ನಿಮ್ಮ ಆಂಡ್ರಾಯ್ಡ್ ಫೋನಿನ ಡಿಸ್ ಪ್ಲೇಯನ್ನು ರೌಂಡ್ ಎಡ್ಜ್ ಮಾಡಿಕೊಳ್ಳುವುದು ಹೇಗೆ..?
ಡಿಸ್ ಪ್ಲೇಯನ್ನು ರೌಂಡ್ ಎಡ್ಜ್ ಮಾಡಿಕೊಳ್ಳುವುದು ಹೇಗೆ..?
ಸ್ಯಾಮ್ ಸಂಗ್ ಮತ್ತು LG ಸ್ಮಾರ್ಟ್ ಫೋನ್ ನಲ್ಲಿ ಇರುವಂತಹ ಆಯ್ಕೆಯನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲೂ ಪಡೆಯಬಹುದಾಗಿದೆ

ಸದ್ಯ ಭಾರತೀಯ ಮಾರುಕಟ್ಟೆಗೆ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿರುವ ದಕ್ಷಿಣ ಕೋರಿಯಾ ಮೂಲದ ಸ್ಯಾಮ್ ಸಂಗ್ ಮತ್ತು LG ಸ್ಮಾರ್ಟ್ ಫೋನ್ ನಲ್ಲಿ ಇರುವಂತಹ ಆಯ್ಕೆಯನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲೂ ಪಡೆಯಬಹುದಾಗಿದೆ ಅದು ಹೇಗೆ ಎಂಬುದನ್ನು ನೋಡುವ.
ಸದ್ಯ ಹೊಸ ಟ್ರೆಂಡ್ ಹುಟ್ಟಿ ಹಾಕಿರುವ ಗ್ಯಾಲಕ್ಸಿ S8 ಮತ್ತು LG G6 ಸ್ಮಾರ್ಟ್ ಫೋನಿನಲ್ಲಿ ಇರುವಂತಹ ರೌಂಡ್ ಎಡ್ಜ್ ಡಿಸ್ ಪ್ಲೇಯನ್ನು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲೂ ಪಡೆಯಬಹುದಾಗಿದೆ. ಅಲ್ಲದೇ ಇದಕ್ಕೆ ರೂಟ್ ಮಾಡುವ ಅವಶ್ಯಕತೆಯೂ ಇರುವುದಿಲ್ಲ ಎನ್ನಲಾಗಿದೆ. ಇದನ್ನು ಮಾಡುವುದು ಹೇಗೆ ಎಂಬುದನ್ನು ಈ ಮುಂದಿನಂತೆ ತಿಳಿಯಯುವ.

ಗೂಗಲ್ ಪ್ಲೇ ಸ್ಟೋರಿನಲ್ಲಿ ಆಪ್ ಲಭ್ಯ:
ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರಿನಲ್ಲಿ ಒಂದು ಆಪ್ ಲಭ್ಯವಿದೆ. ಅದನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು.
ಹಂತ 1: ಗೂಗಲ್ ಪ್ಲೇ ಸ್ಟೋರಿಗೆ ಹೋಗಿ "Rounded Corner" ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿರಿ.
ಹಂತ 2: ಆಪ್ ಇನ್ ಸ್ಟಾಲ್ ಮಾಡಿಕೊಂಡು ಆಪ್ ತೆರೆಯಿರಿ. ತೆರೆದ ನಂತರ ಟ್ಯಾಂಗಲ್ ಬಟನ್ ಟ್ರನ್ ಆನ್ ಮಾಡಿಕೊಳ್ಳಿ.
ಹಂತ3 : ನಂತರ ರೌಂಡ್ ಎಡ್ಜ್ ಸ್ಕ್ರಿನ್ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ಎಷ್ಟು ಪ್ರಮಾಣದಲ್ಲಿ ನಿಮ್ಮ ಪರದೆ ರೌಂಡ್ ಆಗಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬಹುದಾಗಿದೆ.
ಹಂತ 4: ಇದಲ್ಲದೇ ನೀವು ಬೇಕಾದಂತಹ ಆಪ್ ಗಳನ್ನು ಬಳಸಿಕೊಳ್ಳಬಹುದಾಗಿದೆ. ಬೇಡ ಎಂದರೆ ಬಿಡಬಹುದಾಗಿದೆ. ಅಲ್ಲದೇ ಅವುಗಳು ಪರ್ಮಿಷನ್ ನೀಡುವ ಅಧಿಕಾರವು ನಿಮಗೆ ದೊರೆಯಲಿದೆ.


Click it and Unblock the Notifications








