ನಿಮ್ಮ ಮೊಬೈಲ್‌ನಲ್ಲಿ ಸ್ಕ್ರೀನ್‌ಲಾಕ್ ಸೆಟ್ ಮಾಡುವುದಕ್ಕೆ ಹೀಗೆ ಮಾಡಿರಿ!
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರಿಗೂ ಅತ್ಯಗತ್ಯ ಡಿವೈಸ್‌ಗಳಲ್ಲಿ ಒಂದಾಗಿದೆ. ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಗಳು, ವೀಡಿಯೊಗಳು ಸೇರಿದಂತೆ ಹಲವು ಮಹತ್ತರವಾದ ಡಾಕ್ಯುಮೆಂಟ್‌ಗಳನ್ನು ಸ್ಟೋರೇಜ್ ಮಾಡಿರುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್‌ಲಾಕ್ ಮಾಡುವುದಕ್ಕೆ ಬಯಸುತ್ತಾರೆ.
ಹೌದು, ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಸ್ಕ್ರೀನ್ ಲಾಕ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಮೊದಲ ಭಾರಿಗೆ ಸ್ಮಾರ್ಟ್‌ಫೋನ್‌ಗೆ ಸ್ಕ್ರೀನ್‌ಲಾಕ್ ಸೆಟ್ ಮಾಡುವವರಿಗೆ ಸೂಕ್ತ ಮಾಹಿತಿಯ ಅಗತ್ಯವಿದೆ. ಏಕೆಂದರೆ ಸ್ಕ್ರೀನ್‌ಲಾಕ್ ಸೆಟ್ ಮಾಡಿದ ನಂತರ ಅದನ್ನು ಮರೆತು ಹೋದರೆ ಲಾಕ್ ತೆರೆಯುವುದು ಕೂಡ ಕಷ್ಟಕರವಾಗಿದೆ. ಹಾಗಾದ್ರೆ ನಿಮ್ಮ ಮೊಬೈಲ್‌ನಲ್ಲಿ ಸ್ಕ್ರೀನ್‌ಲಾಕ್ ಸೆಟ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನಲ್ಲಿ ಸ್ಕ್ರೀನ್ ಲಾಕ್ ಅನ್ನು ಸೆಟ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್ಸ್ ತೆರೆಯಿರಿ
ಹಂತ:2 ಇದರಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಕೆಳಗೆ ಸ್ಕ್ರಾಲ್ ಮಾಡಿ
ಹಂತ:3 ಇದೀಗ ನಿಮಗೆ ಸ್ವೈಪ್, ಪ್ಯಾಟರ್ನ್, ಪಿನ್ ಮತ್ತು ಪಾಸ್‌ವರ್ಡ್ ಸೇರಿದಂತೆ ವಿವಿಧ ರೀತಿಯ ಸ್ಕ್ರೀನ್ ಲಾಕ್ ಸೆಟ್ಟಿಂಗ್ಸ್ ಆಯ್ಕೆಗಳು ಕಾಣಲಿವೆ
ಹಂತ:4 ಇದರಲ್ಲಿ ಯಾವುದಾದರು ಒಂದು ಆಯ್ಕೆಯನ್ನು ಆಯ್ಕೆ ಮಾಡಿ
ಹಂತ:5 ನಂತರ ಪಿನ್ ಮೇಲೆ ಕ್ಲಿಕ್ ಮಾಡಿ ಮತ್ತು 4 6 ಅಂಕೆಗಳನ್ನು ಸೆಟ್‌ಮಾಡಿ ಮತ್ತು ದೃಢೀಕರಣಕ್ಕಾಗಿ ರೀ ಎಂಟ್ರಿ ಮಾಡಿ
ಹಂತ:6 ಒಮ್ಮೆ ದೃಢೀಕರಿಸಿದ ನಂತರ, ನಿಮ್ಮ ಸ್ಕ್ರೀನ್ ಲಾಕ್ ಅನ್ನು ಸಕ್ರಿಯಗೊಳಿಸಬಹುದು

ಐಓಎಸ್ ಡಿವೈಸ್‌ನಲ್ಲಿ ಸ್ಕ್ರೀನ್ ಲಾಕ್ ಅನ್ನು ಸೆಟ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಐಒಎಸ್ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ
ಹಂತ:2 ಇದರಲ್ಲಿ ಫೇಸ್ ಐಡಿ ಮತ್ತು ಪಾಸ್‌ಕೋಡ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಟರ್ನ್ ಪಾಸ್‌ಕೋಡ್ ಆನ್ ಬಟನ್ ಟ್ಯಾಪ್ ಮಾಡಿ.
ಹಂತ:4 ಪಾಸ್ಕೋಡ್ ಅನ್ನು ಸೆಟ್‌ಮಾಡಿ ಮತ್ತು ಅದನ್ನು ರೀ ಎಂಟ್ರಿ ಮಾಡಿರಿ
ಹಂತ:5 ಮುಂದಿನ ಪರದೆಯಲ್ಲಿ, ನಿಮ್ಮ ಆಪಲ್ ID ಯ ಪಾಸ್‌ವರ್ಡ್ ಅನ್ನು ನಮೂದಿಸಲು ಅದು ನಿಮ್ಮನ್ನು ಕೇಳುತ್ತದೆ.
ಹಂತ:6 ನಿಮ್ಮ ಆಪಲ್ ID ಯ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಸೈನ್ ಇನ್ ಅನ್ನು ಟ್ಯಾಪ್ ಮಾಡಿ.

ಆಂಡ್ರಾಯ್ಡ್ ನಲ್ಲಿ ಸ್ಕ್ರೀನ್ ಲಾಕ್ ಅನ್ನು ರಿಮೂವ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ.
ಹಂತ:2 ನಂತರ ಭದ್ರತಾ ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:3 ಇದೀಗ ಸ್ಕ್ರೀನ್ ಲಾಕ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಪ್ರಸ್ತುತ ಪಿನ್ ಅಥವಾ ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ:4 ಒಮ್ಮೆ ಪರಿಶೀಲಿಸಿದ ನಂತರ, ಇದು ಯಾವುದೂ ಇಲ್ಲ ಎಂಬ ಆಯ್ಕೆಯೊಂದಿಗೆ ವಿವಿಧ ಲಾಕ್ ಸ್ಕ್ರೀನ್ ಆಯ್ಕೆಗಳನ್ನು ತೋರಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಹಂತ:5 ನಿಮ್ಮ ಸಾಧನದಿಂದ ನಿಮ್ಮ ಸ್ಕ್ರೀನ್ ಲಾಕ್ ಅನ್ನು ತೆಗೆದುಹಾಕಲಾಗುತ್ತದೆ.
ಇದೆಲ್ಲದರ ನಡುವೆ ವಿಶ್ವದಲ್ಲಿಯೇ ಅತ್ಯಂತ ಸುರಕ್ಷತೆಯನ್ನು ಹೊಂದಿರುವ ವಿಚಾರಕ್ಕೆ ಬಂದರೆ ಪ್ಯೂರಿಸಂನ ಲಿಬ್ರೆಮ್ 5 ಅತ್ಯಂ ಸುರಕ್ಷತೆಯ ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ ಭದ್ರತೆ ಮತ್ತು ಗೌಪ್ಯತೆ ವಿಚಾರದಲ್ಲಿ ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ಸ್ಮಾರ್ಟ್‌ಫೋನ್ ಆಗಿದೆ. ಇದು ಬಳಕೆದಾರರಿಗೆ ಎಲ್ಲಾ ರೀತಿಯ ಭದ್ರತಾ ನಿಯಂತ್ರಣಗಳನ್ನು ನೀಡಲಿದೆ. ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ PureOS ನಲ್ಲಿ ರನ್ ಆಗುವ ಈ ಸ್ಮಾರ್ಟ್‌ಫೋನ್ ಯಾವುದೇ ರೀತಿಯ ಹ್ಯಾಕಿಂಗ್‌ಗೆ ಒಳಗಾಗುವುದಿಲ್ಲ. ಇದನ್ನು ಯಾರೂ ಕೂಡ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಈ ಫೋನ್ ಬ್ಲೂಟೂತ್, ವೈ-ಫೈ ಮತ್ತು ಸೆಲ್ಯುಲಾರ್ ಸಿಗ್ನಲ್‌ನಂತಹ ವಾಯರ್‌ಲೆಸ್ ನೆಟ್‌ವರ್ಕ್‌ಗಳನ್ನು ಡಿಸೆಬಲ್ ಮಾಡುವ ಫಿಸಿಕಲ್ ಕಿಲ್ ಸ್ವಿಚ್‌ಗಳನ್ನು ಒಳಗೊಂಡಿದೆ. ಇದರ ಬೆಲೆ $999 (ಅಂದಾಜು 83,294ರೂ)ಆಗಿದೆ.


Click it and Unblock the Notifications








