ನಿಮ್ಮ ಸ್ಮಾರ್ಟ್‌ಫೋನ್‌ ಅಸಲಿಯೋ..? ನಕಲಿಯೋ..? ತಿಳಿಯುವುದು ಹೇಗೆ..?

By Gizbot Bureau
|

ಮೊಬೈಲ್ ಫೋನ್ ಅಸಲಿಯೋ, ನಕಲಿಯೋ ಎಂಬುದನ್ನು ಹೇಗೆ ಕಂಡುಹಿಡಿಯುವುದು ಎಂಬ ಪ್ರಶ್ನೆ ಹಲವರಿಗೆ ಕಾಡುತ್ತಿರುತ್ತದೆ. ಅದರಲ್ಲೂ, ನವೀಕರಿಸಿದ ಅಥವಾ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಯ ಸಮಯದಲ್ಲಂತೂ ಈ ಪ್ರಶ್ನೆ ಜನರನ್ನು ಹೆಚ್ಚೆಚ್ಚು ಕಾಡುತ್ತದೆ. ಆದ್ದರಿಂದ, ನಕಲಿ ಫೋನ್‌ನ್ನು ನೀವು ಹೇಗೆ ಗುರುತಿಸಬಹುದು. ಮತ್ತು ಅದರಿಂದ ಮೋಸ ಹೋಗುವುದನ್ನು ತಪ್ಪಿಸಲು ಈ ಲೇಖನದಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ. ಮುಂದೆ ನೋಡಿ.

ಫೀಚರ್‌ಗಳ ಬಗ್ಗೆ ಗೊತ್ತಿರಲಿ

ಯಾವುದೇ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ, ಆ ಸಾಧಬದ ಫೀಚರ್‌ಗಳ ಬಗ್ಗೆ ತಿಳಿದಿರುವುದು ಅವಶ್ಯಕ. ಅದಕ್ಕಾಗಿ ಆನ್‌ಲೈನ್‌ನಲ್ಲಿ ಒಂದಿಷ್ಟು ಸಂಶೋಧನೆ ಮಾಡಿ. ಆ ಫೋನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿರ್ದಿಷ್ಟ ಮಾದರಿಯ ಫೋನ್‌ನ ಸ್ಪೆಕ್ಸ್ ಮತ್ತು ವೈಶಿಷ್ಟ್ಯಗಳನ್ನು ಪರಿಶೀಲಿಸಿ. ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕನ್ಫಿಗರೇಶನ್ ಬಗ್ಗೆ ಖಾತರಿಪಡಿಸಿಕೊಳ್ಳಿ. ನಕಲಿ ಫೋನ್‌ಗಳು ಕೇವಲ ಬ್ರಾಂಡ್‌, ಬಣ್ಣ, ಆಕಾರದಲ್ಲಿ ಮಾತ್ರ ಅಸಲಿಯಾಗಿ ಕಂಡರೂ, ಫೀಚರ್‌ಗಳಲ್ಲಿ ಮೂಲ ಆವೃತ್ತಿಗೆ ಸರಿಸಾಟಿಯಾಗಲ್ಲ.

IMEI ಸಂಖ್ಯೆ ಪರಿಶೀಲಿಸಿ

IMEI ಸಂಖ್ಯೆ ಪರಿಶೀಲಿಸಿ

ಎಲ್ಲಾ ಫೋನ್‌ಗಳಿಗೂ IMEI ಸಂಖ್ಯೆ ಕಡ್ಡಾಯವಾಗಿ ಇರುತ್ತದೆ. ಈ ಸಂಖ್ಯೆಯನ್ನು ಮೊಬೈಲ್ ಫೋನ್‌ನ ಬ್ಯಾಟರಿಯ ಮೇಲೆ ಅಥವಾ ಕೆಳಗೆ ನೀಡಲಾಗಿರುತ್ತದೆ. ಅಥವಾ *#06# ಡಯಲ್ ಮಾಡುವ ಮೂಲಕ ನಿಮ್ಮ ಮೊಬೈಲ್‌ನ IMEI ಸಂಖ್ಯೆಯನ್ನು ಸಹ ನೀವು ಪಡೆಯಬಹುದು. ಪ್ರತಿ ಮೊಬೈಲ್ ಸಾಧನದ IMEI ಸಂಖ್ಯೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ನಕಲಿ ನಕಲಿ ಫೋನ್ ಮಾನ್ಯ IMEI ಸಂಖ್ಯೆ ಹೊಂದಿರುವುದಿಲ್ಲ ಅಥವಾ ನಕಲಿ ಸಂಖ್ಯೆ ಬಳಸುತ್ತದೆ.

ಒಮ್ಮೆ ನೀವು 15 ಅಂಕಿಯ IMEI ಸಂಖ್ಯೆ ಹೊಂದಿದ್ದರೆ, ನೀವು ಅದರ ನ್ಯಾಯಸಮ್ಮತತೆ ಮತ್ತು ತಯಾರಕ ಮತ್ತು ಮಾದರಿ ಪ್ರಕಾರದಂತಹ ಇತರ ಮಾಹಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.

ಬ್ರಾಂಡ್ ಹೆಸರು, ಲೋಗೋ ಪರಿಶೀಲಿಸಿ

ಬ್ರಾಂಡ್ ಹೆಸರು, ಲೋಗೋ ಪರಿಶೀಲಿಸಿ

ನಕಲಿ ಮೊಬೈಲ್‌ಗಳಲ್ಲಿ ವಿಶ್ವದ ಉನ್ನತ ಮೊಬೈಲ್ ಫೋನ್ ಬ್ರಾಂಡ್‌ಗಳ ನೋಂದಾಯಿತ ಟ್ರೇಡ್‌ಮಾರ್ಕ್ ಮತ್ತು ಲೋಗೋವನ್ನು ಬಳಸಲ್ಲ. ಇಲ್ಲದಿದ್ದರೆ ಅವರು ಕಾನೂನು ಪ್ರಕರಣ ಎದುರಿಸಬೇಕಾಗುತ್ತದೆ. ಆದ್ದರಿಂದ, ಅವರು ಅದೇ ಲೋಗೋವನ್ನು ಹೋಲುವಂತೆ ಲೋಗೋ ಬಳಸುತ್ತಾರೆ. ಅದಕ್ಕಾಗಿ ಲೋಗೋ ಮತ್ತು ಬ್ರಾಂಡ್‌ ನೇಮ್‌ನ್ನು ಪರಿಶೀಲಿಸುವುದು ಅವಶ್ಯಕ.

ಉದಾಹರಣೆಗೆ

* Samsung = Sammsung or Samsang or Samsong

* iPhone = iPone or iPhoon

* Huawei - Hauwei or Huawai

* Xiaomi = Xaiomi or Xioami

ವಿನ್ಯಾಸದಲ್ಲಿ ವ್ಯತ್ಯಾಸ

ವಿನ್ಯಾಸದಲ್ಲಿ ವ್ಯತ್ಯಾಸ

ನಕಲಿ ಫೋನ್ ಮೂಲ ಫೋನ್‌ನಂತೆ ಕಾಣುತ್ತದೆ. ಆದರೆ, ನೀವು ಸೂಕ್ಷ್ಮವಾಗಿ ಗಮನಿಸಿದರೆ, ನೀವು ವ್ಯತ್ಯಾಸ ಗುರುತಿಸಬಹುದು. ಬಳಸಿದ ವಸ್ತು, ಬಣ್ಣ, ಕೀಬೋರ್ಡ್‌, ಬ್ರಾಂಡ್ ಹೆಸರು, ಲೋಗೋ ಇತ್ಯಾದಿಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ. ಈ ನಕಲಿ ಫೋನ್‌ಗಳು ಅಗ್ಗದ ವಸ್ತುಗಳು ಮತ್ತು ಘಟಕಗಳಿಂದ ಮಾಡಲ್ಪಟ್ಟಿದೆ. ಮೂಲ ಒಎಸ್ ಬಳಸಲು ಅವರಿಗೆ ಸಾಧ್ಯವಿಲ್ಲ. ಅದಕ್ಕಾಗಿ ನಕಲಿ ಫೋನ್‌ಗಳಲ್ಲಿ ಯಾವಾಗಲೂ ಪೈರೇಟೆಡ್ ಒಎಸ್ ಬಳಸುತ್ತಾರೆ.

ಫೋನ್ ಲಭ್ಯತೆ

ಫೋನ್ ಲಭ್ಯತೆ

ನಕಲಿ ಮೊಬೈಲ್ ಫೋನ್‌ಗಳ ತಯಾರಕರು ಸಾಮಾನ್ಯವಾಗಿ ಜನಪ್ರಿಯ ಮತ್ತು ಔಟ್‌ ಆಫ್ ಸ್ಟಾಕ್‌ನ ಬ್ರ್ಯಾಂಡ್‌ಗಳು ಮತ್ತು ಮಾದರಿಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ. ಜನರು ಸಹ ತಮ್ಮ ಜನಪ್ರಿಯತೆಗಾಗಿ ಈ ಔಟ್‌ ಆಫ್ ಸ್ಟಾಕ್ ಮಾದರಿಗಳನ್ನು ಹುಡುಕುತ್ತಾರೆ. ಈ ನಕಲಿ ಫೋನ್‌ಗಳನ್ನು ಸಾಮಾನ್ಯವಾಗಿ ಆನ್‌ಲೈನ್ ಹರಾಜು ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ನಕಲಿ ಬ್ಯಾಟರಿ ಮತ್ತು ಚಾರ್ಜರ್

ನಕಲಿ ಬ್ಯಾಟರಿ ಮತ್ತು ಚಾರ್ಜರ್

ಫೋನ್‌ನ ಬ್ಯಾಟರಿ ಮತ್ತು ಚಾರ್ಜರ್ ಅನ್ನು ಎಚ್ಚರಿಕೆಯಿಂದ ಗುರುತಿಸಿ. ಕಡಿಮೆ ವೆಚ್ಚದಲ್ಲಿ ಮೂಲ ಫೋನ್‌ನ ಬ್ಯಾಟರಿ ಮತ್ತು ಚಾರ್ಜರ್ ಬಳಸಲು ಎಂದಿಗೂ ಸಾಧ್ಯವಿಲ್ಲ.

ವಾರಂಟಿ

ವಾರಂಟಿ

12 ತಿಂಗಳ ವಾರಂಟಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ, ಯಾವುದೇ ಮೌಖಿಕ ಒಪ್ಪಂದವನ್ನು ಎಂದಿಗೂ ನಂಬಬೇಡಿ. ನಕಲಿ ಫೋನ್‌ಗಳು ಕಡಿಮೆ ಖಾತರಿ ಅವಧಿಯನ್ನು ನೀಡುತ್ತವೆ. ಏಕೆಂದರೆ, ಯಾವಾಗ ಹಾಳಾಗುತ್ತವೆ ಎಂಬುದು ಯಾರಿಗೂ ಗೊತ್ತಿರಲ್ಲ.

Best Mobiles in India

English summary
How To Identify Fake Phones: Everything You Need To Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X