ಯುಎಸ್‌ಬಿ ಡ್ರೈವ್ ಮೂಲಕ ವಿಂಡೋಸ್ 8 ಇನ್ಸ್ಟಾಲ್ ಮಾಡುವುದು ಹೇಗೆ?

ಈಗಾಗಲೆ ಬಹುತೇಕ ಮಂದಿ ತಯಾರಕರುಗಳು ನೂತನ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಚಾಲಿತ ಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಹಾಗೂ ವಿಂಡೋಸ್‌ನ ಹಳೆಯ ಮಾದರಿಯ ಆಪರೇಟಿಂಗ್ ಸಿಸ್ಟಂ ಬಳಸುತ್ತಿದ್ದ ಗ್ರಾಹಕರುಗಳು ನೂತನ ಆಪರೇಟಿಂಗ್ ಸಿಸ್ಟಂಗೆ ಅಪ್ಗ್ರೇಡ್ ಮಾಡಿಕೊಳ್ಳುತ್ತಿದ್ದಾರೆ.
ಸಿಡಿ/ಡಿವಿಡಿ ಮೂಲಕ ಅಪ್ಗ್ರೇಡ್ ಮಾಡುವುದು ಕೊಂಚ ನಿಧಾನ ಗತಿಯಲ್ಲಿ ಸಾಗುವುದರಿಂದ, ಹಲವು ಮಂದಿ ನೂತನ ಆಪರೇಟಿಂಗ್ ಸಿಸ್ಟಂ ಅನ್ನು ಯುಎಸ್‌ಬಿ ಡ್ರೈವ್ ಮೂಲಕ ಇಸ್ಟಾಲ್ ಮಾಡಿಕೊಳ್ಳಬಹುದೇ ಎಂದು ಕೇಳುತ್ತಿದ್ದಾರೆ. ಅದಕ್ಕಾಗಿಯೇ ಇಂದು ಗಿಜ್ಬಾಟ್ ಯುಎಸ್‌ಬಿ ಡ್ರೈವ್ ಮೂಲಕ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಇನ್ಸ್ಟಾಲ್ ಮಾಡಿಕೊಳ್ಳುವ ಸರಳ ವಿಧಾನವನ್ನು ತಂದಿದೆ ಒಮ್ಮೆ ಓದಿ ನೋಡಿ.
ಇನ್ಸ್ಟಾಲ್ ಮಾಡಲು ಬೇಕಾಗಿರು ಪರಿಕರಗಳು
- ವಿಂಡೋಸ್ 8 ಡಿವಿಡಿ ಅಥವಾ ಐಎಸ್‌ಒ ಇಮೇಜ್.
- ಮೈಕ್ರೋಸಾಫ್ಟ್ ವಿಂಡೋಸ್ 7 ಯುಎಸ್‌ಬಿ ಡಿವಿಡಿ ಡೌನ್ಲೋಡ್ ಟೂಲ್.
- ವಿಂಡೋಸ್ ಚಾಲಿತ ಪಿಸಿ/ಲ್ಯಾಪ್‌ಟಾಪ್.
- 4ಜಿಬಿ ಅಥವಾ ಅದಕ್ಕೂ ಹೆಚ್ಚಿನ ಸಾಮರ್ತ್ಯದ ಪೆನ್‌ಡ್ರೈವ್.
ಇನ್ಸ್ಟಾಲ್ ಮಾಡಲು ಈ ಕೆಳಗಿನ ಸ್ಟೆಪ್‌ಗಳನ್ನು ಅನುಸರಿಸಿ.
ಸ್ಟೆಪ್ 1: ಮೊದಲಿಗೆ ವಿಂಡೋಸ್ 7 ಯುಎಸ್‌ಬಿ ಡಿವಿಡಿ ಡೌನ್ಲೋಡ್ ಟೂಲ್ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ಸ್ಟೆಪ್ 2: ವಿಂಡೋಸ್ 8 ಡಿವಿಡಿಯಲ್ಲಿ ಆಪರೇಟಿಂಗ್ ಸಿಸ್ಟಂನ ಐಎಸ್‌ಒ(iso) ಇಮೇಜ್ ಸಿದ್ಧ ಪಡಿಸಿಕೊಳ್ಳಿ.
ಸ್ಟೆಪ್ 3: ವಿಂಡೋಸ್ 7 ಯುಎಸ್‌ಬಿ ಡಿವಿಡಿ ಡೌನ್ಲೋಡ್ ಟೂಲ್ ಓಪನ್ ಮಾಡಿಕೊಳ್ಳಿ.
ಸ್ಟೆಪ್ 4: ವಿಂಡೋಸ್ 8 .ಐಎಸ್‌ಓ(iso) ಫೈಲ್‌ಗೆ ಬ್ರೌಸ್ ಮಾಡಿ.
ಸ್ಟೆಪ್ 5: ಯುಎಸ್‌ಬಿ ಡ್ರೈವ್ ಅನ್ನು ಯುಎಸ್‌ಬಿ ಪೋರ್ಟ್‌ಗೆ ಕನೆಕ್ಟ್ ಮಾಡಿ.
ಸ್ಟೆಪ್ 6: ಡಿವಿಡಿ ಡೌನ್ಲೋಡ್ ಟೂಲ್‌ನಲ್ಲಿ ಯುಎಸ್‌ಬಿ ಡಿವೈಸ್ ಸೆಲೆಕ್ಟ್ ಮಾಡಿ.
ಸ್ಟೆಪ್ 7: ‘Begin Copying’ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 8: ನಂತರ ಯುಎಸ್‌ಬಿ ಡ್ರೈವ್ ಎರೇಸ್ ಮಾಡುವಂತೆ ಒಂದು ಸಂದೇಶ ಬರುತ್ತದೆ.
ಸ್ಟೆಪ್ 9: ಡಿವವೈಸ್‌ಗೆ ಡೇಟಾ ಕಾಪಿ ಮಾಡಿಕೊಂಡು ನಂತರ ಎರೇಸ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 10: ನಂತರ ಕಾಪಿ ಆಗಲು ಪ್ರಾರಂಭಿಸುತ್ತದೆ.
ಸ್ಟೆಪ್ 11: ಪ್ರೊಸೆಸ್ ಸಂಪೂರ್ಣವಾಗುವ ವರೆಗೂ ಕಾಯಿರಿ.
ಸ್ಟೆಪ್ 12: ಪ್ರೊಸೆಸ್ ಪೂರ್ಣವಾದ ಬಳಿಕ ವಿಂಡೋಸ್ ಸಂಪೂರ್ಣವಾಗಿ ಕ್ಲೋಸ್ ಮಾಡಿಬಿಡಿ.
ಸ್ಟೆಪ್ 13: ವಿಂಡೋಸ್ 8 ಇನ್ಸ್ಟಾಲ್ ಮಾಡಲು ಬೃಕಾಗಿರುವ ಎಲ್ಲಾ ಫೈಲ್ಸ್‌ಗಳು ಯುಎಸ್‌ಬಿಗೆ ಕಾಪಿಯಾಗಿರುತ್ತದೆ.
ಸ್ಟೆಪ್ 14: ಕಂಪ್ಯೂಟರ್ ರೀಸ್ಟಾರ್ಟ್ ಮಾಡಿ.
ಸ್ಟೆಪ್ 15: BIOS ಸ್ಕ್ರೀನ್ ಮೂಲಕ ಯುಎಸ್‌ಬಿಯಲ್ಲಿ ಬೂಟ್ ಸೆಲೆಕ್ಟ್ ಮಾಡಿ.
ಸ್ಟೆಪ್ 16: ನಂತರ ವಿಂಡೋಸ್ 8 ಇನ್ಸ್ಟಾಲ್ ಮಾಡಲು ತಿಳಿಸಲಾಗುವ ಸ್ಟೆಪ್‌ಗಳನ್ನು ಅನುಸರಿಸಿ.
ಗಮನಿಸಿ : ನಿಮ್ಮ ಸಧ್ಯದ ಆಪರೇಟಿಂಗ್ ಸಿಸ್ಟಂನಿಂದ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂಗೆ ಅಪ್ಗ್ರೇಡ್ ಮಾಡಿಕೊಳ್ಳುವ ಮೊದಲು ವಿಂಡೋಸ್ 8 ಅಪ್ಗ್ರೇಡ್ ಅಸಿಸ್ಟನ್ಸ್ ಬಳಸುವಂತೆ ಮೈಕ್ರೋಸಾಫ್ಟ್ ಸೂಚನೆ ನೀಡಿದೆ. ವಿಂಡೋಸ್ 8 ಅಸಿಸ್ಟನ್ಸ್ ನಿಮ್ಮ ಕಂಪ್ಯೂಟರ್ ನೂತನ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂಗೆ ಸಹಕರಿಸುತ್ತದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ವರದಿ ನೀಡುತ್ತದೆ. ವಿಂಡೋಸ್ 8 ಅಪ್ಗ್ರೇಡ್ ಅಸಿಸ್ಟನ್ಸ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








