Home
ಟೆಕ್ ನೌಕರಿ

Instagram ವಿಡಿಯೋಗಳನ್ನು Download ಮಾಡುವುದು ಹೇಗೆ ಗೊತ್ತಾ?

By Gizbot Bureau

ಇನ್‌ಸ್ಟಾಗ್ರಾಮ್ ಒಂದು ಜನಪ್ರಿಯ ಸಾಮಾಜಿಕ ಮಿಡಿಯಾ ಪ್ಲಾಟ್‌ಫಾರ್ಮ್‌ ಆಗಿದ್ದು, ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಫೋಟೋ ಮತ್ತು ವಿಡಿಯೋ ಶೇರಿಂಗ್‌ಗೆ ಹೆಚ್ಚು ಒತ್ತು ನೀಡುತ್ತದೆ. ಬಳಕೆಅದರರು ಪೋಲೊವರ್ಸ ಲೈಕ್ಸ , ಕಾಮೆಂಟ್‌ಗಳು ಮತ್ತು ಶೇರ್ ಮಾಡುವುದರೊಂದಿಗೆ ಕಮ್ಯುನಿಕೇಶನ್ ನಡೆಸಬಹುದಾಗಿದೆ. ಇತ್ತೀಚಿಗೆ ಇನ್‌ಸ್ಟಾಗ್ರಾಮ್ ವಿಡಿಯೋಗಳು ಬಳಕೆದಾರರಿಗೆ ಖುಷಿ ನೀಡಿದೆ.

Instagram ವಿಡಿಯೋಗಳನ್ನು Download ಮಾಡುವುದು ಹೇಗೆ ಗೊತ್ತಾ?

ಸೋಷಿಯಲ್ ಮಿಡಿಯಾ ಪ್ರಿಯರಿಗೆ ಇನ್‌ಸ್ಟಾಗ್ರಾಮ್ ಒಂದು ಸ್ಟಾಪ್ ಶಾಪ್ ಆಗಿ ಮಾರ್ಪಟ್ಟಿದೆ.ಈ ಸೋಷಿಯಲ್ ಮಿಡಿಯಾದಲ್ಲಿ ಕೇವಲ ಫೋಟೋಗಳಲ್ಲ, ನೀವು ಟಿಕ್‌ಟಾಕ್-ಶೈಲಿಯ ರೀಲ್‌ಗಳು, ಸೃಜನಶೀಲ ಇನ್ಫೋಗ್ರಾಫಿಕ್ಸ್ ಅಥವಾ ಐಜಿಟಿವಿಯಲ್ಲಿ ದೃಶ್ಯವನ್ನು ಆಕರ್ಷಿಸುವ ಫೂಟೇಜ್ ಕಟೆಂಟಗಳು ಸಹಃ ಸಿಗುತ್ತದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊಗಳು ಮತ್ತು ಫೋಟೋಗಳ ಮೂಲಕ ಬ್ರೌಸ್ ಮಾಡುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಇನ್ ಬಿಲ್ಟ ಅಪಶನ್ ಇಲ್ಲವಾದ್ದರಿಂದ ನೀವು ವೀಡಿಯೋ ನೋಡುವ ಮಧ್ಯದಲ್ಲಿ ಕೆಲವು ಪ್ರಮುಖ ಕೆಲಸಗಳು ಅಥವಾ ಕಾಲ್ ಬಂದರೆ ಮತ್ತು ನೀವು ಪೇಜ/ಅಕೌಂಟ್ ನೆಮ ಕಳೆದುಕೊಂಡರೆ ವೀಡಿಯೊಗಳನ್ನು ಸೇವ ಅಥವಾ ಡೌನ್‌ಲೋಡ್ ಮಾಡಲು ಅಸಾಧ್ಯ , ಆದರೆ ವೀಡಿಯೊವನ್ನು ಮರಳಿ ಪಡೆಯಲು ನಿಮಗೆ ಸಹಾಯ ಮಾಡುವ ಕೆಲವು ಟೂಲ್ಸ್‌ಗಳು ಲಭ್ಯ ಇವೆ. ಆ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೆಸ್ಕ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ:

ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಹಲವಾರು ತರಡ ಪಾರ್ಟಿ ವೆಬ್‌ಸೈಟ್‌ಗಳು ಲಭ್ಯವಿದೆ. 4 ಕೆ ವಿಡಿಯೋ ಡೌನ್ಲೋಡರ್ ಸರಳ ಸೈಟ್‌ಗಳಲ್ಲಿ ಒಂದಾಗಿದೆ ಇದು ವಿಂಡೋಸ್, ಮ್ಯಾಕೋಸ್ ಅಥವಾ ಲಿನಕ್ಸ್‌ನಲ್ಲಿ ಬಳಸಬಹುದಾಗಿದೆ. ಅದನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ .

ಹಂತ 1- ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆಯಿರಿ, ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊದ ಲಿಂಕ್ ಅನ್ನು ಕಾಪಿ ಮಾಡಿ. ಡೆಸ್ಕ್‌ಟಾಪ್‌ನಲ್ಲಿ ಯಾವುದೇ ವೀಡಿಯೊ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ನಂತರ ಲಿಂಕ್ ಕಾಪಿ ಆಯ್ಕೆಮಾಡಿ.

ಹಂತ 2- ನಂತರ ಬ್ರೌಸರ್‌ನಲ್ಲಿ 4K ವಿಡಿಯೋ ಡೌನ್‌ಲೋಡರ್ ಓಪನ್ ಮಾಡಿ, ಗ್ರಿನ್ ಪೇಸ್ಟ್ ಲಿಂಕ್ ಬಟನ್ ಕ್ಲಿಕ್ ಮಾಡಿ.

ಹಂತ 3- ಫಾರ್ಮ್ಯಾಟ್ ಅನ್ನು ವೀಕ್ಷಿಸಲು ಮತ್ತು ಫೈಲ್‌ ಸೇವ್ ಮಾಡಲು ಲೊಕೆಶನ ಕೇಳಲು ,ಅಪ್ಲಿಕೇಶನ್ ಸಣ್ಣ ಟೈಲ್ ಅನ್ನು ಪಾಪ್ ಅಪ್ ಮಾಡುತ್ತದೆ.

ಹಂತ 4- ಆಯ್ಕೆ ಮಾಡಿದ ನಂತರ, ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 5- ಡೌನ್‌ಲೋಡ್ ಪೂರ್ಣಗೊಂಡ ನಂತರ, 4K ವಿಡಿಯೋ ಡೌನ್‌ಲೋಡರ್‌ನಲ್ಲಿನ ವೀಡಿಯೊ ಹೆಸರಿನ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ವೀಡಿಯೊವನ್ನು ವೀಕ್ಷಿಸಲು ಪ್ಲೇ ಆಯ್ಕೆಮಾಡಿ.

ಐಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ

ಆಪಲ್ ಇಕೊ ಸಿಸ್ಟಮ್ ಆಂಡ್ರಾಯ್ಡ್‌ನಂತೆ ಪ್ಲೆಕ್ಸಿಬಲ ಅಲ್ಲ, ಆದರೆ ಕೆಲಮೊಂದು ವರಕೇಬಲ ಅಪ್ಲಿಕೇಶನ್‌ಗಳಿವೆ. ಅಂತಹ ಒಂದು ಅಪ್ಲಿಕೇಶನ್ ಬ್ಲೇಜ್: ಬ್ರೌಸರ್ ಮತ್ತು ಫೈಲ್ ಮ್ಯಾನೇಜರ್.

ಹಂತ 1- ನಿಮ್ಮ ಐಫೋನ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಮತ್ತು ಅದನ್ನು ಇನ್‌ಸ್ಟಾಗ್ರಾಮ್‌ಗೆ ಇನಸ್ಟಾಲ್ ಮಾಡಿದ ನಂತರ.

ಹಂತ 2- ನೀವು ಸೇವ ಮಾಡಲು ಬಯಸುವ ವೀಡಿಯೊ ಲಿಂಕ್ ಅನ್ನು ಕಾಪಿ ಮತ್ತು ಅದನ್ನು ಬ್ಲೇಜ್ ಆಪ್‌ಗೆ ಪೇಸ್ಟ ಮಾಡಿ.

ಹಂತ 3- ಡೌನ್‌ಲೋಡ್ ಬಟನ್ ಮೇಲೆ ಟ್ಯಾಪ್ ಮಾಡಿ, ನಂತರ 'ವೀಡಿಯೋವನ್ನು ಕ್ಯಾಮೆರಾ ರೋಲ್‌ಗೆ ಎಕ್ಸಪೋಟ್ ಮಾಡಿ’ ಆಯ್ಕೆಯನ್ನು ಸೆಲಕ್ಟ ಮಾಡಿ. ನಂತರ ವೀಡಿಯೊವನ್ನು ಉಳಿಸಲಾಗುತ್ತದೆ. ನಿಮ್ಮ ವಿಡಿಯೋ ಸೇವಾಗುತ್ತದೆ.

ಆಂಡ್ರಾಯ್ಡ್‌ನಲ್ಲಿ ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಆಪ್‌ಗಳ ಬಚ್ ಹೊಂದಿದೆ. ಇನ್‌ಸ್ಟಾಗ್ರಾಮ್‌ಗಾಗಿ ವೀಡಿಯೊ ಡೌನ್‌ಲೋಡರ್ ಉಪಯುಕ್ತ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ, ಇದು ವೀಡಿಯೊವನ್ನು ತ್ವರಿತವಾಗಿ ಸೇವ ಮಾಡುವ ಪ್ಲಾಟ್‌ಫಾರ್ಮ್‌ ಇದಾಗಿದೆ.

ಹಂತ 1- ಮೊದಲು, ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಹಂತ 2- ಒಮ್ಮೆ ಮಾಡಿದ ನಂತರ, ಇನ್‌ಸ್ಟಾಗ್ರಾಮ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊಗೆ ಹೋಗಿ, ಮೇಲಿನ ಬಲಭಾಗದಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಅನ್ನು ಟ್ಯಾಪ್ ಮಾಡಿ.

ಹಂತ 3- ಲಿಂಕ್ ಕಾಪಿ ಟ್ಯಾಪ್ ಮಾಡಿ.

ಹಂತ 4- ನಂತರ ಇನ್‌ಸ್ಟಾಗ್ರಾಮ್ ಗಾಗಿ ವೀಡಿಯೊ ಡೌನ್‌ಲೋಡರ್ ತೆರೆಯಿರಿ, ಆಪ್ ನ್ನು ಆಟೊಮೆಟಿಕಾಗಿ ಕಾಪಿ ಲಿಂಕ್ ಅನ್ನು ಪೇಸ್ಟ ಮಾಡುತ್ತದೆ. ನಂತರ ಅದು ಡೌನ್‌ಲೋಡ್ ಮಾಡಲು ಪ್ರಾರಂಭಿಸುತ್ತದೆ.

ಡೌನ್‌ಲೋಡ್ ಮಾಡಿದ ವೀಡಿಯೊವನ್ನು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿರುವ ಫೋಟೋಗಳು ಅಥವಾ ಗ್ಯಾಲರಿ ಆಪ್‌ನಲ್ಲಿ ನ್ಯಾವಿಗೇಟ್ ಮಾಡಬಹುದು.

Best Mobiles in India

English summary
How To Download Instagram Videos On Your Device: Steps To Download On Android, iOS, PC
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+