ಕಳೆದುಹೋದ ಸ್ಮಾರ್ಟ್‌ಫೋನ್‌ ಹುಡುಕುವುದು ಹೇಗೆ?

Written By:

    ಆಕಸ್ಮಿಕವಾಗಿ ಮೊಬೈಲ್ ಕಳೆದು ಹೋದಲ್ಲಿ, ಇಂದು ಮೊಬೈಲ್‌ ಬಳಕೆದಾರರು ತಮ್ಮ ಮೊಬೈಲ್‌ ಕಳೆದು ಕೊಳ್ಳುವುದಲ್ಲದೇ ಪ್ರಮುಖ ಸಂಪರ್ಕಗಳನ್ನು, ಮುಖ್ಯ ಡೇಟಾವನ್ನು ಸಹ ಕಳೆದು ಕೊಳ್ಳುತ್ತಾರೆ. ಅಲ್ಲದೇ ಮೊಬೈಲ್‌ ಇತರರಿಗೆ ಸಿಕ್ಕರೆ ಸಿಮ್‌ನಿಂದ ದುರುಪಯೋಗವು ಸಹ ಆಗಬಹುದು. ಆದ್ದರಿಂದ ಮೊಬೈಲ್‌ ಬಳಕೆದಾರರು ತಮ್ಮ ಮೊಬೈಲ್‌ ಅನ್ನು ಆದಷ್ಟು ಪ್ರಯತ್ನ ಪಟ್ಟು ಹುಡುಕಾಟ ನೆಡೆಸಬೇಕು. ಸಿಗದಿದ್ದಲ್ಲಿ ಒಮ್ಮೆ ಪೊಲೀಸ್‌ ಇಲಾಖೆಯಲ್ಲಿ ದೂರು ನೀಡಬೇಕು. ದೂರು ನೀಡುವುದು 2ನೇ ಮಾತು. ಆದರೆ ಕಳೆದು ಹೋದ ಮೊಬೈಲ್‌ ಹುಡುಕುವುದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    ಆಂಡ್ರಾಯ್ಡ್ ಡಿವೈಸ್‌ ಮೆನೇಜರ್

    ನೀವು ಕಳೆದು ಕೊಂಡ ಮೊಬೈಲ್‌ ಟ್ರ್ಯಾಕ್‌ ಮಾಡಲು ಐಒಎಸ್‌ ಡಿವೈಸ್‌ಗಳನ್ನು ಬಳಸುವವರು "Find my iPhone" ಅಪ್ಲಿಕೇಶನ್‌ ಬಳಸಿ. ಆಂಡ್ರಾಯ್ಡ್‌ ಬಳಕೆದಾರರು ಆಂಡ್ರಾಯ್ಡ್ ಡಿವೈಸ್‌ ಮೆನೇಜರ್ ಬಳಸಿ.

    ಗೂಗಲ್‌ ಸೆಟ್ಟಿಂಗ್ಸ್‌

    ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್ ಸೆಟ್‌ಮಾಡಲು ಗೂಗಲ್‌ ಸೆಟ್ಟಿಂಗ್ಸ್‌ಗೆ ಹೋಗಿ 'ಸೆಕ್ಯುರಿಟಿ' ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. ಅಲ್ಲಿ "android device manager" ಎಂದು ಇರುತ್ತದೆ. ಅದರ ಕೆಳಗೆ "Remotely locate this divice" ಎಂಬ ಆಯ್ಕೆಯನ್ನು ಎನೇಬಲ್‌ ಮಾಡಿ. ಹಾಗೂ "Allow remote lock" ಅನ್ನು ಸಹ ಎನೇಬಲ್ ಮಾಡಿ.

    ಕಳೆದು ಹೋದ ಫೋನ್‌ ಟ್ರ್ಯಾಕ್‌ ಹೇಗೆ

    ಕಂಪ್ಯೂಟರ್‌ನಲ್ಲಿ ನಿಮ್ಮ ಗೂಗಲ್‌ ಖಾತೆಯನ್ನು ಲಾಗಿನ್‌ ಆಗಿ ಅಲ್ಲಿ ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್ ಎಂದು ಬ್ರೌಸರ್‌ ಟೈಟಲ್‌ನಲ್ಲಿ ಟೈಪ್ ಮಾಡಿ. ಮೊಬೈಲ್‌ ಇರುವ ಸ್ಥಳ ಗೂಗಲ್‌ ಮ್ಯಾಪ್‌ನಲ್ಲಿ ನಿಮಗೆ ಕಾಣುತ್ತದೆ.

    ಲಾಕ್‌ಸ್ಕ್ರೀನ್‌ ಬೈಪಾಸ್‌ ಹೇಗೆ

    ಒಂದು ವೇಳೆ ಯಾವುದೋ ಒಂದು ಸಂದರ್ಭದಲ್ಲಿ ಮೊಬೈಲ್‌ ಕಳೆದು ಕೊಂಡಲ್ಲಿ ಅದನ್ನು ಲಾಕ್‌ ಮಾಡಲು "android device manager" ಮೂಲಕ ಬೈಪಾಸ್‌ ಲಾಕ್‌ ಸ್ಕ್ರೀನ್ ಮಾಡುವುದರ ಜೊತೆಗೆ ಕಸ್ಟಮ್‌ ಮೆನೇಜರ್‌ ಹೊಂದಿಸಿ ಅಥವಾ ಲಾಕ್‌ ಸ್ಕ್ರೀನ್‌ನಲ್ಲಿ ಇತರೆ ಫೋನ್‌ ನಂಬರ್‌ ನೀಡಿ.

    ಸೆಟ್‌ ಅಪ್‌ ಲಾಕ್‌ ಸ್ಕ್ರೀನ್‌

    "android device manager" ನಲ್ಲಿ ಸೆಟ್‌ ಅಪ್‌ ಲಾಕ್‌ ಸ್ಕ್ರೀನ್‌ ಅಂಡ್‌ ಎರೇಸ್ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಲಾಕ್‌ ಮೇಲೆ ಕ್ಲಿಕ್‌ ಮಾಡಿ ಪಾಸ್‌ವರ್ಡ್‌ ನೀಡಿ. ಇಲ್ಲವಾದಲ್ಲಿ ನಿಮ್ಮ ಮೊಬೈಲ್‌ನಲ್ಲಿಯ ವಯಕ್ತಿಕ ವಿಷಯಗಳನ್ನು ನೀವೆ ಪರಿಚಯಿಸಿದಂತಾಗುತ್ತದೆ.

    ನ್ಯೂ ಲಾಕ್‌ ಸ್ಕ್ರೀನ್

    ನ್ಯೂ ಲಾಕ್‌ ಸ್ಕ್ರೀನ್‌ನಲ್ಲಿ ಪಾಸ್‌ವರ್ಡ್‌ ನೀಡಿ. ಮತ್ತೊಮ್ಮೆ ಪಾಸ್‌ವರ್ಡ್‌ ಖಚಿತಪಡಿಸಿ. ನಂತರದಲ್ಲಿ ರಿಕವರಿ ಮೆಸೇಜ್‌ ಮತ್ತು ಫೋನ್‌ ನಂಬರ್ ನೀಡಿ.

    ಮೊಬೈಲ್‌ ರಿಂಗ್‌

    ನಿಮ್ಮ ಮೊಬೈಲ್‌ ಅನ್ನು "android device manager" ಮೂಲಕ ಲಾಕ್‌ ಮಾಡಿದ ನಂತರ ಮೊಬೈಲ್‌ ನೀವು ಇರುವ ಹತ್ತಿರದಲ್ಲಿ ಇರುವ ಬಗ್ಗೆ ಖಚಿತ ಪಡಿಸಲು 'ಲೋಕೆಶನ್' ಆನ್‌ ಆಗಿದ್ದಲ್ಲಿ, ಮತ್ತು ಆನ್‌ಲೈನ್‌ ನಲ್ಲಿ ಇದ್ದಲ್ಲಿ ರಿಂಗ್ ಮೇಲೆ ಕ್ಲಿಕ್‌ ಮಾಡಿ. ಇದು 5 ನಿಮಿಷಗಳವರೆಗೆ ರಿಂಗ್‌ ಆಗುತ್ತದೆ.

    ಡೇಟಾ ಎರೇಸ್‌ಮಾಡುವುದು

    ಡೇಟಾ ಎರೇಸ್‌ಮಾಡುವುದು ಹೇಗೆ ನಿಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ ಹಾಗೂ ಇತರೆ ಮುಖ್ಯ ಮಾಹಿತಿ ಇದ್ದಲ್ಲಿ ಇತರರಿಗೆ ತಿಳಿಯದಂತೆ ಮಾಡಲು "android device manager" ಮೂಲಕ ಲಾಕ್‌ ನಂತರದಲ್ಲಿರುವ ಎರೇಸ್ ಮೇಲೆ ಕ್ಲಿಕ್‌ ಮಾಡಿ. ಇದು ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿಗಳನ್ನು ಅಳಿಸಿ ಹಾಕುತ್ತದೆ.‌

    ಗಿಜ್‌ಬಾಟ್‌

    ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌
    ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

    ಗಿಜ್‌ಬಾಟ್‌

    ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    English summary
    How TO found lost Smartphone with android divice manager. Read more about this in kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more