಯಬಹುದು. ತಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಿದವರು ಮಾತ್ರ ಈ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಫೋನ್ ಸಂಖ್ಯೆಯನ್ನು ನೀವು ನೋಂದಾಯಿಸದಿದ್ದರೆ, ಈ ಸೇವೆಯನ್ನು ಪಡೆಯಲು ನೀವು ಮೊಬೈಲ್‌ ನಂಬರ್‌ ಅನ್ನು ನೋಂದಾಯಿಸಿಕೊಳ್ಳಬೇಕು.

ವೋಟರ್‌ ಐಡಿ ಕಾರ್ಡ್

ಇನ್ನು ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಪಡೆಯುವುದಕ್ಕೆ Https://voterportal.eci.gov.in/ ಗೆ ಭೇಟಿ ನೀಡುವ ಮೂಲಕ ನಿಮ್ಮ ಇ-ಇಪಿಐಸಿ ಕಾರ್ಡ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲದೆ ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಲ್ಲಿ ಮೊಬೈಲ್ ಅಪ್ಲಿಕೇಶನ್ ವೋಟರ್ ಹೆಲ್ಪ್‌ಲೈನ್ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

Most Read Articles
Best Mobiles in India

English summary
Downloading the digital version of your ID card can be done for free.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X