Home
ಟೆಕ್ ನೌಕರಿ

ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್‌ಗಳನ್ನು ಹೈಡ್‌ ಮಾಡುವುದು ಹೇಗೆ?

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಫೋಟೋ ಮತ್ತು ವಿಡಿಯೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ ಮೂಲಕ ಬಳಕೆದಾರರನ್ನು ಸೆಳೆದಿದೆ. ಇಂತಹ ಫೀಚರ್ಸ್‌ಗಳಲ್ಲಿ ಹೈಡಿಂಗ್‌ ಫೀಚರ್ಸ್‌ ಕೂಡ ಸೇರಿದೆ. ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ಸಂಭಾಷಣೆಗಳನ್ನು ಹೈಡ್‌ ಮಾಡಬೇಕು ಎನಿಸಿದರೆ ಈ ಫೀಚರ್ಸ್‌ ಉಪಯುಕ್ತವಾಗಿದೆ. ಇದರ ಮೂಲಕ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ದಿಷ್ಟ ಚಾಟ್‌ಗಳನ್ನು ಹೈಡ್‌ ಮಾಡಿದರೆ ಬೇರೆಯವರು ಓದುವುದಕ್ಕೆ ಸಾಧ್ಯವಾಗುವುದಿಲ್ಲ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಸಂಭಾಷಣೆಗಳನ್ನು ಯಾರೂ ನೋಡದಂತೆ ಹೈಡ್‌ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ನಿಮ್ಮ ಪರ್ಸನಲ್‌ ಚಾಟ್‌ ಅನ್ನು ಮರೆಯಾಗಿಡಬಹುದಾಗಿದೆ. ಇದಲ್ಲದೆ ಇತರ ಡಿಎಂಗಳಿಗೆ ಪ್ರವೇಶವನ್ನು ಪಡೆದರೂ ಸಹ, ನಿರ್ದಿಷ್ಟ ಚಾಟ್‌ಗಳನ್ನು ಮರೆಮಾಡಲು ನೀವು ಆಯ್ಕೆ ಮಾಡಬಹುದು. ಆದರೆ ಇನ್‌ಸ್ಟಾಗ್ರಾಮ್‌ ನಿಮಗೆ "ಹೈಡ್‌ ಚಾಟ್ಸ್‌" ಆಯ್ಕೆಯನ್ನು ನೀಡುವುದಿಲ್ಲ. ಆದರೆ ನೀವು ಚಾಟ್ಸ್‌ ಹೈಡ್‌ ಮಾಡುವುದಕ್ಕೆ ಕೆಲವು ನಿಯಮಗಳನ್ನು ಅನುಸರಿಸಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ಗಳನ್ನು ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ಗಳನ್ನು ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಸಂಭಾಷಣೆಗಳನ್ನು ಹೈಡ್‌ ಮಾಡಲು ಎರಡು ಮಾರ್ಗಗಳಿವೆ.
ವಿಧಾನ-1
ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್‌ಗಳಿಗೆ ಹೋಗಿ
ಹಂತ:2 ನೀವು ಹೈಡ್‌ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ
ಹಂತ:3 ಚಾಟ್ ಅನ್ನು ಹೈಡ್‌ ಮಾಡಲು ವ್ಯಾನಿಶ್ ಮೋಡ್ ಅನ್ನು ಸಕ್ರಿಯಗೊಳಿಸಲು ಮೇಲಕ್ಕೆ ಸ್ವೈಪ್ ಮಾಡಿ
ಹಂತ:4 ಇದೀಗ ನೀವು ನಿಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು.
ಮೆಸೇಜ್‌ ಸ್ವೀಕರಿಸುವವರು ನಿಮ್ಮ ಪಠ್ಯವನ್ನು ಓದಿದ ನಂತರ ಅವರು ಡಿಸ್‌ಅಪಿಯರ್‌ ಆಗಲಿದ್ದಾರೆ. ನೀವು GIF ಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಈ ಮೋಡ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇದಲ್ಲದೆ ವ್ಯಾನಿಶ್‌ ಮೋಡ್‌ ಅನ್ನು ಮತ್ತೆ ಸ್ವೈಪ್ ಮಾಡುವ ಮೂಲಕ ನೀವು ಈ ಮೋಡ್ ಅನ್ನು ಆಫ್ ಮಾಡಬಹುದು.

ವಿಧಾನ-2

ವಿಧಾನ-2

ಹಂತ:1 ಮೊದಲಿಗೆ ನಿಮ್ಮ ಪ್ರೊಫೈಲ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಮೂರು ಮೆನು ಸಾಲುಗಳ ಮೇಲೆ ಟ್ಯಾಪ್ ಮಾಡಿ
ಹಂತ:2 ಸೆಟ್ಟಿಂಗ್ಸ್‌>ಅಕೌಂಟ್‌> ಖಾತೆ ಪ್ರಕಾರವನ್ನು ಬದಲಿಸಿ> ಬ್ಯುಸಿನೆಸ್‌ ಅಕೌಂಟ್‌ಗೆ ಬದಲಿಸಿ
ಹಂತ:3 ನಂತರ, ಸಂದೇಶಗಳ ವಿಭಾಗಕ್ಕೆ ಹೋಗಿ ಮತ್ತು ನೀವು ಹೈಡ್‌ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ
ಹಂತ:4 ಈಗ 'ಮೂವ್ ಟು ಜನರಲ್' ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ:5 ನಂತರ ಸೆಟ್ಟಿಂಗ್ಸ್‌ಗೆ ಹಿಂತಿರುಗಿ ಮತ್ತು ವೈಯಕ್ತಿಕ ಖಾತೆಗೆ ಬದಲಿಸಿ.
ಹಂತ:6 ಇದೀಗ ನಿಮ್ಮ ಸಂಬಂಧಿತ ಚಾಟ್‌ಗಳು ಕಣ್ಮರೆಯಾಗುತ್ತವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್‌ ಮತ್ತು ವ್ಯೂ ಕೌಂಟ್ಸ್‌ ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್‌ ಮತ್ತು ವ್ಯೂ ಕೌಂಟ್ಸ್‌ ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ತಮ್ಮ ಫೀಡ್‌ನಲ್ಲಿ ಗೋಚರಿಸುವ ಪೋಸ್ಟ್‌ಗಳ ಮೇಲೆ ಲೈಕ್ ಮತ್ತು ವೀಕ್ಷಣೆ ಎಣಿಕೆಗಳನ್ನು ಮರೆಮಾಡುವ ಆಯ್ಕೆಯನ್ನು ಒದಗಿಸಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್‌ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:2 ನಂತರ ಮೇಲಿನ ಬಲಭಾಗದಲ್ಲಿರುವ ಮೋರ್‌ ಆಯ್ಕೆಗಳನ್ನು ಟ್ಯಾಪ್ ಮಾಡಿ, ಸೆಟ್ಟಿಂಗ್ಸ್‌ ಟ್ಯಾಪ್ ಮಾಡಿ.
ಹಂತ:3 ಇದಾದ ಮೇಲೆ ಪ್ರೈವೆಸಿ ಮೇಲೆ ಕ್ಲಿಕ್ ಮಾಡಿ ನಂತರ ಪೋಸ್ಟ್‌ಗಳ ಮೇಲೆ ಟ್ಯಾಪ್ ಮಾಡಿ.
ಹಂತ:4 ಸ್ವಿಚ್ ಆಫ್ ಅಥವಾ ಸ್ವಿಚ್ ಆನ್ ಟ್ಯಾಪ್ ಮಾಡಿ, ಇದನ್ನು ಆನ್‌ ಅಥವಾ ಆಫ್ ಮಾಡಿದ ನಂತರ ಲೈಕ್ಸ್‌ ಮತ್ತು ವ್ಯೂ ಕೌಂಟ್‌ಗಳನ್ನು ಹೈಡ್‌ ಮಾಡುವ ಆಯ್ಕೆ ಕಾಣಲಿದೆ. ಇದರ ಮೂಲಕ ಲೈಕ್ಸ್‌ ಕೌಂಟ್‌ ಹೈಡ್‌ ಮಾಡಬಹುದು.

Best Mobiles in India

English summary
Here are two ways how you can hide your DMs on Instagram without deleting them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+