Home
ಟೆಕ್ ನೌಕರಿ

Instagram ನಲ್ಲಿರುವ ನಿಮ್ಮ ಡೇಟಾವ ನ್ನು ಡೌನ್‌ಲೋಡ್ ಮಾಡುವುದು ಹೇಗೆ ಗೊತ್ತಾ?

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ Instagram ಕೂಡ ಒಂದಾಗಿದೆ. ತನ್ನ ಜನಪ್ರಿಯ ಫೀಚರ್ಸ್‌ಗಳ ಮೂಲಕ ವಿಶ್ವಾದಾದ್ಯಂತ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ವೀಡಿಯೊಗಳು, ಫೋಟೋಗಳು, ಮಿಮ್ಸ್‌ ಮತ್ತು ಸೆಲ್ಫ್‌-ಬ್ರ್ಯಾಂಡಿಂಗ್ ಶೇರ್‌ ಮಾಡಲು ಒಂದು ವೇದಿಕೆಯಾಗಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೀವು ವೀಡಿಯೋಗಳನ್ನ ಶೇರ್‌ ಮಾಡಬಹುದು, ವೀಕ್ಷಿಸಲೂ ಬಹುದು. ಆದರೆ ನೀವು ಇನ್‌ಸ್ಟಾಗ್ರಾಮ್‌ನಲ್ಲಿರುವ ವೀಡಿಯೋಗಳನ್ನ ಡೌನ್‌ಲೋಡ್‌ ಮಾಡಲು ಬಯಸಿದರೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿದುಕೊಳ್ಳೋಣ ಬನ್ನಿರಿ.

ಇನ್‌ಸ್ಟಾಗ್ರಾಮ್

ಹೌದು, ಇನ್‌ಸ್ಟಾಗ್ರಾಮ್ ಬಳಕೆದಾರರಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿರುವ ವೀಡಿಯೊಗಳು ಅಥವಾ ಸ್ಟೋರಿಗಳನ್ನು ಡೌನ್‌ಲೋಡ್‌ ಮಾಡಬೇಕಾದರೆ ಕೆಲವು ಹಂತಗಳನ್ನ ಅನುಸರಿಸಬೇಕಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ನಿಮ್ಮ ಆಯ್ಕೆಯ ವೀಡಿಯೋಗಳನ್ನ ಸರಳ ಹಂತಗಳ ಮೂಲಕ ಡೌನ್‌ಲೋಡ್‌ ಮಾಡಬಹುದಾಗಿದೆ. ಆದರೆ, ನೀವು ಯಾವುದೇ ಇನ್‌ಸ್ಟಾಗ್ರಾಮ್ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಹೋಗುವ ಮೊದಲು, ಬಳಕೆದಾರರ ಅನುಮತಿಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಇದು ಸಹ ನಿಮಗೆ ತಿಳಿದಿಲ್ಲದಿದ್ದರೆ, ನಿಮ್ಮ ಎಲ್ಲಾ ಡೇಟಾವನ್ನು ಲಿಂಕ್ ಮೂಲಕ ಡೌನ್‌ಲೋಡ್ ಮಾಡುವುದಕ್ಕೆ ಅವಕಾಶವಿದೆ. ಆದರೆ, ಇತರರ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬೇಕಾದರೆ, ನೀವು ಇತರ ವೆಬ್‌ಸೈಟ್‌ಗಳನ್ನು ಅವಲಂಬಿಸಬೇಕಾಗುತ್ತದೆ.

ನಿಮ್ಮ ಸ್ವಂತ Instagram ಡೇಟಾವ ನ್ನು ಡೌನ್‌ಲೋಡ್ ಮಾಡುವುದು ಹೇಗೆ

ನಿಮ್ಮ ಸ್ವಂತ Instagram ಡೇಟಾವ ನ್ನು ಡೌನ್‌ಲೋಡ್ ಮಾಡುವುದು ಹೇಗೆ

ನಿಮ್ಮ ಇನ್‌ಸ್ಟಾಗ್ರಾಮ್ ಡೇಟಾವನ್ನು ಡೌನ್‌ಲೋಡ್ ಮಾಡಲು, www.instagram.com/download/request/ ಗೆ ಹೋಗಿ. ಇಲ್ಲಿ ಒಂದು ಪೇಜ್‌ ಓಪನ್‌ ಆಗಲಿದೆ. ಅಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ಎಂಟ್ರಿ ಮಾಡಬೇಕು. ಇದು ನೀವು ನಿಮ್ಮ ಖಾತೆಯನ್ನು ನೋಂದಾಯಿಸಲು ಬಳಸಿದ ಇಮೇಲ್ ವಿಳಾಸವೇ ಆಗಿರಬೇಕು. ನಂತರ ಸ್ಕ್ರೀನ್‌ನಲ್ಲಿ ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ನಮೂದಿಸಿ. ನೀವೇ ದೃಡೀಕರಿಸಿದ ನಂತರ, ಕಂಪನಿಯು ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸುತ್ತದೆ. ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಲು ಮತ್ತು ಡೌನ್‌ಲೋಡ್ ಮಾಡಲು ಅವಕಾಶ ಸಿಗುವಂತೆ ಮಾಡಲು ಇದು 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳಲಿದೆ ಎನ್ನಲಾಗುತ್ತದೆ.

ಇತರ Instagram ವೀಡಿಯೊಗಳು ಅಥವಾ ಸ್ಟೋರಿಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ

ಇತರ Instagram ವೀಡಿಯೊಗಳು ಅಥವಾ ಸ್ಟೋರಿಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ

ಹಂತ 1: Instagram ವೀಡಿಯೊಗಳು, ಫೋಟೋಗಳು ಅಥವಾ ಸ್ಟೋರಿಗಳನ್ನು ಡೌನ್‌ಲೋಡ್ ಮಾಡಲು "Storysaver.net" ವೆಬ್‌ಸೈಟ್‌ಗೆ ಹೋಗಿ.

ಹಂತ 2: ಒಮ್ಮೆ ನೀವು ಆ ಸೈಟ್‌ನಲ್ಲಿದ್ದರೆ, ನೀವು ಸರ್ಚ್‌ ಬಾಕ್ಸ್‌ನಲ್ಲಿ ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರ ಹೆಸರನ್ನು ನಮೂದಿಸಿ ಮತ್ತು ಡೌನ್‌ಲೋಡ್ ಬಟನ್ ಒತ್ತಿರಿ. ಇದು ನಿಮಗೆ ಫೋಟೋಗಳು ಅಥವಾ ಸ್ಟೋರಿಗಳನ್ನು ತೋರಿಸುತ್ತದೆ. ನೀವು ಸಾರ್ವಜನಿಕ ಖಾತೆಯ ನಿರ್ದಿಷ್ಟ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ನೀವು ಆ ವೀಡಿಯೊದ ಲಿಂಕ್ ಅನ್ನು ಸರ್ಚ್‌ ಬಾಕ್ಸ್‌ನಲ್ಲಿ ನಮೂದಿಸಿ ಮತ್ತು ಡೌನ್‌ಲೋಡ್ ಅನ್ನು ಒತ್ತಿರಿ. ನಂತರ ನೀವು "Save as video" ಬಟನ್ ಒತ್ತಿ.

ಹಂತ 3: ನಂತರ ನೀವು ಬಳಕೆದಾರ ಹೆಸರನ್ನು ನಮೂದಿಸಿದ್ದರೆ, ಸ್ಟೋರಿಗಳನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೇವ್ ಬಟನ್ ಒತ್ತಿರಿ.

Best Mobiles in India

English summary
In order to download videos or stories of other Instagram users, you need to rely on other websites.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+