Home
ಟೆಕ್ ನೌಕರಿ

ವಾಟ್ಸ್‌ಆಪ್‌ ಬ್ಲಾಕ್‌ ಆಗಿದೆಯೇ..? ನಿಮ್ಮ ಚಾಟ್‌ ಡಿಲೀಟ್‌ ಆಗುವ ಚಿಂತೆ ಬೇಡ..?

By Gizbot Bureau

ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್‌ಆಪ್‌ನ್ನು ವಿಶ್ವದಾದ್ಯಂತ ನೂರು ಕೋಟಿಗೂ ಹೆಚ್ಚು ಜನ ಬಳಸುತ್ತಿದ್ದು, ಜನಪ್ರಿಯ ಇನ್‌ಸ್ಟಾಂಟ್‌ ಮೆಸೇಜಿಂಗ್‌ ಆಪ್‌ ಆಗಿ ವಾಟ್ಸ್‌ಆಪ್ ಹೊರಹೊಮ್ಮಿದೆ. ಭಾರೀ ಸಂಖ್ಯೆಯ ಬಳಕೆದಾರರನ್ನು ವಾಟ್ಸ್‌ಆಪ್‌ ಹೊಂದಿರುವುದನ್ನು ಗಮನದಲ್ಲಿಟ್ಟುಕೊಂಡು ಹಲವು ನಕಲಿ ಆಪ್‌ಗಳು ಮಾರುಕಟ್ಟೆಯ ಕದ ತಟ್ಟಿವೆ.

ವಾಟ್ಸ್‌ಆಪ್‌ ಬ್ಲಾಕ್‌ ಆಗಿದೆಯೇ..? ನಿಮ್ಮ ಚಾಟ್‌ ಡಿಲೀಟ್‌ ಆಗುವ ಚಿಂತೆ ಬೇಡ..?

ಕೆಲ ಬಳಕೆದಾರರು ಮೂಲ ವಾಟ್ಸ್‌ಆಪ್‌ಗಿಂತ ನಕಲಿ ಆಪ್‌ಗಳಿಗೆ ಆದ್ಯತೆ ನೀಡುತ್ತಾರೆ. ಏಕೆಂದರೆ, ನಕಲಿ ಆಪ್‌ಗಳಲ್ಲಿ ಮೂಲ ವಾಟ್ಸ್‌ಆಪ್‌ಗಿಂತ ಹೆಚ್ಚಿನ ಕಾರ್ಯಗಳು ಹಾಗೂ ಫೀಚರ್‌ಗಳು ಬಳಕೆದಾರರಿಗೆ ಸಿಗುತ್ತಿವೆ. ಆದಾಗ್ಯೂ, ವಾಟ್ಸ್‌ಆಪ್ ಇಂತಹ ಥರ್ಡ್‌ ಪಾರ್ಟಿ ಆಪ್‌ಗಳನ್ನು ಬೆಂಬಲಿಸುವುದಿಲ್ಲ. ಏಕೆಂದರೆ ನಕಲಿ ಆಪ್‌ಗಳಲ್ಲಿ ಭದ್ರತಾ ಲೋಪಗಳು ಹೆಚ್ಚಿದ್ದು, ಸುರಕ್ಷತೆಯ ದೃಷ್ಟಿಯಿಂದ ನಕಲಿ ಆಪ್‌ ಬಳಸದಂತೆ ಬಳಕೆದಾರರನ್ನು ತಡೆಯಲು ಬಯಸುತ್ತದೆ.

ಥರ್ಡ್‌ ಪಾರ್ಟಿ ಆಪ್‌ಗಳು

ಥರ್ಡ್‌ ಪಾರ್ಟಿ ಆಪ್‌ಗಳು

ಲಭ್ಯವಿರುವ ಥರ್ಡ್‌ ಪಾರ್ಟಿ ಆಪ್‌ಗಳಲ್ಲಿ GBWhatsapp ಮತ್ತು Whatsapp+ ಜನಪ್ರಿಯ ಆಪ್‌ಗಳಾಗಿದ್ದು, ಇವು ಬಳಕೆದಾರರ ಗ್ರಾಹಕೀಕರಣ ಮತ್ತು ಹೆಚ್ಚುವರಿ ಕ್ರಿಯಾತ್ಮಕತೆಗೆ ಆದ್ಯತೆ ನೀಡುತ್ತವೆ. ಥರ್ಡ್‌ ಪಾರ್ಟಿ ಆಪ್‌ಗಳನ್ನು ವಾಟ್ಸ್ಆಪ್‌ ಏಕೆ ಬೆಂಬಲಿಸುವುದಿಲ್ಲ ಮತ್ತು ನಕಲಿ ಆಪ್‌ಗಳು ಸೇವಾ ನಿಯಮಗಳನ್ನು ಹೇಗೆ ಉಲ್ಲಂಘಿಸುತ್ತವೆ ಎಂಬುದನ್ನು ವಾಟ್ಸ್‌ಆಪ್‌ ವಿವರಿಸುತ್ತದೆ. ಪ್ರಮುಖವಾಗಿ, ಥರ್ಡ್‌ ಪಾರ್ಟಿ ಆಪ್‌ಗಳಿಗೆ ಭದ್ರತಾ ಪರವಾನಗಿಗಳನ್ನು ಮೌಲ್ಯೀಕರಿಸಲು ಯಾವುದೇ ಮಾರ್ಗವಿಲ್ಲ. ಆದ್ದರಿಂದ, ಪ್ರಮುಖ ಭದ್ರತಾ ಸಮಸ್ಯೆಗಳು ಸೃಷ್ಟಿಯಾಗುವ ಆತಂಕವಿದೆ.

ಭದ್ರತಾ ಸಮಸ್ಯೆ

ಭದ್ರತಾ ಸಮಸ್ಯೆ

ನಾವಿನ್ನೂ ಗರಿಷ್ಠ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳುವ ಯತ್ನದಲ್ಲಿರುವುದರಿಂದ ನಿಮ್ಮ ಟೆಕ್ಸ್ಟ್‌ ಮೆಸೇಜ್‌ಗಳು ಖಾಸಗಿ ಮತ್ತು ಸುರಕ್ಷಿತವಾಗಿರಿಸಿಕೊಳ್ಳುವುದು ಅಗತ್ಯ ಮತ್ತು ಅವಶ್ಯಕ. ಆದಾಗ್ಯೂ, ನಿಮ್ಮ ಡೇಟಾವನ್ನು ಥರ್ಡ್‌ ಪಾರ್ಟಿ ಸರ್ವರ್ ಹೇಗೆ ನಿರ್ವಹಿಸುತ್ತದೆ ಅಥವಾ ನಿಮ್ಮ ಡೇಟಾ ಎನ್‌ಕ್ರಿಪ್ಟ್‌ ಮಾಡಲಾಗಿದೆಯೇ ಎಂದು ಖಾತರಿಪಡಿಸಲಾಗುವುದಿಲ್ಲ. ಇದಲ್ಲದೇ, ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ ಹೊಣೆಗಾರಿಕೆಯನ್ನು ಸರಿಪಡಿಸುವುದು ಕಠಿಣವಾಗುತ್ತದೆ.

ನಕಲಿ ಆಪ್‌ಗಳ ಬಳಕೆ ನಿಷೇಧ

ನಕಲಿ ಆಪ್‌ಗಳ ಬಳಕೆ ನಿಷೇಧ

ಭದ್ರತಾ ಸಮಸ್ಯೆಗಳು ಸೃಷ್ಟಿಯಾಗುವ ಕಾರಣದಿಂದ ಅನಧಿಕೃತ ಆಪ್‌ಗಳನ್ನು ಬಳಸಲು ಬಳಕೆದಾರರಿಗೆ ವಾಟ್ಸ್‌ಆಪ್‌ ನಿರ್ಬಂಧ ಹೇರುತ್ತಿದ್ದು, ಅನಧಿಕೃತ ಆವೃತ್ತಿಯನ್ನು ಬಳಸುತ್ತಿರುವ ಬಳಕೆದಾರರನ್ನು ಬ್ಲಾಕ್‌ ಮಾಡುತ್ತಿದೆ. ಥರ್ಡ್‌ ಪಾರ್ಟಿ ಆಪ್‌ಗಳಿಂದ ನಿಮ್ಮ ವಾಟ್ಸ್‌ಆಪ್ ಬ್ಲಾಕ್‌ ಆಗಿದ್ದರೆ, ನಿಮ್ಮ ಯಾವುದೇ ಡೇಟಾ ಅಥವಾ ಪ್ರಮುಖ ಚಾಟ್‌ ಕಳೆದುಕೊಳ್ಳದೆ ನೀವು ಮೂಲ ವಾಟ್ಸ್‌ಆಪ್‌ಗೆ ಹೋಗಬಹುದಾಗಿದೆ. ಅದು ಹೇಗೆ ಅಂತೀರಾ ಮುಂದೆ ನೋಡಿ..

ಹೇಗೆ ಅಂತೀರಾ..?

ಹೇಗೆ ಅಂತೀರಾ..?

- ಮೊದಲು ಥರ್ಡ್‌ ಪಾರ್ಟಿ ವಾಟ್ಸ್‌ಆಪ್‌ನ ಚಾಟ್ ಸೆಟ್ಟಿಂಗ್ಸ್‌ಗೆ ಹೋಗಿ.

- ನಂತರ, ಬ್ಯಾಕಪ್‌ ಚಾಟ್‌ ಆಯ್ಕೆ ಮಾಡಿ, ಈ ಹಂತ ಚಾಟ್‌ಗಳನ್ನು ಸ್ಥಳೀಯವಾಗಿ ನಕಲೀಕರಿಸುತ್ತದೆ.

- ಬಳಿಕ, ಫೈಲ್‌ ಮ್ಯಾನೇಜರ್‌ಗೆ ಹೋಗಿ. ಅಲ್ಲಿ GBWhatsApp ಫೋಲ್ಡರ್ ಹುಡುಕಿ, ಆ ಫೈಲ್‌ನ್ನು WhatsApp ಎಂದು ಮರುನಾಮಕರಣ ಮಾಡಿ.

- ಈಗ ಥರ್ಡ್‌ ಪಾರ್ಟಿ ವಾಟ್ಸ್‌ಆಪ್‌ನ್ನು ಅನ್‌ಇನ್‌ಸ್ಟಾಲ್‌ ಮಾಡಿ.

- ನಂತರ, ಅಧಿಕೃತ ವಾಟ್ಸ್‌ಆಪ್‌ ಡೌನ್‌ಲೋಡ್‌ ಮಾಡಿ.

- ನೀವು ಇನ್‌ಸ್ಟಾಲ್‌ ಮಾಡುವಾಗ, ನಿಮ್ಮ ಮುಂದೆ 'ಬ್ಯಾಕಪ್‌ ಕಂಡುಬಂದಿದೆ, ನೀವು ಪುನಃ ಸ್ಥಾಪಿಸಲು ಬಯಸುವಿರಾ..?' (Backup found. Do you wnat to restore?) ಕಾಣುತ್ತದೆ.

- ಬಳಿಕ, ಹೌದು (Yes) ಕ್ಲಿಕ್ ಮಾಡಿ, ಚಾಟ್‌ಗಳನ್ನು ಮರುಸ್ಥಾಪಿಸಲು ಅನುಮತಿಸಿ. ಈ ಪ್ರಕ್ರಿಯೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ಈ ಪ್ರಕ್ರಿಯೆ ಇತರ ನಕಲಿ ಆಪ್‌ಗಳಿಗೂ ಸಾಕಷ್ಟು ಹೋಲಿಕೆಯಾಗುತ್ತದೆ. ನಿಮ್ಮ ವಾಟ್ಸ್‌ಆಪ್‌ ಅಕೌಂಟ್‌ನ ಶಾಶ್ವತ ನಿಷೇಧವನ್ನು ತಪ್ಪಿಸಲು ಹಾಗೂ ನಿಮ್ಮ ಡೇಟಾ ಕಳೆದುಕೊಳ್ಳುವುದನ್ನು ತಪ್ಪಿಸಲು ಅಧಿಕೃತ ವಾಟ್ಸ್‌ಆಪ್ ಆವೃತ್ತಿಗೆ ಬದಲಾಗುವುದು ಅನಿವಾರ್ಯ ಹಾಗೂ ಸೂಕ್ತವಾಗಿದೆ.

Best Mobiles in India

English summary
How To Get Data From A Blocked WhatsApp Account
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+