Home
ಟೆಕ್ ನೌಕರಿ

ವಾಟ್ಸಾಪ್‌ನ ವಾಯ್ಸ್‌ ನೋಟ್‌ ಇಯರ್‌ಪೀಸ್‌ನಲ್ಲಿ ಮಾತ್ರ ಪ್ಲೇ ಮಾಡುವುದು ಹೇಗೆ?

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ ಬಳಕೆದಾರರ ಸ್ನೇಹಿ ಆಗಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದರಲ್ಲಿ ವಾಟ್ಸಾಪ್‌ ವಾಯ್ಸ್‌ ನೋಟ್‌ ಫೀಚರ್ಸ್‌ ಕೂಡ ಒಂದಾಗಿದೆ. ಇದರಿಂದ ಇನ್ಸಟಂಟ್‌ ಕಮ್ಯೂನಿಕೇಶನ್‌ ಸುಲಭ ಸಾದ್ಯವಾಗಲಿದೆ. ಅಲ್ಲದೆ ವಾಟ್ಸಾಪ್‌ ಮೆಸೇಜ್‌ನಲ್ಲಿ ಗುಂಡಿಯನ್ನು ಟ್ಯಾಪ್‌ ಮಾಡುವ ಮೂಲಕ, ಪಠ್ಯ ಸಂದೇಶಗಳನ್ನು ಟೈಪ್ ಮಾಡುವುದರಿಂದ ಸಂದೇಶಗಳನ್ನು ಕಳುಹಿಸುವುದಕ್ಕೂ ವೇಗವಾಗಿ ವಾಯ್ಸ್‌ ನೊಟ್‌ ಅನ್ನು ಕಳುಹಿಸಬಹುದಾಗಿದೆ.

ಸಂವಹನ

ಹೌದು, ನೀವು ನಿಮ್ಮ ಸ್ನೇಹಿತರೊ ಇಲ್ಲವೇ ಯಾವುದೇ ರೀತಿಯ ಕೆಲಸ ಕಾರ್ಯಕ್ಕಾಗಿ ಸಂವಹನ ನಡೆಸಬೇಕಾದ ಅನಿವಾರ್ಯತೆ ಇರುವಾಗ ಶೀಘ್ರದಲ್ಲಿ ಟೆಕ್ಸ್ಟ್‌ ಟೈಪ್‌ ಮಾಉಡವುದಕ್ಕಿಂತ ವಾಟ್ಸಾಪ್‌ ನೊಟ್‌ ಸುಲಬವಾಗಿದೆ. ಪಠ್ಯ ಸಂದೇಶಗಳು ಸರಳವಾಗಿ ನೀಡಲು ಸಾಧ್ಯವಾಗದಂತಹ ಹೆಚ್ಚಿನ ವಿವರ ಅಥವಾ ಭಾವನೆಯ ಅಗತ್ಯವಿರುವ ರೀತಿಯಲ್ಲಿ ಇದು ವಿಶೇಷವಾಗಿ ಸಹಾಯ ಮಾಡುತ್ತದೆ. ಇನ್ನು ನಿಮಗೆ ವಾಟ್ಸಾಪ್‌ನಲ್ಲಿ ಬಂದಿರುವ ವಾಯ್ಸ್‌ ನೋಟ್‌ ಅನ್ನು ಕೇಲುವುದು ಸುಲಭವಾಗಲಿದೆ. ಆದರೆ ನಿಮ್ಮ ಜೊತೆಗೆ ಯಾರಾದರೂ ಇದ್ದು, ಅದು ಗೌಪ್ಯ ಮಾಹಿತಿಯಾಗಿದ್ದು, ನೀವು ಮಾತ್ರವೇ ಕಳಿಸಿಕೊಳ್ಳಬೇಕೆಂಬ ಅಗತ್ಯವಿದ್ದಾಗ ಒಂದು ಜೋಡಿ ಹೆಡ್‌ಫೋನ್‌ ಬಲಸುವುದು ಉತ್ತಮ. ಇದರಿಂದ ನೀವು ಸ್ವೀಕರಿಸಿದ ವಾಟ್ಸಾಪ್ ವಾಯ್ಸ್‌ ನೊಟ್‌ ಅನ್ನು ನೀವು ಮಾತ್ರವೇ ಕೇಳಬಹುದಾಗಿದ್ದು, ಇತರರ ನಡುವೆ ಇದ್ದಾಗ ಮುಜುಗರಕ್ಕೊಳಗಾಗುವುದನ್ನು ತಪ್ಪಿಸಬಹುದಾಗಿದೆ.

ವಾಟ್ಸಾಪ್

ಇನ್ನು ಹೆಚ್ಚಿನ ಜನರು ವಾಟ್ಸಾಪ್ ವಾಯ್ಸ್‌ ನೋಟ್‌ ಅನ್ನು ನಿರ್ಲಕ್ಷಿಸುತ್ತಾರೆ ಅಥವಾ ತಮ್ಮ ಕೈಗೆ ಸಿಗಬಹುದಾದ ಹತ್ತಿರದ ಇಯರ್‌ಫೋನ್‌ಗಳನ್ನು ಹುಡುಕಲು ಸ್ಕ್ರಾಂಬಲ್ ಮಾಡುತ್ತಾರೆ. ಆದಾಗ್ಯೂ, ಈ ಪರಿಸ್ಥಿತಿಯನ್ನು ಬಹಳ ಸುಲಭವಾಗಿ ಮತ್ತು ಅನುಕೂಲಕರವಾಗಿ ದಾಟಲು ವಾಟ್ಸಾಪ್ ಮತ್ತೊಂದು ಫೀಚರ್ಸ್‌ ನೀಡುತ್ತದೆ. ನಿಮ್ಮ ಇಯರ್‌ಫೋನ್‌ಗಳು ಅಥವಾ ಹೆಡ್‌ಫೋನ್‌ಗಳಂತಹ ಆಡಿಯೊ ಸಾಧನದ ಅಗತ್ಯವಿಲ್ಲದೇ ನೀವು ವಾಟ್ಸಾಪ್ ವಾಯ್ಸ್‌ ನೋಟ್‌ ಅನ್ನು ಇಯರ್‌ಪೀಸ್‌ ಆಗಿ ಕೇಳಬಹುದು. ಈ ಫೀಚರ್ಸ್‌ ನಿಮ್ಮ ಫೋನ್‌ನಲ್ಲಿ ಈಗಾಗಲೇ ಇರುವ ಇಯರ್‌ಪೀಸ್ ಅನ್ನು ಬಳಸುತ್ತದೆ. ಹಾಗಾದ್ರೆ ಇದನ್ನು ಬಳಸುವುದು ಹೇಗೆ ಅನ್ನೊದನ್ನ ಇಲ್ಲಿ ತಿಳಿಯಿರಿ.

ವಾಟ್ಸಾಪ್ ವಾಯ್ಸ್‌ ನೋಟ್‌ ಅನ್ನು ಕೇಳುವುದು ಹೇಗೆ

ವಾಟ್ಸಾಪ್ ವಾಯ್ಸ್‌ ನೋಟ್‌ ಅನ್ನು ಕೇಳುವುದು ಹೇಗೆ

ಹಂತ 1: ವಾಟ್ಸಾಪ್ ತೆರೆಯಿರಿ, ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ ಮತ್ತು ನೀವು ಕೇಳಲು ಬಯಸುವ ವಾಯ್ಸ್‌ ನೊಟ್‌ ಇರುವ ಚಾಟ್‌ಬಾಕ್ಸ್‌ಗೆ ಹೋಗಿ.

ಹಂತ 2: ಪ್ಲೇ ಮಾಡಿ ಮತ್ತು ಫೋನ್ ಅನ್ನು ನಿಮ್ಮ ಕಿವಿಗೆ ಇರಿಸಿ, ವಾಯ್ಸ್‌ ನೋಟ್‌ಪ್ಲೇ ಒತ್ತಿ ಮತ್ತು ನೀವು ಕರೆ ಮಾಡಿದಂತೆ ತಕ್ಷಣ ನಿಮ್ಮ ಫೋನ್ ಅನ್ನು ನಿಮ್ಮ ಕಿವಿಗೆ ಇರಿಸಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ proximity sensor ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಫೋನ್‌ನ ಸ್ಪೀಕರ್‌ನಲ್ಲಿ ಆಡಿಯೊವನ್ನು ಪ್ಲೇ ಮಾಡುವ ಬದಲು, ಅದು ಇಯರ್‌ಪೀಸ್‌ನಲ್ಲಿ ಮಾತ್ರ ಪ್ಲೇ ಆಗುತ್ತದೆ, ಇದು ನಿಮಗೆ ಮಾತ್ರ ಕೇಳಲು ಅನುವು ಮಾಡಿಕೊಡುತ್ತದೆ.

ವಾಟ್ಸಾಪ್‌

ಹೀಗೆ ಮಾಡುವುದರಿಂದ ನೀವು ಜನರ ನಡುವೆ ಇದ್ದಾಗಲೂ ನಿಮ್ಮ ವಾಟ್ಸಾಪ್‌ಗೆ ಬಂದಿರುವ ವಾಯ್ಸ್‌ ನೋಟ್‌ ಅನ್ನು ಕೇಳಿಸಿಕೊಳ್ಳಬಹುದು, ಅದಕ್ಕೆ ಪ್ರತ್ಯುತ್ತರ ನೀಡಬಹುದು. ಇಯರ್‌ಫೊನ್‌ ಇಲ್ಲದೆ ಹೊದರು ನೀವು ಯಾವುದೇ ಮುಜುಗರವಿಲ್ಲದೆ ಹಿಂಜರಿಕೆ ಇಲ್ಲದೆ ಜನರ ನಡುವೆ ವಾಯ್ಸ್‌ ನೊಟ್‌ಗಳನ್ನ ಕೇಳಿಸಿಕೊಳ್ಳಬಹುದು. ಇಲ್ಲದೆ ಹೊದರೆ ಕೆಲವೊಮ್ಮೆ ಇಯರ್‌ಫೊನ್‌ ಇಲ್ಲದೆ ಇದ್ದಾಗ ಎಲ್ಲರ ನಡುವೆ ಮುಜುಗರ ಅನುಭವಿಸಬೇಕಾಗುವ ಸಂದರ್ಭ ಬರಬಹುದು. ಇದಕ್ಕಾಗಿ ಈ ಮಾದರಿಯನ್ನ ಅನುಸರಿಸಿದರೆ ಉತ್ತಮ.

Best Mobiles in India

English summary
If you frequently use WhatsApp voice notes but don't like letting everyone around you in on the audio you're listening to, check out how to listen to voice notes discreetly.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+