59 ನಿಮಿಷಗಳಲ್ಲಿಯೇ 1 ಕೋಟಿ ರೂ. ಸಾಲ..! ನಮೋ ಸರ್ಕಾರ ಹೊಸ ಕೊಡುಗೆ..!
ನಿಮಗೆ ಸದ್ಯ ಬ್ಯುಸಿನೆಸ್ ಲೋನ್ ಅವಶ್ಯಕತೆಯಿದೆ. ವಿಳಂಬ ಹಾಗೂ ದೀರ್ಘಾವದಿ ಪ್ರಕ್ರಿಯೆಯಿಂದ ನಿಮ್ಮ ಕನಸಿನ ಸಾಕಾರಕ್ಕೆ ಒಂದಿಷ್ಟು ಪೆಟ್ಟು ಬಿದ್ದಿರಬಹುದು. ಆದರೆ, ಈಗ ಬ್ಯಾಂಕ್‌ಗೆ ಅಲೆಯುವುದು, ಸಿಬ್ಬಂದಿಗಳ ಜೊತೆ ಡೀಲ್, ಬಂಡಲ್ ಬಂಡಲ್ ಡಾಕ್ಯುಮೆಂಟ್‌ಗಳನ್ನು ನೀಡುವ ಪ್ರಕ್ರಿಯೆಯನ್ನು ಮರೆತುಬಿಡಿ. ಹೌದು, ಸರ್ಕಾರ ವ್ಯಾಪಾರ ಸಾಲ ನೀಡುವ ಪ್ರಕ್ರಿಯೆಯನ್ನು ಬಹಳ ಸರಳಗೊಳಿಸಿದ್ದು, ವೆಬ್‌ಸೈಟ್ ಒಂದನ್ನು ತೆರೆದಿದೆ. ಈ ವೆಬ್‌ಸೈಟ್‌ನಲ್ಲಿ ಒಂದು ಗಂಟೆ ಅಥವಾ 59 ನಿಮಿಷಗಳ ಒಳಗೆ ನಿಮಗೆ ಸಾಲ ದೊರೆಯುತ್ತದೆ.

ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಉದ್ಯಮ (ಎಂಎಸ್‌ಎಂಇ) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಎಂಎಸ್‌ಎಂಇಗಾಗಿ ಪ್ರಧಾನಿ ಮೋದಿಯ 12 ಅಂಶಗಳ ಕ್ರಿಯಾಯೋಜನೆಯಲ್ಲಿ 59 ನಿಮಿಷಗಳಲ್ಲಿಯೇ 1 ಕೋಟಿ ರೂ.ವರೆಗೂ ಸಾಲ ನೀಡುವ ಯೋಜನೆಯನ್ನು ಕೂಡ ಘೋಷಿಸಿದ್ದಾರೆ. ಸರ್ಕಾರಿ ವೆಬ್‌ಸೈಟ್ ಎಂಎಸ್‌ಎಂಇನ ಸ್ವಯಂಚಾಲಿತ ಪ್ರಕ್ರಿಯೆಯಲ್ಲಿ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಸಾಲಕ್ಕೆ ಇನ್ ಪ್ರಿನ್ಸಿಪಾಲ್ ಅನುಮೋದನೆ ಸಿಗುತ್ತದೆ.
ಸಂಪರ್ಕ ರಹಿತ ವಾಣಿಜ್ಯ ಸಾಲವು ಸದ್ಯಕ್ಕೆ 10 ಲಕ್ಷ ರೂ.ಯಿಂದ 1 ಕೋಟಿ ರೂ.ವರೆಗೂ ಸಾಲ ನೀಡುತ್ತದೆ. ಬಡ್ಡಿದರವು ಶೇ.8ರಿಂದ ಪ್ರಾರಂಭವಾಗುತ್ತದೆ. ಈ ಸಾಲವು ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ & ಸ್ನಾಲ್ ಎಂಟರ್‌ಪ್ರೈಸಸ್ (CGTMSE) ಗೆ ಸಂಪರ್ಕವಾಗಿರುವುದರಿಂದ ಕೊಲಾಟ್ರಲ್ ಕವರೇಜ್ ಕಡ್ಡಾಯವಲ್ಲ.
ಈ ವೆಬ್‌ಸೈಟ್ 20 ರಿಂದ 25 ದಿನಗಳ ಪ್ರಕ್ರಿಯೆಯನ್ನು 59 ನಿಮಿಷಕ್ಕೆ ಇಳಿಸಿದ್ದು, ಸಾಲಕ್ಕೆ ಅನುಮೋದನೆ ಆದ ಒಂದು ವಾರದಲ್ಲಿಯೇ ಹಣ ಬಂದು ನಿಮ್ಮ ಕೈ ಸೇರಲಿದೆ. ಎಂಎಸ್‌ಎಂಇ ವೆಬ್‌ಸೈಟ್‌ನಲ್ಲಿ ಹೇಗೆ ಸಾಲ ಪಡೆಯುವುದು ಅಂತೀರಾ..? ಈ ಕೆಳಗಿನ ಹಂತಗಳನ್ನು ಅನುಸರಿಸಿ ಒಂದು ಗಂಟೆಯೊಳಗೆ ಲೋನ್ ಅಪ್ರೂವಲ್ ಮಾಡ್ಕೊಳ್ಳಿ.

ನೊಂದಣಿ
ನಿಮ್ಮ ಹೆಸರು, ಒಟಿಪಿ ಸ್ವೀಕರಿಸುವ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಎಂಎಸ್‌ಎಂಇ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಆಗಿ.

ಪ್ರಶ್ನೆಗಳಿಗೆ ಉತ್ತರಿಸಿ
ಈ ಹಂತದಲ್ಲಿ ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಆ ಪ್ರಶ್ನೆಗಳು ಯಾವುವೆಂದರೆ ಜಿಎಸ್‌ಟಿ ಜೊತೆ ರಿಜಿಸ್ಟರ್ ಆಗಿದ್ದೀರಾ..? ದೈನಂದಿನವಾಗಿ ಜಿಎಸ್‌ಟಿ ರಿಟರ್ನ್ಸ್ ಫೈಲ್ ಮಾಡ್ತಿದ್ದೀರಾ..? ಎಂಬ ರೀತಿಯ ಪ್ರಶ್ನೆಗಳಿಗೆ ಉತ್ತರಿಸಬೇಕು.

ಜಿಎಸ್‌ಟಿ
ನಂತರ ಜಿಎಸ್‌ಟಿ ವಿವರಗಳನ್ನು ನೀವು ದಾಖಲಿಸಬೇಕಾಗುತ್ತದೆ.

ತೆರಿಗೆ ಮಾಹಿತಿ
ನಿಮ್ಮ ತೆರಿಗೆ ಮಾಹಿತಿಯನ್ನು ಎಕ್ಸ್‌ಎಮ್‌ಎಲ್ ಮಾದರಿಯಲ್ಲಿ ನೀವು ಅಪ್‌ಲೋಡ್ ಮಾಡಬೇಕಾಗುತ್ತದೆ. ಅಥವಾ ಪಾನ್ ಮಾಹಿತಿಯಿಂದ ಲಾಗಿನ್ ಆಗಬೇಕಾಗುತ್ತದೆ.

ಬ್ಯಾಂಕಿಂಗ್ ಮಾಹಿತಿ
ಈ ಹಂತದಲ್ಲಿ ನೀವು ಬ್ಯಾಂಕ್ ಮಾಹಿತಿ ಹಾಗೂ ಕಳೆದ 6 ತಿಂಗಳ ಬ್ಯಾಂಕಿಂಗ್ ವ್ಯವಹಾರದ ಸ್ಟೇಟ್‌ಮೆಂಟ್‌ನ್ನು ಅಪ್‌ಲೋಡ್ ಮಾಡಬೇಕು. ಅಥವಾ ನಿಮ್ಮ ನೆಟ್‌ಬ್ಯಾಂಕಿಂಗ್ ವಿವರಗಳಿಂದ ಲಾಗಿನ್ ಆಗಬಹುದು.

ಕಂಪನಿ ನಿರ್ದೇಶಕರು
ನಂತರ, ನಿಮ್ಮ ಕಂಪನಿಯ ನಿರ್ದೇಶಕರ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.

ಸಾಲದ ಮಾಹಿತಿ
ಈಗ ನೀವು ನಿಮ್ಮ ವ್ಯಾಪಾರದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಸಾಲದ ಉದ್ದೇಶ, ಹಿಂದಿನ ಸಾಲಗಳ ಬಗ್ಗೆ ಇಲ್ಲಿ ಮಾಹಿತಿ ನೀಡುವುದು ಅವಶ್ಯಕ.

ಬ್ಯಾಂಕ್ ಆಯ್ದುಕೊಳ್ಳಿ
ನಂತರ, ನಿಮಗೆ ಯಾವ ಬ್ಯಾಂಕ್‌ನಿಂದ ಸಾಲ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಈ ಯೋಜನೆಗೆ ಭಾರತದ ಪ್ರಮುಖ ಬ್ಯಾಂಕ್‌ಗಳೆಲ್ಲವೂ ಲಿಂಕ್ ಆಗಿದ್ದು, ನಿಮ್ಮ ಇಷ್ಟದ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ.

ಶುಲ್ಕ ಪಾವತಿಸಿ
ಈ ಹಂತದಲ್ಲಿ ನೀವು 1000 ರೂ + ಜಿಎಸ್‌ಟಿಯನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಅನುಮೋದನೆ ಪತ್ರ
ಕೊನೆಯ ಹಂತವಾಗಿ ನಿಮಗೆ ಸಾಲದ ಅಪ್ರೂವಲ್ ಪತ್ರ ದೊರೆಯುತ್ತದದೆ. ಡೌನ್‌ಲೋಡ್ ಮಾಡಿಕೊಳ್ಳಿ.
ನೆನಪಿನಲ್ಲಿಡಿ
ವೆಬ್‌ಸೈಟ್‌ಗೆ ಲಾಗಿನ್ ಆಗುವುದಕ್ಕಿಂತ ಮುಂಚೆ ಈ ಮಾಹಿತಿ ಹಾಗೂ ದಾಖಲೆಗಳನ್ನು ರೆಡಿಯಾಗಿಟ್ಟುಕೊಳ್ಳಿ.
1. ಜಿಎಸ್‌ಟಿ ಸಂಖ್ಯೆ
2. ಎಕ್ಸ್‌ಎಂಎಲ್ ಮಾದರಿಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಮಾಹಿತಿ ಅಥವಾ ಪಾನ್ ಮಾಹಿತಿ
3. ಪಿಡಿಎಫ್ ಮಾದರಿಯಲ್ಲಿ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ನೆಟ್‌ಬ್ಯಾಂಕಿಂಗ್ ವಿವರ
4. ಕಂಪನಿ ನಿರ್ದೇಶಕರ ಹಾಗೂ ಮಾಲೀಕತ್ವದ ವಿವರಗಳು
ಗಮನಿಸಬೇಕಾದ ಅಂಶವೆಂದರೆ, ವೆಬ್‌ಸೈಟ್ ನಿಮ್ಮ ಸಾಲಕ್ಕೆ ಅನುಮೋದನೆ ನೀಡಿದರು ಕೂಡ ಬ್ಯಾಂಕ್‌ಗಳು ಒಂದಿಷ್ಟು ಅಂಶಗಳ ಬಗ್ಗೆ ಮಾಹಿತಿ ಹಾಗೂ ದಾಖಲೆ ಕೇಳುತ್ತವೆ. ಲೋನ್ ಅಪ್ರೂವಲ್ ಆದರೂ ಹಣ ನಿಮ್ಮ ಕೈ ಸೇರೋದು ಸ್ವಲ್ಪ ತಡವಾಗುತ್ತದೆ.


Click it and Unblock the Notifications








