ಗೂಗಲ್‌ ವಿಡಿಯೋ ಡೂಡಲ್‌ ಡೌನ್‌ಲೋಡ್‌ ಮಾಡುವುದು ಹೇಗೆ ?

Posted By:

ಗೂಗಲ್ ಡೂಡಲ್‌ನ್ನು ನೀವು ನೋಡಿರುತ್ತೀರಿ . ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಬರ್ತ್‌ಡೇ, ದೊಡ್ಡ ಕ್ರೀಡೆಗಳು, ಅಲ್ಲದೇ ದೇಶದ ರಾಷ್ಟ್ರೀಯ ಹಬ್ಬಗಳ ಸಂದರ್ಭಲ್ಲಿ ಗೂಗಲ್‌ ತನ್ನ ಡೂಡಲ್‌ ಬದಲಾಯಿಸುತ್ತಿರುತ್ತದೆ. ಆದರೆ 2010ರಲ್ಲಿ ಗೂಗಲ್‌ ವೀಡಿಯೋ ಡೂಡಲ್‌ನ್ನು ಪರಿಚಯಿಸಿತ್ತು. ಪ್ಯಾಕ್‌ ಮೆನ್‌ ಗೇಮ್‌ನ 30 ವಾರ್ಷಿಕೋತ್ಸವದಂದು ಪರಿಚಯಿಸಿದ ಗೂಗಲ್‌ ಡೂಡಲ್ ವೀಡಿಯೋ ಗೇಮ್‌ ಭಾರೀ ಫೇಮಸ್‌ ಆಯ್ತು. ಇನ್ನು ವಿಶ್ವಕಪ್‌ ಫುಟ್‌ಬಾಲ್‌ ವೇಳೆ ಪರಿಚಯಿಸಿದ ಡೂಡಲ್‌ ಮತ್ತಷ್ಟು ಜನಪ್ರಿಯವಾಯಿತು. ಜನರು ಇಂಟರ್ನೆಟ್ ಹೋಗಿ ಗೂಗಲ್‌ ಡೂಡಲ್‌ನ್ನು ಆಡತೊಡಗುತ್ತಿದ್ದರು. ಆದ್ರೆ ಪ್ರತಿದಿನ ಗೂಗಲ್‌ ವೀಡಿಯೋ ಡೂಡಲ್‌ನ್ನು ತನ್ನ ಹೋಮ್‌ ಪೇಜ್‌ಲ್ಲಿ ಹಾಕುವುದಿಲ್ಲ. ಹಾಗಾಗಿ ಗಿಜ್ಬಾಟ್‌ ಈ ಬಾರಿ ಗೂಗಲ್‌ ಡೂಡಲ್‌ ಪ್ರೇಮಿಗಳಿಗಾಗಿ ಅದನ್ನು ಡೌನ್‌ಲೋಡ್‌ ಮಾಡುವ ಬಗೆಯನ್ನು ತಂದಿದೆ. ಈ ಕೆಳಗೆ 4 ಸ್ಟೆಪ್‌ಗಳಿದ್ದು ಇದನ್ನು ನೀವು ಅನುಸರಿಸಿ ಡೌನ್‌ಲೋಡ್‌ ಮಾಡಿದ್ರೆ ನಿಮ್ಮ ಕಂಪ್ಯೂಟರ್‌ನಲ್ಲೇ ಗೂಗಲ್‌ ಡೂಡಲ್‌ ಆಡಬಹುದು.

ಗೂಗಲ್‌ ವಿಡಿಯೋ ಡೂಡಲ್‌ ಡೌನ್‌ಲೋಡ್‌ ಮಾಡುವುದು ಹೇಗೆ ?


ಸ್ಟೆಪ್‌ 1
ಗೂಗಲ್‌ ಡೂಡಲ್‌ ಡೈರೆಕ್ಟರಿ ಹೋಗಿ ನಿಮಗೆ ಬೇಕಾದ ಡೂಡಲ್‌ ಸೆಲೆಕ್ಟ್‌ ಮಾಡಿ ಒಪನ್‌ ಮಾಡಿಕೊಳ್ಳಿ. ನಂತರ ಡೂಡಲ್‌ನ ಮೇಲೆ ಬಲ ಬಟನ್‌ ಕ್ಲಿಕ್‌ ಮಾಡಿ ‘view frame source' ಆಯ್ಕೆಯನ್ನು ಆರಿಸಿ.
ಸ್ಟೆಪ್‌ 2
ಈ ಸಂದರ್ಭದಲ್ಲಿ ಇನ್ನೊಂದು ವಿಂಡೋ ಒಪನ್‌ ಆಗುತ್ತದೆ. ಇಲ್ಲಿ ನೀವು ಅದರ view-source ಕಾಪಿ ಮಾಡಿ
ಸ್ಟೆಪ್‌ 3
ನಂತರ ಕಾಪಿ ಮಾಡಿದ view-sourceನ್ನು ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ಗೆ ಹೋಗಿ ಅದನ್ನು ಪೇಸ್ಟ್‌ ಮಾಡಿ
ಸ್ಟೆಪ್‌ 4
ಈ ಪೇಜ್‌ ಓಪನ್‌ ಆದ ಬಳಿಕ , ಆ ಪೇಜ್‌ನ್ನು  *.mht ಫಾರ್ಮೆಟ್‌ ಸೇವ್‌ ಮಾಡಿ. ಈಗ ನಿಮಗೆ ಬೇಕಾದ ಡೂಡಲ್‌ ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್‌ಆಗುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot