Subscribe to Gizbot

ಕಂಪ್ಯೂಟರ್‌ನಲ್ಲಿರುವ ನಕಲಿ ಫೈಲ್‌ಗಳಿಗೆ ಅಂತ್ಯ ಕಾಣಿಸುವುದು ಹೇಗೆ?

Written By:

ನಿಮ್ಮ ಕಂಪ್ಯೂಟರ್‌ನಲ್ಲಿ ನಕಲಿ ಫೈಲ್‌ಗಳು ಎಲ್ಲಾ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನಿಮ್ಮ ಅತ್ಯಮೂಲ್ಯವಾದ ಸಂಗ್ರಹಣಾ ಕೊಠಡಿಯತ್ತ ಗಮನಿಸುವಾಗ ನಿಮ್ಮ ಫೋಟೋ ಅಥವಾ ಮೀಡಿಯಾ ಮ್ಯಾನೇಜರ್ ಅಪ್ಲಿಕೇಶನ್‌ಗಳು ನಿಮಗೆ ಗೊಂದಲವನ್ನುಂಟು ಮಾಡುವುದು ನಿಜ.

ಓದಿರಿ: ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

ಹಾಗಿದ್ದರೆ ಈ ನಕಲಿ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ನಿಂದ ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಕುರಿತ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀವು ಅರಿತುಕೊಳ್ಳಲಿರುವಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಕಲಿ ಫೈಲ್‌ಗಳು
  

ನಕಲಿ ಫೈಲ್‌ಗಳು ಬೇರೆ ಬೇರೆ ರೀತಿಯ ಪರಿಣಾಮಗಳಿಂದ ನಿಮ್ಮ ಕಂಪ್ಯೂಟರ್‌ನಲ್ಲಿ ಕಾಣಿಸಿಕೊಳ್ಳಬಹುದು. ನೀವು ಒಂದು ಫೈಲ್ ಅನ್ನು ಡೌನ್‌ಲೋಡ್ ಮಾಡಿದ್ದೀರಿ ಸ್ವಲ್ಪ ಸಮಯದ ನಂತರ ನೀವು ಅದೇ ಫೈಲ್ ಅನ್ನು ಮರುಲೋಡ್ ಮಾಡಿರುತ್ತೀರಿ. ಆಗ ಮೊದಲ ಫೈಲ್ ನಕಲಿಯಾಗಿ ಉಳಿಯುತ್ತದೆ.

ಡಿಸ್ಕ್ ಸ್ಪೇಸ್
  

ಫೋಲ್ಡರ್‌ನಲ್ಲಿರುವ ಚಿತ್ರಗಳನ್ನು ಕಾಪಿ ಮಾಡುವಾಗ ಮೂಲ ಪ್ರತಿಗಳನ್ನು ಅಳಿಸಲು ಮರೆತಿರುತ್ತೀರಿ. ಹೀಗೆ ಈ ನಕಲಿಗಳು ನಿಮ್ಮ ಡಿಸ್ಕ್ ಸ್ಪೇಸ್ ಅನ್ನು ಆವರಿಸಿಕೊಳ್ಳುತ್ತವೆ.

ಡ್ಯೂಪ್ ಗುರು ಸಾಫ್ಟ್‌ವೇರ್
  

ಹಾಗಿದ್ದರೆ ಈ ನಕಲಿಗಳ ಭರಾಟೆಯನ್ನು ತಡೆಗಟ್ಟಲೆಂದೇ ಡ್ಯೂಪ್ ಗುರು ಸಾಫ್ಟ್‌ವೇರ್ ಕುರಿತು ನಿಮಗೆ ತಿಳಿಸಲಿರುವೆವು.

ವಿಂಡೋಸ್, ಮ್ಯಾಕ್ ಮತ್ತು ಲೀನಕ್ಸ್‌
  

ವಿಂಡೋಸ್, ಮ್ಯಾಕ್ ಮತ್ತು ಲೀನಕ್ಸ್‌ಗಾಗಿ ಈ ಡ್ಯೂಪ್ ಗುರು ಸಾಫ್ಟ್‌ವೇರ್ ಲಭ್ಯವಿದೆ.

ಸಿಸಿ ಕ್ಲೀನರ್
  

ಇದಲ್ಲದೆ ಸಿಸಿ ಕ್ಲೀನರ್ ಮತ್ತು ವಿಂಡೋಸ್‌ಗಾಗಿ ಡ್ಯುಪ್ಲಿಕೇಟ್ ಫೈಲ್ ಫೈಂಡರ್, ಮ್ಯಾಕ್‌ಗಾಗಿ ಜೆಮಿನಿ ಪರ್ಯಾಯ ವ್ಯವಸ್ಥೆಗಳಾಗಿವೆ.

ಡ್ಯುಪ್ಲಿಕೇಟ್ ಫೈಲ್‌
  

ಈ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡ ನಂತರ, ಪ್ಲಸ್ ಐಕಾನ್ ಅನ್ನು ಸ್ಪರ್ಶಿಸಿ ಇದು ಡ್ಯುಪ್ಲಿಕೇಟ್ ಫೈಲ್‌ಗಳನ್ನು ಆರಿಸುತ್ತವೆ. ನಂತರ ಸ್ಕ್ಯಾನ್ ಅನ್ನು ಒತ್ತಿರಿ ಮತ್ತು ಡ್ಯೂಪ್ ಗುರು ಇಲ್ಲಿ ಕಾರ್ಯನಿರ್ವಹಿಸುತ್ತದೆ.

ಫೋಲ್ಡರ್‌ಗಳ ಗಾತ್ರ
  

ನೀವು ಆಯ್ಕೆಮಾಡಿರುವ ಫೋಲ್ಡರ್‌ಗಳ ಗಾತ್ರವನ್ನು ಆಧರಿಸಿ ನೀವು ಸ್ವಲ್ಪ ಹೊತ್ತು ಕಾಯಬೇಕು. ಪರದೆಯಲ್ಲಿ ಮ್ಯಾಚ್‌ಗಳ ಪಟ್ಟಿ ಕಾಣಸಿಗುತ್ತದೆ.

ನೀಲಿ ಬಣ್ಣ
  

ಮೂಲ ಫೈಲ್‌ಗಳು ನೀಲಿ ಬಣ್ಣದಲ್ಲಿ ಗುರುತಿಸಲ್ಪಟ್ಟಿರುತ್ತವೆ ಮತ್ತು ಡ್ಯುಪ್ಲಿಕೇಟ್‌ಗಳು ಅದರ ಕೆಳಗೆ ಇರುತ್ತವೆ.

ಮಾರ್ಕ್ ಮಾಡಿ
  

ಬಣ್ಣದಲ್ಲಿ ಇಲ್ಲದ ಫೈಲ್‌ಗಳನ್ನು ಅಳಿಸಲು ಒಮ್ಮೆಗೆ ಮಾರ್ಕ್ ಮಾಡಿ ಮತ್ತು ಅವನ್ನು ಒಟ್ಟಿಗೆ ಅಳಿಸಿ.

ಅಪ್ಲಿಕೇಶನ್‌
  

ಡ್ಯೂಪ್‌ಗುರು 'ಪಿಕ್ಚರ್ ಎಡಿಶನ್' ಮತ್ತು 'ಮ್ಯೂಸಿಕ್ ಎಡಿಶನ್' ಅಪ್ಲಿಕೇಶನ್‌ಗಳನ್ನು ನೀಡುತ್ತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Duplicate files can cause all kinds of problems on your computer, taking up precious storage room, confusing your photo or media manager apps, and generally getting in the way of searches and other operations when you'd rather they didn't.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot