Just In
- 3 min ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 17 min ago
ಬ್ಯಾಂಕ್ ಹೆಸರಲ್ಲಿ ಬಂದ ಎಸ್ಎಮ್ಎಸ್ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 2 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 2 hrs ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
Don't Miss
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್
- News
ಬೆಂಗಳೂರು: ಮುಂದಿನ 4 ದಿನಗಳಲ್ಲಿ ಕನಿಷ್ಠ ತಾಪಮಾನ, ಮೋಡ ಕವಿದ ವಾತವರಣ, ಎರಡು ದಿನ ಮಳೆ- ಇಲ್ಲಿದೆ ಮಾಹಿತಿ
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Movies
ಅದಿತಿಯನ್ನು ಭೇಟಿಯಾಗ್ತಾನಾ ಧ್ರುವ? ಆದ್ಯ ಪ್ಲಾನ್ ಸುಹಾಸಿನಿ ಮುಂದೆ ವರ್ಕ್ ಆಗುತ್ತಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೂಗಲ್ ಕ್ರೋಮ್‌ನಲ್ಲಿ ಅಕ್ಷರ ಗಾತ್ರ ಹೆಚ್ಚಿಸುವುದು ಹೇಗೆ..?
ವಿಂಡೋಸ್, ಆಂಡ್ರಾಯ್ಡ್, ಐಒಎಸ್ ಸೇರಿದಂತೆ ಪ್ರತಿಯೊಂದು ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಬಳಕೆಯಾಗುವ ಬ್ರೌಸರ್ ಎಂದರೆ ಗೂಗಲ್ ಕ್ರೋಮ್. ಈ ವೆಬ್ ಬ್ರೌಸರ್ ಬಳಕೆದಾರರಿಗೆ ಥೀಮ್ ಬೆಂಬಲ, ಎಕ್ಸ್‌ಟೆನ್ಷನ್‌ನಂತಹ ಹಲವು ವೈಶಿಷ್ಟ್ಯಗಳನ್ನು ನೀಡುತ್ತಿದೆ. ಆದರೆ, ಬಳಕೆದಾರರಿಗೆ ಕ್ರೋಮ್‌ನಲ್ಲಿ ಅಕ್ಷರ ಗಾತ್ರವನ್ನು ಹೆಚ್ಚಿಸುವುದು ಹೇಗೆ ಎಂಬುದು ಇನ್ನು ತಿಳಿದಿಲ್ಲ.

ಡೆಸ್ಕ್‌ಟಾಪ್‌ನಂತೆ ಆಂಡ್ರಾಯ್ಡ್ ಸಾಧನಗಳಲ್ಲೂ ಅಕ್ಷರ ಗಾತ್ರವನ್ನು ಹೆಚ್ಚಿಸಬಹುದಾದ ಫೀಚರ್‌ನ್ನು ಕ್ರೋಮ್ ನೀಡಿದೆ. ಇದಕ್ಕಾಗಿಯೇ ವೆಬ್ ಸ್ಟೋರ್‌ನಲ್ಲಿ ಅನೇಕ ಕ್ರೋಮ್ ಎಕ್ಸ್‌ಟೆನ್ಷನ್‌ಗಳು ದೊರೆಯುತ್ತವೆ. ಆದರೆ, ಆಂಡ್ರಾಯ್ಡ್ ಸಾಧನಗಳಲ್ಲಿ ಬಳಸುವ ವೆಬ್ ಬ್ರೌಸರ್‌ನಲ್ಲಿ ಎಕ್ಸ್‌ಟೆನ್ಷನ್ ಬೆಂಬಲ ಲಭ್ಯವಿಲ್ಲ. ಆದ್ದರಿಂದ, ಬಳಕೆದಾರರು ಕ್ರೋಮ್‌ನ ಆಂತರಿಕ ಸೆಟ್ಟಿಂಗ್‌ಗಳನ್ನು ಅವಲಂಬಿಸಬೇಕಾಗುತ್ತದೆ.

ಗೂಗಲ್ ಕ್ರೋಮ್‌ನಲ್ಲಿ ಪಠ್ಯದ ಗಾತ್ರ ಹೆಚ್ಚಿಸಲು ನಿಮಗೆ ಅನೇಕ ಕಾರಣಗಳಿವೆ. ಪಠ್ಯದ ಗಾತ್ರ ಕಡಿಮೆಯಿದ್ದರೆ ಪುಟದಲ್ಲಿ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಅದರಂತೆ, ಪಠ್ಯ ಗಾತ್ರ ಹೆಚ್ಚಿಸುವುದರಿಂದ ಓದಲು ಹೆಚ್ಚು ಆರಾಮದಾಯಕವಾಗುತ್ತದೆ. ಹಾಗಿದ್ರೆ, ಅಕ್ಷರದ ಗಾತ್ರ ಹೇಗೆ ಹೆಚ್ಚಿಸುವುದು ಅಂತೀರಾ ಮುಂದೆ ನೋಡಿ.

ಆಂಡ್ರಾಯ್ಡ್‌ನಲ್ಲಿ ಮಾತ್ರ
ನಾವು ಕೆಳಗೆ ತಿಳಿಸುತ್ತಿರುವ ವಿಧಾನ ಆಂಡ್ರಾಯ್ಡ್ ಸಾಧನಗಳಿಗೆ ಮಾತ್ರ ಅನ್ವಯವಾಗುತ್ತದೆ. ಮತ್ತು ಈ ವಿಧಾನ ಗೂಗಲ್ ಕ್ರೋಮ್‌ನ ಐಫೋನ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ಆಂಡ್ರಾಯ್ಡ್‌ನಲ್ಲಿ ಗೂಗಲ್ ಕ್ರೋಮ್‌ನ ಅಕ್ಷರ ಗಾತ್ರವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಮುಂದಿನ ಹಂತಗಳಲ್ಲಿ ತಿಳಿಯೋಣ.

ಹಂತ - 1
ಮೊದಲು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್‌ನ್ನು ಒಪನ್ ಮಾಡಿ.

ಹಂತ - 2
ಮುಂದಿನ ಹಂತದಲ್ಲಿ, ಬಲ ಮೂಲೆಯಲ್ಲಿರುವ ಮೂರು ಚುಕ್ಕಿಗಳ ಮೇಲೆ ಟ್ಯಾಪ್ ಮಾಡಿ, ಸೆಟ್ಟಿಂಗ್ಸ್ ಆಯ್ಕೆಯನ್ನು ಆಯ್ದುಕೊಳ್ಳಿ.
ಹಂತ - 3
ಈಗ, ಸೆಟ್ಟಿಂಗ್ ಪೇಜ್‌ನಲ್ಲಿರುವ ಅಕ್ಸೆಸಿಬಿಲಿಟಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ - 4
ಅಕ್ಸೆಸಿಬಿಲಿಟಿ ಪೇಜ್‌ನಲ್ಲಿ ನೀವು ಟೆಕ್ಸ್ಟ್ ಸ್ಕೇಲಿಂಗ್ ಎಂಬ ಆಯ್ಕೆಯನ್ನು ಕಾಣುತ್ತೀರಿ. ಇಲ್ಲಿ ನಿಮಗೆ ಬೇಕಾದಷ್ಟು ಅಕ್ಷರಗಳ ಗಾತ್ರವನ್ನು ಹೆಚ್ಚಿಸಬಹುದಾಗಿದೆ. ಇಷ್ಟು ಮಾಡಿದರೆ, ನಿಮಗೆ ಬೇಕಾದ ಗಾತ್ರದಲ್ಲಿ ನಿಮ್ಮ ನೆಚ್ಚಿನ ವೆಬ್‌ಸೈಟ್‌ಗಳ ಮಾಹಿತಿಯನ್ನು ಓದಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470