Instagram: ಮೆಸೇಜ್‌ ಮಾಡುವಾಗ ವಿಶೇಷ ಎಫೆಕ್ಟ್‌ ಸೇರಿಸುವುದು ಹೇಗೆ?

|

ಜನಪ್ರಿಯ ಸೋಶಿಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ತನ್ನ ಆಕರ್ಷಕ ಫಿಚರ್ಸ್‌ಗಳ ಮೂಲಕ ಪ್ರಸಿದ್ದ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ಇತ್ತೀಚಿಗಷ್ಟೇ ಇನ್‌ಸ್ಟಾಗ್ರಾಮ್‌ ಡೈರೆಕ್ಟ್‌ ಮೆಸೇಜ್‌ ಹಾಗೂ ಫೇಸ್‌ಬುಕ್‌ ಮೆಸೆಂಜರ್‌ ಅನ್ನು ವಿಲೀನಗೊಳಿಸಲಾಗಿದೆ. ಇದರಿಂದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಇರದ ಕೆಲವು ವಿಶೇಷ ಫೀಚರ್ಸ್‌ಗಳು ಕೂಡ ಈಗ ಲಭ್ಯವಾಗಲಿವೆ. ಅದರಲ್ಲಿ ಇನ್‌ಸ್ಟಾಗ್ರಾಮ್ ಡೈರೆಕ್ಟ್‌ ಮೆಸೇಜ್‌ ಎಪೆಕ್ಟ್‌ ಅನ್ನು ಹೈಡ್‌ ಮಾಡಿ ವಿಶೇಷ ಎಫೆಕ್ಟ್‌ಗಳನ್ನು ಬಳಸುವುದು ಕೂಡ ಸೇರಿದೆ. ಆದರೆ ಎಷ್ಟೋ ಜನರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಡಿಎಂಗಳಿಗೆ ವಿಶೇಷ ಎಫೆಕ್ಟ್‌ ಬಳಸುವುದು ತಿಳಿದೆ ಇಲ್ಲ.

ಇನ್‌ಸ್ಟಾಗ್ರಾಮ್

ಹೌದು, ಇತ್ತೀಚಿನ ಸಾಫ್ಟ್‌ವೇರ್ ಅಪ್‌ಡೇಟ್‌ನೊಂದಿಗೆ, ಫೇಸ್‌ಬುಕ್ ಮೆಸೆಂಜರ್ ಅನ್ನು ಇನ್‌ಸ್ಟಾಗ್ರಾಮ್ ಡಿಎಂಗಳೊಂದಿಗೆ ವಿಲೀನಗೊಳಿಸಿದೆ. ಅಂದಿನಿಂದ ಕಸ್ಟಮ್ ಚಾಟ್ ಕಲರ್‌ ಅನ್ನು ಸೆಟ್‌ ಮಾಡುವುದು, ವ್ಯಾನಿಶ್‌ ಮೋಡ್, ಕಸ್ಟಮ್ ಎಮೋಜಿ ರೆಸ್ಪಾನ್ಸ್‌ ಸೇರಿದಂತೆ ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇದರಲ್ಲಿ ಮೆಸೇಜ್‌ಗಳಿಗೆ ಎಫೆಕ್ಟ್‌ ಕೂಡ ಒಂದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಡೈರೆಕ್ಟ್‌ ಮೆಸೇಜ್‌ಗಳಿಗೆ ವಿಶೇಷ ಎಫೆಕ್ಟ್‌ಗಳನ್ನು ನೀಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Instagram Dm: ಸಂದೇಶಗಳಿಗೆ ವಿಶೇಷ ಎಫೆಕ್ಟ್‌ ಸೇರಿಸುವುದು ಹೇಗೆ?

Instagram Dm: ಸಂದೇಶಗಳಿಗೆ ವಿಶೇಷ ಎಫೆಕ್ಟ್‌ ಸೇರಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಈಗ ಯಾರಿಗಾದರೂ ಪ್ರತ್ಯುತ್ತರ ನೀಡಿದಾಗ ಅಥವಾ ನೀವು ಯಾರಿಗಾದರೂ ಹೊಸ ಸಂದೇಶವನ್ನು ಕಳುಹಿಸಿದಾಗಲೆಲ್ಲಾ ನೀವು Instagram ಡೈರೆಕ್ಟ್‌ ಮೆಸೇಜ್‌ಗಳಲ್ಲಿ ವಿಶೇಷ ಎಫೆಕ್ಟ್‌ಗಳನ್ನು ಸೇರಿಸಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

Instagram Dm: ಸಂದೇಶಗಳಿಗೆ ವಿಶೇಷ ಎಫೆಕ್ಟ್‌ ಸೇರಿಸುವುದು ಹೇಗೆ?

ಹಂತ:1 ಮೊದಲಿಗೆ, ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ನ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಹಂತ:2 Instagram ನಲ್ಲಿ ಯಾವುದೇ ಚಾಟ್ ತೆರೆಯಿರಿ ಮತ್ತು ಸಂದೇಶವನ್ನು ಟೈಪ್ ಮಾಡಿ.
ಹಂತ:3 ಪಠ್ಯ ಪ್ರವೇಶ ಕ್ಷೇತ್ರದ ಪಕ್ಕದಲ್ಲಿ ಎಡಭಾಗದಲ್ಲಿರುವ magnifier ಟ್ಯಾಪ್ ಮಾಡಿ.
ಹಂತ:4 ನೀವು ಈಗ ಆಯ್ಕೆ ಮಾಡಲು ನಾಲ್ಕು ಹೊಸ ಎಫೆಕ್ಟ್‌ಗಳನ್ನು ನೋಡುತ್ತೀರಿ.
ಹಂತ:5 ಇದರಲ್ಲಿ ಟ್ಯಾಪ್ ಮಾಡಿ ಮತ್ತು ನೀವು ಇಷ್ಟಪಡುವದನ್ನು ಆರಿಸಿ.
ಹಂತ:6 ಈ ಮೂಲಕ ವಿಶೇಷ ಎಫೆಕ್ಟ್‌ ಜೊತೆಗೆ ಸಂದೇಶವನ್ನು ಕಳುಹಿಸಬಹುದಾಗಿದೆ.

ರಿಪ್ಲೇ ಮೆಸೇಜ್‌ ಅನ್ನು ಸೇವ್‌ ಮಾಡುವುದು ಹೇಗೆ?

ರಿಪ್ಲೇ ಮೆಸೇಜ್‌ ಅನ್ನು ಸೇವ್‌ ಮಾಡುವುದು ಹೇಗೆ?

ಹಂತ:1 ಕಳುಹಿಸಿದ ಸಂದೇಶವನ್ನು ಉಳಿಸಲು, ಅದರ ಮೇಲೆ ಲಾಂಗ್‌ ಪ್ರೆಸ್‌ ಮಾಡಿ ಮತ್ತು ಸೇವ್‌ ಟ್ಯಾಪ್ ಮಾಡಿ.

ಹಂತ:2 ಶಾರ್ಟ್‌ಕಟ್ ನಿಯೋಜಿಸಲು ನಿಮ್ಮನ್ನು ಕೇಳಲಾಗುತ್ತದೆ, ಅದನ್ನು ನಮೂದಿಸಿ ಮತ್ತು ಸೇವ್‌ ಒತ್ತಿರಿ.


ಹಂತ:3 ಸ್ವೀಕರಿಸಿದ ಸಂದೇಶವನ್ನು ಉಳಿಸಲು, ಅದರ ಮೇಲೆ ಲಾಂಗ್‌ ಪ್ರೆಸ್‌ ಮಾಡಿ > ಮೋರ್‌ ಟ್ಯಾಪ್ ಮಾಡಿ> ಸೇವ್‌ ಟ್ಯಾಪ್ ಮಾಡಿ.


ಹಂತ:4 ಈಗ ನೀವು ಇನ್ಸಟಂಟ್‌ ರಿಪ್ಲೇ ಕಳುಹಿಸಲು ಬಯಸಿದಾಗ, ಸಂಪೂರ್ಣ ನುಡಿಗಟ್ಟು ಟೈಪ್ ಮಾಡುವ ಬದಲು ಶಾರ್ಟ್‌ಕಟ್ ಬಳಸಿ.

Best Mobiles in India

English summary
Did you know you can now use cool new special effects for your Instagram DMs? With a recent software update, Facebook has merged Messenger with Instagram DMs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X