ನೀವು ಪೋಸ್ಟ್ ಮಾಡಿರುವ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?
ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಕೂಡ ರೀಲ್ಸ್ ಮಾಡುವವರ ಸಂಖ್ಯೆಗೆನೂ ಕಡಿಮೆಯಿಲ್ಲ. ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಸಾಕಷ್ಟು ಜನರು ಪ್ರಸಿದ್ಧಿಯನ್ನು ಕೂಡ ಪಡೆದುಕೊಂಡಿದ್ದಾರೆ. ಹಾಡಿನ ತುಣಕುಗಳಿಗೆ ತಮ್ಮದೇ ಆದ ಹಾವಭಾವವನ್ನು ಸೇರಿಸುವ ಮೂಲಕ ಇನ್‌ಸ್ಟಾಗ್ರಾಮ್ ರೀಲ್ಸ್ ಪೋಸ್ಟ್ ಮಾಡುವುದು ಕೂಡ ಒಂದು ಹವ್ಯಾಸವಾಗಿ ಹೋಗಿದೆ.
ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಇಂದು ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಕೂಡ ಯಾವುದೋ ಹಳ್ಳಿಯ ಹುಡುಗರು, ಇನ್ನೆಲ್ಲಿಯೂ ಮಹಿಳೆಯರು ಕೂಡ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿರುವ ಘಟನೆಗಳು ದಿನನಿತ್ಯ ವರದಿಯಾಗುತ್ತಲೇ ಇದೆ. ಅಷ್ಟೇ ಯಾಕೆ ತೀರಾ ಮರೆತು ಹೋಗಿದ್ದ ನಮ್ಮ ಜನಪದ ಹಾಡುಗಳಿಗೆ ಯುವಕರು ನೃತ್ಯ ಮಾಡಿರುವ ವೀಡಿಯೊಗಳು ಕೂಡ ಇಂದು ಸಾಕಷ್ಟು ಸದ್ದು ಮಾಡುತ್ತಿವೆ. ಹಾಗಾದ್ರೆ ನೀವು ಮೆಚ್ಚಿಕೊಂಡಿರುವ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಅನ್ನೊ ಗೊಂದಲದಲ್ಲಿದ್ದೀರಾ? ಅದಕ್ಕೆ ಉತ್ತರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್ ರೀಲ್ಸ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿರಿ!
ಆಂಡ್ರಾಯ್ಡ್ ಬಳಕೆದಾರರು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಡೌನ್‌ಲೋಡ್ ಮಾಡಬೇಕಾದರೆ ಗೂಗಲ್ ಪ್ಲೇ ಸ್ಟೋರ್‌ನಿಂದ ರೀಲ್ಸ್ ಡೌನ್‌ಲೋಡರ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದರ ಮೂಲಕ ಇನ್‌ಸ್ಟಾಗ್ರಾಮ್ ರೀಲ್ಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲಿಗೆ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ಆ್ಯಪ್ ತೆರೆಯಿರಿ
* ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಭಾಗಕ್ಕೆ ಹೋಗಿ
* ಇದೀಗ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್ಸ್‌ಗಳ ಲಿಂಕ್ ಕಾಪಿ ಮಾಡಿ
* ನಂತರ ರೀಲ್ಸ್ ಡೌನ್‌ಲೋಡರ್ ಅಪ್ಲಿಕೇಶನ್ ತೆರೆಯಿರಿ
* ಇದರಲ್ಲಿ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್ಸ್ ಲಿಂಕ್ ಪೇಸ್ಟ್ ಮಾಡಿ
* ಇದೀಗ ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಿರಿ.
ಈ ಎಲ್ಲಾ ಆಯ್ಕೆಗಳನ್ನು ಮಾಡಿದ ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಯಸಿದ ಇನ್‌ಸ್ಟಾಗ್ರಾಮ್ ರೀಲ್ಸ್ ಡೌನ್‌ಲೋಡ್ ಆಗಲಿದೆ.
ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಕ್ರಿಯೆಟ್ ಮಾಡುವುದು ಹೇಗೆ?
* ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ಬಲಕ್ಕೆ ಸ್ವೈಪ್ ಮಾಡಿ
* ಇದರಲ್ಲಿ ಸ್ಕ್ರೀನ್ ಕೆಳಭಾಗದಲ್ಲಿರುವ ರೀಲ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ ರೀಲ್ಸ್ ರೆಕಾರ್ಡ್ ಮಾಡಲು, ವೀಡಿಯೊ ಪ್ಲೇಯರ್ ಐಕಾನ್ ಅನ್ನು ಹಿಡಿದಿಟ್ಟುಕೊಳ್ಳಿರಿ.
* ನಿಮಗೆ ಸೂಕ್ತವಾದ ವೇಗವನ್ನು ಆಯ್ಕೆ ಮಾಡಿರಿ
* ರೀಲ್ಸ್‌ಗೆ ಬೇಕೆನಿಸುವ ಚಿತ್ರಗಳು, ಸ್ಟಿಕ್ಕರ್‌ಗಳು ಮತ್ತು ಮ್ಯೂಸಿಕ್ ಅನ್ನು ಆಡ್ ಮಾಡಿರಿ
* ರೀಲ್ಸ್ ಶೇರ್ ಮಾಡುವ ಮೊದಲು ಪ್ರಿವ್ಯೂ ಮಾಡಿರಿ
* ನಿಮಗೆ ಒಕೆ ಎನಿಸಿದರೆ ರೀಲ್ಸ್ ಶೇರ್ ಮಾಡಲು ಶೇರ್ ಬಟನ್ ಅನ್ನು ಕ್ಲಿಕ್ ಮಾಡಿ.
ಇದೆಲ್ಲದರ ನಡುವೆ ಇನ್‌ಸ್ಟಾಗ್ರಾಮ್ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿಯೇ ಇನ್‌ಸ್ಟಾಗ್ರಾಮ್ ರೀಲ್ಸ್ ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ನೀಡಿದೆ ಎನ್ನಲಾಗಿದೆ. ಅದರಂತೆ ನೀವು ಕೇವಲ ಒಂದು ಕ್ಲಿಕ್ ಮೂಲಕ ನಿಮ್ಮಿಷ್ಟದ ವಿಡಿಯೋವನ್ನು ಡೌನ್‌ಲೋಡ್ ಮಾಡಬಹುದು ಎಂದು ಹೇಲಲಾಗಿದೆ. ಆದರೆ ನೀವು ಡೌನ್‌ಲೋಡ್ ಮಾಡುವ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ವಾಟರ್ ಮಾರ್ಕ್ ಇರಲಿದೆಯಾ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಇದರ ನಡುವೆ ಕೆಲವು ವರದಿಗಳ ಪ್ರಕಾರ ಡೌನ್‌ಲೋಡ್ ಮಾಡಿದ ವಿಡಿಯೋದ ಮೇಲೆ ಪೋಸ್ಟ್ ಮಾಡಿದ ಬಳಕೆದಾರರ ಖಾತೆಯ ಹೆಸರು ಮತ್ತು ಕಂಪನಿಯ ಲೋಗೋ ಇರಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








