Instagram ರೀಲ್ಸ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಜನಪ್ರಿಯ ಸೊಶೀಯಲ್ ಮೀಡಿಯಾ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್ ಇತ್ತೀಚಿಗಷ್ಟೇ ಟಿಕ್‌ಟಾಕ್ ಮಾದರಿಯ ರೀಲ್ಸ್ ಫೀಚರ್ಸ್ ಅನ್ನು ಪರಿಚಯಿಸಿದೆ. ಇನ್ನು ಇನ್‌ಸ್ಟಾಗ್ರಾಮ್ ರೀಲ್ಸ್ ಜನರಿಗೆ ಮೋಜಿನ, ಶಾರ್ಟ್ ವೀಡಿಯೊಗಳನ್ನು ಕ್ರಿಯೆಟ್ ಮಾಡಲು ಅವಕಾಶ ನೀಡಲಿದೆ. ನೀವು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಸೇವ್ ಮಾಡಲು ಬಯಸಿದರೆ ಅದಕ್ಕೂ ಕೂಡ ಅವಕಾಶವನ್ನ ನೀಡಲಾಗಿದೆ.

ಹೌದು, ಇನ್‌ಸ್ಟಾಗ್ರಾಮ್ ರೀಲ್ಸ್ ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಮ್ ರೀಲ್ಸ್ ಬಳಕೆದಾರರನ್ನು ಆಕರ್ಷಿಸಿದೆ. ಇನ್ನು ಆಂಡ್ರಾಯ್ಡ್ ಅಥವಾ ಐಒಎಸ್ ಡಿವೈಸ್‌ನಲ್ಲಿ ರೀಲ್ಸ್ ವೀಡಿಯೊಗಳನ್ನು ನೀವು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜನರಿಗೆ ರೀಲ್‌ಗಳು, ಫೋಟೋಗಳು, ವೀಡಿಯೊಗಳು ಅಥವಾ ಕಥೆಗಳನ್ನು ನೇರವಾಗಿ ಸೇವ್ ಮಾಡಲು Instagram ಗೆ ಆಯ್ಕೆ ಇಲ್ಲದಿರುವುದರಿಂದ, ಇದಕ್ಕಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ಆಂಡ್ರಾಯ್ಡ್‌ನಲ್ಲಿ ಜನಪ್ರಿಯ ‘ಐಎನ್‌ಎಸ್ ವಿಡಿಯೋ ಡೌನ್‌ಲೋಡರ್' ಅಪ್ಲಿಕೇಶನ್ ಇದೆ, ಇದು ಪ್ರಸ್ತುತ 10 ಮಿಲಿಯನ್ + ಡೌನ್‌ಲೋಡ್‌ಗಳನ್ನು ಹೊಂದಿದೆ. ಹಾಗಾದ್ರೆ ಐಎನ್‌ಎಸ್ ವಿಡಿಯೋ ಡೌನ್‌ಲೋಡರ್ ಅಪ್ಲಿಕೇಶನ್ ಬಳಸಿ ಡೌನ್‌ಲೋಡ್ ಮಾಡಲು ಕೆಳಗಿನ ಹಂತಗಳನ್ನು ಬಳಸಿರಿ.

Instagram ರೀಲ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ? (ಆಂಡ್ರಾಯ್ಡ್)
ಹಂತ 1: ಗೂಗಲ್ ಪ್ಲೇ ಸ್ಟೋರ್ ಮೂಲಕ ‘ಐಎನ್ಎಸ್ ವಿಡಿಯೋ ಡೌನ್‌ಲೋಡರ್' ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ.
ಹಂತ 2: ಫೋಟೋಗಳು ಮತ್ತು ಫೈಲ್‌ಗಳ ಪ್ರವೇಶದಂತಹ ಅನುಮತಿಗಳೊಂದಿಗೆ ಅದನ್ನು ಒದಗಿಸಿ.
ಹಂತ 3: ಈಗ, Instagram ಅಪ್ಲಿಕೇಶನ್‌ಗೆ ಹಿಂತಿರುಗಿ ಮತ್ತು ನೀವು ಸೇವ್ ಮಾಡಲು ಬಯಸುವ ರೀಲ್‌ಗಳಿಗೆ ಹೋಗಿ.

ಹಂತ 4: ನಂತರ ನೀವು ಮೂರು-ಚುಕ್ಕೆಗಳ ಮೆನುವನ್ನು ಆರಿಸಬೇಕು ಮತ್ತು ‘ನಕಲು ಲಿಂಕ್' ಆಯ್ಕೆಯನ್ನು ಟ್ಯಾಪ್ ಮಾಡಬೇಕು.
ಹಂತ 5: ಮೇಲೆ ತಿಳಿಸಿದ ಅಪ್ಲಿಕೇಶನ್‌ಗೆ ಹಿಂತಿರುಗಿ ಮತ್ತು ನಕಲಿಸಿದ URL ಅನ್ನು ಮೇಲಿನ ಭಾಗದಲ್ಲಿಯೇ ಇರುವ ವಿಭಾಗದಲ್ಲಿ ಅಂಟಿಸಿ.
ಹಂತ 6: ಈ ರೀತಿಯಾಗಿ, ವೀಡಿಯೊವನ್ನು ಅಪ್ಲಿಕೇಶನ್‌ಗೆ ಡೌನ್‌ಲೋಡ್ ಮಾಡಲಾಗುತ್ತದೆ. ಆದಾಗ್ಯೂ, ಇಲ್ಲಿ ಒಂದು ಕ್ಯಾಚ್ ಇದೆ. ನಿಮ್ಮ ಫೋನ್ ಗ್ಯಾಲರಿಯಲ್ಲಿ ವೀಡಿಯೊವನ್ನು ಸೇವ್ ಮಾಡಲು ಸಾಧ್ಯವಾಗುವುದಿಲ್ಲ. ನೀವು Gmail ನಂತಹ ಇತರ ಅಪ್ಲಿಕೇಶನ್‌ಗಳೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಬೇಕಾಗುತ್ತದೆ ಮತ್ತು ನಂತರ ವೀಡಿಯೊವನ್ನು ಡೌನ್‌ಲೋಡ್ ಮಾಡಬಹುದು.


Click it and Unblock the Notifications








