Home
ಟೆಕ್ ನೌಕರಿ

ICS ಸ್ಮಾರ್ಟ್‌ಫೋನ್‌ನಲ್ಲಿ ಜೆಲ್ಲಿಬೀನ್‌ ಆಪ್ಸ್‌ ಅಳವಡಿಸೋದು ಹೇಗೆ?

By Super

ICS ಸ್ಮಾರ್ಟ್‌ಫೋನ್‌ನಲ್ಲಿ ಜೆಲ್ಲಿಬೀನ್‌ ಆಪ್ಸ್‌ ಅಳವಡಿಸೋದು ಹೇಗೆ?
ತಯಾರಕುಗಳಿಗೆ ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಬಳಸಿಕೊಳ್ಳಲು ಅವಕಾಶ ನೀಡಿ ಸಾಕಷ್ಟು ಸಮಯ ಕಳೆದಿದೆ. ಆದರೆ ಇಂದು ಬಹುತೇಕ ಮಂದಿ ಆಂಡ್ರಾಯ್ಡ್‌ ICS ಆಪರೇಟಿಂಗ್‌ ಸಿಸ್ಟಂ ಚಾಲಿತ ಉಪಕರಣಗಳನ್ನು ಬಳಸುತ್ತಿದ್ದಾರೆ. ಇದೇರೀತಿ ಬಹಳಷ್ಟು ಬಳಕೆದಾರರು ತಮ್ಮ ಆಂಡ್ರಾಯ್ಡ್‌ ICS ಸಾಧನಗಳಲ್ಲಿ ಜೆಲ್ಲಿಬೀನ್‌ ಆಪ್‌ನ ಅನುಭವ ಪಡೆಯಲು ಕಾತುರರಾಗಿದ್ದಾರೆ. ಇಂತಹ ಮಂದಿಗೆ ಒಂದು ಶುಭ ಸಂದೇಶ ವೇನೆಂದರೆ ಜೆಲ್ಲಿ ಬೀನ್‌ ಆಪ್‌ ಅನ್ನು ಆಂಡ್ರಾಯ್ಡ್‌ ICS ಸಾಧನಗಳಲ್ಲಿ ಬಳಸಬಹುದಾಗಿದೆ.

ಇಮೇಲ್‌ ಕ್ಲೈಂಟ್‌, ಫೇಸ್‌ ಲಾಕ್‌, ಗೂಗಲ್‌ ಬುಕ್ಸ್‌, ಗೂಗಲ್‌ ಕ್ಯಾಲೆಂಡರ್‌, ಅರ್ಥ್‌, ನ್ಯೂಸ್‌, ಮ್ಯೂಸಿಕ್‌, ಗೂಗಲ್‌ ಪ್ಲಸ್‌, ವಿಡಿಯೋ,ಎಡಿಟರ್‌, ನಾಯ್ಸ್‌ ಫೀಲ್ಡ್‌, ಮ್ಯಾಗ್ಜೀನ್‌, ಫೇಸ್‌ ಬೀಮ್‌ ಹಾಗೂ ವಾಲೆಟ್‌ ನಂತಹ ಜೆಲ್ಲಿ ಬೀನ್‌ ಆಪ್ಸ್‌ಗಳು ಆಂಡ್ರಾಯ್ಡ್‌ ICS ನಲ್ಲಿ ಬಳಸಲು ಸಹಕರಿಸುತ್ತದೆ.

ನೆನಪಿರಲಿ ಈ ಆಪ್ಸ್ಗಳನ್ನು ಅಳವಡಿಸುವುದಕ್ಕೂ ಮುನ್ನ ನಿಮ್ಮ ಆಂಡ್ರಾಯ್ಡ್‌ ICS ಸಾಧನಗಳಲ್ಲಿ ಕ್ಲಾಕ್‌ವರ್ಡ್‌ಮೋಡ್‌ ರಿಕವರಿ ಇನ್ಸಟಾಲ್‌ ಮಾಡಿಕೊಳ್ಳ ಬೇಕಾಗುತ್ತದೆ. ಅಂದಹಾಗೆ ನೀವು ಆಂಡ್ರಾಯ್ಡ್ ಹ್ಯಾಕಿಂಗ್‌ ಹಾಗೂ ಮೋಡ್‌ಗಳಿಗೆ ಹೊಸಬರಾಗಿದ್ದಲ್ಲಿ ಮೊದಲಿಗೆ ವಿಶಷ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ಅದರ ಅಳವಡಿಕೆಗೆ ಕೈಹಾಕಿ. ಇದಕ್ಕಲಾ ಸಿದ್ಧ ವಿರುವಂತವರು ಈ ಕೆಳಗಿನ ಸ್ಟೆಪ್ಸ್‌ಗಳನ್ನು ಅನುಸರಿಸುವ ಮೂಲಕ ನಿಮ್ಮ ಆಂಡ್ರಾಯ್ಡ್‌ ಸಾಧನಗಳಲ್ಲಿ ಜೆಲ್ಲಿಬೀನ್‌ ಆಪ್ಸ್‌ ಬಳಸಬಹುದಾಗಿದೆ.

ಸ್ಟೆಪ್‌ 1: ಮೊದಲಿಗೆ ಈ ಮೇಲೆ ತಿಳಿಸಲಾಗಿರುವ ಆಪ್ಸ್‌ಗಳನ್ನು ಡೌನ್ಲೋಡ್‌ ಮಾಡಿಕೊಳ್ಳಿ.

ಸ್ಟೆಪ್‌ 2: USB ಕೇಬಲ್‌ ಮೂಲಕ ನಿಮ್ಮ ಆಂಡ್ರಾಯ್ಡ್‌ ಸಾಧನವನ್ನು ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿ.

ಸ್ಟೆಪ್‌ 3: ನಂತರ ಜೆಲ್ಲಿಬೀನ್‌ ಆಪ್ಸ್‌ಗಳನ್ನು ಆಂಡ್ರಾಯ್ಡ್‌ ಸಾಧನಕ್ಕೆ ವರ್ಗಾಯಿಸಿ.

ಸ್ಟೆಪ್‌ 4: ಕಂಪ್ಯಟರ್‌ನಿಂದ ನಿಮ್ಮ ಸಾಧನವನ್ನು ಡಿಸ್‌ಕನೆಕ್ಟ್‌ ಮಾಡಿ.

ಸ್ಟೆಪ್‌ 5: ನಂತರ ಸಾಧನವನ್ನು ಸ್ವಿಚ್‌ ಆಫ್‌ ಮಾಡಿ.

ಸ್ಟೆಪ್‌ 6: ಇದಾದ ಬಳಿಕ ಕ್ಲಾಕ್‌ವರ್ಡ್‌ಮೋಡ್‌ ರಿಕವರಿ ಮೂಲಕ ಬೂಟ್‌ ಮಾಡಿ.

ಸ್ಟೆಪ್‌ 7: ಎಸ್‌ಡಿ ಕಾರ್ಡ್‌ ನಲ್ಲಿ “Install ZIP” ಸೆಲೆಕ್ಟ್‌ ಮಾಡಿ.

ಸ್ಟೆಪ್‌ 8: “Choose ZIP from sdcard” ಮೇಲೆ ಟ್ಯಾಪ್‌ ಮಾಡಿ.

ಸ್ಟೆಪ್‌ 9: ನಂತರ ಆಪ್ಸ್‌ಗಳನ್ನು ಸೆಲೆಕ್ಟ್‌ ಮಾಡಿ ಇನ್ಸ್ಟಾಲ್‌ ಮಾಡಿಕೊಳ್ಳಿ.

ಸ್ಟೆಪ್‌ 10: ಇನ್ಸ್ಟಾಲ್‌ ಪೂರ್ಣಗೊಂಡ ನಂತರ, “Reboot system now”ಮೇಲೆ ಟ್ಯಾಪ್‌ ಮಾಡಿ.

ಸ್ಟೆಪ್‌ 11: ಸಾಧನವನ್ನು ರಿಸ್ಟಾರ್ಟ್‌ ಮಾಡಿದ ಬಳಿಕ ಜೆಲ್ಲಿ ಬೀನ್‌ ಆಪ್ಸ್‌ ಉಪಯೋಗಿಸಲು ಸಿದ್ದ ವಾಗಿರುತ್ತದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+