Home
ಟೆಕ್ ನೌಕರಿ

PDO Recruitment 2024: ಪಿಡಿಒ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ

ಪಿಡಿಒ (PDO) ಹುದ್ದೆಗಳ ನೇಮಕಾತಿಗೆ ಡಿ.7 ಮತ್ತು 8 ರಂದು ಪರೀಕ್ಷೆ ನಡೆಯಲಿದೆ. ಇದೀಗ ಕರ್ನಾಟಕ ಲೋಕಸೇವಾ ಆಯೋಗವು, ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಹೌದು, ಹೈದರಾಬಾದ್‌ ಕರ್ನಾಟಕ ವೃಂದದ 97 ಹುದ್ದೆಗಳಿಗೆ ಈಗಾಗಲೇ ಪರೀಕ್ಷೆ ನಡೆದಿದೆ. ಸದ್ಯ ಉಳಿದ ಮೂಲ ವೃಂದದ 150 ಹುದ್ದೆಗಳಿಗೆ ಪರೀಕ್ಷೆ ನಡೆಸಲು ಕೆಪಿಎಸ್‌ಸಿ (KPSC) ಸಜ್ಜಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಬನ್ನಿ, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವ ಸುಲಭ ವಿಧಾನ ತಿಳಿಯೋಣ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಅರ್ಜಿಗಳನ್ನು ಆಹ್ವಾನಿಸಿತ್ತು. ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 3ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಇದೀಗ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಕೆಲವರಿಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ತುಸು ಕಷ್ಟವಾಗಿದೆ. ಅಂತವರಿಗೆ ಈ ಲೇಖನ ಸಹಾಯವಾಗಲಿದೆ. ಈ ಕೆಳಗೆ ನೀಡುರುವ ವಿಧಾನಗಳ ಮೂಲಕ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

PDO: ಪಿಡಿಒ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿ ಸರಳ ವಿಧಾನ

ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿ

* ಮೊದಲು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ https://kpsconline.karnataka.gov.inಗೆ ಭೇಟಿ ನೀಡಿ.
* ವೆಬ್‌ಸೈಟ್‌ನಲ್ಲಿ ಕಾಣುವ 'Login' ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಹೆಸರು (Username) ಮತ್ತು ಪಾಸ್‌ವರ್ಡ್‌ (Password) ಭರ್ತಿ ಮಾಡಿ, 'Sign In' ಆಯ್ಕೆಯನ್ನು ಕ್ಲಿಕ್ಕಿಸಿ.
* ಬಳಿಕ ಪ್ರವೇಶ ಪತ್ರ ಕಾಣಿಸುತ್ತದೆ. ನೀವು, ಡೌನ್‌ಲೋಡ್ ಮಾಡಿ ಪ್ರಿಂಟ್‌ ತೆಗೆದುಕೊಳ್ಳಬಹುದು.
* ಜೊತೆಗೆ ಪ್ರವೇಶ ಪತ್ರದಲ್ಲಿನ ಸೂಚನೆಗಳನ್ನು ಒಮ್ಮೆ ಓದುವುದು ಉತ್ತಮ.

ಗಮನಿಸಿ.. ಇದಕ್ಕೆಲ್ಲ ಅವಕಾಶವೇ ಇಲ್ಲ!

ಪರೀಕ್ಷಾ ಅಕ್ರಮ ತಡೆಗೆ ಕೆಪಿಎಸ್‌ಸಿ ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ಪರೀಕ್ಷಾ ಕೇಂದ್ರ ಮತ್ತು ಉಪಕೇಂದ್ರದಲ್ಲಿ ಜಾಮರ್ಸ್‌ ಅಳವಡಿಸಲಾಗುತ್ತಿದೆ. ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಸಂವಹನ ನಡೆಸದಂತೆ ಎಚ್ಚರಿಕೆ ವಹಿಸಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಪರಿಶೀಲನೆಗೆ ಬಯೋಮೆಟ್ರಿಕ್ ಫೇಸ್ ರಿಕಾಗ್ನಿಷನ್ ಮಾಡಲಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಸಲಾಗುತ್ತದೆ.

ಮೊದಲ ಬಾರಿಗೆ ಬಾಡಿ ಕ್ಯಾಮೆರಾ ಬಳಕೆ

ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳ ಸಂವೀಕ್ಷಕರಿಗೆ ಬಾಡಿ ಕ್ಯಾಮೆರಾ ಸಹ ನೀಡಲಾಗುತ್ತಿದೆ. ಈ ಮೂಲಕ ಅಭ್ಯರ್ಥಿಗಳ ಚಲನ ವಲನ ಗಮನಿಸಲಾಗುತ್ತದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹಂತದ ವೀಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷೆ ಬರೆಯುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಕೆಪಿಎಸ್‌ಸಿ ಹೊರಡಿಸಿರುವ ಸೂಚನೆಗಳನ್ನು ಪಾಲಿಸಬೇಕು. ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಪರೀಕ್ಷೆ ಬರೆಯಬೇಕು.

PDO: ಪಿಡಿಒ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿ ಸರಳ ವಿಧಾನ

ಇವುಗಳನ್ನು ತೆಗೆದುಕೊಂಡು ಹೋಗಬೇಡಿ

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್‌, ಬ್ಲೂಟೂತ್, ಕ್ಯಾಲ್ಕುಲೇಟರ್, ವೈಟ್ ಫ್ಲೂಯಿಡ್, ವೈರ್‌ಲೆಸ್‌ ಸೆಟ್ಸ್‌, ಪೇಪರ್, ಬುಕ್‌ ತೆಗೆದುಕೊಂಡು ಹೋಗುವಂತಿಲ್ಲ. ತುಂಬು ತೋಳಿನ ಶರ್ಟ್‌ ಮತ್ತು ಯಾವುದೇ ಆಭರಣ (ಮಾಂಗಲ್ಯ ಬಿಟ್ಟು) ಧರಿಸಿರಬಾರದು. ಮೆಟಲ್ ವಾಟರ್ ಬಾಟೆಲ್‌ಗೆ ಅವಕಾಶವಿಲ್ಲ. ಅಭ್ಯರ್ಥಿಗಳು ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಫೇಸ್‌ ಮಾಸ್ಕ್‌ ಧರಿಸುವಂತಿಲ್ಲ.

ಕರ್ನಾಟಕ ಲೋಕಸೇವಾ ಆಯೋಗವು ಒಟ್ಟು 247 ಪಿಡಿಒ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಇವುಗಳ ಪೈಕಿ 150 ಉಳಿಕೆ ಮೂಲ ವೃಂದದ ಗ್ರೂಪ್ 'ಸಿ' ಹುದ್ದೆಗಳಿಗೆ 2024ರ ಮಾರ್ಚ್‌ 15 ರಂದು ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳ ನೇಮಕಾತಿಗೆ ಡಿಸೆಂಬರ್ 7 ಕನ್ನಡ ಭಾಷಾ ಪರೀಕ್ಷೆ ಮತ್ತು 8 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ (ಕೆಪಿಎಸ್‌ಸಿ ವೆಬ್‌ ಸೈಟ್ http://kpsc.kar.nic.in) ಲಿಂಕ್‌ನಿಂದ ಪ್ರವೇಶ ಪತ್ರವನ್ನು ಡೌನ್‌ ಲೋಡ್ ಮಾಡಿಕೊಳ್ಳಬಹುದು.

Best Mobiles in India

English summary
PDO Recruitment 2024: how to Download pdo recruitment 2024 admit card a complete guide step by step
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+