ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಗೊತ್ತಾ?
ವಿಶ್ವದ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇನ್ನು ಕಾಲಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಲೇ ಬಂದಿರುವ ವಾಟ್ಸಾಪ್ ಇದೀಗ ಇನ್ನಷ್ಟು ಹೊಸ ಫೀಚರ್ಸ್‌ಗಳನ್ನ ಪರಿಚಯಿಸುವುದಾಗಿ ಹೇಳಿಕೊಂಡಿದೆ. ಇನ್ನು ಈಗಾಗಲೇ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ತನ್ನ ಅಪ್ಲಿಕೇಶನ್‌ಗೆ ಬರುವ ಹಲವಾರು ಹೊಸ ಫೀಚರ್ಸ್‌ಗಳ ಬಗ್ಗೆ ಪ್ರಕಟಣೆ ಹೊರಡಿಸಿದೆ. ಈ ಎಲ್ಲಾ ಹೊಸ ಫೀಚರ್ಸ್‌ಗಳು ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿವೆ. ಅದರಲ್ಲಿ ಸದ್ಯ ಇದೀಗ ವಾಟ್ಸಾಪ್ ವೆಬ್‌ಗೆ ಡಾರ್ಕ್ ಮೋಡ್ ಬೆಂಬಲ ನೀಡುವ ಫೀಚರ್ಸ್ ಅನ್ನು ಪರಿಚಯಿಸಿದೆ.

ಹೌದು, ಜನಪ್ರಿಯ ಚಾಟ್ ಆಪ್ ವಾಟ್ಸಾಪ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಡಾರ್ಕ್ ಮೋಡ್ ಅಥವಾ ಡಾರ್ಕ್ ಥೀಮ್ ಅನ್ನು ಪರಿಚಯಸಿದೆ. ಸದ್ಯ ಇದೀಗ ಡಾರ್ಕ್ ಮೋಡ್ ವಾಟ್ಸಾಪ್ ವೆಬ್‌ನಲ್ಲಿಯೂ ಸಹ ಲಭ್ಯವಿದೆ. ಇನ್ನು ವಾಟ್ಸಾಪ್ ವೆಬ್‌ನಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿನ ಡಾರ್ಕ್ ಥೀಮ್‌ನಂತೆಯೇ, ಇದು ಕೂಡ ಟೆಕ್ಸ್ಟ್ ಬಾಕ್ಸ್, ಮತ್ತು ಸೆಲೆಕ್ಟೆಡ್ ಚಾಟ್‌ಗಳನ್ನು ಹೈಲೈಟ್ ಮಾಡಲು ಡಾರ್ಕ್ ಗ್ರೇ ಬ್ಯಾಕ್‌ಗ್ರೌಂಡ್ ಅನ್ನು ಸಹ ಹೊಂದಿದೆ. ಹಾಗಾದ್ರೆ ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್‌ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ

ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ?
ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ? ಇದು ಬಹಳ ಸುಲಭವಾಗಿದೆ. ಹಾಗೂ ಬಳಕೆದಾರರಿಗೆ ಸಾಕಷ್ಟು ಅನುಕೂಲಕರವಾಗಿದೆ. ಆದರೆ ಇದನ್ನ ಸಕ್ರಿಯ ಗೊಳಿಸಲು ನೀವು ಕೆಲವು ಹಂತಗಳನ್ನ ಅನುಸರಸಬೇಕಾಗಿದೆ. ಹಾಗಾದ್ರೆ ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್‌ಮೋಡ್ ಅನ್ನು ಸಕ್ರಿಯಗೊಳಿಸಲು ಈ ಹಂತಗಳನ್ನ ಅನುಸರಿಸಿ.

ಹಂತ:1 ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ವೆಬ್ ತೆರೆಯಿರಿ.
ಹಂತ:2 ನಿಮ್ಮ ಪ್ರದರ್ಶನ ಚಿತ್ರದ ಪಕ್ಕದಲ್ಲಿರುವ ಮೂರು-ಚುಕ್ಕೆಗಳ ಮೆನುವಿನಲ್ಲಿ ಟ್ಯಾಪ್ ಮಾಡಿ.
ಹಂತ:3 ‘ಸೆಟ್ಟಿಂಗ್‌ಗಳು' ಆಯ್ಕೆಮಾಡಿ ನಂತರ ‘ಥೀಮ್' ಆಯ್ಕೆಮಾಡಿ.
ಹಂತ:4 ಇಲ್ಲಿ, ಡಾರ್ಕ್ ಆಯ್ಕೆಮಾಡಿ ಮತ್ತು ನಂತರ ಸರಿ ಆಯ್ಕೆಮಾಡಿ.
ಹಂತ:5 ನಿಮ್ಮ ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಬಹುದಾಗಿದೆ.

ಇನ್ನು ಇದರ ಜೊತೆಗೆ, ಡಾರ್ಕ್‌ಥೀಮ್‌ನೊಂದಿಗೆ ವಾಟ್ಸಾಪ್ ಪರಿಚಯಿಸಿದ dark ಗ್ರೇ ಬಣ್ಣದ ವಾಲ್‌ಪೇಪರ್‌ಗಳನ್ನು ಸಹ ನೀವು ಅನ್ವಯಿಸಬಹುದಾಗಿದೆ. ಇದು ವೆಬ್‌ಸೈಟ್‌ನ ಪೆಟ್ಟಿಗೆಯ ಕೆಳಭಾಗದಲ್ಲಿ ‘ಚಾಟ್ ವಾಲ್‌ಪೇಪರ್' ನಲ್ಲಿ ಹೊಸ ವಾಲ್‌ಪೇಪರ್‌ಗಳನ್ನು ನೀವು ಕಾಣಬಹುದಾಗಿದೆ. ಇದಲ್ಲದೆ ಈಗಾಗಲೇ ವಾಟ್ಸಾಪ್ ಕ್ಯೂಆರ್ ಕೋಡ್‌ಗಳಿಗೆ ಬೆಂಬಲ, ಗುಂಪು ವೀಡಿಯೊ ಕಾಲ್ ಸುಧಾರಣೆಗಳು ಮತ್ತು ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ನಂತಹ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಲು ಸಿದ್ದತೆ ನಡೆಸಿದೆ.


Click it and Unblock the Notifications








