ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಸ್ಟೋರೇಜ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ?

|

ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನ ಹೊಂದಿರುವ ಆಪ್‌ ವಾಟ್ಸಾಪ್‌. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ ಬೆಂಬಲ ಹೊಂದಿರುವ ಉತ್ತಮ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈಗಾಗಲೇ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇನ್ನು ವಾಟ್ಸಾಪ್‌ ಮೂಲಕ ಹಬ್ಬ ಹರಿದಿನಗಳ ಸಮಯದಲ್ಲಿ ಶುಭಾಶಯ ಕೊರುವುದು, ಸಂದೇಶಗಳನ್ನ ಪಾರ್ವಡ್‌ ,ಮಾಡುವುದು ಸಾಮಾನ್ಯವಾಗಿದೆ. ಇನ್ನು ಇಂತಹ ಸಮಯದಲ್ಲಿ ನಿಮ್ಮ ವಾಟ್ಸಾಪ್‌ ಸ್ಟೋರೇಜ್‌ ಸ್ಪೇಸ್‌ ಅನ್ನು ತೆರವುಗೊಳಿಸಬೇಕಾಗುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ಚಾಟ್‌, ಇಮೇಜ್‌ಗಳು, ಮೀಡಿಯಾ ಫೈಲ್‌ಗಳನ್ನ ಶೇರ್‌ ಮಾಡುವುದರಿಂದ ವಾಟ್ಸಾಪ್‌ ಸ್ಟೋರೇಜ್‌ ಫುಲ್‌ ಆಗುತ್ತೆ. ಜಂಕ್‌ ಫೈಲ್‌ಗಳ ಕಾರಣದಿಂದಾಗಿ ವಾಟ್ಸಾಪ್‌ನಲ್ಲಿ ಸ್ಟೋರೇಜ್‌ ಆಗಾಗ ಫುಲ್‌ ಆಗಿ ಬಿಡುತ್ತೆ. ಕೆಲವೊಮ್ಮೆ ತಿಳಿದಿರುವ ಸಂಪರ್ಕಗಳು ಮಾತ್ರವಲ್ಲದೆ, ಅಪರಿಚಿತ ಸಂಪರ್ಕಗಳಿಂದ, ವಿಶೇಷವಾಗಿ ಹಬ್ಬದ ಸಂದರ್ಭಗಳಲ್ಲಿ ನೀವು ಇಮೇಜ್‌ಗಳು ಮತ್ತು ವೀಡಿಯೊಗಳ ಬೋಟ್‌ಲೋಡ್ ಆಗಿ ಬಿಡುತ್ತೆ. ಇಂತಹ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಸ್ಟೋರೇಜ್‌ ಫ್ರೀ ಮಾಡಲು ಲೋಕಲ್‌ ಸ್ಟೋರೇಜ್‌ ಮ್ಯಾನೇಜ್‌ ಡಿವೈಸ್‌ ಬಳಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ವಾಟ್ಸಾಪ್ ಸ್ಪೇಸ್‌ ಅನ್ನು ಹೇಗೆ ತೆರವುಗೊಳಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಸ್ಟೋರೇಜ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಸ್ಟೋರೇಜ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ?

ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ವಾಟ್ಸಾಪ್ ಸ್ಟೋರೇಜ್‌ ಅನ್ನು ಫ್ರೀ ಗೊಳಿಸುವುದು ಸಾಕಷ್ಟು ಸುಲಭವಾಗಿದ್ದು, ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ:1 ವಾಟ್ಸಾಪ್ ತೆರೆಯಿರಿ ಮತ್ತು ಮೇಲಿನ-ಬಲ ಮೂಲೆಯಲ್ಲಿರುವ 3-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ. ಇಲ್ಲಿ, "ಸೆಟ್ಟಿಂಗ್ಸ್‌" ತೆರೆಯಿರಿ ಮತ್ತು ನಂತರ "ಸ್ಟೋರೇಜ್‌ ಮತ್ತು ಡೇಟಾ" ಗೆ ಸರಿಸಿ.

ಹಂತ:2 ಇಲ್ಲಿ, " ಮ್ಯಾನೇಜ್‌ ಸ್ಟೋರೇಜ್‌" ತೆರೆಯಿರಿ ಮತ್ತು ನಿಮ್ಮ ವಾಟ್ಸಾಪ್ ಸ್ಟೋರೇಜ್‌ ಬಗ್ಗೆ ಸಂಪೂರ್ಣ ವಿವರಗಳನ್ನು ನೀವು ಕಾಣಬಹುದು. ನಿಮಗೆ ಕಳುಹಿಸಲಾದ ಎಲ್ಲಾ ರಿಪಿಟೇಡ್‌ ಇಮೇಜ್‌ಗಳು ಮತ್ತು ವೀಡಿಯೊಗಳನ್ನು ಹುಡುಕಲು "Forwarded many times" ಟ್ಯಾಪ್ ಮಾಡಿ.

ಹಂತ:3 ಈಗ, ನೀವು ಡಿಲೀಟ್‌ ಮಾಡಲು ಬಯಸುವ ಮೀಡಿಯಾ ಫೈಲ್‌ಗಳನ್ನು ಆಯ್ಕೆ ಮಾಡಿ, ಹಾಗೂ ಫಾರ್ವರ್ಡ್ ಮಾಡಿದ ಎಲ್ಲವನ್ನು ಏಕಕಾಲದಲ್ಲಿ ಅಳಿಸಲು, "Select all" ಟ್ಯಾಪ್ ಮಾಡಿ ಮತ್ತು "delete" ಬಟನ್ ಒತ್ತಿರಿ. ಈಗ ಡಿಲೀಟ್‌ ಆಗಲಿವೆ.

ಹಂತ:4 ನಂತರ "Larger than 5 MB" ವಿಭಾಗವನ್ನು ಟ್ಯಾಪ್ ಮಾಡಿ ಮತ್ತು ಫೈಲ್‌ಗಳನ್ನು ಪರಿಶೀಲಿಸಿ ಮತ್ತು ಅದಕ್ಕೆ ಅನುಗುಣವಾಗಿ ಡಿಲೀಟ್‌ ಮಾಡಿ. ಎಲ್ಲಾ ಫೈಲ್‌ಗಳನ್ನು ದೊಡ್ಡ ಗಾತ್ರದ ಕ್ರಮದಲ್ಲಿ ವಿಂಗಡಿಸಲಾಗುತ್ತದೆ.

ಹಂತ:5 ಒಂದು ವೇಳೆ, ನೀವು ನಿರ್ದಿಷ್ಟ ಚಾಟ್‌ನಿಂದ ವಾಟ್ಸಾಪ್ ಸ್ಟೋರೇಜ್‌ ಅನ್ನು ಮುಕ್ತಗೊಳಿಸಲು ಬಯಸಿದರೆ ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸಂಪರ್ಕವನ್ನು ಆಯ್ಕೆ ಮಾಡಿ. ಇಲ್ಲಿಂದ, ನೀವು ಒಂದೇ ಟ್ಯಾಪ್‌ನಲ್ಲಿ ಎಲ್ಲವನ್ನು ಪರಿಶೀಲಿಸಬಹುದು, ಆಯ್ಕೆ ಮಾಡಬಹುದು ಮತ್ತು ಡಿಲೀಟ್‌ ಮಾಡಬಹುದು.

ಸ್ಮಾರ್ಟ್‌ಫೋನ್‌ನಲ್ಲಿ

ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಸುಲಭವಾಗಿ ವಾಟ್ಸಾಪ್ ಸ್ಟೋರೇಜ್‌ ಅನ್ನು ಫ್ರೀ ಮಾಡಬಹುದಾಗಿದೆ. ಅಪಾರ ಪ್ರಮಾಣದ ಸ್ಟೋರೇಜ್‌ ತೆಗೆದುಕೊಳ್ಳುವ ಅಪೇಕ್ಷಿಸದ ಮೀಡಿಯಾ ಫೈಲ್‌ಗಳನ್ನ ಡಿಲೀಟ್‌ ಮಾಡುವುದು ಉತ್ತಮವಾಗಿದೆ. ಆದರಲ್ಲೂ ಕಡಿಮೆ ಸ್ಟೋರೇಜ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ವಿಶೇಷವಾಗಿ ಸಮಸ್ಯೆಯಾಗಿದೆ. ಆದ್ದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಸ್ಟೋರೇಜ್‌ನಲ್ಲಿ ಸಂಗ್ರಹವಾಗಿರುವ ಬೇಡವಾದ ಫೈಲ್‌ಗಳನ್ನು ಡಿಲೀಟ್‌ ಮಾಡಿ ನಿಮ್ಮ ವಾಟ್ಸಾಪ್‌ ಸ್ಪೇಸ್‌ ಅನ್ನು ಫ್ರೀ ಮಾಡಿ.

Most Read Articles
Best Mobiles in India

English summary
Free Up WhatsApp Storage on Your Smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X