Home
ಟೆಕ್ ನೌಕರಿ

ವಾಟ್ಸಾಪ್‌ ಚಾಟ್‌ ಹಿಸ್ಟರಿಯನ್ನು ಟೆಲಿಗ್ರಾಮ್‌ಗೆ ಸೇರಿಸುವುದು ಹೇಗೆ?

ಪ್ರಸ್ತುತ ವಾಟ್ಸಾಪ್‌ನ ಹೊಸ ಸೇವಾ ನಿಯಮದ ಬಗ್ಎಯೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ವಾಟ್ಸಾಪ್‌ ತನ್ನ ಹೊಸ ಗೌಪ್ಯತೆ ನೀತಿಯನ್ನು ಪ್ರಕಟಿಸಿದ ನಂತರ ಬಳಕೆದಾರರ ಅಸಮಾದಾನಕ್ಕೆ ಕಾರಣವಾಇದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ವಾಟ್ಸಾಪ್‌ಗೆ ಪರ್ಯಾಯವಾದ ಟೆಲಿಗ್ರಾಮ್‌ ಹಾಗೂ ಇತರೆ ಅಪ್ಲಿಕೇಶನ್‌ಗಳತ್ತ ಒಲವು ತೋರುತ್ತಿದ್ದಾರೆ. ಇನ್ನು ಹೆಚ್ಚಿನ ಜನರು ಟೆಲಿಗ್ರಾಮ್‌ ಅಪ್ಲಿಕೇಶನ್‌ ಅನ್ನು ಬಳಸುವುದಕ್ಕೆ ಶುರುಮಾಡಿದ್ದಾರೆ. ಇದೀಗ ಟೆಲಿಗ್ರಾಮ್‌ ಬಳಸುವ ಬಳಕೆದಾರರು ತಮ್ಮ ವಾಟ್ಸಾಪ್‌ ಚಾಟ್‌ ಅನ್ನು ಟೆಲಿಗ್ರಾಮ್‌ಗೆ Import ಮಾಡಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಿಂದ ಟೆಲಿಗ್ರಾಮ್‌ಗೆ ಹೋಗುತ್ತೀರಾ? ವಾಟ್ಸಾಪ್‌ನ ಚಾಟ್‌ಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದೀರಾ? ಚಿಂತೆ ಬೇಡ ಏಕೆಂದರೆ ವಾಟ್ಸಾಪ್ ಬಳಕೆದಾರರು ವಾಟ್ಸಾಪ್‌ನಲ್ಲಿರುವ ಚಾಟ್‌ ಹಿಸ್ಟರಿಯನ್ನು ಟೆಲಿಗ್ರಾಮ್‌ಗೆ ಸರಿಸಬಹುದಾಗಿದೆ. ವಾಟ್ಸಾಪ್‌ ಚಾಟ್ ಅನ್ನು ಸೇರಿಸಿಕೊಳ್ಳುವ ಹೊಸ ಫಿಚರ್ಸ್‌ ಅನ್ನು ಟೆಲಿಗ್ರಾಮ್‌ ತನ್ನ ಆವೃತ್ತಿ 7.4 ರಲ್ಲಿ ಪರಿಚಯಿಸಿದೆ. ಹಾಗಾದ್ರೆ ವಾಟ್ಸಾಪ್‌ ಚಾಟ್‌ ಅನ್ನು ಟೆಲಿಗ್ರಾಮ್‌ಗೆ ಸೇರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ನ ಹೊಸ ಅಪ್ಡೇಟ್‌ ವಾಟ್ಸಾಪ್‌ ಚಾಟ್‌ ಹಿಸ್ಟರಿಯನ್ನು Import ಅನ್ನು ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಈ ಅಪ್ಡೇಟ್‌ ಹೆಚ್ಚಿನ ಗೌಪ್ಯತೆ ಫೀಚರ್ಸ್‌ಗಳನ್ನು ಸಹ ತರುತ್ತದೆ. ನಿಮ್ಮ ಚಾಟ್‌ ಹಿಸ್ಟರಿಯನ್ನು ವಾಟ್ಸಾಪ್, ಲೈನ್ ಮತ್ತು ಕಾಕಾವೊಟಾಕ್‌ನಂತಹ ಇತರ ಅಪ್ಲಿಕೇಶನ್‌ಗಳಿಂದ ಟೆಲಿಗ್ರಾಮ್‌ಗೆ ಸೇರಿಸಿ ಎಂದು ಈ ಅಪ್ಡೇಟ್‌ನಲ್ಲಿ ಹೇಳಲಾಗಿದೆ. ಇನ್ನು ಈ ಫೀಚರ್ಸ್‌ ಈಗಿನಂತೆ ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಮತ್ತು ಆಂಡ್ರಾಯ್ಡ್ ಅಪ್ಡೇಟ್‌ ನಂತರದ ಹಂತದಲ್ಲಿ ಬರಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್

ಇನ್ನು ನೀವು ವಾಟ್ಸಾಪ್ ಚಾಟ್‌ ಹಿಸ್ಟರಿಯನ್ನು ಟೆಲಿಗ್ರಾಮ್‌ಗೆ ಸೇರಿಸಬೇಕಾದರೆ ಇತ್ತೀಚಿನ ವಾಟ್ಸಾಪ್‌ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ ಆವೃತ್ತಿಯನ್ನು ಹೊಂದಿರಬೇಕಾಗುತ್ತದೆ. ಅಲ್ಲದೆ, ಈಗಿನಂತೆ ವೈಯಕ್ತಿಕ ಚಾಟ್‌ಗಳನ್ನು ಮಾತ್ರ ಟೆಲಿಗ್ರಾಮ್‌ಗೆ ಸೇರಿಸಿಕೊಳ್ಳಬಹುದು. ಆದರೆ ಬ್ಯಾಚ್‌ನಲ್ಲಿ ಸಂಭಾಷಣೆಗಳನ್ನು ಆಮದು ಮಾಡಿಕೊಳ್ಳಲು ಯಾವುದೇ ಆಯ್ಕೆಗಳಿಲ್ಲ, ಆದ್ದರಿಂದ ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇನ್ನು ನಿಮ್ಮ ವಾಟ್ಸಾಪ್ ಚಾಟ್ ಹಿಸ್ಟರಿಯನ್ನು ಟೆಲಿಗ್ರಾಮ್‌ಗೆ ಹೇಗೆ ಆಮದು ಮಾಡಿಕೊಳ್ಳಬೇಕು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಾಟ್ಸಾಪ್‌ ಚಾಟ್‌ ಹಿಸ್ಟರಿಯನ್ನು ಟೆಲಿಗ್ರಾಮ್‌ಗೆ ಆಮದು ಮಾಡುವುದು ಹೇಗೆ?

ವಾಟ್ಸಾಪ್‌ ಚಾಟ್‌ ಹಿಸ್ಟರಿಯನ್ನು ಟೆಲಿಗ್ರಾಮ್‌ಗೆ ಆಮದು ಮಾಡುವುದು ಹೇಗೆ?

ಹಂತ 1: ನೀವು ಟೆಲಿಗ್ರಾಮ್‌ಗೆ ಆಮದು ಮಾಡಲು ಬಯಸುವ ವಾಟ್ಸಾಪ್‌ನಲ್ಲಿ ಚಾಟ್ ತೆರೆಯಿರಿ.

ಹಂತ 2: ಸಂಪರ್ಕ ಮಾಹಿತಿ ಮೆನುವಿನಿಂದ, "Export ಚಾಟ್" ಆಯ್ಕೆಮಾಡಿ.

ಹಂತ 3: ಇಲ್ಲಿ, ಬಳಕೆದಾರರಿಗೆ ಎರಡು ಆಯ್ಕೆಗಳನ್ನು ನೀಡಲಾಗುವುದು: "Attach Media" ಅಥವಾ "Without Media" ಯಾವ ಚಾಟ್‌ಗೆ ಸಂಬಂಧಿಸಿದ ಮೀಡಿಯಾವನ್ನು ಅವರು ಬಯಸುತ್ತಾರೋ ಇಲ್ಲವೋ ಎಂಬುದನ್ನು ಅವಲಂಬಿಸಿ ಅವರು ಆಯ್ಕೆ ಮಾಡಬಹುದು.

ಹಂತ 4: ಈಗ ಐಒಎಸ್ ಶೇರ್ ಶೀಟ್‌ನಿಂದ ಟೆಲಿಗ್ರಾಮ್ ಆಯ್ಕೆಮಾಡಿ

ಹಂತ 5: ಬಳಕೆದಾರರು ಆಮದು ಮಾಡಿದ ವಾಟ್ಸಾಪ್ ಚಾಟ್ ಅನ್ನು ನಿಯೋಜಿಸಲು ಬಯಸುವ ಸಂಪರ್ಕವನ್ನು ಆಯ್ಕೆ ಮಾಡಬಹುದು.

ಹಂತ 6: ಅಂತಿಮವಾಗಿ, "Import" ಆಯ್ಕೆಮಾಡಿ.

Best Mobiles in India

English summary
Telegram now allows users to import their WhatsApp chat history. We take a look at how to move your WhatsApp chats to Telegram.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+