ಈ 6 ಆಪ್‌ಗಳಿದ್ದರೆ ವಾಟ್ಸ್‌ಆಪ್‌ ಇನ್ನು ಸರಳ.. ಆಕರ್ಷಕ..!

By Gizbot Bureau
|

ಫೇಸ್‌ಬುಕ್‌ ಒಡೆತನದ ಜನಪ್ರಿಯ ಇನ್‌ಸ್ಟಾಂಟ್‌ ಮೆಸೇಜಿಂಗ್‌ ಆಪ್‌ ಆಗಿರುವ ವಾಟ್ಸ್‌ಆಪ್‌ ಸದ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ವಾಟ್ಸ್‌ಆಪ್‌ ಪ್ರಮುಖ ಸಂವಹನ ಸಾಧನವಾಗಿದೆ. ಜಗತ್ತಿನಾದ್ಯಂತ 1 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್‌ನ ಬಳಕೆಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಹಲವು ಆಂಡ್ರಾಯ್ಡ್ ಆಪ್‌ಗಳು ಹೊರಬಂದಿವೆ. ನಾವು ಇಲ್ಲಿ ಉಲ್ಲೇಖಿಸಿದ ಆಪ್‌ಗಳನ್ನು ಬಳಸಿದರೆ ವಾಟ್ಸ್‌ಆಪ್‌ ಅತ್ಯಾಧುನಿಕ ಸಂವಹನ ವೇದಿಕೆಯಾಗುವದರಲ್ಲಿ ಅನುಮಾನವಿಲ್ಲ. ಹಾಗಾದ್ರೆ, ಆ ಆಪ್‌ಗಳು ಯಾವುವು ಅಂತೀರಾ ಮುಂದೆ ನೋಡಿ.

ಸ್ಕ್ವೇರ್ ಪಿಕ್

ಸ್ಕ್ವೇರ್ ಪಿಕ್

ವಾಟ್ಸ್‌ಆಪ್‌ನಲ್ಲಿ ಪ್ರೊಫೈಲ್ ಚಿತ್ರವನ್ನು ಹೊಂದಿಸಲು ಫೋಟೋ ಚೌಕಕಾರದಲ್ಲಿರಬೇಕು ಎಂಬುದು ನಿಮಗೆ ತಿಳಿದಿರಬೇಕು. ನಾವು ಅಪ್‌ಲೋಡ್ ಮಾಡುವ ಚಿತ್ರಗಳ ಅಗತ್ಯ ಭಾಗಗಳಲ್ಲಿ ಟ್ರಿಮ್ ಮಾಡುವ ಅವಶ್ಯಕತೆ ಇರುತ್ತದೆ. ಇದರಿಂದಾಗಿ ಪ್ರೊಫೈಲ್‌ ಚಿತ್ರ ಜನರನ್ನು ಆಕರ್ಷಿಸುವುದಿಲ್ಲ. ಇದನ್ನು ಪರಿಹರಿಸಲು, ಸ್ಕ್ವೇರ್ ಪಿಕ್ ಎಂಬ ಅಪ್ಲಿಕೇಶನ್ ಇದ್ದು, ನಿಮ್ಮ ಚಿತ್ರವನ್ನು ಚೌಕಕಾರದ ಸ್ವರೂಪಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಹಿನ್ನೆಲೆ ಬಣ್ಣಗಳನ್ನು ಹೊಂದಿಸುವುದು, ಬ್ಲರ್ ತೀವ್ರತೆಯನ್ನು ಹೊಂದಿಸುವುದು, ಸ್ನ್ಯಾಪ್‌ಚಾಟ್ ಶೈಲಿಯ ಪಠ್ಯ ಸೇರಿಸುವುದು, ಗಡಿಗಳನ್ನು ಹೊಂದಿಸುವುದು ಮತ್ತು ಫಿಲ್ಟರ್‌ಗಳನ್ನು ಅನ್ವಯಿಸುವಂತಹ ಅನೇಕ ಬೋನಸ್ ಫೀಚರ್‌ಗಳನ್ನು ಸಹ ಈ ಆಪ್‌ ಹೊಂದಿದೆ.

ಸ್ಟೇಟಸ್‌ ಸೇವರ್

ಸ್ಟೇಟಸ್‌ ಸೇವರ್

ನಾವೆಲ್ಲರೂ ವಾಟ್ಸ್‌ಆಪ್ ಸ್ಟೇಟಸ್‌ಗಳಲ್ಲಿ ವೈರಲ್‌ ವಿಡಿಯೋಗಳನ್ನು ಹಾಕುವ ಸ್ನೇಹಿತನನ್ನು ಹೊಂದಿದ್ದೇವೆ. ಆ ವಿಡಿಯೋವನ್ನು ಕಳುಹಿಸಲು ಸ್ನೇಹಿತರನ್ನು ಕೇಳಿದರೆ, ಅವರೇ ವಿಡಿಯೋ ಸೃಷ್ಟಿಸಿದಂತೆ ವರ್ತಿಸುತ್ತಾರೆ ಎಂಬುದು ಗೊತ್ತಿದೆ. ಇನ್ಮುಂದೆ ನಿಮ್ಮ ಸ್ನೇಹಿತರ ಅದ್ಭುತ ಸ್ಟೇಟಸ್‌ಗಳನ್ನು ಪಡೆಯಲು ನೀವು ಯಾರನ್ನು ಅವಲಂಬಿಸಬೇಕಾಗಿಲ್ಲ. ಸ್ಟೇಟಸ್ ಸೇವರ್‌ನೊಂದಿಗೆ, ನಿಮ್ಮ ಸಂಪರ್ಕಗಳು ವಾಟ್ಸ್ಆಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದ ಯಾವುದೇ ಚಿತ್ರ ಅಥವಾ ವಿಡಿಯೋವನ್ನು ಡೌನ್‌ಲೋಡ್ ಮಾಡಬಹುದು. ಆಪ್‌ನಲ್ಲಿ ಜಾಹೀರಾತುಗಳು ಪ್ರದರ್ಶನವಾಗುತ್ತಿದ್ದು, ಇನ್‌ ಆಪ್‌ ಖರೀದಿ ಬೆಲೆ 150 ರೂ.

ಸ್ಟಿಕ್ಕರ್ ಮೇಕರ್

ಸ್ಟಿಕ್ಕರ್ ಮೇಕರ್

ಸ್ಟಿಕ್ಕರ್‌ ಬಳಕೆ ಪ್ರಸ್ತುತ ದಿನದಲ್ಲಿ ಮುಖ್ಯವಾಹಿನಿಯಾಗಿದ್ದು, ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳನ್ನು ಕಳುಹಿಸುವಲ್ಲಿರುವ ಮಜಾವನ್ನು ನೀವು ಖಂಡಿತ ಮಿಸ್‌ ಮಾಡಿಕೊಳ್ಳಲು ಬಯಸುವುದಿಲ್ಲ. ಅದಕ್ಕಾಗಿಯೇ ನಾವು ಈ ಆಪ್‌ಗಳ ಪಟ್ಟಿಯಲ್ಲಿ ಸ್ಟಿಕ್ಕರ್ ಮೇಕರ್‌ನ್ನು ಸೇರಿಸಿದ್ದೇವೆ. ನಿಮ್ಮ ಸ್ವಂತ ಚಿತ್ರಗಳಿಂದ ಕಸ್ಟಮ್ ಸ್ಟಿಕ್ಕರ್‌ಗಳನ್ನು ರಚಿಸಲು ಆಪ್‌ ನಿಮಗೆ ಅನುಮತಿಸುತ್ತದೆ. ನಿಮ್ಮ ಸ್ವಂತ ಸ್ಟಿಕ್ಕರ್ ಅನ್ನು ಹೇಗೆ ರಚಿಸುವುದು ಎಂಬುದರ ಕುರಿತು ನಿಮಗೆ ಹಂತ, ಹಂತವಾಗಿ ಸೂಚನೆಗಳು ಬೇಕಾದರೆ, ಮಾರ್ಗದರ್ಶಿಯನ್ನು ಇದೆ.

SKEDit

SKEDit

ಪ್ರೀತಿಪಾತ್ರರ ಜನ್ಮದಿನಕ್ಕೆ ಮಧ್ಯರಾತ್ರಿ 12ಗಂಟೆಗೆ ಶುಭಾಶಯ ಹೇಳಬೇಕೆಂಬುದು ಎಲ್ಲರ ಅಭಿಲಾಷೆಯಾಗಿರುತ್ತದೆ. ಆದರೆ, ಬಹಳಷ್ಟು ಜನ 12ಗಂಟೆ ಎನ್ನುವಷ್ಟರಲ್ಲಿ ನಿದ್ರೆಗೆ ಜಾರಿರುತ್ತಾರೆ. ಚಿಂತಿಸುವ ಅಗತ್ಯವಿಲ್ಲ ಇಂತಹವರಿಗಾಗಿಯೇ SKEDit ಎಂಬ ಆಪ್‌ ಇದೆ. ಅದು ನೀವು ಬಯಸುವ ಸಮಯಕ್ಕೆ ಸಂದೇಶಗಳನ್ನು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ. ನಿಗದಿತ ಸಮಯದಲ್ಲಿ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಸಂದೇಶಗಳನ್ನು ಕಳುಹಿಸುತ್ತದೆ. ಮಾತ್ರೆ ತೆಗೆದುಕೊಳ್ಳುವುದನ್ನು ನೆನಪಿಸಲು, ನಿಯಮಿತವಾಗಿ ಸ್ನೇಹಿತರು ಮತ್ತು ಕುಟುಂಬವನ್ನು ಪರಿಶೀಲಿಸುವುದು ಮತ್ತು ಇನ್ನೂ ಹೆಚ್ಚಿನ ಬಳಕೆಯ ಸಂದರ್ಭಗಳಲ್ಲಿ ಆಪ್‌ ಸಹಾಯಕಾರಿಯಾಗಿದೆ. ಆದರೆ, ಸ್ಕ್ರೀನ್‌ ಆಫ್ ಮಾಡಿದಾಗ ಆಪ್‌ ಕಾರ್ಯನಿರ್ವಹಿಸಲು ನಿಮ್ಮ ಸ್ಕ್ರೀನ್ ಲಾಕ್ ಅನ್ನು ನೀವು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಈ ರಾಜಿ ಮಾಡಿಕೊಂಡರೆ ಖಂಡಿತ SKEDit ಭಾರೀ ಉಪಯೋಗಕ್ಕೆ ಬರುತ್ತದೆ.

ಟ್ರಾನ್ಸ್ಕ್ರೈಬರ್

ಟ್ರಾನ್ಸ್ಕ್ರೈಬರ್

ಇಯರ್‌ಫೋನ್‌ಗಳಿಲ್ಲದೆ ಆಡಿಯೋ ಸಂದೇಶ ಕೇಳುವುದು ಭಾರೀ ಕಠಿಣ ಕೆಲಸ. ಇದಕ್ಕಾಗಿಯೇ ಟ್ರಾನ್‌ಸ್ಕ್ರೈಬರ್ ಎಂಬ ಆಪ್‌ ಇದ್ದು, ಹೆಸರೇ ಹೇಳುವಂತೆ ಪಠ್ಯ ಸ್ವರೂಪದಲ್ಲಿ ಆಡಿಯೊ ಸಂದೇಶಗಳ ಪ್ರತಿಲೇಖನವನ್ನು ನಮಗೆ ನೀಡುತ್ತದೆ. ಆದ್ದರಿಂದ ನೀವು ಅಸುರಕ್ಷಿತ ಸಂದರ್ಭಗಳಲ್ಲಿ ಆಡಿಯೋವನ್ನು ಪ್ಲೇ ಮಾಡಬೇಕಾಗಿಲ್ಲ. ನೀವು ಮಾಡಬೇಕಾಗಿರುವುದು ಇಷ್ಟೇ, ಆಡಿಯೊ ಸಂದೇಶವನ್ನು ಟ್ಯಾಪ್‌ ಮತ್ತು ಹೋಲ್ಡ್‌ ಮಾಡಿ ಟ್ರಾನ್‌ಸ್ಕ್ರೈಬರ್‌ಗೆ ಹಂಚಿಕೊಳ್ಳಿ. ನೀವು ಆಶ್ಚರ್ಯ ಪಡುತ್ತಿರಾ, ಫಾರ್ವರ್ಡ್ ಮಾಡಿದ ಆಡಿಯೊ ಫೈಲ್‌ಗಳೊಂದಿಗೆ ಈ ಆಪ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಬಹಳಷ್ಟು ಭಾಷೆಗಳನ್ನು ಸಹ ಬೆಂಬಲಿಸುತ್ತದೆ. ಈ ಆಪ್‌ ಕೂಡ ಜಾಹೀರಾತುಗಳನ್ನು ಪ್ರದರ್ಶಿಸುತ್ತದೆ. ಜಾಹೀರಾತು ಬೇಡ ಎಂದರೆ 65 ರೂ. ನೀಡಿ ಆಪ್‌ ಖರೀದಿಸಬಹುದು.

ಮೆಸೇಜ್‌ ಪೋರ್ಟಲ್

ಮೆಸೇಜ್‌ ಪೋರ್ಟಲ್

ನೀವು ಎಂದಾದರೂ ವಾಟ್ಸ್‌ಆಪ್‌ನಿಂದ ಡಿಲೀಟ್‌ ಮಾಡಿದ ಸಂದೇಶಗಳನ್ನು ಓದಲು ಬಯಸಿದ್ದೀರಾ..? ನಿಮ್ಮ ಈ ಆಸೆಯನ್ನು ಪೂರೈಸಲು ಮೆಸೇಜ್‌ ಪೋರ್ಟ್‌ಲ್‌ ಎಂಬ ಆಪ್‌ ಇದೆ. ಮೆಸೇಜ್‌ ಪೋರ್ಟಲ್‌ ಮೂಲಕ ಎಲ್ಲಾ ನೊಟಿಫೀಕೆಷನ್‌ಗಳನ್ನು ಒಂದೇ ಸ್ಥಳದಲ್ಲಿ ಓದಬಹುದು. ಡಿಲೀಟ್‌ ಮಾಡಿದ ಸಂದೇಶ ನೊಟಿಫೀಕೆಷನ್‌ ಆಗಿರುವುದರಿಂದ ಆಪ್‌ನಲ್ಲಿ ಶೇಖರಣೆಯಾಗಿರುತ್ತದೆ. ಮತ್ತು ನಿಮ್ಮ ಎಲ್ಲಾ ಅಧಿಸೂಚನೆಗಳಿಗೆ ಈ ಆಪ್‌ನ್ನು ನಿಯಂತ್ರಣ ಕೇಂದ್ರವಾಗಿಯೂ ಬಳಸಬಹುದು.

Best Mobiles in India

English summary
How To Enhance WhatsApp Experience Using Third Party Apps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X