ನಿಮ್ಮ ವಾಟ್ಸಾಪ್‌ ಪ್ರೊಫೈಲ್‌ ಚಿತ್ರ ಬೇರೆಯವರಿಗೆ ಕಾಣದಂತೆ ಹೈಡ್‌ ಮಾಡುವುದು ಹೇಗೆ?

|

ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಸದ್ಯ ವಾಟ್ಸಾಪ್ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈಗಗಾಲೇ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್ ಪರಿಚಯಿಸುವ ಮೂಲಕ ಬಳಕೆದಾರರ ಸ್ನೇಹಿ ಆಗಿ ಗುರುತಿಸಿಕೊಂಡಿದೆ. ಇನ್ನು ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್‌ ಚಿತ್ರವನ್ನು ಹಾಕಿಕೊಳ್ಳುವ ಅವಕಾಶ ನೀಡಿರೋದು ನಿಮಗೆಲ್ಲಾ ತಿಳಿದೆ ಇದೆ. ಆದರೂ ಕೆಲವೊಮ್ಮೆ ನೀವು ನಿಮ್ಮ ವಾಟ್ಸಾಪ್‌ ಪ್ರೊಫೈಲ್‌ ಅನ್ನು ಕೆಲವು ಜನರು ನೋಡದಂತೆ ಹೈಡ್‌ ಮಾಡುವುದಕ್ಕೆ ಅವಕಾಶ ಸಹ ವಾಟ್ಸಾಪ್‌ನಲ್ಲಿ ಇದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಸ್ಟೇಟಸ್‌ ಅನ್ನು ಬೇರೆಯವರು ನೋಡದಂತೆ ಹೈಡ್‌ ಮಾಡುವ ಹಾಗೇ ನಿಮ್ಮ ವಾಟ್ಸಾಪ್‌ ಪ್ರೊಫೈಲ್‌ ಚಿತ್ರವನ್ನು ಸಹ ಹೈಡ್‌ ಮಾಡಬಹುದಾಗಿದೆ. ಇದಕ್ಕಾಗಿ ವಾಟ್ಸಾಪ್‌ನಲ್ಲಿ ತಮ್ಮ ಪ್ರೊಫೈಲ್ ಮಾಹಿತಿಯನ್ನು ಕೇವಲ ಒಬ್ಬ ವ್ಯಕ್ತಿ ಅಥವಾ ಹಲವಾರು ಜನರಿಂದ ಮರೆಮಾಡಲು ಅನುಮತಿಸುವ ಅವಾಶವಿದೆ. ಹಾಗಾದ್ರೆ ಬೇರೆಯವರಿಗೆ ನಿಮ್ಮ ಪ್ರೊಫೈಲ್‌ ಚಿತ್ರ ಕಾಣದಂತೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರಿಗೆ ಹಂತಹಂತವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಕಚಯಿಸುತ್ತಲೇ ಬಂದಿದೆ. ಸದ್ಯ ಇತ್ತೀಚಿಗಷ್ಟೇ ಮ್ಯೂಟ್‌ ಫೀಚರ್ಸ್‌, ಮಲ್ಟಿ ಡಿವೈಸ್‌ ಫೀಚರ್ಸ್‌, ವಾಟ್ಸಾಪ್‌ ಪೇ, ವಾಟ್ಸಾಪ್‌ ಬ್ಯುಸಿನೆಸ್‌ ಕಾರ್ಟ್‌ಗಳನ್ನ ಪರಿಚಯಿಸಿದೆ. ಇನ್ನುಳಿದಂತೆ ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್‌ ಅನ್ನು ಹೈಡ್‌ ಮಾಡುವ ಫೀಚರ್ಸ್‌ ಸಹ ಇದೆ. ನೀವು ಬಯಸದೆ ಇರುವ ವ್ಯಕ್ತಿಗಳು ಅಥವಾ ಸಂಪರ್ಕಗಳು ನಿಮ್ಮ ವಾಟ್ಸಾಪ್‌ ಪ್ರೊಫೈಲ್‌ ಚಿತ್ರವನ್ನು ನೋಡದಂತೆ ಹೈಡ್‌ ಮಾಡಬಹುದು. ಏಕೆಂದರೆ ಕೆಲವೊಮ್ಮೆ ನಿಮ್ಮ ವಾಟ್ಸಾಪ್‌ ಪ್ರೊಫೈಲ್‌ ಚಿತ್ರಗಳನ್ನ ಕೆಲವರು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವ ಸಾಧ್ಯತೆ ಇರಲಿದೆ. ಅಂತಹವರಿಎ ನಿಮ್ಮ ಪ್ರೊಫೈಲ್‌ ಚಿತ್ರ ಕಾಣದಂತೆ ಮಾಡುವುದು ಒಳಿತು. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿದೆ.

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಹೈಡ್‌ ಮಾಡುವುದು ಹೇಗೆ ?

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಹೈಡ್‌ ಮಾಡುವುದು ಹೇಗೆ ?

ಹಂತ:1 ಮೊದಲು ನೀವು ನಿಮ್ಮ ವಾಟ್ಸಾಪ್ ತೆರೆಯಬೇಕು.

ಹಂತ:2 ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಖಾತೆ ಮತ್ತು ಗೌಪ್ಯತೆ ಸರ್ಚ್‌ ಮಾಡಿ.

ಹಂತ:3 ನಂತರ, ನೀವು ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡಬೇಕು.

ಹಂತ:4 ಡೀಫಾಲ್ಟ್ ಸೆಟ್ಟಿಂಗ್ ಆಯ್ಕೆಗಳ ಪಟ್ಟಿಯಲ್ಲಿ ‘everyone' ಆಯ್ಕೆ ನೋಡುತ್ತಿರಿ.

ಪ್ರೊಫೈಲ್

ಹಂತ:5 ಬಳಕೆದಾರರು ತಮ್ಮ ಪ್ರೊಫೈಲ್ ಚಿತ್ರಗಳನ್ನು ತಮ್ಮ ಸಂಪರ್ಕಗಳಿಗೆ ಪ್ರದರ್ಶಿಸಬೇಕೆಂದು ಬಯಸಿದರೆ, 'My contacts' ಆಯ್ಕೆಮಾಡಿ

ಹಂತ:6 ನಿಮ್ಮ ಪ್ರೊಫೈಲ್‌ ಫೋಟೋ ಯಾರಿಗೂ ಪ್ರದರ್ಶಿಸಬೇಕೆಂದು ನೀವು ಬಯಸುತ್ತಿರೋ ಅವರನ್ನು ಆಯ್ಕೆ ಮಾಡಿ.

ಹಂತ:7 ವಾಟ್ಸಾಪ್‌ನಲ್ಲಿನ ಪ್ರೊಫೈಲ್ ಚಿತ್ರವನ್ನು ಮರೆಮಾಡಿದ ನಂತರ, ಬಳಕೆದಾರರ ಪ್ರೊಫೈಲ್‌ನಲ್ಲಿ ಮತ್ತು ವಾಟ್ಸಾಪ್ ಚಾಟ್‌ಗಳಲ್ಲಿ ಗ್ರೇ ಅವತಾರ ಕಾಣಿಸಿಕೊಳ್ಳುತ್ತದೆ.

Best Mobiles in India

English summary
WhatsApp gives users the option to hide their profile picture from contacts who are not added to their contact list.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X