Home
ಟೆಕ್ ನೌಕರಿ

ಜಿಯೋ ಫೈಬರ್‌ ಜೊತೆಗೆ ಉಚಿತ '4ಕೆ' ಸ್ಮಾರ್ಟ್‌ಟಿವಿ ಪಡೆಯುವುದು ಹೇಗೆ?

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ತನ್ನ ಜಿಯೋ ಫೈಬರ್‌ ಬಗೆಗಿನ ಸಂಪೂರ್ಣ ವಿವರಗಳನ್ನು ಮತ್ತು ಬಹುನಿರೀಕ್ಷಿತ ಸ್ವಾಗತ ಕೊಡುಗೆಯನ್ನು ಬಹಿರಂಗಪಡಿಸಿದೆ. ತಿಂಗಳಿಗೆ ಕನಿಷ್ಟ 699 ರೂ. ನಿಂದ ಆರಂಭಗೊಂಡು 8,499 ರೂ. ವರೆಗಿನ ಒಟ್ಟು ಆರು ಜಿಯೋ ಫೈಬರ್ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿರುವ ಕಂಪೆನಿ, ಇವುಗಳ ಜೊತೆಗೆ ಜಿಯೋ ವೆಲ್‌ಕಮ್ ಆಫರ್ ಮತ್ತು ಉಚಿತ 4ಕೆ ಟೆವಿಯನ್ನು ಒದಗಿಸುವ ಯೋಜನೆಗಳ ಮೂಲಕ ಹೆಚ್ಚೆಚ್ಚು ಗ್ರಾಹಕರಿಗೆ ಗಾಳ ಹಾಕುವ ಪ್ರಯತ್ನ ಮಾಡಿದೆ.

ಜಿಯೋ ವೆಲ್ಕಮ್ ಆಫರ್

ಜಿಯೋ ವೆಲ್ಕಮ್ ಆಫರ್ ಎಂಬುದು ''ಜಿಯೋ ಫಾರೆವರ್''' ವಾರ್ಷಿಕ ಯೋಜನೆಗಳನ್ನು ಕರೆಯುತ್ತಿರುವ ವಾರ್ಷಿಕ ಬ್ರಾಡ್‌ಬ್ಯಾಂಡ್ ಯೋಜನೆಗಳಾಗಿವೆ. 699 ರೂ.ನಿಂದ 8,499 ರೂ.ವರೆಗಿನ ಎಲ್ಲಾ ಜಿಯೋ ಫೈಬರ್‌ ಯೋಜನೆಗಳು ಕೂಡ ಈ ಜಿಯೋ ವೆಲ್ಕಮ್ ಆಫರ್ ಲಭ್ಯವಿದೆ. ಈ ಪ್ರಸ್ತಾಪದ ಅಡಿಯಲ್ಲಿ, ಎಲ್ಲಾ ಯೋಜನೆಗಳು ಡಬಲ್ ಡೇಟಾ ಲಾಭ, ಒಟಿಟಿ ಅಪ್ಲಿಕೇಶನ್‌ಗಳಿಗೆ ವಾರ್ಷಿಕ ಚಂದಾದಾರಿಕೆ ಮತ್ತು ಎರಡು ತಿಂಗಳ ಹೆಚ್ಚುವರಿ ಸೇವೆಯೊಂದಿಗೆ ಬರುತ್ತದೆ. ಅಂದರೆ, ಎರಡು ತಿಂಗಳು ಉಚಿತವಾಗಿರುತ್ತದೆ.

ವಾರ್ಷಿಕ ಯೋಜನೆ

ಉದಾಹರಣೆಗೆ ನೀವು ಪ್ರವೇಶ ಮಟ್ಟದ 699.ರೂ.ಗಳ ಜಿಯೋ ಫೈಬರ್ ವಾರ್ಷಿಕ ಯೋಜನೆ ಹಾಕಿಸಿಕೊಂಡರೆ, ಈ ಯೋಜನೆಗೆ ನೀವು 8,398 ರೂ.ಪಾವತಿಸಬೇಕಾಗುತ್ತದೆ ಮತ್ತು ಇದು ಒಟ್ಟು 2400GB ಅಥವಾ 2.4TB ಡೇಟಾವನ್ನು ನೀಡುತ್ತದೆ. ಆದರೆ, ನೀವು ಜಿಯೋ ವೆಲ್ಕಮ್ ಆಫರ್ ಪಡೆಯುವುದರಿಂದ ಕಂಪನಿಯು 1,398 ರೂ ಮೌಲ್ಯದ ಎರಡು ತಿಂಗಳ ಹೆಚ್ಚುವರಿ ಸೇವೆಯನ್ನು ಉಚಿತವಾಗಿ ನೀಡುತ್ತದೆ. ಗ್ರಾಹಕರು 2,999 ರೂಪಾಯಿ ಮೌಲ್ಯದ ಮ್ಯೂಸ್ 2- 6 ಡಬ್ಲ್ಯೂ ಬ್ಲೂಟೂತ್ ಸ್ಪೀಕರ್ ಅನ್ನು ಸಹ ಉಚಿತವಾಗಿ ಪಡೆಯುತ್ತಾರೆ.

ಉಚಿತ ಟಿವಿ

ಹೀಗೆಯೇ ನೀವು ಹೆಚ್ಚು ಮೊತ್ತದ ಫೈಬರ್ ವಾರ್ಷಿಕ ಯೋಜನೆ ಹಾಕಿಸಿಕೊಂಡು 4ಕೆ ಟೆವಿಯನ್ನು ಪಡೆಯಬಹುದಾಗಿದೆ. ಜಿಯೋ ಫೈಬರ್ ಡೈಮಂಡ್ ಯೋಜನೆ ಮೇಲ್ಪಟ್ಟ ಮತ್ತು ಪ್ಲಾಟಿನಂ ವಾರ್ಷಿಕ ಯೋಜನೆ ಚಂದಾದಾರರಿಗೆ ಉಚಿತ ಟಿವಿ ಸಿಗುತ್ತದೆ (ಪ್ರತಿ ಯೋಜನೆಗೆ ವಿಭಿನ್ನ ಪರದೆಯ ಗಾತ್ರ). ಗೋಲ್ಡ್ ಪ್ಲಾನ್ ಚಂದಾದಾರರು 12,990 ರೂ. ಬೆಲೆಯ 24 ಇಂಚಿನ ಎಚ್‌ಡಿ ಟಿವಿಯನ್ನು ಮಾತ್ರ ಪಡೆಯುತ್ತಾರೆ. ಆದರೆ, ಈ ಟಿವಿ ಪಡೆಯಲು ಎರಡು ವರ್ಷದ ಯೋಜನೆಯನ್ನು ಒಟ್ಟಿಗೆ ಪಡೆಯಬೇಕು. ಅಂದರೆ, ನೀವು ಇದಕ್ಕಾಗಿ 31,000 ರೂ. ಪಾವತಿಸಬೇಕು.!

ಎಚ್‌ಡಿ ಟಿವಿ

ನೀವೇನಾದರೂ ಫೈಬರ್ ಜೊತೆಗೆ 108 ಇಂಚಿನ ಎಚ್‌ಡಿ ಟಿವಿಯನ್ನು ಉಚಿತವಾಗಿ ಪಡೆಯಬೇಕು ಎಂದರೆ, ನೀವು ಜಿಯೋ ಫೈಬರ್ ವಾರ್ಷಿಕ ಯೋಜನೆಯ ಟೈಟಾನಿಯಂ ಯೋಜನೆಯನ್ನು ಪಡೆಯಬೇಕು. ಪ್ರತಿ ತಿಂಗಳು 8,499 ರೂಪಾಯಿಗಳ ಬೆಲೆ ಹೊಂದಿರುವ ಈ ಯೋಜನೆಯ ವಾರ್ಷಿಕ ಮೊತ್ತ 101,988 ರೂಪಾಯಿಗಳನ್ನು ಪಾವತಿಸಬೇಕು. ನೀವು ಇಷ್ಟು ಹಣವನ್ನು ಪಾವತಿಸಿ ಯೋಜನೆಗಳನ್ನು ಪಡೆದರೆ ನಿಮಗೆ 44,990 ರೂ. ಬೆಲೆಯ ಉಚಿತ ಸಿಗಲಿದೆ ಮತ್ತು ಒಂದು ಜಿಬಿಪಿಎಸ್ ವೇಗದಲ್ಲಿ ವರ್ಷದಲ್ಲಿ 60 ಸಾವಿರ ಜಿಬಿ ಡೇಟಾ ದೊರೆಯಲಿದೆ.

ಬಿಸಿತುಪ್ಪದಂತೆ ಕಾಣುತ್ತಿದೆ

ಜಿಯೋ ಫೈಬರ್ ಗೋಲ್ಡ್ ಮೇಲ್ಪಟ್ಟ ಯಾವುದೇ ವಾರ್ಷಿಕ ಯೋಜನೆಗೆ ಉಚಿತ ಟಿವಿಗಳನ್ನು ಜಿಯೋ ನೀಡುತ್ತಿದೆ. ಆದರೆ, ಜಿಯೋ ನೀಡುವ ಟಿವಿ ಯಾವ ಬ್ರ್ಯಾಂಡ್ ಟಿವಿ ಎಂಬುದನ್ನು ಕಂಪೆನಿ ತಿಳಿಸಿಲ್ಲ. ಇನ್ನು ನೀವು ಕನಿಷ್ಟ 24 ಇಂಚಿನ ಎಚ್‌ಡಿ ಟಿವಿಯನ್ನು ಪಡೆಯಬೇಕೆಂದರೂ ಸಹ 31,000 ರೂ. ಪಾವತಿಸಿ ಜಿಯೋ ಫೈಬರ್ ರೀಚಾರ್ಜ್ ಮಾಡಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಇದು ಇತ್ತ ನುಂಗಲೂ ಆಗದ ಅತ್ತ ಉಗಿಯಲು ಆಗದ ಬಿಸಿತುಪ್ಪದಂತೆ ಕಾಣುತ್ತಿದೆ. ವರ್ಷಪೂರ್ತಿ ಬ್ರ್ಯಾಂಡ್‌ಬ್ಯಾಂಡ್ ಬಳಕೆದಾರರಿಗಷ್ಟೇ ಇದರ ಪ್ರಯೋಜನವಾಗಲಿದೆ.

Best Mobiles in India

English summary
Reliance Jio Welcome Offer provides a user with free 4K Television- an offer which we haven't heard before from any broadband service provider. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+