Home
ಟೆಕ್ ನೌಕರಿ

ಹೊಸ ಎಲ್ ಪಿಜಿ ಗ್ಯಾಸ್ ಕನೆಕ್ಷನ್ ಪಡೆಯಲು ಆನ್ ಲೈನ್ ನಲ್ಲೇ ಬುಕ್ ಮಾಡಿ

By Gizbot Bureau

ಹೊಸ ಎಲ್ ಪಿಜಿ ಕನೆಕ್ಷನ್ ಪಡೆಯುವುದು ಕಷ್ಟಕರವಾಗಿರುವ ಕೆಲಸ ಎಂದು ಎಲ್ಲರೂ ಭಾವಿಸಿದ್ದಾರೆ. ಹತ್ತಿರದ ಎಲ್ ಪಿಜಿ ಡೀಲರ್ ಶಿಪ್ ಬಳಿ ತೆರಳಬೇಕು, ಕ್ಯೂ ನಲ್ಲಿ ನಿಂತು ಎಲ್ಲಾ ಅಗತ್ಯ ಡಾಕ್ಯುಮೆಂಟ್ ಗಳನ್ನು ಸಲ್ಲಿಸಬೇಕು, ಹಣವನ್ನು ಪಾವತಿ ಮಾಡಬೇಕು.ನಂತರ ಅವರು ಕನೆಕ್ಷನ್ ನೀಡುವವರೆಗೂ ಫಾಲೋ ಅಪ್ ಮಾಡುತ್ತಲೇ ಇರಬೇಕು ಎಂದು ಎಲ್ಲರೂ ಅಂದುಕೊಂಡಿದ್ದಾರೆ.

ಪ್ರಮುಖ ಮೂರು ಎಲ್ ಪಿಜಿ

ಆದರೆ ಇದೀಗ ಪ್ರಮುಖ ಮೂರು ಎಲ್ ಪಿಸಿ ಸಪ್ಲೈಯರ್ ಗಳ ವಿಚಾರದಲ್ಲಿ ಹೊಸ ಕನೆಕ್ಷನ್ ಪಡೆಯುವುದು ಬಹಳ ಸುಲಭವಾಗಿದೆ. ಡಿಜಿಟಲ್ ವ್ಯವಸ್ಥೆ ಇದೀಗ ಹೊಸ ಎಲ್ ಪಿಜಿ ಕನೆಕ್ಷನ್ ಪಡೆಯುವುದನ್ನು ಸರಳಗೊಳಿಸಿದೆ.ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಮತ್ತು ಹೆಚ್ ಪಿ ಗ್ಯಾಸ್ ಗಳು ಇದೀಗ ತಮ್ಮ ಸೇವೆಯನ್ನು ಆನ್ ಲೈನ್ ಲಭ್ಯಗೊಳಿಸಿವೆ ಮತ್ತು ಆಪ್ ನ್ನು ಬಿಡುಗಡೆಗೊಳಿಸಿದ್ದು ಬಳಕೆದಾರರು ಹೊಸ ಎಲ್ ಪಿಜಿ ಗ್ಯಾಸ್ ಕನೆಕ್ಷನ್ ಗಾಗಿ ಆನ್ ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಬುಕ್ಕಿಂಗ್, ರೀಫಿಲ್ ಮತ್ತು ಇತರೆ ಯಾವುದೇ ಗ್ಯಾಸ್ ಸಂಬಂಧಿತ ಸೇವೆಯನ್ನು ಈ ಆಪ್ ನಲ್ಲಿ ನೋಡುವುದಕ್ಕೆ ಅವಕಾಶವಿರುತ್ತದೆ.

ಎಲ್ ಪಿಜಿ ಕನೆಕ್ಷನ್

ಒಂದು ವೇಳೆ ನೀವು ಕೂಡ ಹೊಸ ಎಲ್ ಪಿಜಿ ಕನೆಕ್ಷನ್ ಪಡೆಯಲು ಬಯಸುತ್ತಿದ್ದರೆ ಸ್ಥಳೀಯ ಡೀಲರ್ ಬಳಿ ತೆರಳಿ ಘಂಟೆಗಟ್ಟಲೆ ಕಾಯುವ ತೊಂದರೆಯನ್ನು ತೆಗೆದುಕೊಳ್ಳಬೇಡಿ. ಆನ್ ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಿ ಗ್ಯಾಸ್ ನಿಮ್ಮ ಮನೆಯಂಗಳಕ್ಕೆ ತಲುಪುತ್ತದೆ. ಹೇಗೆ ಎಂದು ಕೇಳುತ್ತಿದ್ದೀರಾ? ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಬಳಕೆದಾರರು

ಈ ಹಂತಗಳು ಬಹಳ ಸುಲಭವಾಗಿದೆ ಮತ್ತು ಎಲ್ಲಾ ಬಳಕೆದಾರರು ನಿಗದಿತ ಎಲ್ ಪಿಜಿ ಸಪ್ಲೈಯರ್ ಗಳ ಆನ್ ಲೈನ್ ಪೋರ್ಟಲ್ ಗೆ ತೆರಳಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಹೊಸ ಕನೆಕ್ಷನ್ ಪಡೆದುಕೊಳ್ಳುವುದಕ್ಕೆ ಇರುವ ಹಂತಗಳು :

ಹೊಸ ಕನೆಕ್ಷನ್ ಪಡೆದುಕೊಳ್ಳುವುದಕ್ಕೆ ಇರುವ ಹಂತಗಳು :

1.ನಿಗದಿತ ಎಲ್ ಪಿಜಿ ಸಪ್ಲೈಯರ್ ಗಳ ಆನ್ ಲೈನ್ ಪೋರ್ಟಲ್ ನ್ನು ತೆರೆಯಿರಿ

ಹೆಚ್ ಪಿ ಗ್ಯಾಸ್: https://myhpgas.in/myHPGas/NewConsumerRegistration.aspx

ಭಾರತ್ ಗ್ಯಾಸ್: https://my.ebharatgas.com/LPGServices/ApplyNewConnection

ಇಂಡೇನ್ ಗ್ಯಾಸ್: https://cx.indianoil.in/webcenter/portal/Customer?_afrRedirect=13915242512181853

2.ಸರ್ಚ್ ಆಯ್ಕೆಯನ್ನು ಬಳಸಿ ಇಲ್ಲಿ ನೀವು ಹತ್ತಿರದ ಡಿಸ್ಟ್ರಿಬ್ಯೂಟರ್ ಯಾರಿದ್ದಾರೆ ಎಂಬುದನ್ನು ಹುಡುಕಾಡಿ

ಒಂದು ವೇಳೆ ಡಿಸ್ಟ್ರಿಬ್ಯೂಟರ್ ಹೆಸರು ನಿಮಗೆ ಈಗಾಗಲೇ ತಿಳಿದಿದ್ದರೆ ಅದನ್ನೂ ಕೂಡ ಎಂಟರ್ ಮಾಡಬಹುದು.

3.ಇದೀಗ ಲಿಸ್ಟ್ ನಲ್ಲಿರುವ ಡಿಸ್ಟ್ರಿಬ್ಯೂಟರ್ ನ್ನು ಆಯ್ಕೆ ಮಾಡಿ ( ಹತ್ತಿರದವರನ್ನೇ ಆಯ್ಕೆ ಮಾಡಿಕೊಳ್ಳಿ)

ಮುಂದಿನ ಸ್ಕ್ರೀನ್ ನಲ್ಲಿ ವಯಕ್ತಿಕ ವಿವರಗಳು, ವಿಳಾಸ, ಸಬ್ಸಿಡಿ ಕ್ಯಾಷ್ ಟ್ರಾನ್ಸ್ಫರ್ ಸೆಕ್ಷನ್, ಸಿಲಿಂಡರ್ ಟೈಪ್ ಮತ್ತು ಸಿಲಿಂಡರ್ ಕೆಪಾಸಿಟಿ ಇತ್ಯಾದಿ ವಿವರಗಳನ್ನು ಕೇಳುವ ಅರ್ಜಿಯನ್ನು ಭರ್ತಿ ಮಾಡಿ.

ಸೂಚನೆ:ಸಪ್ಲೈಯರ್ ಗಳ ಆಧಾರದಲ್ಲಿ ಫಾರ್ಮ್ ಗಳು ಬೇರೆಬೇರೆ ರೀತಿ ಇರುವ ಸಾಧ್ಯತೆ ಇದೆ.

4.ಮುಂದಿನ ಹಂತದಲ್ಲಿ POI (Proof of Identity)ಗುರುತಿನ ಪುರಾವೆ ಮತ್ತು POF (Proof of Address) ವಿಳಾಸದ ಪುರಾವೆಯನ್ನು ಆಯ್ಕೆ ಮಾಡಿ.

5.ಪಾಸ್ ಪೋರ್ಟ್ ಸೈಜ್ ಫೋಟೋ ಜೊತೆಗೆ ಎರಡೂ ಡಾಕ್ಯುಮೆಂಟ್ ಗಳನ್ನು ಅಪ್ ಲೋಡ್ ಮಾಡಿ.

6.ಇದೀಗ ಒಪ್ಪಂದದ ನಿಯಮಗಳನ್ನು ಪರಿಶೀಲಿಸಿ ಮತ್ತು ಸಲ್ಲಿಸು ಬಟನ್ ನ್ನು ಕ್ಲಿಕ್ಕಿಸಿ.

7.ನಂತರ ಇದು ನಿಮ್ಮನ್ನು ಪಾವತಿ ಪುಟಕ್ಕೆ ಕೊಂಡೊಯ್ಯುತ್ತದೆ . ಅಲ್ಲಿ ನೀವು ನೆಟ್ ಬ್ಯಾಂಕಿಂಗ್, ಆನ್ ಲೈನ್ ಪಾವತಿಗಾಗಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಆಯ್ಕೆಗಳಿರುತ್ತದೆ. ಜೊತೆಗೆ ಕ್ಯಾಷ್ ಆನ್ ಡೆಲಿವರಿ ಆಯ್ಕೆ ಕೂಡ ಇರುತ್ತದೆ.

8.ಒಮ್ಮೆ ಪೂರ್ಣ ಮುಗಿದ ನಂತರ, ಬುಕ್ಕಿಂಗ್ ಸ್ಟೇಟಸ್ ಮತ್ತು ಸಿಲಿಂಡರ್ ನ ಡೆಲಿವರಿ ದಿನಾಂಕವನ್ನು ಪರಿಶೀಲಿಸುವುದಕ್ಕಾಗಿ ನಿಮಗೊಂದು ರೆಫರೆನ್ಸ್ ನಂಬರ್ ನ್ನು ನೀಡಲಾಗುತ್ತದೆ. ಆ ಸಂಖ್ಯೆಯನ್ನುಜೋಪಾನವಾಗಿ ಇಟ್ಟುಕೊಳ್ಳಿ ಮತ್ತು ನಿಮ್ಮ ಕನೆಕ್ಷನ್ ಲಭ್ಯವಾಗುವವರೆಗೆ ನೀವು ಅದನ್ನು ಸ್ಟೇಟಸ್ ಫಾಲೋ ಮಾಡುವುದಕ್ಕಾಗಿ ಬಳಕೆ ಮಾಡಬಹುದು.

Best Mobiles in India

English summary
How To Get New LPG Connection Online Without Visiting A Dealership
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+