ಮೊಬೈಲ್‌ ಬ್ಯಾಟರಿ ಬ್ಯಾಕಪ್‌ ಹೆಚ್ಚಿಸಿಕೊಳ್ಳುವುದು ಹೇಗೆ?

Posted By: Staff
ಮೊಬೈಲ್‌ ಬ್ಯಾಟರಿ ಬ್ಯಾಕಪ್‌ ಹೆಚ್ಚಿಸಿಕೊಳ್ಳುವುದು ಹೇಗೆ?

ಮೊಬೈಲ್‌ ಫೋನ್‌ ದಿನೇ ದಿನೇ ಬಳಸುತ್ತಾ ಹೋದಂತೆ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಯೆಂದರೆ ಬ್ಯಾಟರಿ ಬ್ಯಾಕಪ್‌. ಕೆಲವೊಮ್ಮೆಯಂತೂ ಸರಿಯಾದ ಸಮಯಕ್ಕೇ ಬ್ಯಾಟರಿ ಖಾಲಿ ಆಗಿ ಹೋಗಿರುತ್ತದೆ. ಹಾಗಂತಾ ಎಲ್ಲಡೆಗೂ ಚಾರ್ಜರ್‌ ತೆಗೆದುಕೊಂಡು ಹೋಗುವುದಕ್ಕಂತೂ ಸಾಧ್ಯ ವಾಗುವುದಿಲ್ಲಾ. ಹಾಗಿದ್ದಲ್ಲಿ ಮಾಡುವುದಾದರೂ ಏನ್ನು ಬ್ಯಾಟರಿ ಬ್ಯಾಕಪ್ ಸಮಸ್ಯೆಗೆ ಪರಿಹಾರ ಇಲ್ವಾ ಖಂಡಿತಾ ಇದೆ ನಿಮ್ಮ ಮೋಬೈಲ್‌ ಫೋನ್‌ನ ಬ್ಯಾಟರಿ ಬ್ಯಾಕಪ್‌ ಹೇಗೆ ಹೆಚ್ಚಿಸಿಕೊಳ್ಳ ಬಹುದು ಎಂಬುದನ್ನು ಈ ಕೆಳಗಿನ ಸ್ಟೆಪ್ಸ್‌ಗಳನ್ನು ಅನುಸರಿಸುವ ಮೂಲಕ ಉತ್ತಮ ಬ್ಯಾಟರಿ ಲೈಫ್‌ ಪಟೆದುಕೊಳ್ಳಿ.

ಸ್ಟೆಪ್‌ 1: ಮೊದಲಿಗೆ ಅತಿ ಮುಖ್ಯವಾದ ಅಂಶವೇನೆಂದರೆ ಮೊಬೈಲ್‌ ಫೋನ್‌ನ ಅಗತ್ಯ ಇಲ್ಲದೇ ಇದ್ದಂತಹ ಸಂಧರ್ಭಗಳಲ್ಲಿ ಸಿವಿಚ್‌ ಆಫ್‌ ಮಾಡಿ ಇಡಿ. ಅಂದರೆ ಕೆಲಸ ಕಾರ್ಯಗಳಲ್ಲಿ ತೊಡಗಿರುವಾಗ ಅಥವಾ ತರಗತಿಯಲ್ಲಿರುವಾಗ ಇಂತಹ ಸಂದರ್ಭಗಳಲ್ಲಿ ನೀವು ನಿಮ್ಮ ಮೊಬೈಲ್‌ ಫೋನ್‌ ಸ್ವಿಚ್‌ ಆಪ್‌ ಮಾಡಿ. ನಿಮಗೆ ಸಗತ್ಯವಿದ್ದ ಸಂಧರ್ಭಗಳಲ್ಲಿ ಮಾತ್ರವಷ್ಟೇ ಮೊಬೈಲ್‌ ಫೋನ್‌ ಬಳಸಿ.

ಸ್ಟೆಪ್‌ 2: ಪದೇ ಪದೇ ಸಿಗ್ನಲ್‌ ಹುಡುಕಾಟ ಮಾಡುವುದನ್ನು ನಿಲ್ಲಿಸಿ. ನೀವು ಸರಿಯಾಗಿ ನೆಟ್ವರ್ಕ್‌ ಸಿಗದೇ ಇರುವಂತಹ ಪ್ರದೇಶದಲ್ಲಿದ್ದರೆ ಉತ್ತಮ ನೆತ್ವರ್ಕ್‌ಗೆ ಬದಲಾಯಿಸಿಸಿಕೊಳ್ಳಿ. ಏಕೆಂದರೆ ಪದೇ ಪದೇ ನೆಟ್ವರ್ಕ್‌ ಸರ್ಚ್‌ ಮಾಡುವುದರಿಂದ ಬ್ಯಾಟರೀ ಹೆಚ್ಚು ಖರ್ಚಾಗುತ್ತದೆ.

ಸ್ಟೆಪ್‌ 3: ವೈಬ್ರೇಟ್‌ ಮೋಡ್‌ ಆಫ್ ಮಾಡಿ, ನಿಮ್ಮ ಫೋನ್‌ ವೈಬ್ರೇಟ್‌ ಮೋಡ್‌ನಲ್ಲಿ ಇಟ್ಟಲ್ಲಿ ಹೆಚ್ಚಿನ ಬ್ಯಾಟರಿ ಬಳಸಿಕೊಳ್ಳುತ್ತದೆ. ಇದಕ್ಕಡ ಬದಲಾಗಿ ರಿಂಗ್‌ ಟೋನ್‌ ಬಳಸುವುದು ಸೂಕ್ತ್‌. ಅಂದಹಾಗೆ ರಿಂಗ್‌ ಟೋನ್‌ ಬಳಸುವಾಗ ಆದಷ್ಟು ಕಡಿಮೆ ವಾಲ್ಯೂಮ್‌ ಬಳಸಿ.

ಸ್ಟೆಪ್‌ 4: ನೀವು ಉತ್ತಮ ಬೆಳಕಿರುವ ಜಾಗದಲ್ಲಿದ್ದಾಗ ಪರದೆ ಮೇಲಿನ ಅಕ್ಷರಗಳನ್ನು ಸುಲಭ್ವಾಗಿ ಓದಲು ಶಕ್ತವಾದಲ್ಲಿ ನಿಮ್ಮ ಮೊಬೈಲ್‌ನಲ್ಲಿನ ಬ್ಯಾಕ್‌ಲೈಟ್‌ ಫೀಚರ್ಸ್‌ ಆಫ್‌ನಲ್ಲಿಡಿ. ಅಂದಹಾಗೆ ಇಂದು ಬಹುತೇಕ ಮೊಬೈಲ್‌ ಫೋನ್‌ಗಳಲ್ಲಿ ಎಂದು ಬ್ಯಾಕ್‌ ಲೈಟ್‌ ಆನ್‌ನಲ್ಲಿ ಇಡಬೇಕು ಹಾಗೂ ಆಫನಲ್ಲಿಡ ಬೇಕು ಎಂಬ ಆಫ್ಷನ್ಸ್‌ ಸಹಿತವಾಗಿ ಬರುತ್ತದೆ. ಈ ಆಪ್ಷನ್ಸ್‌ನ ಸದುಪಯೋಗ ಮಾಡಿಕೊಳ್ಳಿ.

ಸ್ಟೆಪ್‌ 5: ಬ್ಲೂಟೂತ್‌ ಹಾಗೂ Wi-Fi ನ ಅಗತ್ಯ ಇಲ್ಲದೇ ಇದ್ದಾಗ ಆಫ್‌ನಲ್ಲಿಡಿ.ಈ ಎರಡೂ ಫೀಚರ್ಸ್‌ಗಳೇ ನಿಂಮ್ಮ ಮೊಬೈಲ್‌ನ ಬಹುತೇಕ ಬ್ಯಾಟರೀ ಹೀರಿಬಿಡುತ್ತದೆ. ಈ ಫೀಚರ್ಸ್‌ಗಳನ್ನು ಆಫ್‌ನಲ್ಲಿ ಇರಿಸಿದಲ್ಲಿ ನಿಮ್ಮ ಮೊಬೈಲ್‌ನ ಬ್ಯಾಟರೀ ಲೈಫ ಹೆಚ್ಚುತ್ತದೆ.

ಸ್ಟೆಪ್‌ 6: ಮೊಬೈಲ್‌ ಫೋನ್‌ ಕ್ಯಾಮೆರಾ ಬಳಸುವುದನ್ನು ಕಡಿಮೆ ಮಾಡಿ ಇದರಿಂದ ಕ್ಯಾಮೆರಾ ಮೂಲಕ ಹರಿದು ಹೋಗುವ ಬಹುತೇಕ ಬ್ಯಾಟರಿಯನ್ನು ಉಳಿಸಬಹುದಾಗಿದೆ. ಅದರಲ್ಲಿಯೂ ಫ್ಲಾಷ್‌ ಆನ್‌ ಮಾಡಿದ್ದಲ್ಲಿ ಬಹುತೇಕ ಬ್ಯಾಟರೀ ಕಳೆದುಕೊಳ್ಳುತ್ತದೆ..ಆದ್ದರಿಂದ ನಿಮ್ಮ ಮೋಬೈಲ್‌ನ ಬ್ಯಾಟರೀ ಬ್ಯಾಕಪ್‌ ಹೆಚ್ಚಾಗ ಬೇಕಿದ್ದಲ್ಲಿ ಮೊಬೈಲ್‌ ಅನ್ನು ಕ್ಯಾಮೆರಾ ರೀತಿ ಬಳಸುವುದನ್ನು ಕಡಿಮೆ ಮಾಡಿ.

ಸ್ಟೆಪ್‌ 7: ನಿಮ್ಮ ಮೊಬೈಲ್‌ನ ಬ್ಯಾಟರೀ ಶೇ.25% ಕೀಂತ ಕಡಿಮೆ ಇದ್ದಲ್ಲಿ ಮಾತ್ರವಷ್ಟೇ ಚಾರ್ಜ್‌ ಮಾಡಿ. ಅಂದಹಾಗೆ ಚಾರ್ಜ್‌ನಿಂದ ತೆಗೆಯುವಾಗ ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ ಆಗಿದೆ ಎಂಬುದನ್ನು ಗಮನದಲ್ಲಿರಿಸಿ ಹಾಗು ಗಂಟೆಗಳ ಸಮಯ ಚಾರ್ಜಿಂಗ್‌ ನಲ್ಲಿ ಬಿಡುವುದು ಹಾಗೂ ರಾತ್ರಿ ಪೂರಾ ಚಾರ್ಜ್‌ಗೆ ಹಾಕಿ ಇಡುವುದರಿಂದ ನಿಮ್ಮ ಬ್ಯಾಟರಿ ಕ್ಷಮತೆ ಕಡಿಮೆಯಾಗಿ ಹೋಗುತ್ತದೆ ಆದ್ದರಿಂದ ಈ ರೀತಿ ಆಗದಂತೆ ಎಚ್ಚರ ವಹಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot