ಆಂಡ್ರಾಯ್ಡ್ ಕ್ಯೂ ಬೇಟಾ 3 ನಿಮ್ಮ ಮೊಬೈಲಿಗೂ ಇನ್ಸ್ಟಾಲ್ ಮಾಡಲು ಸಾಧ್ಯವೇ?
ಟೆಕ್ನಾಲಜಿ ದೈತ್ಯ ಎಂದು ಕರೆಸಿಕೊಳ್ಳುವ ಗೂಗಲ್ ಸಂಸ್ಥೆ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಕ್ಯೂನ ಮೂರನೇ ನೂತನ ಬೇಟಾ ವರ್ಷನ್ ನ್ನು ಬಿಡುಗಡೆಗೊಳಿಸಿದೆ. ಸದ್ಯ ನಡೆಯುತ್ತಿರುವ ಗೂಗಲ್ ನ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್ ಗೂಗಲ್ ಐ/ಓ 2019 ರಲ್ಲಿ ಕಂಪೆನಿ ಇದನ್ನು ಪ್ರಕಟಿಸಿದೆ. ಆಂಡ್ರಾಯ್ಡ್ ಕ್ಯೂ ನ ಮೊದಲ ವರ್ಷನ್ ನ್ನು ಮಾರ್ಚ್ ನಲ್ಲಿ ಮತ್ತು ಎರಡನೇ ವರ್ಷನ್ ನ್ನು ಗೂಗಲ್ ಸಂಸ್ಥೆ ಎಪ್ರಿಲ್ ನಲ್ಲಿ ಬಿಡುಗಡೆಗೊಳಿಸಿತ್ತು.

ಹೊಸ ಬೇಟಾ ವರ್ಷನ್ ಪಿಕ್ಸಲ್ ಸ್ಮಾರ್ಟ್ ಫೋನ್ ಗಳಿಗೆ ಮತ್ತು 15 ನಾನ್-ಗೂಗಲ್ ಸ್ಮಾರ್ಟ್ ಫೋನ್ ಗಳಲ್ಲಿ ಬರಲಿದೆ. ಈ ಲಿಸ್ಟ್ ನಲ್ಲಿ ಒಪ್ಪೋ, ಶಿಯೋಮಿ, ಒನ್ ಪ್ಲಸ್, ರಿಯಲ್ ಮಿ, ನೋಕಿಯಾ ಮತ್ತು ಇತ್ಯಾದಿಗಳು ಸೇರಿವೆ. ಅರ್ಹವಿರುವ ಡಿವೈಸ್ ಗಳನ್ನು ನೀವು ಇಲ್ಲಿ ಪರೀಕ್ಷಿಸಬಹುದು. (https://developer.android.com/preview/devices)
ಒಂದು ವೇಳೆ ನಿಮ್ಮ ಬಳಿ ನಾನ್-ಗೂಗಲ್ ಡಿವೈಸ್ ಇದ್ದರೆ ಮತ್ತು ಆಂಡ್ರಾಯ್ಡ್ ಕ್ಯೂ ಬೇಟಾ 3 ಯನ್ನು ಇನ್ಸ್ಟಾಲ್ ಮಾಡಲು ಇಚ್ಛಿಸಿದರೆ ನಾವಿಲ್ಲಿ ನಿಮಗೆ ಕೆಲವು ಮಾಹಿತಿಗಳನ್ನು ನೀಡುತ್ತಿದ್ದೇವೆ. ಆಂಡ್ರಾಯ್ಡ್ ಕ್ಯೂ ಬೇಟಾ ವರ್ಷನ್ ನ್ನು ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ಇದು ಬೇಟಾ ವರ್ಷನ್ ಮತ್ತು ಸ್ಟೇಬಲ್ ಆಗಿ ಇನ್ನೂ ಬಿಡುಗಡೆಗೊಂಡಿಲ್ಲ ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ.
ಹಾಗಾಗಿ ಕೆಲವು ಅಥವಾ ಹಲವು ಸಮಸ್ಯೆಗಳು ಇರುವ ಸಾಧ್ಯತೆ ಇದೆ. ನಿಮ್ಮ ಪ್ರಮುಖ ಫೋನ್ ನಲ್ಲಿ ಇದನ್ನು ಇನ್ಸ್ಟಾಲ್ ಮಾಡಿಕೊಳ್ಳುವುದು ಉತ್ತಮ ಮಾರ್ಗವಲ್ಲ ಎಂಬುದು ನಿಮಗೆ ನೆನಪಿರಲಿ. ಒಂದು ವೇಳೆ ಇನ್ಸ್ಟಾಲ್ ಮಾಡಲು ನೀವು ಬಯಸಿದ್ದೇ ಆದಲ್ಲಿ ಸಂಪೂರ್ಣ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವುದನ್ನು ಮರೆಯಬೇಡಿ. ಒಂದು ವೇಳೆ ಯಾವುದಾದರೂ ತಪ್ಪು ನಡೆದರೆ ನಿಮ್ಮ ಬಳಿ ಡಾಟಾ ಸೇಫ್ ಆಗಿ ಇರುತ್ತದೆ ಎಂಬ ಖಾತ್ರಿ ಇರುತ್ತದೆ.
ಹೇಗೆ ಇನ್ಸ್ಟಾಲೇಷನ್

Step: 1
ಇದನ್ನು ಪ್ರಾರಂಭಿಸುವುದಕ್ಕೆ ಮೊದಲು ನೀವು ಬೇಟಾ ಪ್ರೋಗ್ರಾಮ್ ಗೆ ಎನ್ರೋಲ್ ಆಗಬೇಕು. ಇದಕ್ಕಾಗಿ ನೀವು ನಿಮ್ಮ ಗೂಗಲ್ ಅಕೌಂಟ್ ಗೆ ಸೈನ್ ಇನ್ ಆಗಬೇಕು. ಇದಕ್ಕಾಗಿ ನೀವು google.com/android/beta ಗೆ ವಿಸಿಟ್ ಮಾಡಿ. ಇದು ಅರ್ಹವಿರುವ ಡಿವೈಸ್ ಗಳ ಪಟ್ಟಿಯನ್ನು ನೀಡುತ್ತದೆ.

Step :2
ಒಮ್ಮೆ ವೆಬ್ ಪೇಜ್ ಗೆ ತೆರಳಿದ ನಂತರ ನೀವು ನಿಮ್ಮ ಸ್ಮಾರ್ಟ್ ಫೋನ್ ನ್ನು ಈ ಪ್ರೋಗ್ರಾಮ್ ಗಾಗಿ ಎನ್ರೋಲ್ ಮಾಡಬೇಕು.

Step: 3
ಎನ್ರೋಲ್ ನ್ನು ಕ್ಲಿಕ್ ಮಾಡಿದ ನಂತರ ನೀವು ಒಂದು ನೋಟಿಫಿಕೇಷನ್ ನ್ನು ನಿಮ್ಮ ರಿಜಿಸ್ಟರ್ ಆಗಿರುವ ಸ್ಮಾರ್ಟ್ ಫೋನಿಗೆ ಪಡೆದುಕೊಳ್ಳುತ್ತೀರಿ ಮತ್ತು ಅದರಲ್ಲಿ ಸಿಸ್ಟಮ್ ಅಪ್ ಡೇಟ್ ಗೆ ರೆಡಿಯಾಗಿದೆ ಎಂಬ ಮೆಸೇಜ್ ಇರುತ್ತದೆ.

Step: 4
ಅದನ್ನು ಇನ್ಸ್ಟಾಲ್ ಮಾಡುವುದಕ್ಕೂ ಆಯ್ಕೆ ಇರುತ್ತದೆ. ಈ ಪ್ರೊಸೆಸ್ ನಿಮ್ಮ ಹ್ಯಾಂಡ್ ಸೆಟ್ ನ್ನು ಸ್ವಯಂಚಾಲಿತವಾಗಿ ರೀಸ್ಟಾರ್ಟ್ ಮಾಡುತ್ತದೆ ಮತ್ತು ನಿಮ್ಮ ಬಳಿ ನೂತನ ಓಎಸ್ ವರ್ಷನ್ ಇರುತ್ತದೆ. ಅದುವೇ ಆಂಡ್ರಾಯ್ಡ್ ಕ್ಯೂ ಬೇಟಾ 3.
ಈ ರೀತಿಯಾಗಿ ನೀವು ಆಂಡ್ರಾಯ್ಡ್ ಕ್ಯೂ ಬೇಟಾ ವರ್ಷನ್ ನ್ನು ರನ್ ಮಾಡಬಹುದು. ಈ ಲಾಂಗ್ ರನ್ ನಲ್ಲಿ ಗೂಗಲ್ ಓಎಸ್ ಅಪ್ ಡೇಟ್ ನ ಸೆಕ್ಯುರಿಟಿಯ ಬಗ್ಗೆ ಭರವಸೆ ನೀಡಿದೆ..
ಕಂಪೆನಿಯು ಆಂಡ್ರಾಯ್ಡ್ ಕ್ಯೂ ಮೂಲಕ ಮೂರು ಪ್ರಮುಖ ಪ್ರದೇಶವನ್ನು ಹೆಚ್ಚು ಕೇಂದ್ರೀಕರಿಸುತ್ತದೆ: ಸಂಶೋಧನೆ, ಭದ್ರತೆ ಮತ್ತು ಸುರಕ್ಷತೆ, ಡಿಜಿಟಲ್ ಆರೋಗ್ಯ . ಗೂಗಲ್ ನ ಹೊಸ ಓಎಸ್ ನ್ನು ನೀವು ಅನುಭವಿಸಬೇಕು ಎಂದು ಬಯಸಿದ್ದಲ್ಲಿ ಮೇಲಿನ ಸಿಂಪಲ್ ವಿಧಾನವನ್ನು ಅನುಸರಿಸಿಕೊಳ್ಳಬಹುದು. ಸೂಚನೆ ಏನೆಂದರೆ ರಿಸ್ಕ್ ನಿಮ್ಮ ಮೇಲೆ ನಾವು ಬಿಡುವುದಕ್ಕೆ ಇಚ್ಛಿಸುತ್ತೇವೆ!


Click it and Unblock the Notifications








