Just In
Don't Miss
- News
ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Movies
ಬಿಗ್ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮ್ಮ ಆಧಾರ್ ಕಾರ್ಡ್ ಅನ್ನು ಲಾಕ್ ಅಥವಾ ಅನ್‌ಲಾಕ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ ಅಗತ್ಯವಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ತಮ್ಮ ಆಧಾರ್ ಕಾರ್ಡ್ ಅನ್ನು ಜೋಪಾನ ಮಾಡುತ್ತಾರೆ. ಸರ್ಕಾರ ಮತ್ತು ಉಪಯುಕ್ತ ಕೆಲಸಗಳಿಗೆ ಆಧಾರ್ ಮಹತ್ವದ ದಾಖಲೆಯಾಗಿರುವುದರಿಂದ, ಇದರ ಮಾಹಿತಿ ಸುರಕ್ಷತೆ ಕೂಡ ಪ್ರಮುಖವಾಗಿದೆ. ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವೈಯುಕ್ತಿಕ ಮಾಹಿತಿ ಇರುವುದರಿಂದ ಇದನ್ನು ಸುರಕ್ಷಿತವಾಗಿರಿಸುವುದು ಅತ್ಯವಶ್ಯಕ. ಸದ್ಯ ಬಯೋಮೆಟ್ರಿಕ್ ದೃಡೀಕರಣವು ಆಧಾರ್ ಕಾರ್ಡ್ ಸುರಕ್ಷತೆಗಳಲ್ಲಿ ಒಂದಾಗಿದೆ. ಇದರಿಂದ ಅಗತ್ಯವಿದ್ದಾಗ ಮಾತ್ರ ಬಯೋಮೆಟ್ರಿಕ್ ದೃಡೀಕರಣವನ್ನು ತೆರೆಯಲು ಸೂಚಿಸಲಾಗುತ್ತದೆ.

ಹೌದು, ಆಧಾರ್ ಕಾರ್ಡ್ ಇಂದು ಪ್ರತಿ ಕೆಲಸಕ್ಕೂ ಅಗತ್ಯ ಎನಿಸಿದೆ. ಆದರಿಂದ ಆಧಾರ್ ಕಾರ್ಡ್ ಅನ್ನು ಎಲ್ಲರೂ ಹೊಂದಲು ಬಯಸುತ್ತಾರೆ. ಇದರ ನಡುವೆ ಆಧಾರ್ ಮಾಹಿತಿ ನಿಡಿ ಯಾವುದೇ ವಹಿವಾಟು ನಡೆಸುವ ನಾಗರೀಕರು ತಮ್ಮ ಮಾಹಿತಿ ಸುರಕ್ಷತೆ ಕಡೆಗೂ ಸಹ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು, ನಿಮಗೆ ಅವಶ್ಯವಿದ್ದಾಗ ಅದನ್ನು ಅನ್‌ಲಾಕ್ ಮಾಡುವುದು ಅತ್ಯುತ್ತಮ ಮಾರ್ಗ ಎನಿಸಿಲಿದೆ. ಹಾಗಾದ್ರೆ ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಹಾಗೂ ಅನ್‌ಲಾಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್ ಕಾರ್ಡ್ ಮಾಹಿತಿಯನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ನಿಮ್ಮ ಬಯೋಮೆಟ್ರಿಕ್ಸ್ ಪ್ರಮುಖವಾಗಿದೆ. ನಿಮಗೆ ಅಗತ್ಯವೆನಿಸಿದಾಗ ನಿಮ್ಮ ಆಧಾರ್ ಅನ್ನು ಆನ್‌ಲೈನ್‌ನಲ್ಲಿ ತೆರೆಯುವುದು. ಅಗತ್ಯವಿಲ್ಲ ಎನಿಸಿದಾಗ ಬಯೋಮೆಟ್ರಿಕ್ಸ್ ಅನ್ನು ಅನ್‌ಲಾಕ್ ಮಾಡುಬಹುದು. ಇದನ್ನು ಮಾಡಲು ಮೂರು ಮಾರ್ಗಗಳಿವೆ. ಮೊದಲನೆಯದು mAadhaar ಅಪ್ಲಿಕೇಶನ್, ಎರಡನೇಯದು mAadhaar ನಲ್ಲಿ ಟಾಗಲ್ ಬಟನ್ ಬಳಸುವುದು, ಮೂರನೇಯದು UIDAI ವೆಬ್‌ಸೈಟ್ ಮೂಲಕ ಬಯೋಮೆಟ್ರಿಕ್ ಲಾಕ್ ಅಥವಾ ಅನ್‌ಲಾಕ್ ವಿಭಾಗಕ್ಕೆ ಹೋಗುವುದು. ಈ ಮಾರ್ಗಗಳ ಮೂಲಕ ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

UIDAI mAadhaar ಅಪ್ಲಿಕೇಶನ್ ಮೂಲಕ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಹೇಗೆ?
1. ಮೊದಲನೆಯದು mAadhaar ಅಪ್ಲಿಕೇಶನ್ ಕೆಳಭಾಗದಲ್ಲಿರುವ ಬಯೋಮೆಟ್ರಿಕ್ಸ್ ಅನ್ಲಾಕ್ಡ್ ಅಧಿಸೂಚನೆಯನ್ನು ಕ್ಲಿಕ್ ಮಾಡುವುದು.
2. ನಿಮ್ಮನ್ನು mAadhaar ಪಾಸ್‌ವರ್ಡ್ ಕೇಳಲಾಗುತ್ತದೆ.
3. ಒಮ್ಮೆ ದೃಡೀಕರಿಸಿದ ನಂತರ, ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ. ನಿಮಗೆ ಈಗ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ.
ಬಯೋಮೆಟ್ರಿಕ್ ದೃಡೀಕರಣವನ್ನು ಬಳಸಿಕೊಂಡು ನೀವು ವಹಿವಾಟು ನಡೆಸಬೇಕಾದಾಗ, ನೀವು ಅದೇ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ನೀವು mAadhaar ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬೇಕು ಮತ್ತು ಬಯೋಮೆಟ್ರಿಕ್ಸ್ ಲಾಕ್ - ಅನ್ಲಾಕ್ ಬಯೋಮೆಟ್ರಿಕ್ಸ್ ಅಧಿಸೂಚನೆಯನ್ನು ಕ್ಲಿಕ್ ಮಾಡಬೇಕು. ನಿಮ್ಮ ಪಾಸ್‌ವರ್ಡ್ ಅನ್ನು ಒಮ್ಮೆ ನಮೂದಿಸಿದ ನಂತರ ಬಯೋಮೆಟ್ರಿಕ್ಸ್ ಅನ್‌ಲಾಕ್ ಆಗುತ್ತದೆ.

mAadhaar ನಲ್ಲಿ ಟಾಗಲ್ ಬಟನ್ ಬಳಸಿ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಹೇಗೆ?
1. ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡಲು ಅಥವಾ ಅನ್ಲಾಕ್ ಮಾಡಲು ಇನ್ನೊಂದು ಮಾರ್ಗವೆಂದರೆ mAadhaar ಅಪ್ಲಿಕೇಶನ್‌ನ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡುವುದು.
2. ಬಯೋಮೆಟ್ರಿಕ್ ಲಾಕ್ ಅನ್ನು ಸಕ್ರಿಯಗೊಳಿಸು ಕ್ಲಿಕ್ ಮಾಡುವುದರಿಂದ ಇಲ್ಲಿ ಟಾಗಲ್ ಮಾಡಬಹುದು.
3. ನೀವು ಟಾಗಲ್ ಬಟನ್ ಕ್ಲಿಕ್ ಮಾಡಿದಾಗ, ಅಪ್ಲಿಕೇಶನ್ ಮೊಬೈಲ್‌ಗೆ ಒಟಿಪಿ ಕಳುಹಿಸುತ್ತದೆ ಮತ್ತು ಅದನ್ನು ಸ್ವಯಂಚಾಲಿತವಾಗಿ ರೀಡ್ ಮಾಡಲಿದೆ.

ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಹೇಗೆ?
1. ನಿಮ್ಮ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ಒಮ್ಮೆ ನೀಡಿದ ನಂತರ, ನಿಮಗೆ ಒಟಿಪಿ ಕಳುಹಿಸಲಾಗುತ್ತದೆ.
2. OTP ಅಥವಾ TOTP ಅನ್ನು ನಮೂದಿಸಿ.
3. ನಿಮ್ಮ ಆಧಾರ್ ಲಾಕ್ ಆಗಿದೆಯೇ ಅಥವಾ ಅನ್ಲಾಕ್ ಆಗಿದೆಯೇ ಎಂದು ತೋರಿಸುವ ಪೇಜ್‌ಗೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.
4. ಈ ಪುಟದಿಂದ ನೀವು ಅನ್ಲಾಕ್ ಮಾಡಲು (ಲಾಕ್ ಆಗಿದ್ದರೆ) ಅಥವಾ ಲಾಕ್ ಮಾಡಲು (ಅನ್ಲಾಕ್ ಆಗಿದ್ದರೆ) ನಿಮಗೆ ಸಾಧ್ಯವಾಗುತ್ತದೆ.
5. ಒಮ್ಮೆ ನೀವು ಆಧಾರ್ ಅನ್ನು ಅನ್ಲಾಕ್ ಮಾಡಿದರೆ, ಅದನ್ನು ಹತ್ತು ನಿಮಿಷಗಳ ಕಾಲ ಅನ್ಲಾಕ್ ಮಾಡಲಾಗುತ್ತದೆ.
6. ಇದು 10 ನಿಮಿಷಗಳ ನಂತರ ಸ್ವಯಂಚಾಲಿತವಾಗಿ ಲಾಕ್ ಆಗುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190