ಆಪಲ್ ಒನ್ ಪ್ಲ್ಯಾನ್‌ ಸಬ್‌ಸ್ಕ್ರೈಬ್‌ ಮಾಡುವುದು ಹೇಗೆ?

|

ಕೆಲ ದಿನಗಳ ಹಿಂದೆಯಷ್ಟೇ ಆಪಲ್‌ ಸಂಸ್ಥೆ ತನ್ನ ಬಹು ನಿರೀಕ್ಷಿತ ಆಪಲ್‌ ಒನ್‌ ಪ್ಲ್ಯಾನ್‌ ಅನ್ನು ಭಾರತದಲ್ಲಿ ಪರಿಚಯಿಸಿದೆ. ಈ ಪ್ಲ್ಯಾನ್‌ ನಲ್ಲಿ ಆಪಲ್ ನೀಡುವ ಕೆಲವು ವಿಭಿನ್ನ ಸೇವೆಗಳನ್ನು ಒಟ್ಟುಗೂಡಿಸಿದೆ. ಈ ಮೂಲಕ ವಿವಿಧ ಸೇವೆಗಳಿಗೆ ಪ್ರತ್ಯೇಕವಾಗಿ ಶುಲ್ಕ ಕಟ್ಟುವುದನ್ನು ತಡೆದಿದೆ. ಇದರಿಂದ ಬಳಕೆದಾರರಿಗೆ ಹಣವನ್ನು ಉಳಿಸುವುದಕ್ಕೆ ಅವಕಾಶ ನೀಡಿದೆ. ಇನ್ನು ಆಪಲ್‌ ಒನ್‌ ಪ್ಲ್ಯಾನ್‌ ಅನ್ನು ನಿಮ್ಮ ಐಫೋನ್‌ನಿಂದ ಆಪಲ್ ಒನ್ ಚಂದಾದಾರಿಕೆ ಯೋಜನೆಯನ್ನು ನೀವು ಹೇಗೆ ಸುಲಭವಾಗಿ ಖರೀದಿಸಬಹುದಾಗಿದೆ.

ಆಪಲ್‌ ಒನ್‌ ಪ್ಲ್ಯಾನ್

ಹೌದು, ಆಪಲ್‌ ಸಂಸ್ಥೆಯ ಆಪಲ್‌ ಒನ್‌ ಪ್ಲ್ಯಾನ್‌ ಅನ್ನು ನಿಮ್ಮ ಐಫೋನ್‌ ನಲ್ಲಿ ಸುಲಭವಾಗಿ ಖರೀದಿಸಬಹುದಾಗಿದ್ದು, ಆಕ್ಟಿವ್‌ ಮಾಡಬಹುದಾಗಿದೆ. ಈ ಮೂಲಕ ನಿಮ್ಮ ಐಫೋನ್‌ನಲ್ಲಿ ಆಪಲ್‌ ಒನ್‌ ಸೇವೆಗಳ ಪ್ರಯೋಜನಗಳನ್ನ ಪಡೆದುಕೊಳ್ಳಬಹುದಾಗಿದೆ. ಅಷ್ಟಕ್ಕೂ ಆಪಲ್‌ ಒನ್‌ ಪ್ಲ್ಯಾನ್‌ ಅನ್ನು ಐಫೋನ್‌ನಲ್ಲಿ ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌ಒನ್‌ ಪ್ಲ್ಯಾನ್

ಸದ್ಯ ಆಪಲ್‌ಒನ್‌ ಪ್ಲ್ಯಾನ್‌ನಲ್ಲಿ ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್ ಮತ್ತು ಐಕ್ಲೌಡ್ ಸ್ಟೋರೆಜ್‌ ನಂತಹ ಎಲ್ಲಾ ಸೇವೆಗಳನ್ನು ಒಂದೇ ಪ್ಲ್ಯಾನ್‌ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ನೀವು ಆಪಲ್ ಒನ್ ಅನ್ನು ಆರಿಸಿದರೆ ಈ ಸೇವೆಗಳಿಗೆ ನೀವು ಪ್ರತ್ಯೇಕವಾಗಿ ಚಂದಾದಾರಿಕೆಗಳನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಇನ್ನು ವೈಯುಕ್ತಿಕ ಪ್ಲ್ಯಾನ್‌ನಲ್ಲಿ, ಆಪಲ್ ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್ ಮತ್ತು 50GB ಐಕ್ಲೌಡ್ ಸ್ಟೋರೇಜ್‌ಗೆ ಚಂದಾದಾರಿಕೆಯನ್ನು ನೀಡಿದರೆ, ಫ್ಯಾಮಿಲಿ ಪ್ಲ್ಯಾನ್‌ ನಲ್ಲಿ 200GB ಐಕ್ಲೌಡ್ ಸಂಗ್ರಹಣೆಯನ್ನು ನೀಡುತ್ತದೆ ಮತ್ತು ಇತರ ಎಲ್ಲ ಪ್ರಯೋಜನಗಳು ಪರ್ಸನಲ್‌ ಪ್ಲ್ಯಾನ್‌ನಂತೆಯೇ ಇರುತ್ತವೆ. ಈ ಸೇವೆಗಳನ್ನು ಆರು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಆಪಲ್ ಒನ್ ಯೋಜನೆಗಳು

ಆಪಲ್ ಒನ್ ಯೋಜನೆಗಳು

ವೈಯಕ್ತಿಕ ಪ್ಲ್ಯಾನ್‌ - ತಿಂಗಳಿಗೆ 195 ರೂ: ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್, 50 ಜಿಬಿ ಐಕ್ಲೌಡ್ ಸ್ಟೋರೇಜ್‌
ಫ್ಯಾಮಿಲಿ ಪ್ಲ್ಯಾನ್‌ - ತಿಂಗಳಿಗೆ 365ರೂ : ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್, 200 ಜಿಬಿ ಐಕ್ಲೌಡ್ ಸ್ಟೋರೇಜ್‌

ಆಪಲ್ ಒನ್ ಪ್ಲ್ಯಾನ್‌ ಅನ್ನು ಪಡೆಯುವುದು ಹೇಗೆ?

ಆಪಲ್ ಒನ್ ಪ್ಲ್ಯಾನ್‌ ಅನ್ನು ಪಡೆಯುವುದು ಹೇಗೆ?

ಹಂತ 1: ಮೊದಲನೆಯದಾಗಿ, ನಿಮ್ಮ ಐಫೋನ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಈಗ, ನಿಮ್ಮ ಬಳಕೆದಾರ ಪ್ರೊಫೈಲ್ ಅನ್ನು ಟ್ಯಾಪ್ ಮಾಡಿ ಅದು ನಿಮ್ಮ ಆಪಲ್ ಐಡಿಗೆ ಸಂಬಂಧಿಸಿದ ವಿವರಗಳನ್ನು ತೋರಿಸುತ್ತದೆ.

ಹಂತ 3: ಆಯ್ಕೆಗಳಿಂದ, "Subscriptions" ಆಯ್ಕೆಮಾಡಿ.

ಹಂತ 4: ಇದೀಗ ಆಪಲ್ ಒನ್‌ಗಾಗಿ ಸೈನ್ ಅಪ್ ಮಾಡುವ ಪೇಜ್‌ ತೆರೆಯಲಿದೆ. ಇಲ್ಲಿ ಗೆಟ್ ಆಪಲ್ ಒನ್ ವಿಭಾಗದ ಅಡಿಯಲ್ಲಿ, "Try It Now" ಲಿಂಕ್ ಕ್ಲಿಕ್ ಮಾಡಿ.

ಹಂತ 5: ಈಗ, ನೀವು ಚಂದಾದಾರರಾಗಲು ಬಯಸುವ ಯೋಜನೆಯನ್ನು ಆರಿಸಿ. ನಂತರ, ಮುಂದುವರೆಯಲು "ಸ್ಟಾರ್ಟ್ ಫ್ರೀ ಟ್ರಯಲ್" ಬಟನ್ ಕ್ಲಿಕ್ ಮಾಡಿ.

ಹಂತ 6: ಪ್ರಕ್ರಿಯೆಯನ್ನು ದೃಡೀಕರಿಸುವ ಮೂಲಕ ಕ್ರಿಯೆಯನ್ನು ಖಚಿತಪಡಿಸಲು ನಿಮ್ಮನ್ನು ಈಗ ಕೇಳಲಾಗುತ್ತದೆ. ಪಾವತಿ-ಸಂಬಂಧಿತ ಸೇರಿದಂತೆ ಎಲ್ಲಾ ವಿವರಗಳನ್ನು ಪರಿಶೀಲಿಸಿ, ತದನಂತರ "Done" ಬಟನ್ ಕ್ಲಿಕ್ ಮಾಡಿ.

ಆಪಲ್ ಪ್ರಸ್ತುತ ಒಂದು ತಿಂಗಳ ಫ್ರೀ ಟ್ರಯಲ್ ಅನ್ನು ನೀಡುತ್ತಿದೆ ಎಂಬುದನ್ನು ಗಮನಿಸಬೇಕಾದ ಅಂಶವಾಗಿದ್ದು, ಪ್ರಾಯೋಗಿಕ ಅವಧಿ ಮುಗಿದ ನಂತರ, ಅದು ಚಂದಾದಾರಿಕೆಗಾಗಿ ನಿಮ್ಮ ಡೀಫಾಲ್ಟ್ ಪಾವತಿ ವಿಧಾನವನ್ನು ಸ್ವಯಂಚಾಲಿತವಾಗಿ ವಿಧಿಸುತ್ತದೆ.

Best Mobiles in India

Read more about:
English summary
how you can easily purchase the Apple One subscription plan from your iPhone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X