ವಾಟ್ಸಾಪ್‌ನಲ್ಲಿ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು ಹೀಗೆ ಮಾಡಿ!
ಇತ್ತೀಚಿನ ದಿನಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರೂ ಸೊಶೀಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತದೆ. ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೂಲಕ ಕ್ಷಣಾರ್ಧದಲ್ಲಿ ಎಲ್ಲೆಡೆ ವಿಷಯ ಹರಿದಾಡುತ್ತದೆ. ಹಾಗಂತ ಸೊಶೀಯಲ್ ಮೀಡಿಯಾದಲ್ಲಿ ಬರುವ ಎಲ್ಲಾ ವಿಚಾರಗಳು ಸತ್ಯವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಕೆಲವು ಬೇಕೆಂತಲೇ ಸುಳ್ಳು ಸುದ್ದಿಯನ್ನು ಹರಡುತ್ತಾರೆ. ಅದರಲ್ಲೂ ಹೆಚ್ಚಿನ ಜನರು ವಾಟ್ಸಾಪ್ ಮೂಲಕ ಸುಳ್ಳು ಸುದ್ದಿಯನ್ನು ಎಲ್ಲೆಡೆ ಹರಡುತ್ತಿದ್ದಾರೆ. ಇದೇ ಕಾರಣಕ್ಕೆ ವಾಟ್ಸಾಪ್ ಕೂಡ ಬಳಕೆದಾರರು ನಕಲಿ ಸುದ್ದಿಯನ್ನು ಪತ್ತೆ ಹಚ್ಚುವುದಕ್ಕೆ ಅವಕಾಶ ನೀಡಿದೆ.

ಹೌದು, ವಾಟ್ಸಾಪ್‌ನಲ್ಲಿ ಸುಳ್ಳು ಸುದ್ದಿ ಹರಡುವ ಪ್ರಮಾಣ ಹೆಚ್ಚಾಗುತ್ತಿದೆ. ಫೇಕ್ ನ್ಯೂಸ್ ಪ್ರಸರಣವನ್ನು ನಿರ್ಬಂಧಿಸಲು ವಾಟ್ಸಾಪ್ ಅನೇಕ ಫೀಚರ್ಸ್ ಜಾರಿಗೆ ತಂದಿದ್ದರೂ ಕೂಡ ಫೇಕ್ ನ್ಯೂಸ್ ಪಾವರ್ಡ್ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಆದರಿಂದ ವಾಟ್ಸಾಪ್‌ನಲ್ಲಿ ನೀವು ಪಡೆಯುವ ಮಾಹಿತಿಯ ಅಸಲಿಯತೆಯನ್ನು ಪರಿಶೀಲಿಸುವುದಕ್ಕೆ ಕೆಲವು ಮಾರ್ಗಗಳನ್ನು ಅನುಸರಿಸಬಹುದಾಗಿದೆ. ಇದಕ್ಕಾಗಿ ಭಾರತದಲ್ಲಿ ಸುದ್ದಿಯ ಅಸಲಿಯತೆ ಪರಿಶೀಲಿಸಲು ಸಹಾಯ ಮಾಡುವ ಟಾಪ್ 10 ಫ್ಯಾಕ್ಟ್-ಚೆಕಿಂಗ್ ಸಂಸ್ಥೆಗಳು ತಮ್ಮ ಟಿಪ್‌ಲೈನ್‌ಗಳನ್ನು ವಾಟ್ಸಾಪ್‌ನಲ್ಲಿ ಲಭ್ಯವಿದೆ. ಇವುಗಳ ಮೂಲಕ ಫೇಕ್‌ನ್ಯೂಸ್ ಚೆಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಹೊಂದಿರುವ ಫ್ಯಾಕ್ಟ್ ಚೆಕಿಂಗ್ ಸಂಸ್ಥೆಗಳ ಟಿಪ್‌ಲೈನ್‌ಗಳ ಮೂಲಕ ಬಳಕೆದಾರರು ತಾವು ಸ್ವೀಕರಿಸುವ ಮಾಹಿತಿಯ ಅಸಲಿಯತೆಯನ್ನು ಪರಿಶೀಲಿಸಬಹುದು. ಈ ಟಿಪ್‌ಲೈನ್‌ಗಳನ್ನು ಇಂಟರ್‌ನ್ಯಾಶನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ (IFCN) ಮೂಲಕ ಪರಿಶೀಲಿಸಲಾಗಿದೆ. ಇವುಗಳ ಮೂಲಕ ಫೋಟೋಗಳು, ವೀಡಿಯೊಗಳು ಮತ್ತು ವಾಯ್ಸ್ ರೆಕಾರ್ಡಿಂಗ್‌ಗಳು ಸೇರಿದಂತೆ ನಿಮ್ಮನ್ನು ತಪ್ಪುದಾರಿಗೆಳೆಯುವ ವಿಷಯವನ್ನು ಪರಿಶೀಲಿಸಲು ಬಳಸಬಹುದು. ಇನ್ನು ಈ ಟಿಪ್‌ಲೈನ್‌ಗಳಲ್ಲಿ ಹೆಚ್ಚಿನ ಸಂಸ್ಥೆಗಳು ಇಂಗ್ಲಿಷ್ ಮತ್ತು ಬಂಗಾಳಿ, ಹಿಂದಿ, ಮರಾಠಿ ಮತ್ತು ಪಂಜಾಬಿ ಸೇರಿದಂತೆ ಭಾರತದ 11 ಭಾಷೆಗಳನ್ನು ಬೆಂಬಲಿಸುತ್ತವೆ.

ಭಾರತದಲ್ಲಿ ವಾಟ್ಸಾಪ್‌ನಲ್ಲಿ ಫ್ಯಾಕ್ಟ್ ಚೆಕ್ ಮಾಡುವ ಟಿಪ್‌ಲೈನ್‌ಗಳು!
ಭಾರತದಲ್ಲಿ ವಾಟ್ಸಾಪ್ ಬಳಸುವವರು ತಮಗೆ ಬಂದ ವಿಷಯಗಳು ಅಸಲು ಇಲ್ಲವೇ ನಕಲಿ ಎಂದು ಮಾಹಿತಿಯನ್ನು ಪರಿಶೀಲಿಸಲು ಈ ಕೆಲಗಿನ ಟಿಪ್‌ಲೈನ್‌ಗಳನ್ನು ಬಳಸಬಹುದಾಗಿದೆ.
ಎಎಫ್‌ಪಿ: +91 95999 73984
ಬೂಮ್: +91 77009-06111 / +91 77009-06588
ಫ್ಯಾಕ್ಟ್ ಕ್ರೆಸೆಂಡೋ: +91 90490 53770
ಫ್ಯಾಕ್ಟ್ಲಿ: +91 92470 52470
ಇಂಡಿಯಾ ಟುಡೇ: +91 7370-007000
ನ್ಯೂಸ್ ಚೆಕ್ಕರ್: +91 99994 99044
ನ್ಯೂಸ್ ಮೊಬೈಲ್: +91 11 7127 9799
ಕ್ವಿಂಟ್ ವೆಬ್‌ಕ್ಯೂಫ್: +91 96436 51818
ದಿ ಹೆಲ್ತಿ ಇಂಡಿಯನ್ ಪ್ರಾಜೆಕ್ಟ್: +91 85078 85079
ವಿಶ್ವಸ್ ನ್ಯೂಸ್: +91 92052 70923 / +91 95992 99372
ಈ ಮೇಲಿನ ಟಿಪ್‌ಲೈನ್‌ಗಳನ್ನು ಬಳಸಿಕೊಳ್ಳುವ ಮೂಲಕ ನಿಮ್ಮ ವಾಟ್ಸಾಪ್‌ಗೆ ಬಂದಿರುವ ವಿಷಯದ ಅಸಲಿಯತೆ ಏನು ಅನ್ನೊದನ್ನ ಪರಿಶೀಲಿಸಬಹುದಾಗಿದೆ.

ವಾಟ್ಸಾಪ್ ನಲ್ಲಿ ಫ್ಯಾಕ್ಟ್ ಚೆಕ್ ಮಾಡಲು ಟಿಪ್‌ಲೈನ್‌ಗಳನ್ನು ಬಳಸುವುದು ಹೇಗೆ?
ವಾಟ್ಸಾಪ್‌ನಲ್ಲಿ ಬರುವ ಸುದ್ದಿಯ ಅಸಲಿಯತೆ ಪರಿಶೀಲಿಸಲು ಟಿಪ್‌ಲೈನ್ ಬಳಸುವುದಕ್ಕೆ ಬಳಕೆದಾರರು ತಮ್ಮ ಕಂಟ್ಯಾಕ್ಟ್‌ನಲ್ಲಿ ಟಿಪ್‌ಲೈನ್‌ಗಳ ಸಂಖ್ಯೆಗಳನ್ನು ಸೇವ್ ಮಾಡಬೇಕು. ನಂತರ ನೀವು ಬಯಸುವ ಮಾಹಿತಿಯನ್ನು ಮೌಲ್ಯೀಕರಿಸಲು ಟಿಪ್‌ಲೈನ್ ಸಂಖ್ಯೆಗೆ ವಾಟ್ಸಾಪ್‌ನಲ್ಲಿ "ಹಾಯ್" ಎಂದು ಕಳುಹಿಸಬೇಕು. ಟಿಪ್‌ಲೈನ್‌ಗಳು ಮೂಲಭೂತವಾಗಿ ಚಾಟ್‌ಬಾಟ್‌ಗಳಾಗಿರುವುದರಿಂದ, ನೀವು ಫೀಡ್ ಮಾಡುವ ಮಾಹಿತಿಯನ್ನು ಪರಿಶೀಲಿಸಲು ಅವು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ನಂತರ ನೀವು ಕಳುಹಿಸಿದ ಮಾಹಿತಿಯ ಅಸಲಿಯತೆಯನ್ನು ಬಹಿರಂಗ ಪಡಿಸುತ್ತವೆ.


Click it and Unblock the Notifications








