ಐಫೋನ್‌ನಲ್ಲಿ ಯಾರು ತಿಳಿಯದ ಸೀಕ್ರೇಟ್ ಕೀಬೋರ್ಡ್
ಎಲ್ಲರೂ ಸಹ ಸ್ಮಾರ್ಟ್‌ಫೋನ್ ಆಗ್ಲಿ, ಐಫೋನ್ ಆಗ್ಲಿ ಒಂದೇ ರೀತಿಯ ಕೀಬೋರ್ಡ್ ನೋಡಿರುತ್ತಾರೆ. ಆದರೆ ಐಫೋನ್ ಬಳಕೆದಾರರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಐಫೋನ್ ಬಳಕೆದಾರರು ತಮ್ಮ ಐಫೋನ್‌ನಲ್ಲಿರುವ ರಹಸ್ಯ ಕೀಬೋರ್ಡ್ ಅನ್ನು ನೋಡಿಯೇ ಇಲ್ಲವಂತೆ. ಆ ಕೀಬೋರ್ಡ್ ಯಾವುದು, ಅದನ್ನು ಹೇಗೆ ಐಫೋನ್‌ನಲ್ಲಿ ಹುಡುಕುವುದು ಎಂಬಿತ್ಯಾದಿ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಐಫೋನ್
ಹಲವರು ಎಮೋಜಿ ಕೀಬೋರ್ಡ್ ಅನ್ನು ಇನ್‌ಸ್ಟಾಲ್ ಮಾಡುತ್ತಾರೆ. ಈ ಕೀಬೋರ್ಡ್ ಅನ್ನು ಐಫೋನ್, ಐಪ್ಯಾಡ್, ಐಪೋಡ್ ಟಚ್ ಬಳಕೆದಾರರು ಸರಳವಾಗಿ ಹೊಂದಬಹುದು. ಆದರೆ ಇನ್‌ಸ್ಟಾಲ್ ಮಾಡುವ ಬದಲಾಗಿ ನಿಮ್ಮ ಐಫೋನ್‌ನಲ್ಲೇ ರಹಸ್ಯವಾದ ಎಮೋಟಿಕಾನ್ ಕೀಬೋರ್ಡ್ ಒಂದಿದೆ.

ಕೀಬೋರ್ಡ್
ಎಮೋಟಿಕಾನ್ ಕೀಬೋರ್ಡ್ ಅನ್ನು ಸೆಟ್ಟಿಂಗ್ಸ್ ಆಪ್ ನಲ್ಲಿ ಪತ್ತೆ ಹಚ್ಚಬಹುದು. ಸೆಟ್ಟಿಂಗ್ಸ್ ಆಪ್‌ನಲ್ಲಿ General>>Keyboard>>pick Keyboard>>Add New Keyboard ಕ್ಲಿಕ್ ಮಾಡಿ

ಆಯ್ಕೆ
ಎಮೋಟಿಕಾನ್ ಆಯ್ಕೆಗಾಗಿ Japanese ಭಾಷೆಯಲ್ಲಿ ಸ್ಕ್ರಾಲ್ ಡೌನ್ ಮಾಡಿ. ಅಲ್ಲಿ Kana ಕೀಬೋರ್ಡ್ ಆಯ್ಕೆ ಮಾಡಿ. ಅಲ್ಲಿ ನಿಮಗೆ ಈ ಚಿತ್ರದ ರೀತಿಯ ಎಮೋಟಿಕಾನ್ (ಎಮೋಜಿ)ಗಳ ಕೀಬೋರ್ಡ್ ಸಿಗುತ್ತದೆ. ಅದ ಬೇಡವೆಂದರೆ ಇತರ ಕೀಬೋರ್ಡ್‌ಗಳನ್ನು ಸಹ ಆಯ್ಕೆ ಮಾಡಬಹುದು.

ಕೀಬೋರ್ಡ್
ಉತ್ತಮ ಕೀಬೋರ್ಡ್ ಅನ್ನು ಆಯ್ಕೆ ಮಾಡಿ ಸ್ವಲ್ಪ ಸಮಯ ಕಾಯಿರಿ. ನಂತರದಲ್ಲಿ ^_^- ಈ ಚಿಹ್ನೆ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ಅದರ ಮೇಲಿನ ಸಾಲುಗಳನ್ನು ಕ್ಲಿಕ್ ಮಾಡಿ. ನಂತರ ಎಲ್ಲಾ ರೀತಿಯ ಎಮೋಟಿಕಾನ್‌ಗಳು ನಿಮಗೆ ಆಕ್ಸೆಸ್ ಆಗುತ್ತವೆ.

ಎಮೋಜಿಗಳು
ನಿಮ್ಮಲ್ಲಿ ಎಮೋಜಿ ಕೀಬೋರ್ಡ್ ಇಲ್ಲದಿದ್ದರೆ ನೀವು Japanese ನಲ್ಲಿ ಎಮೋಟಿಕಾನ್ ಕೀಬೋರ್ಡ್ ಪಡೆದು ಕಂಪ್ಯೂಟರ್‌ನಲ್ಲಿ ಬಳಸುವ ಎಲ್ಲಾ ರೀತಿಯ ಕೀಬೋರ್ಡ್ ಅನ್ನು ಸಹ ನೀವು ಇಲ್ಲಿ ಪಡೆಯಬಹುದಾಗಿದೆ.

ಎಮೋಜಿ
ನೀವು ಬಳಸುತ್ತಿರುವ ಎಮೋಜಿಗಳು ಹಳೆಯವು ಎನಿಸಿದರೆ ನಿಮ್ಮದೇ ಆದ ಎಮೋಜಿಗಳನ್ನು ಈ ಕೀಬೋರ್ಡ್‌ನಿಂದ ಡಿಸೈನ್ ಮಾಡಬಹುದಾಗಿದೆ.



Click it and Unblock the Notifications








