ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಅಕೌಂಟ್‌ನೊಂದಿಗೆ ಲಿಂಕ್ ಮಾಡಿಸುವುದು ಹೇಗೆ?
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ (Aadhaar Card) ಆಗಿರಬೇಕು. ಅನ್ನಭಾಗ್ಯ ಹೆಚ್ಚುವರಿ ಅಕ್ಕಿಯ ಬದಲಿಗೆ ನೀಡುತ್ತಿರುವ ಹಣ ಪಡೆಯುವುದಕ್ಕೆ, ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಪಡೆಯುವುದಕ್ಕೆ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿರುವುದು ಕಡ್ಡಾಯವಾಗಿದೆ.
ಹೌದು, ಸರ್ಕಾರದ ಯೋಜನೆಗಳ ಲಾಭ ಪಡೆಯುವುದಕ್ಕೆ ನಿಮ್ಮ ಆಧಾರ್‌ನೊಂದಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು ಎಂದು ಹೇಳಲಾಗಿದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್‌ನೊಂದಿಗೆ ಲಿಂಕ್ ಆಗದೆ ಇದ್ದರೆ ಕೂಡಲೇ ಲಿಂಕ್ ಮಾಡಿಸುವುದು ಸೂಕ್ತ. ಹಾಗಾದ್ರೆ ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?
* ಮೊದಲಿಗೆ ನಿಮ್ಮ ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಅಕೌಂಟ್‌ಗೆ ಲಾಗಿನ್ ಆಗಿರಿ.
* ನಂತರ ನಿಮ್ಮ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ನಮೂದಿಸುವ ಮೂಲಕ ಇಂಟರ್‌ನೆಟ್ ಬ್ಯಾಂಕಿಂಗ್ ತೆರೆಯಿರಿ
* ಇದರಲ್ಲಿ "ಮೈ ಅಕೌಂಟ್" ವಿಭಾಗವನ್ನು ಟ್ಯಾಪ್ ಮಾಡಿರಿ
* ಇದರಲ್ಲಿ Update Aadhaar with Bank accounts (CIF) ಆಯ್ಕೆ ಕಾಣಲಿದೆ ಅದರ ಮೇಲೆ ಕ್ಲಿಕ್ ಮಾಡಿ
* ಇದೀಗ ನಿಮ್ಮ ಆಧಾರ್ ನೋಂದಣಿಗಾಗಿ ಪ್ರೊಫೈಲ್ ಪಾಸ್‌ವರ್ಡ್ ಎಂಟ್ರಿ ಮಾಡಿರಿ
* ನಿಮ್ಮ ಆಧಾರ್ ಸಂಖ್ಯೆಯನ್ನು ಎರಡು ಬಾರಿ ನಮೂದಿಸಲು ಕೇಳುವ ಪೇಜ್ ತೆರೆಯಲಿದೆ
* ಇದರಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿರಿ
* ಇದೀಗ ನಿಮ್ಮ ಆಧಾರ್ ನಂಬರ್ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಲಿಂಕ್ ಆಗಿರುವ ಬಗ್ಗೆ ಸಂದೇಶ ಕಾಣಲಿದೆ.
ನಿಮ್ಮ ಬ್ಯಾಂಕ್‌ನ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಬ್ಯಾಂಕ್‌ಗಳು ತಮ್ಮದೇ ಆದ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಹೊಂದಿವೆ. ಇದರ ಮೂಲಕ ಬ್ಯಾಂಕ್‌ನ ಹಲವು ಸೇವೆಗಳು ದೊರೆಯುವಂತೆ ಮಾಡಿವೆ. ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವ ಆಯ್ಕೆ ಕೂಡ ಸೇರಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲಿಗೆ ನಿಮ್ಮ ಬ್ಯಾಂಕ್‌ನ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಆಗಿರಿ
* ನಂತರ 'ಸರ್ವಿಸ್' ಟ್ಯಾಬ್ ಅಡಿಯಲ್ಲಿ 'ಮೈ ಅಕೌಂಟ್ಸ್' ತೆರೆಯಿರಿ
* ಇದರಲ್ಲಿ "ಆಧಾರ್ ಕಾರ್ಡ್ ವಿವರಗಳನ್ನು ಅಪ್‌ಡೇಟ್ ಮಾಡಿ" ಆಯ್ಕೆಯನ್ನು ಕ್ಲಿಕ್ ಮಾಡಿ.
* ನಂತರ ಕಾಣುವ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಎರಡು ಬಾರಿ ನಮೂದಿಸಿ ಮತ್ತು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
* ಇದೀಗ ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವುದರ ಬಗ್ಗೆ ಸಂದೇಶ ಬರಲಿದೆ.

ಬ್ಯಾಂಕ್‌ಗೆ ಹೋಗಿ ಆಧಾರ್ ಅನ್ನು ಅಕೌಂಟ್‌ಗೆ ಲಿಂಕ್ ಮಾಡಿಸುವುದು ಹೇಗೆ?
* ನಿಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್‌ಗೆ ಹೋಗಿ
* ಅಲ್ಲಿ ಆಧಾರ್ ಲಿಂಕ್ ಮಾಡುವ ಅರ್ಜಿ ನಮೂನೆ ಪಡೆದು ಅದನ್ನು ಭರ್ತಿ ಮಾಡಿ.
* ಇದರಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳು ಹಾಗೂ ನಿಮ್ಮ ಆಧಾರ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.
* ನಂತರ ನಿಮ್ಮ ಆಧಾರ್ ಕಾರ್ಡ್‌ನ ಸ್ವಯಂ-ದೃಢೀಕರಿಸಿದ ಝೇರಾಕ್ಸ್ ಪ್ರತಿಯನ್ನು ಲಗತ್ತಿಸಿ
* ನಿಮ್ಮ ವಿವರಗಳನ್ನು ತುಂಬಿದ ಅಪ್ಲಿಕೇಶನ್ ಮತ್ತು ಆಧಾರ್ ಪ್ರತಿಯನ್ನು ಕೌಂಟರ್‌ನಲ್ಲಿ ಸಲ್ಲಿಸಿ
* ಇದೀಗ ನೀವು ತುಂಬಿರುವ ವಿವರಗಳ ಪರಿಶೀಲನೆಗಾಗಿ ನಿಮ್ಮ ಒರಿಜಿನಲ್ ಆಧಾರ್ ಕಾರ್ಡ್ ಕೇಳುತ್ತಾರೆ ಅದನ್ನು ನೀಡಿರಿ ಮತ್ತೆ ವಾಪಾಸ್ ಪಡೆಯಿರಿ
* ಇದೀಗ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ ಮತ್ತು ಒಂದು ಎರಡು ದಿನಗಳ ನಂತರ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಆಗಿರುವುದರ ಬಗ್ಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರಲಿದೆ.


Click it and Unblock the Notifications








