Home
ಟೆಕ್ ನೌಕರಿ

ಇಯರ್ ಫೋನ್ ಇಲ್ಲದೆ ವಾಟ್ಸ್ ಆಪ್ ಆಡಿಯೋ ಮೆಸೇಜ್ ನ್ನು ಗುಟ್ಟಾಗಿ ಕೇಳಿಸಿಕೊಳ್ಳುವುದು ಹೇಗೆ?

By Gizbot Bureau

ನೀವು ಮೀಟಿಂಗ್ ನಲ್ಲಿರುತ್ತೀರಿ ಮತ್ತು ಅದೇ ಸಂದರ್ಬದಲ್ಲಿ ನಿಮ್ಮ ಸ್ನೇಹಿತರೊಬ್ಬರು ಆಡಿಯೋ ಮೆಸೇಜ್ ಕಳುಹಿಸುತ್ತಾರೆ ಆಗ ಕೂಡಲೇ ಅದನ್ನು ನೋಡಲೇ ಬೇಕು ಎಂಬ ಸನ್ನಿವೇಶದಲ್ಲಿರುತ್ತೀರಿ ಆದರೆ ಮೀಟಿಂಗ್ ನಲ್ಲಿರುವಾಗ ಎಲ್ಲರ ಎದುರೇ ಕೇಳಿಸಿಕೊಳ್ಳುವುದಾದರೂ ಹೇಗೆ? ಇಯರ್ ಫೋನ್ ನ್ನು ಮೀಟಿಂಗ್ ನಲ್ಲಿ ಹೇಗೆ ಬಳಸಲು ಸಾಧ್ಯವಾಗುತ್ತದೆ ಅಲ್ಲವೇ?ಅಷ್ಟೇ ಅಲ್ಲ ದೊಡ್ಡದಾಗಿಯೇ ಪ್ಲೇ ಮಾಡಲು ಟ್ಯಾಪ್ ಮಾಡಿ ಬಿಟ್ಟರೆ ತೀರಾ ವಯಕ್ತಿಕ ವಿಚಾರ ಸ್ಪೀಕರ್ ನಲ್ಲಿ ಪ್ಲೇ ಆಗಲು ಸಿದ್ಧವಾಗುತ್ತದೆ. ಆಗ ಎಲ್ಲರ ಕಣ್ಣು ನಿಮ್ಮ ಮೇಲೆ ಬೀಳುತ್ತದೆ.

ಇಂತಹ ಸಂದರ್ಬದಲ್ಲಿ ಎಲ್ಲರ ಎದುರು ಆಶ್ಚರ್ಯಕ್ಕೂ ಮತ್ತು ಮುಜುಗರಕ್ಕೂ ಕಾರಣವಾಗುವ ಸಾಧ್ಯತೆ ಇರುತ್ತದೆ.ಆದರೆ ಈ ಸನ್ನಿವೇಶವನ್ನು ತಪ್ಪಿಸುವುದಕ್ಕೆ ವಾಟ್ಸ್ ಆಪ್ ನಲ್ಲಿ ಒಂದು ಫೀಚರ್ ಇದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಹಾಗಂತ ಈ ಫೀಚರ್ ಗೆ ಯಾವುದೇ ಹೆಸರಿಲ್ಲ ಮತ್ತು ವಾಟ್ಸ್ ಆಪ್ ನ್ನು ಇದಕ್ಕಾಗಿ ಅಪ್ ಡೇಟ್ ಮಾಡಿಕೊಳ್ಳುವ ಅಗತ್ಯವೂ ಇಲ್ಲ.

ವಿಶೇಷ ಫೀಚರ್:

ವಿಶೇಷ ಫೀಚರ್:

ಈ ಫೀಚರ್ ಕೇವಲ ಆಡಿಯೋ ಫೈಲ್ ಗಳಿಗೆ ಮಾತ್ರವೇ ವಾಟ್ಸ್ ಆಪ್ ನಲ್ಲಿ ವರ್ಕ್ ಆಗುತ್ತದೆ. ವೀಡಿಯೋ ಫೈಲ್ ಗಳಿಗೆ ಕೆಲಸ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ. ಮುಂದಿನ ಬಾರಿ ನೀವು ವಾಟ್ಸ್ ಆಪ್ ನಲ್ಲಿ ಆಡಿಯೋ ಫೈಲ್ ನ್ನು ರಿಸೀವ್ ಮಾಡಿದಾಗ ಇಯರ್ ಫೋನ್ ನ್ನು ಹುಡುಕಾಡುವ ಬದಲು ನಿಮ್ಮ ಫೋನ್ ನ್ನು ಪ್ಲೇ ಬಟನ್ ಒತ್ತಿದ ನಂತರ ಕಿವಿಯ ಬಳಿ ಇಟ್ಟುಕೊಳ್ಳಿ. ಕರೆಗಳು ಬಂದಾಗ ನೀವು ಹೇಗೆ ನಿಮ್ಮ ಫೋನ್ ನ್ನು ಕಿವಿಯ ಬಳಿ ಇಟ್ಟುಕೊಳ್ಳುತ್ತೀರೋ ಹಾಗೆ.ವಾಟ್ಸ್ ಆಪ್ ನಲ್ಲಿ ಆಡಿಯೋ ಫೈಲ್ ನ ಪ್ಲೇ ಬಟನ್ ನ್ನು ಹಿಟ್ ಮಾಡಿ ಕಿವಿಯ ಬಳಿ ಫೋನ್ ನ್ನ ತರುತ್ತಿದ್ದಂತೆಯೇ ಆಡಿಯೋ ಫೈಲ್ ಸ್ಪೀಕರ್ ಗಳ ಬದಲಾಗಿ ಸ್ಮಾರ್ಟ್ ಫೋನಿನ ಇಯರ್ ಪೀಸ್ ನಲ್ಲಿ ಪ್ಲೇ ಆಗುತ್ತದೆ.

ವಾಕಿ-ಟಾಕಿಯಂತೆ ಬಳಕೆ ಮಾಡಿ:

ವಾಕಿ-ಟಾಕಿಯಂತೆ ಬಳಕೆ ಮಾಡಿ:

ಅಂದರೆ ವಾಟ್ಸ್ ಆಪ್ ಆಡಿಯೋ ಫೈಲ್ ನ್ನು ನೀವು ವಾಕಿ-ಟಾಕಿ ಫೀಚರ್ ನಂತೆ ಬಳಕೆ ಮಾಡಬಹುದು. ಅಂದರೆ ನೀವು ವಾಟ್ಸ್ ಕ್ಲಿಪ್ಸ್ ಗಳ ರೂಪದಲ್ಲಿ ನೀವು ವಾಟ್ಸ್ ಆಪ್ ನ್ನು ಬಳಕೆ ಮಾಡಬಹುದು. ಅದಕ್ಕಾಗಿ ನೀವು ಟೈಪ್ ಮಾಡುವುದಾಗಲೀ ಅಥವಾ ಕರೆ ಮಾಡುವ ಗೋಜಿಗೆ ಹೋಗುವ ಅಗತ್ಯವಿಲ್ಲ.

ಇಯರ್ ಫೋನ್ ನಿಮ್ಮ ಬಳಿ ಇಲ್ಲದ ಸಂದರ್ಬದಲ್ಲಿ ನಿಮ್ಮ ಪ್ರೈವೆಸಿಯನ್ನು ಕಾಪಾಡುವುದಕ್ಕೆ ಈ ಫೀಚರ್ ನಿಮಗೆ ಸಹಾಯ ಮಾಡುತ್ತದೆ. ಕಳೆದ ಹಲವು ಸಮಯದಿಂದ ಈ ಫೀಚರ್ ವಾಟ್ಸ್ ಆಪ್ ನಲ್ಲಿ ಲಭ್ಯವಿದೆ. ಆದರೆ ಕೆಲವೇ ಕೆಲವು ಬಳಕೆದಾರರಿಗೆ ಮಾತ್ರವೇ ಈ ಫೀಚರ್ ಬಗ್ಗೆ ತಿಳಿದಿದೆ.

ಅಪ್ ಡೇಟ್ ಆದ ವಾಟ್ಸ್ ಆಪ್:

ಅಪ್ ಡೇಟ್ ಆದ ವಾಟ್ಸ್ ಆಪ್:

ಇತ್ತೀಚೆಗೆ ವಾಟ್ಸ್ ಆಪ್ ಆಡಿಯೋ ಫೈಲ್ಸ್ ಮೂಲಕ ಸಂವಹನವನ್ನು ಮತ್ತಷ್ಟು ಸರಳಗೊಳಿಸಲಾಗಿದೆ.ಇದೀಗ ಸಂಪೂರ್ಣ ಮೆಸೇಜ್ ನ್ನು ರೆಕಾರ್ಡ್ ಮಾಡುವುದಕ್ಕಾಗಿ ನೀವು ಮೈಕ್ ಬಟನ್ ನ್ನು ಹೋಲ್ಡ್ ಮಾಡಿಯೇ ಇರಬೇಕಾದ ಅಗತ್ಯವಿಲ್ಲ. ರೆಕಾರ್ಡಿಂಗ್ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ಮೇಲ್ಬಾಗಕ್ಕೆ ಡ್ರ್ಯಾಗ್ ಮಾಡಿದರೆ ಸಾಕಾಗುತ್ತದೆ. ಒಮ್ಮೆ ಮುಗಿದ ನಂತರ ಲಾಕ್ ಐಕಾನ್ ಸ್ಕ್ರೀನಿನಲ್ಲಿ ಕಾಣಿಸುತ್ತದೆ ಮತ್ತು ರೆಕಾರ್ಡಿಂಗ್ ಆರಂಭಿಸಬಹುದಾಗಿದೆ. ರೆಕಾರ್ಡಿಂಗ್ ಮುಗಿದ ನಂತರ ಸೆಂಡ್ ಬಟನ್ ನ್ನು ಫುಶ್ ಮಾಡಿದರೆ ಆಯ್ತು. ವಾಟ್ಸ್ ಮೆಸೇಜ್ ಡೆಲಿವರ್ ಆಗುತ್ತದೆ.

Best Mobiles in India

English summary
How To Listen To WhatsApp VOice Messages Secretly Without Using Earphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+