Home
ಟೆಕ್ ನೌಕರಿ

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಟು-ಫ್ಯಾಕ್ಟರ್ ದೃಢೀಕರಣ ಆನ್‌ ಮಾಡುವುದು ಹೇಗೆ?

By Gizbot Bureau

ಸಾಮಾನ್ಯ ಪಾಸ್ ವರ್ಡ್ ರಕ್ಷಣೆಗಿಂತ ಒಂದು ಹೆಜ್ಜೆ ಹೆಚ್ಚಿನ ಭದ್ರತೆಯನ್ನು ನೀಡುವುದೇ ಟು-ಫ್ಯಾಕ್ಟರ್ ದೃಢೀಕರಣ ಅಥವಾ ಟು-ಸ್ಟೆಪ್ ವೆರಿಫಿಕೇಷನ್ ಅಥವಾ ಡುಯಲ್ ಫ್ಯಾಕ್ಟರ್ ಅಥೆಂಟಿಕೇಷನ್.

ಟು-ಫ್ಯಾಕ್ಟರ್

ಈ ರೀತಿ ಎರಡು ಹಂತದ ಸೆಕ್ಯುರಿಟಿಯನ್ನು ನಿಮ್ಮ ಖಾತೆಗೆ ಒದಗಿಸುವುದರಿಂದಾಗಿ ಹ್ಯಾಕರ್ ಗಳಿಂದ ಖಾತೆಯನ್ನು ರಕ್ಷಣೆ ಮಾಡಿಕೊಳ್ಳಬಹುದು. ಸಿಂಗಲ್ ಫ್ಯಾಕ್ಟರ್ ದೃಢೀಕರಣಕ್ಕೆ ಹೋಲಿಸಿದರೆ ಈ ವಿಧಾನದಲ್ಲಿ ಖಾತೆಗೆ ಹೆಚ್ಚಿನ ಸುರಕ್ಷತೆ ಲಭಿಸಿದಂತಾಗುತ್ತದೆ.

ಒಮ್ಮೆ ಟು-ಫ್ಯಾಕ್ಟರ್ ಅಥೆಂಟಿಕೇಷನ್ ಅನೇಬಲ್ ಆದಲ್ಲಿ ಬಳಕೆದಾರರು ಯ್ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಜೊತೆಗೆ ಇನ್ನೊಂದು ಹಂತದ ಮಾಹಿತಿಯನ್ನು ಎಂಟರ್ ಮಾಡಬೇಕಾದ ಅಗತ್ಯತೆ ಇರುತ್ತದೆ. ಅದು ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿಅಥವಾ ಓಟಿಪಿ ಇತ್ಯಾದಿ ಯಾವುದೇ ಕೂಡ ಆಗಿರಬಹುದು.

ನಿಮ್ಮ ಡಾಟಾವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಈ ಹೆಚ್ಚುವರಿ ಪದರವು ಅನುಕೂಲಕರವಾಗಿರುತ್ತದೆ. ಒಂದು ವೇಳೆ ಯಾವುದೇ ವ್ಯಕ್ತಿ ನಿಮ್ಮ ಪಾಸ್ ವರ್ಡ್ ನ್ನು ಕದ್ದರೂ ಕೂಡ ನಿಮ್ಮ ಅಕೌಂಟ್ ನ್ನು ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾದ್ರೆ ಟು-ಫ್ಯಾಕ್ಟರ್ ದೃಢೀಕರಣವನ್ನು ಅನೇಬಲ್ ಮಾಡುವುದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಜಿಮೇಲ್

ಜಿಮೇಲ್

ವಿಶ್ವದಾದ್ಯಂತ ಅತೀ ಹೆಚ್ಚು ಬಳಕೆಯಲ್ಲಿರುವ ಇಮೇಲ್ ಸೇವೆಗಳಲ್ಲಿ ಗೂಗಲ್ ನ ಜಿಮೇಲ್ ಪ್ರಮುಖವಾದದ್ದು. ಜಿಮೇಲ್ ನಲ್ಲಿ ಟು-ಫ್ಯಾಕ್ಟರ್ ದೃಢೀಕರಣವನ್ನು ಅನೇಬಲ್ ಮಾಡುವುದಕ್ಕಾಗಿ ಬಳಕೆದಾರರು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

1. ಗೂಗಲ್ ಅಕೌಂಟ್ ಗೆ ತೆರಳಿ

2. ಎಡಭಾಗದ ಪೆನಲ್ ನಲ್ಲಿ ಸೆಕ್ಯುರಿಟಿಯನ್ನು ಸೆಲೆಕ್ಟ್ ಮಾಡಿ.

3. ಸೆಕ್ಯುರಿಟಿ ಪೇಜ್ ನಲ್ಲಿರುವ ಆಯ್ಕೆಗಳಲ್ಲಿ ‘Signing in to Google' ಸೆಕ್ಷನ್ ನ ಅಡಿಯಲ್ಲಿ ‘2-step verification,' ಅನ್ನುವ ಆಯ್ಕೆ ಇರುತ್ತದೆ. ಅದನ್ನು ಆನ್ ಮಾಡಿ.

4.ಒಮ್ಮೆ ಇದು ಆನ್ ಆದರೆ ‘get started' ಅನ್ನುವ ಪೇಜಿಗೆ ಬಳಕೆದಾರರನ್ನು ಕೊಂಡೊಯ್ಯಲಾಗುತ್ತದೆ.

5. ಗೆಟ್ ಸ್ಟಾರ್ಟೆಡ್ ನ್ನು ಕ್ಲಿಕ್ ಮಾಡಿದಾಗ ಬಳಕೆದಾರರಿಗೆ ಪಾಸ್ ವರ್ಡ್ ನ್ನು ವೆರಿಫೈ ಮಾಡುವಂತೆ ಹೇಳಲಾಗುತ್ತದೆ.

6. ಇದಾದ ನಂತರ, ಕೋಡ್ ನ್ನು ಯಾವ ರೀತಿ ಆಕೆ/ಆತ ಪಡೆಯುವದಕ್ಕೆ ಇಚ್ಛಿಸುತ್ತಾರೆ ಎಂಬುದನ್ನು ಆಯ್ಕೆ ಮಾಡುವುದಕ್ಕೆ ಹೇಳಲಾಗುತ್ತದೆ. ಈ ಆಯ್ಕೆಗಳಲ್ಲಿ:ಫೋನ್ ಪ್ರಾಮ್ಟ್, ಟೆಕ್ಸ್ಟ್ ಮೆಸೇಜ್ ಅಥವಾ ಕರೆ ಅಥವಾ ಸೆಕ್ಯುರಿಟಿ ಕೀ ಇರುತ್ತದೆ.

7.ಯಾವುದಾದರೂ ಒಂದು ಆಯ್ಕೆಯನ್ನು ಸೆಲೆಕ್ಟ್ ಮಾಡಿದ ನಂತರ ಟು-ಫ್ಯಾಕ್ಟರ್ ಅಥೆಂಟಿಫಿಕೇಷನ್ ಅನೇಬಲ್ ಆಗಿರುತ್ತದೆ.

ಫೇಸ್ ಬುಕ್

ಫೇಸ್ ಬುಕ್

ಫೇಸ್ ಬುಕ್ ವಿಶ್ವದ ಅತೀ ದೊಡ್ಡ ಸಾಮಾಜಿಕ ಜಾಲತಾಣವಾಗಿದೆ ಮತ್ತು ಬಳಕೆದಾರರು ಅತೀ ಹೆಚ್ಚು ಡಾಟಾವನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಫೇಸ್ ಬುಕ್ ನಲ್ಲಿ ಡಾಟಾವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಟು-ಫ್ಯಾಕ್ಟರ್ ದೃಢೀಕರಣವನ್ನು ಈ ಕೆಳಗಿನ ಹಂತಗಳನ್ನು ಅನುಸರಿಸಿ ಅನೇಬಲ್ ಮಾಡಿಕೊಳ್ಳಬಹುದು.

1. ಸೆಟ್ಟಿಂಗ್ಸ್ ಗೆ ತೆರಳಿ

2. ಸೆಕ್ಯುರಿಟಿಯನ್ನು ಆಯ್ಕೆ ಮಾಡಿ ಮತ್ತು ಲಾಗಿನ್ ಆಯ್ಕೆಗೆ ತೆರಳಿ

3. ಟು-ಫ್ಯಾಕ್ಟರ್ ಅಥೆಂಟಿಕೇಷನ್ ಆಯ್ಕೆಗೆ ಸ್ಕ್ರೋಲ್ ಡೌನ್ ಮಾಡಿ.

4. ಟು-ಫ್ಯಾಕ್ಟರ್ ಅಥೆಂಡಿಟಿಕೇಷನ್ ನ ಬಲಭಾಗದಲ್ಲಿರುವ ಮ್ಯಾನೇಜ್ ಬಟನ್ ನ್ನು ಕ್ಲಿಕ್ಕಿಸಿ.

5. ನೀವು ಸೇರಿಸಲು ಇಚ್ಛಿಸುವ ಸೆಕ್ಯುರಿಟಿ ವಿಧಾನವನ್ನು ಸೆಲೆಕ್ಟ್ ಮಾಡಿ. ನಿಮಗೆ ಎರಡು ಆಯ್ಕೆಗಳಿರುತ್ತದೆ- ಥರ್ಡ್ ಪಾರ್ಟಿ ಅಥೆಂಟಿಕೇಷನ್ ಆಪ್ ಮೂಲಕ ಲಾಗಿನ್ ಕೋಡ್ ಅಥವಾ ಮೊಬೈಲ್ ಫೋನ್ ಮೂಲಕ ಟೆಕ್ಸ್ಟ್ ಮೆಸೇಜ್ ಕೋಡ್. ನೀವು ಯಾವುದೇ ಆಯ್ಕೆಯನ್ನು ಬೇಕಿದ್ದರೂ ಸೆಲೆಕ್ಟ್ ಮಾಡಿಕೊಳ್ಳಬಹುದು,

6. ಎರಡು ಆಯ್ಕೆಗಳಲ್ಲಿ ಯಾವುದೇ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಪ್ರೊಸೆಸ್ ಪೂರ್ಣಗೊಳಿಸಿದ ನಂತರ ಟು-ಫ್ಯಾಕ್ಟರ್ ಅಥೆಂಟಿಕೇಷನ್ ಅನೇಬಲ್ ಆಗಿರುತ್ತದೆ.

ಒಂದು ವೇಳೆ ಬಳಕೆದಾರರು ಥರ್ಡ್ ಪಾರ್ಟಿ ಅಥೆಂಟಿಕೇಷನ್ ನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ಈ ಥರ್ಡ್ ಪಾರ್ಟಿ ಅಥೆಂಟಿಕೇಷನ್ ಆಪ್ ಗಳಾಗಿರುವ ಡುಯೋ ಗಳು ಕೂಡ ಲಾಗಿನ್ ಕೋಡ್ ಗಳನ್ನು ಜನರೇಟ್ ಮಾಡುತ್ತದೆ.

ಇನ್ಸ್ಟಾಗ್ರಾಂ

ಇನ್ಸ್ಟಾಗ್ರಾಂ

ಫೇಸ್ ಬುಕ್ ಮಾಲೀಕತ್ವದ ಇನ್ಸ್ಟಾಗ್ರಾಂ ಕೂಡ ಸಾಮಾನ್ಯವಾಗಿ ಫೋಟೋ ಶೇರಿಂಗ್ ಗಾಗಿ ಎಲ್ಲರೂ ಬಳಕೆ ಮಾಡುವ ಆಪ್ ಆಗಿದೆ.ಈ ಕೆಳಗಿನ ಹಂತಗಳನ್ನು ಅನುಸರಿಸಿ ಟು-ಫ್ಯಾಕ್ಟರ್ ಅಥೆಂಟಿಕೇಷನ್ ನ್ನು ಇನ್ಸ್ಟಾಗ್ರಾಂನಲ್ಲಿ ಅನೇಬಲ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.

1. ಇನ್ಸ್ಟಾಗ್ರಾಂ ಆಪ್ ನ್ನು ತೆರೆಯಿರಿ

2. ನಿಮ್ಮ ಪ್ರೊಫೈಲ್ ಗೆ ತೆರಳಿ

3.ಮೂರು ಲೈನ್ ಗಳಿರುವ ಐಕಾನ್ ನ್ನು ಟ್ಯಾಪ್ ಮಾಡಿ

4. ಡ್ರಾಪ್ ಡೌನ್ ಮೆನುವಿನಿಂದ ಸೆಟ್ಟಿಂಗ್ಸ್ ನ್ನು ತೆರೆಯಿರಿ

5. ಸೆಟ್ಟಿಂಗ್ಸ್ ಪೇಜ್ ನಲ್ಲಿ ಸೆಕ್ಯುರಿಟಿಯನ್ನು ಸೆಲೆಕ್ಟ್ ಮಾಡಿ.

6. ಸೆಕ್ಯುರಿಟಿ ಪೇಜ್ ನಲ್ಲಿ ಟು-ಫ್ಯಾಕ್ಟರ್ ಅಥೆಂಟಿಕೇಷನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

7. ಅನೇಬಲ್ ಮಾಡುವುದಕ್ಕಾಗಿ ಎರಡು ಆಯ್ಕೆಗಳಿರುತ್ತದೆ: ಟೆಕ್ಸ್ಟ್ ಮೆಸೇಜ್ ಮತ್ತು ಅಥೆಂಟಿಕೇಷನ್ ಆಪ್

8.ಯಾವುದೇ ಒಂದರ ಪ್ರೊಸೀಜರ್ ಮುಗಿದ ನಂತರ ಟು-ಫ್ಯಾಕ್ಟರ್ ಅಥೆಂಟಿಕೇಷನ್ ಅನೇಬಲ್ ಆಗುತ್ತದೆ.

Best Mobiles in India

English summary
How To Enable Two Factor Authentication On Facebook, Instagram, And Gmail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+