COVID-19 ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಹೀಗೆ ಮಾಡಿ!

|

ಪ್ರಸ್ತುತ ದಿನಗಳಲ್ಲಿ ಕೊರೊನಾ ಎರಡನೇ ಅಲೆ ದೇಶವನ್ನು ವ್ಯಾಪಕವಾಗಿ ಬಾಧಿಸುತ್ತಿದೆ. ಇದರ ನಡುವೆ ಕೋವಿಡ್‌ ವ್ಯಾಕ್ಸಿನೇಷನ್‌ ಅಬಿಯಾನ ಕೂಡ ದೇಶದಲ್ಲಿ ನಡೆಯುತ್ತಿದೆ. ಇನ್ನು ಕೋವಿಡ್‌ ಲಸಿಕೆ ಪಡೆದುಕೊಳ್ಳಲು ಕೋವಿನ್‌ ಪೋರ್ಟಲ್‌ಮೂಲಕ ಹೆಸರನ್ನು ನೋಂದಾಯಿಸಕೊಳ್ಳಬೇಕಾಗಿದೆ. ಹಾಗೆಯೇ ನೀವು ಕೋವಿಡ್‌ ವ್ಯಾಕ್ಸಿನೇಷನ್‌ ಎರಡನೇ ಡೋಸ್‌ ಅನ್ನು ಪಡೆದುಕೊಂಡ ನಂತರ COVID-19 ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಕೋವಿಡ್‌

ಹೌದು, ನೀವು ಕೋವಿಡ್‌ ವ್ಯಾಕ್ಸಿನ್‌ ತೆಗೆದುಕೊಂಡಿದ್ದು, ಕೋವಿಡ್‌ ಲಸಿಕೆ ತೆಗೆದುಕೊಂಡಿದ್ದಕ್ಕೆ ಪ್ರಮಾಣ ಪತ್ರವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದು COVID-19 ವಿರುದ್ಧ ವ್ಯಕ್ತಿಗೆ ಲಸಿಕೆ ನೀಡಲಾಗಿದೆ ಎಂಬುದಕ್ಕೆ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಭಾರತದ ವ್ಯಾಕ್ಸಿನೇಷನ್ ಡ್ರೈವ್ ಸದ್ಯ ಮೂರನೇ ಹಂತದಲ್ಲಿದೆ, ಇದರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಇನ್ನು ಎರಡು ಭಾರಿ ಲಸಿಕೆ ಪಡೆದ ನಂತರ ತಮ್ಮ COVID-19 ಲಸಿಕೆ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗಾದ್ರೆ ಕೋವಿಡ್‌-19 ವ್ಯಾಕ್ಸಿನ್‌ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

COVID-19

COVID-19 ಲಸಿಕೆ ಪ್ರಮಾಣಪತ್ರ ನೀವು ಎರಡು ಭಾರಿ ಲಸಿಕೆ ಪಡೆದುಕೊಂಡ ನಂತರವೇ ಡೌನ್‌ಲೋಡ್‌ ಮಾಡಬಹುದಾಗಿದೆ. ಸದ್ಯ ಭಾರತದಲ್ಲಿ ಹಲವು ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಎರಡನೇ ಡೋಸ್‌ ಪಡೆದುಕೊಳ್ಳಲು ಕಾಯುತ್ತಿದ್ದಾರೆ. ಎರಡು ಭಾರಿ ಲಸಿಕೆಯನ್ನು ಪಡೆದ ನಂತರ COVID-19 ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಆರೋಗ್ಯಾ ಸೇತು ಅಪ್ಲಿಕೇಶನ್‌ನಿಂದ ಅಥವಾ ಕೋವಿನ್ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ. ಈ ಎರಡು ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿರ್ವಹಿಸುತ್ತದೆ. ನೀವು ನಿಮ್ಮ ಕೋವಿಡ್‌ ವ್ಯಾಕ್ಸಿನ್‌ ಪಡೆದಿರುವ ಲಸಿಕೆ ಪ್ರಮಾಣ ಪತ್ರ ಡೌನ್‌ಲೋಡ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

COVID-19 ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ?

COVID-19 ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ?

ಹಂತ: 1 ಕೋವಿನ್ ವೆಬ್‌ಸೈಟ್‌ಗೆ ಹೋಗಿ,
ಹಂತ: 2 ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಒಟಿಪಿ ಬಳಸಿ ಸೈನ್ ಇನ್ ಮಾಡಿ.
ಹಂತ: 3 ಒಮ್ಮೆ ಲಾಗ್ ಇನ್ ಮಾಡಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ನೋಂದಾಯಿಸಲಾದ ಎಲ್ಲ ಸದಸ್ಯರ ಪಟ್ಟಿ ಕಾಣಿಸುತ್ತದೆ. ಎರಡೂ ಭಾರಿ ಲಸಿಕೆಗಳನ್ನು ಪಡೆದವರು ಹಸಿರು ಬಣ್ಣದಲ್ಲಿ ಪ್ಲ್ಯಾಸ್ಟೆಡ್ ಮಾಡಿದ ‘ವ್ಯಾಕ್ಸಿನೇಟೆಡ್' ಬ್ಯಾನರ್‌ ಕಾಣಲಿದೆ.
ಹಂತ: 4 ‘ಪ್ರಮಾಣಪತ್ರ' ಎಂಬ ಬಟನ್ ಬಲಭಾಗದಲ್ಲಿ ಕಾಣಲಿದೆ. ಅದನ್ನು ಕ್ಲಿಕ್ ಮಾಡಿದಾಗ, ಪ್ರಮಾಣಪತ್ರದ ಪಿಡಿಎಫ್ ಹೊಸ ಟ್ಯಾಬ್ / ವಿಂಡೋದಲ್ಲಿ ತೆರೆಯಬೇಕು. ನಂತರ ನೀವು ಬ್ರೌಸರ್ ವಿಂಡೋದ ಮೇಲಿನ ಬಲ ಮೂಲೆಯಲ್ಲಿರುವ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಿಡಿಎಫ್ ಅನ್ನು ಸೇವ್‌ ಮಾಡಬಹುದು.

ಇದಲ್ಲದೆ

ಹಂತ: 5 ಇದಲ್ಲದೆ ನೀವು ಆರೋಗ್ಯಾ ಸೇತು ಅಪ್ಲಿಕೇಶನ್‌ಗೆ ಹೋಗಬಹುದು ಮತ್ತು ಕೋವಿನ್ ಟ್ಯಾಬ್> ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಕ್ಲಿಕ್ ಮಾಡಿ.
ಹಂತ: 6 ನಿಮ್ಮ ಪಟ್ಟಿಯಲ್ಲಿ ನೋಂದಾಯಿತ ಸದಸ್ಯರ ಹೆಸರಿನ ಪಕ್ಕದಲ್ಲಿಯೇ ಕೋವಿನ್ ಪೋರ್ಟಲ್‌ನಲ್ಲಿ ಕಂಡುಬರುವ ಫಲಾನುಭವಿ ಐಡಿಯನ್ನು ನಮೂದಿಸಿ. COVID-19 ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ‘ಪ್ರಮಾಣಪತ್ರ ಪಡೆಯಿರಿ' ಮತ್ತು ನಂತರ ‘ಡೌನ್‌ಲೋಡ್ ಪಿಡಿಎಫ್' ಕ್ಲಿಕ್ ಮಾಡಿ.

ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

Read more about:
English summary
COVID-19 vaccine certificate can be downloaded by any person who has had both the vaccine shots administered.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X