ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

|

ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಸಿನಿಮಾ ವೀಕ್ಷಣೆಯ ಪರಿಕಲ್ಪನೆಯನ್ನೆ ಬದಲಾಯಿಸಿರುವ ನೆಟ್‌ಫ್ಲಿಕ್ಸ್‌ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಡಿಯೋ ಸ್ಟ್ರೀಮಿಂಗ್‌ ಮಾತ್ರವಲ್ಲ, ನಿಮ್ಮ ಆಯ್ಕೆಯ ಶೋಗಳನ್ನು ಡೌನ್‌ಲೋಡ್‌ ಕೂಡ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ನಲ್ಲಿ ಚಲನಚಿತ್ರಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಅವಕಾಶವಿದೆ. ನೀವು ಪ್ರಯಾಣಿಸುವ ಅಥವಾ ನೆಟ್‌ವರ್ಕ್‌ ಇಲ್ಲದ ಸಂದರ್ಭಗಳಲ್ಲಿ ನಿಮ್ಮ ಸಮಯ ಕಳೆಯಲು ಡೌನ್‌ಲೋಡ್‌ ಆಗಿರುವ ವೀಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಇಂಟರ್‌ನೆಟ್ ಸಂಪರ್ಕದ ಅಗತ್ಯವಿಲ್ಲದೇ ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಮ್ಯೂಸಿಕ್‌ ಅಥವಾ ನಿಮ್ಮ ಆಯ್ಕೆಯ ಸಿನಿಮಾವನ್ನು ಸ್ಟ್ರೀಮ್ ಮಾಡಬಹುದು. ಆದರೆ ಇದಕ್ಕಾಗಿ ನೀವು ಮೊದಲೇ ಶೋ ಗಳು ಅಥವಾ ಸಿನಿಮಾವನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಉತ್ತಮ. ಹಾಗಾದ್ರೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾವನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ನಿಮಗೆ ಕೆಲವು ಶೋಗಳು ಮತ್ತು ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಅಲ್ಲದೆ, ನೀವು ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ನಿಮ್ಮ ಟ್ಯಾಬ್ಲೆಟ್‌ನಲ್ಲಿ ಚಲನಚಿತ್ರಗಳು / ಶೋಗಳನ್ನು ಮಾತ್ರ ಡೌನ್‌ಲೋಡ್ ಮಾಡಬಹುದು. ಈ ಡೌನ್‌ಲೋಡ್ ಆಯ್ಕೆಯು ಸ್ಮಾರ್ಟ್ ಟಿವಿಗಳು, ಗೇಮಿಂಗ್ ಕನ್ಸೋಲ್‌ಗಳು ಅಥವಾ ನಿಮ್ಮ ಕಂಪ್ಯೂಟರ್‌ಗೆ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಸಹ ನೀವು ಗಮನಿಸಬೇಕಿದೆ. ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮ ಡೌನ್‌ಲೋಡ್‌ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ.

ನೆಟ್‌ಫ್ಲಿಕ್ಸ್‌ನಲ್ಲಿ ಶೋ / ಚಲನಚಿತ್ರಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ಶೋ / ಚಲನಚಿತ್ರಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ:1 ನೆಟ್‌ಫ್ಲಿಕ್ಸ್ ಅಪ್ಲಿಕೇಶನ್‌ಗೆ ಹೋಗಿ ಚಲನಚಿತ್ರವನ್ನು ಹುಡುಕಿ. ಇವುಗಳಲ್ಲಿ ಎಲ್ಲಾ ಶೋ / ಚಲನಚಿತ್ರಗಳು ಡೌನ್‌ಲೋಡ್‌ಆಯ್ಕೆಯನ್ನು ಹೊಂದಿರುವುದಿಲ್ಲ ಆದ್ದರಿಂದ ನೀವು ಮುಂದೆ ಹೋಗುವ ಮೊದಲು ನೀವು ನೋಡಲು ಬಯಸುವ ಚಲನಚಿತ್ರ ಡೌನ್‌ಲೋಡ್‌ ಆಯ್ಕೆ ಹೊಂದಿದೆಯಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು.
ಹಂತ:2 ಶೋ / ಚಲನಚಿತ್ರವನ್ನು ಡೌನ್‌ಲೋಡ್ ಮಾಡಲು ಸಾಧ್ಯವಾದರೆ, ವಿವರಗಳ ಪುಟಕ್ಕೆ ಹೋಗಿ.
ಹಂತ:3 ಡೌನ್‌ಲೋಡ್ ಬಟನ್ ಟ್ಯಾಪ್ ಮಾಡಿ. ಡೌನ್‌ಲೋಡ್ ಪ್ರಕ್ರಿಯೆಯು ಆನ್ ಆಗಿದೆ ಎಂದು ಸೂಚಿಸಲು ಕೆಳಕ್ಕೆ ತೋರಿಸುವ ಬಾಣ ಐಕಾನ್ ಟೈಮರ್ ಆಗಿ ಬದಲಾಗುತ್ತದೆ.
ಹಂತ:4 ಡೌನ್‌ಲೋಡ್ ಮಾಡಿದ ನಂತರ, ಐಕಾನ್ ಮೊಬೈಲ್ ಡಿವೈಸ್‌ನ ಮಾದರಿಯಲ್ಲಿ ಕಾಣಲಿದೆ.
ಹಂತ:5 ನೆಟ್‌ಫ್ಲಿಕ್ಸ್‌ನಲ್ಲಿನ ಚಲನಚಿತ್ರಗಳನ್ನು ಒಂದೇ ಸಮಯದಲ್ಲಿ ಡೌನ್‌ಲೋಡ್ ಮಾಡಬಹುದು. ಆದರೆ ಶೋ ಗಳಲ್ಲಿ ನೀವು ಪ್ರತಿ ಸಂಚಿಕೆಯನ್ನು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಬೇಕು.

ನೆಟ್‌ಫ್ಲಿಕ್ಸ್‌

ಇದಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ ಡೌನ್‌ಲೋಡ್‌ ಮಾಡಿದ ಚಲನಚಿತ್ರಗಳು ನಿಮ್ಮ ಡಿವೈಸ್‌ನಲ್ಲಿ ಶಾಶ್ವತವಾಗಿ ಇರುವುದಿಲ್ಲ. ಅದು ಸೀಮಿತ ಸಮಯದವರೆಗೆ ಮಾತ್ರ ಇರುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಎಲ್ಲಾ ಡೌನ್‌ಲೋಡ್ ವಿಷಯವು ಅಪ್ಲಿಕೇಶನ್‌ನಲ್ಲಿನ ಡೌನ್‌ಲೋಡ್‌ಗಳ ಟ್ಯಾಬ್ ಅಡಿಯಲ್ಲಿ ಲಭ್ಯವಿರುತ್ತದೆ. ಇವುಗಳನ್ನು ನೀವು ಇಂಟರ್‌ನೆಟ್‌ ಇಲ್ಲದೆ ಕೂಡ ವೀಕ್ಷಿಸಬಹುದಾಗಿದೆ.

Best Mobiles in India

English summary
Netflix allows you to download certain movies and shows to your smartphone or tablet and you can watch them later as per your convenience.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X