Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 12 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 14 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫೇಸ್‌ಬುಕ್ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
"ನನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಶ್ಲೀಲ ವೀಡಿಯೋಗಳು ಪೋಸ್ಟ್ ಆಗುತ್ತಿವೆ. ಆದ್ರೆ ನಾನಂತು ಅಪ್‌ಲೋಡ್ ಮಾಡಿಲ್ಲ. ಹೋ ಗಾಡ್. ಏನಪ್ಪಾ ಮಾಡೋದು. ಮಾನ ಮರ್ಯಾದೇ ಪ್ರಶ್ನೆ. ಯಾರೋ ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿಬಿಟ್ಟಿದ್ದಾರೆ" ಇದು ಇಂದಿನ ಹಲವು ಫೇಸ್‌ಬುಕ್ ಬಳಕೆದಾರರ ಸಮಸ್ಯೆಯಾಗಿ ಬಿಟ್ಟಿದೆ. ಹೌದು, ಇದು ನಿಜವೂ ಹೌದು. ಇಂದು ಫೇಸ್‌ಬುಕ್ ಖಾತೆ ಹ್ಯಾಕರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಖ್ಯಾತ ವ್ಯಕ್ತಿಗಳ ಫೇಸ್‌ಬುಕ್ ಖಾತೆಗಳು ಸಹ ಹ್ಯಾಕ್‌ನಿಂದ ಹೊರತಾಗಿಲ್ಲ.
ಫೇಸ್‌ಬುಕ್ ಖಾತೆಗಳು ಹ್ಯಾಕ್ ಆಗಿ ಅಶ್ಲೀಲ ವೀಡಿಯೋ ಹಾಗೂ ವ್ಯಕ್ತಿಗೆ ಧಕ್ಕೆ ತರುವ ಫೋಟೋಗಳು, ಕಾಮೆಂಟ್ಸ್‌ಗಳನ್ನು ಹಾಕುವ ಚಟುವಟಿಕೆಗಳು ಇಂದು ನಡೆಯುತ್ತಿವೆ. ಈ ರೀತಿಯ ಸಮಸ್ಯೆಯನ್ನು ಅನುಭವಿಸಿದವರು ತಮ್ಮ ಇಮೇಜ್ ಕಾಪಾಡಿಕೊಳ್ಳಲು "ನನ್ನ ಫೇಸ್‌ಬುಕ್ ಹ್ಯಾಕ್ ಆಗಿದೆ. ಯಾರಾದರೂ ನನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಶ್ಲೀಲ ವೀಡಿಯೋಗಳು, ಚಿತ್ರಗಳು ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ. ಕಾರಣ ಅವುಗಳು ನನಗೆ ಅರಿವಿಲ್ಲದಂತೆ ಯಾರೋ ಪೋಸ್ಟ್ ಮಾಡುತ್ತಿದ್ದಾರೆ" ಹೀಗೆ ಬರೆದು ಪೋಸ್ಟ್ ಹಾಕಿರುವುದನ್ನು ನೋಡೇ ಇರುತ್ತೀರಿ. ಆದರೆ ಇಂದು ಆ ಭಯವನ್ನು ಬಿಡಿ. ಗಿಜ್‌ಬಾಟ್ ಇಂದಿನ ಲೇಖನದಲ್ಲಿ ನೀಡುವ ಸರಳ ಹಂತಗಳನ್ನು ಪಾಲಿಸಿ ಹ್ಯಾಕ್ ಆಗಿರುವುದರಿಂದ ಬಚಾವಾಗಿ. ಹಾಗೆ ಇತರರು ನಿಮ್ಮ ಫೇಸ್‌ಬುಕ್ ಲಾಗಿನ್ ಆದ ತಕ್ಷಣ ನೀವು ಎಚ್ಚರ ಗೊಳ್ಳುವುದು ಹೇಗೆ ಎಂದು ಸಹ ತಿಳಿಯಿರಿ.

ಫೇಸ್‌ಬುಕ್
ಫೇಸ್‌ಬುಕ್ ಹ್ಯಾಕ್ ಆಗಿರುವುದನ್ನು, ಹಾಗೂ ಇತರರು ನಿಮ್ಮ ಫೇಸ್‌ಬುಕ್ ಬಳಸುವುದನ್ನು ಹಲವು ವಿಧಾನಗಳಿಂದ ತಿಳಿಯಬಹುದು.

ಹಂತ 1
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಫೇಸ್‌ಬುಕ್ ಹ್ಯಾಕ್ ಆಗಿದ್ದರೆ ನಿಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ನಿಮಗೆ ಅರಿವಿಲ್ಲದಂತೆ ಅಶ್ಲೀಲ ಚಿತ್ರಗಳು, ಫೋಟೋಗಳು, ಅಥವಾ ನಿಮಗೆ ಧಕೆ ತರುವ ಕಾಮೆಂಟ್‌ಗಳನ್ನು ಇತರರಿಗೆ ಹಾಕಿರಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮೊದಲು ಅಂತಹ ಪೋಸ್ಟ್‌ಗಳ ಮೇಲೆ ಕ್ಲಿಕ್ ಮಾಡಿ Hide ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ಅದನ್ನು ತೆಗೆಯಿರಿ (Close).

ಹಂತ 2
ಕೆಲವೊಮ್ಮೆ ಇತರರು ಶೇರ್ ಮಾಡಿದ ಅಶ್ಲೀಲ ವೀಡಿಯೋ, ಚಿತ್ರಗಳು ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡು, ಅದನ್ನು ನೇರವಾಗಿ ಹೈಡ್ ಮಾಡಲು ಆಯ್ಕೆ ಸಿಗುವುದಿಲ್ಲ. ಅಂತಹ ವೇಳೆಯಲ್ಲಿ ಅದನ್ನು ನೋಟಿಫಿಕೇಶನ್‌ನಲ್ಲಿ ಹೋಗಿ ಹೈಡ್ ಮಾಡಬಹುದಾಗಿದೆ. ಚಿತ್ರದ ಎಡಭಾದಲ್ಲಿ close ಬಟನ್ ಅನ್ನು ಕ್ಲಿಕ್ ಮಾಡಬಹುದು ಅಥವಾ ಅಲ್ಲಿಯೇ ಮೌಸ್ ಆಡಿಸಿದರೆ ಹೈಡ್ Hide this Notification ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ.

ಹಂತ 3
ನಿಮ್ಮ ಫೇಸ್‌ಬುಕ್ ಅನ್ನು ಇತರರು ಬಳಸಲು ಲಾಗಿನ್ ಆದರೆ ತಕ್ಷಣ ನೀವು ಮೆಸೇಜ್ ಪಡೆಯಬಹುದು. ಹೇಗಿದ್ದರೂ ಫೇಸ್‌ಬುಕ್ ಖಾತೆ ತೆರೆಯ ಬೇಕಾದರೆ ನಿಮ್ಮ ಮೊಬೈಲ್ ನಂಬರ್ ನೀಡಿರುತ್ತೀರಿ. ಆ ನಂಬರ್‌ಗೆ ಮೆಸೇಜ್ ಪಡೆಯಿರಿ.

ಹಂತ 4
* ನಿಮ್ಮ ಫೇಸ್‌ಬುಕ್ ಓಪನ್ ಮಾಡಿ Settings ಬಟನ್ ಕ್ಲಿಕ್ ಮಾಡಿ.
* ನಂತರ ಎಡಭಾಗದಲ್ಲಿ Security ಎಂಬಲ್ಲಿ ಕ್ಲಿಕ್ ಮಾಡಿ
* ನಂತರ Security Settings ಕೆಳಗೆ Login Alerts ಎಂಬಲ್ಲಿ ಕ್ಲಿಕ್ ಮಾಡಿ.
* Notifications ಕೆಳಗೆ Get notification ಎಂಬಲ್ಲಿ ಟಿಕ್ ಮಾರ್ಕ್ ಮಾಡಿ. ಇತರರು ನಿಮ್ಮ ಫೇಸ್‌ಬುಕ್ ಪೇಜ್‌ಗೆ ಬೇರೆ ಡಿವೈಸ್, ಬ್ರೌಸರ್‌ಗಳಿಂದ ಲಾಗಿನ್ ಆದರೆ ನಿಮಗೆ ನೋಟಿಫಿಕೇಶನ್ ಬರುತ್ತದೆ.
* Email ಕೆಳಗೆ Email login alerts ಎಂಬಲ್ಲಿ ಕ್ಲಿಕ್ ಮಾಡಿ. ನಿಮ್ಮ ಇಮೇಲ್‌ಗೂ ಸಹ ಮೇಲ್ ಬರುತ್ತದೆ.

ಹಂತ 5
ಕೆಲವೊಮ್ಮೆ ಇತರ ವೆಬ್‌ಸೈಟ್‌ಗಳು ಕ್ರೇಜಿ ನ್ಯೂಸ್ ಫೀಡ್‌ಗಳನ್ನು ನೀಡುತ್ತಿರುತ್ತವೆ. ಅವುಗಳು ನಿಮಗೆ ಆಕರ್ಷಕ ಗೇಮ್‌ಗಳನ್ನು ಇತರರೊಂದಿಗೆ ಹೋಲಿಸಿ ಮನತಣಿಸುತ್ತವೆ. ಅವುಗಳಲ್ಲಿ ಕೆಲವೊಂದು ಫೇಕ್ ವೆಬ್‌ಸೈಟ್ ಆಗಿದ್ದು ನಿಮ್ಮ ಖಾತೆಗಳನ್ನು ಸುಲಭವಾಗಿ ಹ್ಯಾಕ್ ಮಾಡಬಲ್ಲವು. ನೀವು ದಿನನಿತ್ಯ ಕಂಪ್ಯೂಟರ್, ಫೇಸ್‌ಬುಕ್ ಬಳಕೆದಾರರೇ ಆಗಿದ್ದಲ್ಲಿ ಖಂಡಿತ ನಿಮ್ಮ ಗಮನಕ್ಕೆ ಅಂತಹ ಚಟುವಟಿಕೆಗಳು ಬರುತ್ತವೆ. ಆಗ ತಕ್ಷಣ ನಿಮ್ಮ ಫೇಸ್‌ಬುಕ್ ಲಾಗ್‌ಔಟ್ ಮಾಡಿ. ಮತ್ತೆ ಲಾಗಿನ್ ಆಗಿ ಪಾಸ್‌ವರ್ಡ್ ಬದಲಿಸಿ.

ಹಂತ 6
ನಿಮ್ಮ ಫೇಸ್‌ಬುಕ್ ಹ್ಯಾಕ್ ಅಥವಾ ಇತರರು ಲಾಗಿನ್ ಆಗಿರುವ ಬಗ್ಗೆ ತಿಳಿಯಲು Settings>>Security>> Where you're Logged In ಎಂಬಲ್ಲಿ ಕ್ಲಿಕ್ ಮಾಡಿ. ಅಲ್ಲಿ ನೀವು ಯಾವುದರಲ್ಲಿ ಲಾಗಿನ್ ಆಗಿದ್ದೀರಿ ಎಂದು ಮತ್ತು ಇತರರು ಯಾವ ಡಿವೈಸ್‌ನಲ್ಲಿ ಲಾಗಿನ್ ಆಗಿದ್ದಾರೆ ಎಂದು ತಿಳಿಯುತ್ತದೆ. ಅಲ್ಲದೇ Security Settings ನಲ್ಲಿನ ಎಲ್ಲಾ ಆಯ್ಕೆಗಳನ್ನು ನಿಮ್ಮ ಫೇಸ್‌ಬುಕ್ ಸುರಕ್ಷತೆಗಾಗಿ ಬಳಸಿಕೊಳ್ಳಬಹುದಾಗಿದೆ.

ಗಿಜ್‌ಬಾಟ್

ಗಿಜ್‌ಬಾಟ್
ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಪೇಜ್, ಓದಿರಿ ಕನ್ನಡ.ಗಿಜ್‌ಬಾಟ್.ಕಾಂ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470